ಯು.ಆರ್.ಅನಂತಮೂರ್ತಿ
ಕನ್ನಡ ಬರಹಗಾರ ಮತ್ತು ವಿಮರ್ಶಕ / From Wikipedia, the free encyclopedia
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು[1] ,ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ ಆರನೇ ಬರಹಗಾರರಾಗಿದ್ದಾರೆ. ಈ ಪ್ರಶಸ್ತಿಯು ಭಾರತದಲ್ಲಿ ನೀಡಲ್ಪಟ್ಟ ಅತ್ಯುನ್ನತ ಗೌರವವಾಗಿದೆ. ೧೯೯೮ ರಲ್ಲಿ ಇವರು ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ೧೯೮೦ ರ ದಶಕದ ಅಂತ್ಯದಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ೨೦೧೩ ರ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಯು.ಆರ್. ಅನಂತಮೂರ್ತಿ | |
---|---|
ಜನನ | (೧೯೩೨-೧೨-೨೧)೨೧ ಡಿಸೆಂಬರ್ ೧೯೩೨ ಮೇಳಿಗೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ, ಮೈಸೂರು ಸಂಸ್ಥಾನ, ಭಾರತ |
ಮರಣ | 22 August 2014(2014-08-22) (aged 81) ಬೆಂಗಳೂರು, ಕರ್ನಾಟಕ, ಭಾರತ |
ವೃತ್ತಿ | ಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕವಿತೆ, ಕತೆ, ಕಾದಂಬರಿ, ಪ್ರಬಂಧ, ಸಾಹಿತ್ಯವಿಮರ್ಶೆ, ನಾಟಕ |
ಸಾಹಿತ್ಯ ಚಳುವಳಿ | ನವ್ಯ |
ಪ್ರಭಾವಗಳು |