ಮೌರ್ಯ ಸಾಮ್ರಾಜ್ಯ
From Wikipedia, the free encyclopedia
ಮೌರ್ಯ ಸಾಮ್ರಾಜ್ಯ (Sanskrit: मौर्य साम्राज्यम:) ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. 324 ರಿಂದ ಕ್ರಿ.ಪೂ. 185 ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುತ್ತ ತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲ ಎಂದು ವಿ.ಎ. ಸ್ಮಿತ್ ಹೇಳಿದ್ದಾರೆ.
| ||
ಸ್ಥಾಪಕ: | ಚಂದ್ರಗುಪ್ತ ಮೌರ್ಯ | |
ಸ್ಥಾಪನೆ: | ಕ್ರಿ.ಪೂ. 324 | |
ಅವನತಿ | ಕ್ರಿ.ಪೂ. 180 | |
ರಾಜಧಾನಿ: | ಪಾಟಲಿಪುತ್ರ | |
ಲಾಂಛನ: | ಧರ್ಮಚಕ್ರ | |
ಧರ್ಮಗಳು | ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮ | |
ಆಡಳಿತ ಭಾಷೆ | ಸಂಸ್ಕೃತ, ಪ್ರಾಕೃತ ಮತ್ತು ಪಾಳಿ |