ಮಂಡ್ಯ
ಭಾರತದಲ್ಲಿನ ಕರ್ನಾಟಕದ ಒಂದು ಜಿಲ್ಲೆ / From Wikipedia, the free encyclopedia
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ ಇದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ.
Quick Facts ಮಂಡ್ಯ ಮಂಡ್ಯ, Government ...
ಮಂಡ್ಯ
ಮಂಡ್ಯ | |
---|---|
city | |
Government | |
• Deputy Commissioner | ಡಾ. ಕುಮಾರು (ಭಾ. ಆ. ಸೇ.) |
Population (೨೦೦೧) | |
• Total | ೧೩೧೨೧೧ |
Website | www.mandya.nic.in/ |
Close
ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಮಂದಿಎಣಿಕೆ ೧೭,೬೧,೭೧೮(೮೮೭೩೦೭ ಗಂಡಸರು, ೮೭೪೪೧೧ ಹೆಂಗಸರು). ಇಲ್ಲಿಯ ಮಂದಿ ಪ್ರಮುಖ ಕಸುಬು ಆರಂಬ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ವಿಸ್ತರಿಸಿದೆ.