ಭಾರತದ ಪ್ರಧಾನ ಮಂತ್ರಿ
From Wikipedia, the free encyclopedia
ಭಾರತದ ಪ್ರಧಾನ ಮಂತ್ರಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು.
ಭಾರತದ ಪ್ರಧಾನಮಂತ್ರಿ
Bhārat kē Pradhānamantrī | |
---|---|
ಪ್ರಧಾನಮಂತ್ರಿ ಕಚೇರಿ | |
Style | ಗೌರವಾನ್ವಿತ (ಔಪಚಾರಿಕ) ಘನವೆತ್ತ (ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ) |
ಸ್ಥಿತಿ | ಸರ್ಕಾರದ ಮುಖ್ಯಸ್ಥ |
ಸಂಕ್ಷಿಪ್ತ ನಾಮ | ಪಿಎಂ |
ಸದಸ್ಯ |
|
ಜವಾಬ್ದಾರ | |
ಅಧೀಕೃತ ಕಛೇರಿ | ೭, ಲೋಕಕಲ್ಯಾಣ ಮಾರ್ಗ, ನವದೆಹಲಿ, ದಿಲ್ಲಿ, ಭಾರತ |
Seat | ಪ್ರಧಾನಮಂತ್ರಿ ಕಚೇರಿ, ಸೆಕ್ರೆಟರಿಯಟ್ ಕಟ್ಟಡ, ದಕ್ಷಿಣ ಭಾಗ, ನವದೆಹಲಿ, ಭಾರತ |
ನೇಮಕಾಧಿಕಾರಿ | ಭಾರತದ ರಾಷ್ಟ್ರಪತಿ ಸಮಾವೇಶದ ಮೂಲಕ, ಲೋಕಸಭೆಯಲ್ಲಿ ವಿಶ್ವಾಸವನ್ನು ವಹಿಸುವ ನೇಮಕಾತಿ ಸಾಮರ್ಥ್ಯದ ಆಧಾರದ ಮೇಲೆ. |
ಅಧಿಕಾರಾವಧಿ | At the pleasure of the president ಶೀಘ್ರದಲ್ಲೇ ಕರಗದ ಹೊರತು ಲೋಕಸಭಾ ಅವಧಿ 5 ವರ್ಷಗಳು ಇಷ್ಟೇ ಅವಧಿ ಇಂದು ಮಿತಿಗೊಳಿಸಿಲ್ಲ. |
ಕಾಯಿದೆಯ ಪ್ರಕಾರ | ಭಾರತದ ಸಂವಿಧಾನ |
Precursor | ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ |
ಪ್ರಾರಂಭಿಕ ಅಧಿಕಾರಿ | ಜವಾಹರಲಾಲ್ ನೆಹರು (1947–64) |
ಹುದ್ದೆಯ ಸ್ಥಾಪನೆ | 15 ಆಗಸ್ಟ್ 1947; 28012 ದಿನ ಗಳ ಹಿಂದೆ (1947-೦೮-15) |
ಉಪಾಧಿಕಾರಿ | ಖಾಲಿ, ಭಾರತದ ಉಪ ಪ್ರಧಾನಿ |
ವೇತನ | ₹20 ಲಕ್ಷ (ಯುಎಸ್$೪೪,೪೦೦) (ವಾರ್ಷಿಕ, ಒಳಗೊಂಡು ₹೯,೬೦,೦೦೦ (ಯುಎಸ್$೨೧,೩೧೨) ಪ್ರಧಾನಮಂತ್ರಿಯ ಸಂಬಳ) |
ಅಧೀಕೃತ ಜಾಲತಾಣ | pmindia |
ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು.