![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/54/Bhagat_Singh_1929.jpg/640px-Bhagat_Singh_1929.jpg&w=640&q=50)
ಭಗತ್ ಸಿಂಗ್
ಭಾರತದ ಸ್ವಾತಂತ್ರ್ಯ ಹೋರಾಟಗಾರ / From Wikipedia, the free encyclopedia
ಭಗತ್ ಸಿಂಗ್1907 ರಿಂದ 1931 ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಪಂಜಾಬಿನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು.
Quick Facts ಕ್ರಾಂತಿಕಾರಿ ಭಗತ್ ಸಿಂಗ್, ಜನನ ...
ಕ್ರಾಂತಿಕಾರಿ ಭಗತ್ ಸಿಂಗ್ | |
---|---|
![]() ಭಗತ್ ಸಿಂಗ್ ರವರು ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಕೂದಲು ಕತ್ತರಿಸಿದ ನಂತರ 1929 ರಲ್ಲಿ ಲಾಹೋರ್ಗೆ ಪಯಣಿಸಿದಾಗ | |
ಜನನ | (೧೯೦೭-೦೯-೨೮)೨೮ ಸೆಪ್ಟೆಂಬರ್ ೧೯೦೭ ಜರನ್ವಾಲ ತೆಹ್ಸಿಲ್, ಪಂಜಾಬ್, ಬ್ರಿಟಿಷ್ ಭಾರತ |
ಮರಣ | 23 March 1931(1931-03-23) (aged 23) ಲಾಹೋರ್, ಪಂಜಾಬ್, ಬ್ರಿಟಿಷ್ ಭಾರತ |
ರಾಷ್ಟ್ರೀಯತೆ | ಭಾರತೀಯ |
Organization(s) | ನೌಜವಾನ್ ಭಾರತ್ ಸಭಾ,ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ತಾನ್ ಸಮಾಜವಾದಿ ಗಣತಂತ್ರವಾದಿ ಸಂಘ |
Movement | ಭಾರತದ ಸ್ವಾತಂತ್ರ್ಯ ಚಳುವಳಿ |
Close
- ಜನನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.
- ಈಗಾಗಲೇ ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ, ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.
- ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. "ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ - ಸ್ವಾತಂತ್ರ್ಯ. ಅದೊಂದೇ ನನ್ನ ಕನಸು" ಎಂಬ ಸರಭ್ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು.
![Thumb image](http://upload.wikimedia.org/wikipedia/commons/thumb/f/f3/Bhagat_singh_noncooperation.jpg/320px-Bhagat_singh_noncooperation.jpg)
![Thumb image](http://upload.wikimedia.org/wikipedia/commons/thumb/7/77/Shaheed_Bhagat_Singh._Rewalsar%2C_Himachal_Pradesh.jpg/640px-Shaheed_Bhagat_Singh._Rewalsar%2C_Himachal_Pradesh.jpg)
![Thumb image](http://upload.wikimedia.org/wikipedia/commons/thumb/7/72/Statues_of_Bhagat_Singh%2C_Rajguru_and_Sukhdev.jpg/640px-Statues_of_Bhagat_Singh%2C_Rajguru_and_Sukhdev.jpg)
![Thumb image](http://upload.wikimedia.org/wikipedia/commons/thumb/b/b3/Pamphlet_by_HSRA_after_Saunders_murder.jpg/320px-Pamphlet_by_HSRA_after_Saunders_murder.jpg)
![Death Certificate of Bhagat Singh](http://upload.wikimedia.org/wikipedia/commons/thumb/d/df/BhagatSingh_DeathCertificate.jpg/320px-BhagatSingh_DeathCertificate.jpg)