ಬಂಗಾರದ ಮನುಷ್ಯ (ಆತ್ಮಚರಿತ್ರೆ)
From Wikipedia, the free encyclopedia
ಬಂಗಾರದ ಮನುಷ್ಯ ಅ.ನಾ.ಪ್ರಹ್ಲಾದ ರಾವ್ ಅವರು ಬರೆದಿರುವ ಡಾ.ರಾಜ್ ಕುಮಾರ್ ಅವರ ಜೀವನಚರಿತ್ರೆ.ಸುಮಾರು 220 ಪುಟಗಳ ಈ ಪುಸ್ತಕದಲ್ಲಿ ಡಾ.ರಾಜಕುಮಾರ್ ಅಭಿನಯದ ಸುಮಾರು 208 ಚಿತ್ರಗಳ ಬಗ್ಗೆ ಮಾಹಿತಿಯೊಂದಿಗೆ , ಅವರ ಜೀವನದ ಸಾಧನೆಯನ್ನು ವಿವರಿಸಲಾಗಿದೆ. ಸಾಮಾಜಿಕವಾಗಿ ಅವರು ನೀಡಿದ ಕೊಡುಗೆಯ ಬಗ್ಗೆ ಈ ಪುಸ್ತಕ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ.
![]() | It has been suggested that 'ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ be merged into this article. (Discuss) |
ಕನ್ನಡ ಪುಸ್ತಕ 2006ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, 2006ರಲ್ಲಿ ಕುವೈತ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು.
ಈ ಪುಸ್ತಕ ಡಾ.ರಾಜಕುಮಾರ್: ದಿ ಇನಿಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್ ಎಂಬ ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂಡಿದೆ. ಪ್ರೊ.ಸಿ.ಎನ್.ರಾಮಚಂದ್ರನ್ ಮತ್ತು ಅಲ್ಲಾಡಿ ಜಯಶ್ರೀ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ.
ಇಂಗ್ಲಿಷ್ ಪುಸ್ತಕ ಬೆಂಗಳೂರಿನಲ್ಲಿ ಶ್ರೀಮತಿ ಪಾವ೯ತಮ್ಮ ರಾಜಕುಮಾರ್ ಅವರಿಂದ ಬಿಡುಗಡೆಗೊಂಡಿತಲ್ಲದೆ, ಲಂಡನ್ ನಗರದಲ್ಲಿ ೨೦೦೮ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು. ಅಮೆರಿಕದಲ್ಲಿ ಇದು ನ್ಯೂಜಸಿ೯ ನಗರದಲ್ಲಿ ಬಿಡುಗಡೆಗೊಂಡಿತು. ಇದು ಡಾ.ರಾಜಕುಮಾರ್ ಅವರನ್ನು ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವೇ ಅಲ್ಲದೆ, ದೇಶದ ಹೊರಗಡ ಬಿಡುಗಡೆ ಆದ ಡಾ.ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು.
https://m.facebook.com/banavasikannadigaru/posts/248581158949189