ಪುರಿ
ಒಡಿಶಾದ ಪ್ರಾಚೀನ ನಗರ / From Wikipedia, the free encyclopedia
ಪುರಿ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ನಗರ. ಹನ್ನೊಂದನೆ ಶತಮಾನದ ಕೊನೆಯಲ್ಲಿ ಕಟ್ಟಲಾದ ಜಗನ್ನಾಥ ದೇವಸ್ಥಾನದ ಹೆಸರು ಪಡೆದು ಹಲವರಿಗೆ ಇದು ಜಗನ್ನಾಥ ಪುರಿ ಎಂದೂ ಪರಿಚಿತವಾಗಿದೆ.
ಪುರಿ ದೇಶದ ಪೂರ್ವಭಾಗದಲ್ಲಿರುವ ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇದು ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿ ಸ್ಥಿತವಾಗಿದೆ ಮತ್ತು ಪುರಿಯ ಸಮುದ್ರತೀರದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದಾದಂಥ ವಿಶಿಷ್ಟವಾದ ಸ್ಥಳದಲ್ಲಿ ಸ್ಥಿತವಾಗಿರುವುದರಿಂದ ಒಂದು ಜನಪ್ರಿಯ ಸಮುದ್ರತೀರದ ವಿಹಾರ ಧಾಮವೆನಿಸಿದೆ.