ಪದ
From Wikipedia, the free encyclopedia
ಪದ :-ಭಾಷಾಶಾಸ್ತ್ರದಲ್ಲಿ, ಲಾಕ್ಷಣಿಕ ಅಥವಾ ಲೌಕಿಕ ವಿಷಯಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಉಚ್ಚರಿಸುವ ಒಂದು ಚಿಕ್ಕ ಘಟಕ ಪದ. ಇದನ್ನು ಆಕೃತಿಮಾವೆಂದು ಗುರುತಿಸಬಹುದು. ಪದವು ಆಳವಾಗಿ ವಿಭಿನ್ನತೆಯನ್ನು ಹೊಂದಿರುತ್ತದೆ. ಒಂದು ಪದ ಒಂದೇ ಕನಿಷ್ಠ ಪದಘಟಕವನ್ನು ಹೊಂದಿರುತ್ತದೆ. ಉದಾ: ಬಾ, ಓಹ್ !, ಕೆಂಪು, ತ್ವರಿತ, ಓಡು ಇತ್ಯಾದಿ. ಒಂದಕ್ಕಿಂತ ಹೆಚ್ಚು ಪದಗಳು ಬಂದಾಗ ಅವುಗಳು ಕನಿಷ್ಠತಮ ಘಟಕದಲ್ಲಿರುವ ಅರ್ಥವನ್ನು ಕಳೆದುಕೊಂಡು ಸಂಕೀರ್ಣ ಪದಗಳಾಗುತ್ತವೆ. ಉದಾ: ಬಂಡೆಗಳು, ತ್ವರಿತವಾಗಿ, ಚಾಲನೆಯಲ್ಲಿರುವ, ಅನಿರೀಕ್ಷಿತ ಇತ್ಯಾದಿ.
- ಹಲವು ಸಂಕೀರ್ಣ ಪದಗಳು ಒಳಗೊಂಡ ಒಂದು ವಾಕ್ಯವು ಸಂಕೀರ್ಣ ವಾಕ್ಯವಾಗುತ್ತದೆ, ಉದಾ: ನೀನು ಬಾ. ಇದೊಂದು ಸರಳ ವಾಕ್ಯ.
- ಒಂದು ವಾಕ್ಯಕ್ಕೆ ಇನ್ನಷ್ಟು ಪದಗಳು ಸೇರಿದಾಗ ಸಂಕೀರ್ಣ ವಾಕ್ಯ ನಿರ್ಮಾಣವಾಗುತ್ತದೆ. ಉದಾ: ನೀನು ನಾಳೆ ಬೆಳಿಗ್ಗೆ ಒಬ್ಬನೆ ನಮ್ಮ ಹೊಸ ಮನೆಗೆ ಬಾ ಹೀಗೆ ಹಲವಾರು ಪದಗಳು ಜೊತೆಸೇರಿ ಸಂಕೀರ್ಣ ವಾಕ್ಯವೊಂದರ ರಚನೆಯೂ ಆಗುತ್ತದೆ.
- ಮಾತನಾಡುವ ಒಂದು ಪದ ಅಥವಾ ಲಿಖಿತ ಪದವನ್ನು ಶಬ್ದವೆಂದು ಉಲ್ಲೇಖಿಸಬಹುದು. ಅಥವಾ ಕೆಲವೊಮ್ಮೆ ಈ ಎರಡರ ಹಿಂದೆಯೂ ಮರೆಯಾದ ಅಮೂರ್ತವಾದ ಪರಿಕಲ್ಪನೆ ಇರುತ್ತದೆ. ಮಾತುಗಳು ಎಂಬುದು ಧ್ವನಿ ಎಂಬ ಶಬ್ದಗಳ ಘಟಕಗಳಿಂದ ಕೂಡಿವೆ. ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳನ್ನು graphemes ಎಂಬ ಸಂಜ್ಞೆಗಳಲ್ಲಿ ಬರೆಯಲಾಗಿದೆ.