ಕನ್ನಡದ ಅಭಿಜಾತ ಖಳನಟ From Wikipedia, the free encyclopedia
ಕನ್ನಡದ ಅಭಿಜಾತ ಖಳನಟ ದೇವರಾಜ್ 1960ನೇ ಇಸವಿ ಸೆಪ್ಟಂಬರ್ 20ರಂದು ಬೆಂಗಳೂರಿನ ಲಿಂಗರಾಜಪುರಂನಲ್ಲಿ ಜನಿಸಿದರು. ಇವರು ರಂಗಭೂಮಿಯ ನಂಟಿನಿಂದ ಚಿತ್ರರಂಗಕ್ಕೆ ಬಂದ ಕಲಾವಿದ. ಪ್ರಾರಂಭದಲ್ಲಿ ಬಿ ಜಯಶ್ರೀ ಅವರ "ಸ್ಪಂದನ" ರಂಗ ತಂಡದಲ್ಲಿದ್ದು ಬಳಿಕ ಶಂಕರನಾಗ್ ಅವರ "ಸಂಕೇತ್" ಕಲಾತಂಡದ ಸದಸ್ಯರಾದರು. ಎಚ್ಎಮ್ಟಿಯಲ್ಲಿ ಉದ್ಯೋಗಿಯಾಗಿದ್ದ ದೇವರಾಜ್ "ತ್ರಿಶೂಲ" ಚಿತ್ರದ ಮೂಲಕ ಖಳನಟರಾಗಿ ಬೆಳ್ಳಿ ಪರದೆಗೆ ಎಂಟ್ರಿ ಪಡೆದರು. ಆದರೆ ದೇವರಾಜ್ ನಟನೆಯಲ್ಲಿ ಬಿಡುಗಡೆಯಾದ ಪ್ರಥಮ ಚಿತ್ರ "27 ಮಾವಳ್ಳಿ ಸರ್ಕಲ್". ಇದು 1986ರಲ್ಲಿ ತೆರೆಗೆ ಬಂತು.
ತನ್ನ ವಿಶಿಷ್ಟ ಹಾವ-ಭಾವ, ತೆರೆಯ ಮೇಲೆ ಖಳಪಾತ್ರಗಳಿಗೆ ಮೆರುಗು ನೀಡುವ ವಿಕೃತ ನಗು, ಅದಕ್ಕೆ ಸರಿಯಾಗಿ ಭೀತಿ ಹುಟ್ಟಿಸುವ ಮುಖಚರ್ಯೆ ಇವೆಲ್ಲದರ ಮೂಲಕ ಮೇರು ಖಳನಟ ವಜ್ರಮುನಿಯವರ ಗೆಟಪ್ಗೆ ಹೊಂದಿಕೆಯಾಗುತ್ತಿದ್ದ ದೇವರಾಜ್ 1980ರ ದಶಕದಲ್ಲಿ ಕನ್ನಡ ಚಿತ್ರರಸಿಕರ ಪಾಲಿನ ನೆಚ್ಚಿನ ಖಳನಟರಾದರು. ನಂತರ 1989 ರಲ್ಲಿ ಖಳನಟನ ಪಾತ್ರದಿಂದ ನಾಯಕ ನಟನ ಪಾತ್ರಕ್ಕೆ ಬಡ್ತಿ ಸಿಕ್ಕಿತು. ಲಾಕಪಡೇತ್, ಇಂದ್ರಜೀತ್ ಇಮೇಜ್ ತಂದುಕೊಟ್ಟಿತು ಆದರೆ ಪೂರ್ವಾದದಲ್ಲಿ (1989) ರಲ್ಲಿ 'ಹತ್ಯಾಕಾಂಡ' ಎಂಬ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನಾಯಕ ನಟನ ಪಾತ್ರ ಮಾಡಿದ್ದರು.
ದೇವರಾಜ್ ಆರಂಭದಲ್ಲಿ ಖಳಪಾತ್ರಗಳಲ್ಲಿ ಮಿಂಚತೊಡಗಿದರೆ ಜೊತೆಜೊತೆಯಲ್ಲಿ ಪೊಲೀಸ್ ಪಾತ್ರಗಳೂ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದವು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಗಳು ದೇವರಾಜ್ ಅವರಿಗೆ ಖಾಯಂ ಆಗತೊಡಗಿದ ಉದಾಹರಣೆಗಳೂ ಸಿಗುತ್ತವೆ.
ಲಾಕಪ್ಡೆತ್, ಗೋಲಿಬಾರ್, ಗ್ಯಾಂಗ್ ಲೀಡರ್, ಸರ್ಕಲ್ ಇನ್ಸ್ಪೆಕ್ಟರ್ ಇವಿತ್ಯಾದಿಗಳು ದೇವರಾಜ್ ಅವರಿಗೆ ಹೆಸರು ತಂದುಕೊಟ್ಟ ಮತ್ತು ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಯಾಗಲು ಕಾರಣವಾದ ಕೆಲವು ಪ್ರಮುಖ ಚಿತ್ರಗಳಾಗಿವೆ.
ಕಾಡುಗಳ್ಳ ವೀರಪ್ಪನ್ ಕುರಿತಾಗಿ ಬಂದ "ವೀರಪ್ಪನ್" ಚಿತ್ರ ದೇವರಾಜ್ ಅವರ ಚಿತ್ರ ಜೀವನದಲ್ಲಿ ಪ್ರಮುಖವಾದುದಾಗಿದೆ. ದಂತಚೋರ ಜೀವಂತವಾಗಿದ್ದಾಗಲೇ ತೆರೆಕಂಡ ಈ ಚಿತ್ರ ಆ ದಿನಗಳಲ್ಲಿ ಬಹಳ ಸುದ್ದಿಗೆ ಕಾರಣವಾಗಿತ್ತು. ವೀರಪ್ಪನ್ ಚಿತ್ರದಲ್ಲಿನ ನಟನೆಗಾಗಿ ದೇವರಾಜ್ ಆ ಸಾಲಿನ ಉತ್ತಮ ನಟ ರಾಜ್ಯಪ್ರಶಸ್ತಿಗೂ ಪಾತ್ರರಾಗಿದ್ದರು. ದೇವರಾಜ್ ಅವರೊಳಗಿದ್ದ ನಟನಾ ಪ್ರತಿಭೆಯನ್ನು ಇನ್ನಷ್ಟು ಒರೆಗೆ ಹಚ್ಚಿದ ಚಿತ್ರಗಳೆಂದರೆ, ಕಂಬಾರಪಳ್ಳಿ, ಹುಲಿಯಾ, ಬಂಗಾರದ ಮನೆ, ಉತ್ಕರ್ಷ ಇತ್ಯಾದಿ.
2000ನೇ ಇಸವಿ ಬಳಿಕ ದೇವರಾಜ್ ಹೆಚ್ಚು ಹೆಚ್ಚು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಇದೇ ಸಮಯದಲ್ಲಿ ಅವರು ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಡಾ. ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ ದೇವರಾಜ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು.ಹುಲಿಯಾ ಚಿತ್ರದಲ್ಲಿ ದೇವರಾಜ್ ಅವರ ಅಭಿನಯ ಕಂಡು ಸ್ವತಃ ವಿಷ್ಣುವರ್ಧನ್ ಅಚ್ಚರಿಪಟ್ಟು ಬೆನ್ನುತಟ್ಟಿದ್ದನ್ನು ಇಂದಿಗೂ ದೇವು ನೆನಪಿಸಿಕೊಳ್ಳುತ್ತಾರೆ.
ಇದೀಗ ಅವರ ಪುತ್ರ ಪ್ರಜ್ವಲ್ ದೇವರಾಜ್ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ.
ಕನ್ನಡದ ಅಭಿಜಾತ ಕಲಾವಿದ, ನಮ್ಮೆಲ್ಲರ ಪಾಲಿನ ಪ್ರೀತಿಯ ದೇವು ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಉನ್ನತಕ್ಕೇರಲಿ ಎಂಬುದಾಗಿ ಶುಭ ಹಾರೈಕೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.