ತಜಿಕಿಸ್ತಾನ್ (Тоҷикистон) ಅಥವಾ ತಾಜಿಕಿಸ್ತಾನ್ ಅಧಿಕೃತವಾಗಿ ತಜಿಕಿಸ್ತಾನ್ ಗಣರಾಜ್ಯ (ҷумҳурии Тоҷикистон) ಮಧ್ಯ ಏಷ್ಯಾದಲ್ಲಿರುವ ಒಂದು ಭೂಆವೃತ ಗುಡ್ಡಗಾಡು ರಾಷ್ಟ್ರ. ಇದರ ದಕ್ಷಿಣಕ್ಕೆ ಅಫ್ಘಾನಿಸ್ಥಾನ, ಪಶ್ಚಿಮಕ್ಕೆ ಉಜ್ಬೇಕಿಸ್ಥಾನ್, ಉತ್ತರಕ್ಕೆ ಕಿರ್ಗಿಸ್ಥಾನ್, ಮತ್ತು ಪೂರ್ವಕ್ಕೆ ಚೀನಿ ಜನ ಗಣರಾಜ್ಯಗಳಿವೆ. ತಜಿಕ್ ಭಾಷೆಯನ್ನು ಮಾತನಾಡುವ ತಜಿಕ್ ಮೂಲದ ಜನರು ಈ ದೇಶದಲ್ಲಿ ಬಹುಸಂಖ್ಯಾತರು. ಸಮಾನಿದ್ ಸಾಮ್ರಾಜ್ಯದ ತಾಣವಾಗಿದ್ದ ಇದು ೨೦ನೇ ಶತಮಾನದಲ್ಲಿ ಸೋವಿಯೆಟ್ ಒಕ್ಕೂಟದ ಭಾಗವಾಯಿತು. ೧೯೯೧ರಲ್ಲಿ ಒಕ್ಕೂಟವು ಒಡೆದ ಮೇಲೆ ಸ್ವತಂತ್ರ ರಾಷ್ಟ್ರವಾಯಿತು.
ತಜಿಕಿಸ್ತಾನ್ ಗಣರಾಜ್ಯ Ҷумҳурии Тоҷикистон ಜುಮ್ಹೂರಿ-ಯಿ ತೊಜೀಕಿಸ್ತೊನ್ جمهوری تاجیکستان | |
---|---|
Motto: ಯಾವುದೂ ಇಲ್ಲ | |
Anthem: ಸುರುದಿ ಮಿಲ್ಲಿ | |
Capital | ದುಶಾನ್ಬೆ |
Largest city | ರಾಜಧಾನಿ |
Official languages | ತಜಿಕ್ |
Demonym(s) | Tajik or Tajikistani |
Government | ಏಕೀಕೃತ ರಾಷ್ಟ್ರಪತಿ ಆಡಳಿತ ಗಣರಾಜ್ಯ |
• ರಾಷ್ಟ್ರಪತಿ | ಇಮೊಮಲಿ ರಹ್ಮೊನ್ |
• ಪ್ರಧಾನ ಮಂತ್ರಿ | ಓಖಿಲ್ ಓಖಿಲೊವ್ |
ಸ್ವಾತಂತ್ರ್ಯ | |
• Water (%) | 0.3 |
Population | |
• ಜುಲೈ ೨೦೦೬ estimate | 7,320,0001 (100th1) |
• ೨೦೦೦ census | 6,127,000 |
GDP (PPP) | ೨೦೦೫ estimate |
• Total | $8.802 billion (139th) |
• Per capita | $1,388 (159th) |
Gini (೨೦೦೩) | 32.6 medium |
HDI (೨೦೦೪) | 0.652 medium · 122nd |
Currency | ಸೊಮೊನಿ (TJS) |
Time zone | UTC+5 (TJT) |
Calling code | 992 |
Internet TLD | .tj |
|
1929 ರಲ್ಲಿ ಸ್ಥಾಪಿತವಾದ ಈ ಗಣರಾಜ್ಯ ವು. ಸೋವಿಯತ್ ದೇಶದ ದಕ್ಷಿಣದಲ್ಲಿ ಉ.ಅ. 39o 40' — 36o 40' ಮತ್ತು ಪೂ. ರೇ. 67o 20'—75o 00' ನಡುವೆ ಇದೆ. ಪಶ್ಚಿಮ ಹಾಗೂ ಉತ್ತರದಲ್ಲಿ ಉಜ್ ಬೆಕ್ ಮತ್ತು ಕಿರ್ಗಿeóï ಸೋವಿಯತ್ ಸಮಾಜವಾಗಿ ಗಣರಾಜ್ಯಗಳು, ದಕ್ಷಿಣದಲ್ಲಿ ಅಘ್ಘಾನಿಸ್ತಾನ, ಪೂರ್ವದಲ್ಲಿ ಚೀನ - ಇವು ಇದರ ಮೇರೆಗಳು. ವಿಸ್ತೀರ್ಣ 55,250 ಚ.ಮೈ. (1,43,100 ಚ, ಕಿಮೀ) ಜನಸಂಖ್ಯೆ 30,80,000 (1972). ರಾಜಧಾನಿ ದೂಷಾನ್‍ಬಿ.
ಭೌತಿಕ ಭೂವಿವರಣೆ
ತಾಜಿಕ್ ಗಣರಾಜ್ಯ ಪರ್ವತಗಳ ನಾಡು. ಅದರ ಅರ್ಧಕ್ಕಿಂತ ಹೆಚ್ಚು ಭಾಗ 10,000 ಅಡಿಗಳಿಗಿಂತ ಎತ್ತರದಲ್ಲಿದೆ. ಪೂರ್ವ ಭಾಗವೆಲ್ಲ ಎತ್ತರದ ಕಣಿವೆಗಳಿಂದ (ಪಾಮಿರ್‍ಗಳು) ಕೂಡಿದೆ. ರಾಜ್ಯದಲ್ಲಿ ಹಲವಾರು ಪರ್ವತಶ್ರೇಣಿಗಳುಂಟು. ಇವು ಸಾಮಾನ್ಯವಾಗಿ ಪೂರ್ವ - ಪಶ್ಚಿಮವಾಗಿ ಹಬ್ಬಿವೆ. ಪಶ್ಚಿಮದಲ್ಲಿ ಜರಾಫ್ ಷಾನ್ಸ್‍ಕಿ, ಗಿಸಾರ್‍ಸ್ಕಿ ಮತ್ತು ಪಾಮಿರ್‍ಗಳಲ್ಲಿ ಪೆಟ್ರಾಪೆರ್ವೋಗೋ. ಟ್ರಾನ್ಸ್ ಅಲೈ ಹಾಗೂ ಉತ್ತರ ಹಾಗೂ ದಕ್ಷಿಣ ಅಲಿಚುಸ್ರ್ಕಿ ಪರ್ವತಗಳಿವೆ. ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವ ಸಾರಿಕೋಲ್ಸ್‍ಕಿ ಪರ್ವತ ಶ್ರೇಣಿ ಈ ರಾಜ್ಯದ ಪೂರ್ವ ಗಡಿಯಾಗಿದೆ. ಪಾಮಿರ್‍ಗಳ ಉತ್ತರದಲ್ಲಿರುವ ಕಮ್ಯೂನಿಸಂ ಶಿಖರದ ಎತ್ತರ 24,590 ಅಡಿ (7,495 ಮೀ.) ಹಿಂದೆ ಇದಕ್ಕೆ ಸ್ಪಾಲಿನಾ ಶಿಖರವೆಂಬ ಹೆಸರಿತ್ತು. ಲೆನಿನ್ ಶಿಖರ ಎತ್ತರ 23,405ಅಡಿ. ಇದೂ ಪಾಮಿರ್‍ಗಳ ಉತ್ತರದಲ್ಲಿದೆ. ಕಾರ್ಲ್ ಮಾಕ್ರ್ಸ್ ಶಿಖರ (22,067ಅಡಿ) ದಕ್ಷಿಣದಲ್ಲಿದೆ. ಇವೆಲ್ಲವೂ ಸೋವಿಯತ್ ದೇಶದಲ್ಲೇ ಅತ್ಯುನ್ನತವಾದ ಶಿಖರಗಳು.
ಕಮ್ಯೂನಿಸಂ ಶಿಖರದ ದಕ್ಷಿಣದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಖಂಡೀಯ ಹಿಮ ನದಿ ಲೆಡ್ನಿಕ್ ಫೆಡ್ ಚೆಂಕೋ (50 ಮೈ.) ಇದೆ. ಫರ್ಗಾನ ಕಣಿವೆಯಲ್ಲಿ ಹರಿಯುವ ಸಿರ್- ದಾರ್ಯ ನದಿಯನ್ನೂ ಬಖಾರ ಬಳಿ ಉಜ್ ಬೆಕ್ ಮರುಭೂಮಿಯಲ್ಲಿ ಬತ್ತಿಹೋಗುವ ಜೆರಾಫ್ ಷಾನ್ ನದಿಯನ್ನೂ ಸಿಂಕಿಯಾಂಗ್‍ಗೆ ಹರಿಯುವ ಮಾರ್ಕಾನ್ಸೂ ನದಿಯನ್ನೂ ಬಿಟ್ಟರೆ ಎಲ್ಲ ಹಿಮಪೋಷಿತ ನದಿಗಳೂ ಅಮೂದಾರ್ಯ (ಆಕ್ಸಸ್) ನದಿಯನ್ನು ಅದರ ಬಲದಂಡೆಯಲ್ಲಿ ಕೂಡುತ್ತವೆ. ಅಮೂದಾರ್ಯ ನದಿ ಆಘ್ಘನ್ ಭಾಗದ ಹಿಂದೂ ಕುಷ್ ಪರ್ವತದಲ್ಲಿ ಹುಟ್ಟಿ, ಅಫ್‍ಘಾನಿಸ್ತಾನ ಹಾಗೂ ತಾಜಿûಕ್ ಗಣರಾಜ್ಯಗಳ ನಡುವೆ ಬಹುಭಾಗದ ಗಡಿಯಾಗಿ ಪರಿಣಮಿಸಿ. ಕಿರ್ಗಿಜ್ ಸೋವಿಯತ್ ಸಮಾಜವಾದಿ ಗಣರಾಜ್ಯದಲ್ಲಿ ಹುಟ್ಟುವ ರಾಕ್ಷ ನದಿಯನ್ನು ಕೂಡಿಕೊಂಡು ಮುಂದುವರಿಯುತ್ತದೆ.
ಪಾಮಿರ್ ಗಳಲ್ಲಿ ಅನೇಕ ಸರೋವರಗಳುಂಟು. ಇವು ಹಿಮನದಿಗಳಿಂದಲೋ ಭೂಕಂಪಗಳಿಂದ ಭೂಮಿ ಕುಸಿದೋ ಸೃಷ್ಟಿಯಾದವು. ಹಿಮನದಿಯಿಂದ ರೂಪುಗೊಂಡ ಅತ್ಯಂತ ದೊಡ್ಡ ಸರೋವರ ಕಾರ -ಕಲ್ . ಅದರ ವಿಸ್ತೀರ್ಣ 141 ಚ.ಮೈ. (364 ಚ.ಕಿಮೀ. ) ಆಳ 780 ಅಡಿ (238 ಮೀ) ಭೂಕುಸಿತದಿಂದ ಸೃಷ್ಟಿಯಾದ ಅತ್ಯಂತ ಈಚಿನ (1911) ಮತ್ತು ಅತ್ಯಂತ ದೊಡ್ಡ ಸರೋವರ ಸೀರ್ ಸಾರೆಜ್ ಕೋಯೆ ಓಜರೋ. ಅದರ ಉದ್ದ 38 ಮೈ. (61 ಕಿಮೀ.). ಆಳ 1,657ಅಡಿ.
ತಾಜಿಕ್ ರಾಜ್ಯದಲ್ಲಿ ವಾಯುಗುಣದ ಮೂರು ಪ್ರರೂಪಗಳಿವೆ. ತಗ್ಗು ಪ್ರದೇಶದಲ್ಲಿ ಒಣ ಹವೆ ; ಉಷ್ಣತೆ ಹೆಚ್ಚು. ವಾರ್ಷಿಕ ಸರಾಸರಿ ಮಳೆ 10",ಉಷ್ಣತೆ ಜುಲೈನಲ್ಲಿ 31o ಅ (88oಈ) ಜನವರಿಯಲ್ಲಿ 3oಅ (38oಈ). ತಪ್ಪಲು ಬೆಟ್ಟಗಳಲ್ಲಿ ಮಳೆ ಹೆಚ್ಚು ; ಆ ಪ್ರದೇಶ ಹೆಚ್ಚು ತಂಪಾಗಿರುತ್ತದೆ. 10,000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ಪರ್ವತಗಳ ಮೇಲೆ ವಾರ್ಷಿಕ ಅವಪತನ ಕೇವಲ 3" ; ವಾರ್ಷಿಕ ಸರಾಸರಿ ಉಷ್ಣತೆ, ನೀರು ಗಡ್ಡೆಕಟ್ಟುವ ಬಿಂದುವಿಗಿಂತ ಕೆಳಗೆ ಇರುತ್ತದೆ.
ವಾಯುವ್ಯದ ತಗ್ಗಿನ ಇಳಿಜಾರು ಪ್ರದೇಶÀಗಳು ಕಾಡುಗಳಿಂದ ಆವೃತವಾಗಿವೆ. ಇಲ್ಲಿಯ ಸಸ್ಯ ವೈವಿಧ್ಯಮಯ. ಅನುಕ್ರವಾಗಿ ಕುರುಚಲು, ಹುಲ್ಲುಗಾಡು ಪರ್ಣಪಾತಿ ಮತ್ತು ಶಂಕುಧಾರಿ ಕಾಡು, ಅಲ್ಪೈನ್ ಹುಲ್ಲುಗಾವಲು ಇವೆ. ಪ್ರಾಣಿಗಳಲ್ಲೂ ವೈವಿಧ್ಯವುಂಟು. ದಕ್ಷಿಣದ ತಗ್ಗಿನ ಪ್ರದೇಶದಲ್ಲಿ ಹುಲಿ, ಜಿಂಕೆ, ಹಲವು ಬಗೆಯ ಜಲಪಕ್ಷಿಗಳು ಉಂಟು. ಎತ್ತರದ ಪ್ರಸ್ಥಭೂಮಿಗಳಲ್ಲಿ ಜಿಂಕೆಗಳೂ ದೊಡ್ಡ ಹಲ್ಲಿಗಳೂ ಇವೆ. ಪಾಮಿರ್‍ಗÀಳಲ್ಲಿ ಕರಡಿಗಳೂ ಕಾಡುಕುರಿಗಳೂ ಇವೆ.
ಇತಿಹಾಸ
ತಾಜಿಕ್ ಹಿಂದೆ ಪರ್ಷಿಯನ್ ಚಕ್ರಾಧಿಪತ್ಯಕ್ಕೂ ಮ್ಯಾಸಿಡೋನಿಯದ ಅಲೆಗ್ಸಾಂಡರನ ಚಕ್ರಾಧಿಪತ್ಯಕ್ಕೂ ಸೇರಿತ್ತು. 8ನೆಯ ಶತಮಾನದಲ್ಲಿ ಅರಬರು ಅಮೂ-ದಾರ್ಯ ನದಿಯನ್ನು ದಾಟಿ ತಾಜಿಕದಿಂದ ಸೋಗ್ಡಿಯಾನವನ್ನು ಗೆದ್ದು ಅದನ್ನು ಮವೇರ ಅನ್ ನಹರ್ (ನದಿಯಾಚೆಯ ನಾಡು)ಎಂದು ಕರೆದರು. ಎರಡು ಶತಮಾನಗಳ ತರುವಾಯ ಈಶಾನ್ಯದಿಂದ ತುರ್ಕಿ ಜನರು ದಾಳಿ ಮಾಡಿದರು. ತುರ್ಕರೂ ತಾಜಿಕರೂ ಮುಸಲ್ಮಾನರಾದ್ದರಿಂದ ತಾಜಿಕರು ತುರ್ಕಿಯ ಸಾಮಾಜಿಕ ಹಾಗೂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸತೊಡಗಿದರು.
18ನೆಯ ಶತಮಾನದ ಮಧ್ಯದ ವರೆಗೆ ತಾಜಿಕರು ಬೊಖಾರದ ಅಮೀರರ ಅಧೀನದಲ್ಲಿದ್ದರು. ತರುವಾಯ ಅಮೂ- ದಾರ್ಯ ನದಿಯ ದಕ್ಷಿಣ ಹಾಗೂ ನೈಋತ್ಯ ಪ್ರದೇಶಗಳನ್ನು ಆಫ್ಘನರು ವಶಪಡಿಸಿಕೊಂಡರು. 1895ರಲ್ಲಿ ಆಂಗ್ಲೊ-ರಷ್ಯನ್ ಆಯೋಗವೊಂದು ಅಫ್ಘಾನಿಸ್ತಾನದ ಉತ್ತರದ ಗಡಿಯನ್ನು ನಿರ್ಧರಿಸಿದಾಗ ತಾಜಿಕ್ ಪ್ರದೇಶ ಮತ್ತೊಮ್ಮೆ ವಿಭಾಗವಾಯಿತು.
ರಷ್ಯನ್ ಕ್ರಾಂತಿಯ (1917) ತರುವಾಯ, 1918ರಲ್ಲಿ ಸ್ಥಾಪಿತವಾದ ತುರ್ಕಿಸ್ಥಾನ್ ಸ್ವಯಮಾಡಳಿತ ಸೋಮಿಯತ್ ಸಮಾಜವಾದಿ ಗಣರಾಜ್ಯದಲ್ಲಿ ತಾಜಿಕ್ ಪ್ರದೇಶದ ತಕ್ಕಮಟ್ಟಿನ ಭಾಗ ಸೇರ್ಪಡೆಯಾಯಿತು. 1920 ರ ಆಗಸ್ಟ್ 23 ರಂದು ಬುಖಾರಖಾನ್ ಅಧಿಪತ್ಯಕ್ಕೂ ಕ್ರಾಂತಿ ವ್ಯಾಪಿಸಿತು. ಆ ಅಧಿಪತ್ಯದಲ್ಲಿ ಈಗಿನ ತಾಜಿಕ್ ಗಣರಾಜ್ಯದ ಬಹುತೇಕ ಭಾಗ ಸೇರಿತ್ತು. 1924ರಲ್ಲಿ ಉಜ್ ಬೆಕ್ ಸೋಮಿಯತ್ ಸಮಾಜವಾದಿ ಗಣರಾಜ್ಯದ ಅಂಗವಾಗಿ ತಾಜಿಕ್ ಸ್ವಯಮಾಡಳಿತ ಸಮಾಜವಾದಿ ರಾಜ್ಯವನ್ನು ರಚಿಸಲಾಯಿತು. 1929ರಲ್ಲಿ ಇದು ಸೋಮಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಒಂದು ಅಂಗರಾಜ್ಯದ ಸ್ಥಾನಮಾನ ಗಳಿಸಿತು.
ಜನತೆ, ಸಂಸ್ಕೃತಿ, ಶಿಕ್ಷಣ
ತಾಜಿಕಿಸ್ತಾನ ಹಲವು ರಾಷ್ಟ್ರಿಕತೆಗಳ (ನ್ಯಾಷನಾಲಿಟೀಸ್) ರಾಜ್ಯ. ಇಲ್ಲಿಯ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತಾಜಿಕರು. ಭಾಷೆ, ಸಂಪ್ರದಾಯ ಮುಂತಾದವುಗಳ ದೃಷ್ಟಿಯಿಂದ ಅವರನ್ನು ಅನೇಕ ಉಪವಿಭಾಗಗಳಾಗಿ ವಿಂಗಡಿಸಬಹುದು. ತಾಜಿಕರ ಅನಂತರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವವರು ತುರ್ಕಿಕ್ ಜನರು. ಉಜೆ ಬೆಕರು, ತಾತಾರರು, ಕಿರ್ಗಿಜರು, ಕಾಜಾಕರು, ಮೂರನೆಯ ದೊಡ್ಡ ಗುಂಡು ರಷ್ಯನರು ಮತ್ತು ಉಕ್ರೇನಿಯನರದು. ಇಲ್ಲಿ ಅಸೀಟರೂ ಆರ್ಮೀನಿಯನರೂ ಯೆಹೂದ್ಯರೂ ಜಿಪ್ಸಿಗಳೂ ಅರಬರೂ ಇದ್ದಾರೆ. ಸರಾಸರಿ ಜನಸಾಂದ್ರತೆ ಬಲು ಕಡಿಮೆ. ಆದರೆ ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಇತರ ಮಧ್ಯೆ ಏಷ್ಯನ್ ಗಣರಾಜ್ಯಗಳಂತೆ ಇಲ್ಲೂ ತಾಜಿಕಿಸ್ಥಾನದಲ್ಲೂ ಜನಸಂಖ್ಯೆಯ ಏರಿಕೆಯ ದರ ಬಲು ಹೆಚ್ಚು. ಸೋವಿಯೆತ್ ವ್ಯವಸ್ಥೆಯಲ್ಲಿ ರಾಜ್ಯ ಬಹಳ ಪ್ರಗತಿ ಹೊಂದಿದೆ. ಸಾಮಾಜಿಕವಾಗಿ ತಾಜಿಕಿಸ್ತಾನದ ಜನಸಂಖ್ಯೆಯಲ್ಲಿ ಸೇ. 54 ಮಂದಿ ಸಾಮೂಹಿಕ ಕೃಷಿಕರು, 31% ಕಾರ್ಮಿಕರು, 16% ಕಚೇರಿ ನೌಕರರು. ಕೈಗಾರಿಕೆ ಹಾಗೂ ಕಚೇರಿ ನೌಕರರಲ್ಲಿ ಸೇ 40 ಮಂದಿ ಮಹಿಳೆಯರು.
ತಾಜಿಕರರು ಇರಾನಿಯನ್ ಸಂಸ್ಕೃತಿ. ಅವರ ಭಾಷೆ ಇರಾನಿನಲ್ಲಿ ಆಡುವ ಪರ್ಷಿಯನ್ ಭಾಷೆಯನ್ನೆ ಬಹಳ ಮಟ್ಟಿಗೆ ಹೋಲುತ್ತದೆ. ಆದರೆ 1940ರಿಂದ ಇದನ್ನು ಸಿರಿಲಿಕ್ (ರಷ್ಯನ್) ಲಿಪಿಯಲ್ಲಿ ಬರೆಯಲಾಗುತ್ತದೆ. ವಿವಿಧ ತುರ್ಕಿಕ್ ಮೂಲದ ಜನರು ಇರಾನೀಕರಣವನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಉಜ್‍ಬೆಕ್ ಭಾಷೆಯಲ್ಲಿ ಅನೇಕ ಪತ್ರಿಕೆಗಳು ಪ್ರಕಟವಾಗುತ್ತಿವೆ. ಶಾಲೆಯಲ್ಲಿ ಉಜ್‍ಬೆಕ್ ಭಾಷೆಯನ್ನು ಬೋಧಿಸಲಾಗುತ್ತದೆ. ಸೋವಿಯೆತ್ ಅವಧಿಯಲ್ಲಿ ತಾಜಿಕರು ಕೆಲವು ಮುಖ್ಯ ಪರ್ಷಿಯನ್ ಕವಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಅವರಲ್ಲಿ ಮುಖ್ಯರಾದವರು ರುದಾಕಿ ಮತ್ತು ಉಮರ್ ಖಯ್ಯಾಮ್, ಸಾದಿ, ಹಾಫೀಜ್, ಜಾಮಿ ಇವರೂ ತಾಜಿಕ್ ಸಾಹಿತ್ಯದ ಚರಿತ್ರೆಯಲ್ಲಿ ಉಲ್ಲೇಖಿತರಾಗಿದ್ದಾರೆ.
1960ರ ದಶಕದಲ್ಲಿ 3,50,000 ಶಾಲಾ ವಿದ್ಯಾರ್ಥಿಗಳಿದ್ದರು. ಕಿಂಡರ್‍ಗಾರ್ಟನ್ ತರಗತಿಯಲ್ಲಿ 16,000 ಮಕ್ಕಳಿದ್ದವು. 1941ರಲ್ಲಿ ದೂಷಾನ್‍ಬಿಯಲ್ಲಿ ಸೋವಿಯತ್ ಒಕ್ಕೂಟದ ವಿಜ್ಞಾನಿಗಳ ಅಕಾಡೆಮಿಯ ಶಾಖೆಯೊಂದು ಸ್ಥಾಪಿತವಾಯಿತು. 1951ರಲ್ಲಿ ಇದು ಸ್ವತಂತ್ರ ಸಂಸ್ಥೆಯಾಯಿತು. ಇಲ್ಲೊಂದು ವಿಶ್ವವಿದ್ಯಾಲಯವಿದೆ. ದೂಷಾನ್‍ಬಿಯಲ್ಲಿ ತಾಜಿಕ್, ರಷ್ಯನ್ ಮತ್ತು ಉಜ್‍ಬೆಕ್ ಭಾಷೆಗಳಲ್ಲಿ ಪ್ರಸಾರ ಮಾಡುವ ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರಗಳಿವೆ. ಪಾಮಿರ್‍ನಲ್ಲಿ ಖಗೋಳ ಮತ್ತು ಪವನಸಂಶೋಧನಾಲಯವಿದೆ. ತಾಜಿಕಿಸ್ತಾನದ ಪ್ರಮುಖ ಪಟ್ಟಣಗಳು ದೂಷಾನ್‍ಬಿ (3,74,000) (1970). ಲೆನಿನಾಬಾದ್ (1,03,000), ಉರ-ಟುಬೇ (2,69,397). ಕುಲ್ಯಾಬ್ (33,000) ಮತ್ತು ಕುರ್ಗಾನ್-ಟುಬೇ (31,000) (1967).
ಆಡಳಿತ
ತಾಜಿಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸಂವಿಧಾನ 1937ರ ಮಾರ್ಚ್ 1ರಂದು ಜಾರಿಗೆ ಬಂತು. ಸಾರ್ವಭೌಮ ರಾಷ್ಟ್ರದ ಎಲ್ಲ ಹಕ್ಕುಗಳೂ ಇದಕ್ಕೆ ಇವೆ. ರಾಷ್ಟ್ರಲಾಂಛನವೂ ರಾಷ್ಟ್ರಗೀತೆಯೂ ಇವೆ. ತಾಜಿಕ್ ಮತ್ತು ರಷ್ಯನ್ ಅಧಿಕೃತ ಭಾಷೆಗಳು, ಅಧಿಕಾರದ ಪರಮೋನ್ನತ ಅಂಗ ಪರಮೋಚ್ಛ ಸೋವಿಯತ್. ಇದರಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. 1970ರ ದಶಕದ ಆರಂಭದ ವರ್ಷಗಳಲ್ಲಿ ಇದರ 300ಕ್ಕಿಂತ ಹೆಚ್ಚು ಸದಸ್ಯರಲ್ಲಿ ಮೂರನೆಯ ಒಂದು ಭಾಗದಷ್ಟು ಮಹಿಳೆಯರಿದ್ದರು. ಪರಮೋನ್ನತ ಆಡಳಿತಾಂಗ ಮತ್ತು ಕಾರ್ಯಾಂಗವೆಂದರೆ ತಾಜಿಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಸರ್ಕಾರ. ಮಂತ್ರಿಗಳ ಮಂಡಲಿ ತಾಜಿಕ್ ಪರಮೋನ್ನತ ಸೋವಿಯೆತ್‍ಗೆ ಹೊಣೆಯಾಗಿರುತ್ತದೆ. ಪ್ರಾದೇಶಿಕ ಜಿಲ್ಲಾ, ನಗರ ಮತ್ತು ಗ್ರಾಮ ಸೋವಿಯತ್‍ಗಳ ಮೂಲಕ ಸ್ಥಳೀಯ ಸರ್ಕಾರ ಕಾರ್ಯಭಾರ ನಡೆಸುತ್ತದೆ. ಇವನ್ನು ಎರಡು ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ನ್ಯಾಯಾಲಯಗಳಿಗೆ ಇದು 5 ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಸ್ವಯಮಾಡಳಿತ ಪ್ರದೇಶದ ನ್ಯಾಯಾಲಯ ಮತ್ತು ಜಿಲ್ಲಾ ಹಾಗೂ ನಗರ ನ್ಯಾಯಾಲಯಗಳು ಇವೆ.
ರಾಜ್ಯದ ಪ್ರಧಾನ ರಾಜಕೀಯಪಕ್ಷ ತಾಜಿಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಕಮ್ಯೂನಿಷ್ಟ್ ಪಕ್ಷ. ಇದಕ್ಕೆ ಸುಮಾರು 90,000 ಸದಸ್ಯರಿದ್ದಾರೆ. ಯುವ ಕಮ್ಯೂನಿಷ್ಟ್ ಲೀಗ್ ಇನ್ನೊಂದು ಸಾಮೂಹಿಕ ಸಂಸ್ಥೆ. ಇದರ ಸದಸ್ಯ ಸಂಖ್ಯೆ ಸು.2,00,000. ಸೋವಿಯತ್ ಒಕ್ಕೂಟದ ಇತರ ರಾಜ್ಯಗಳಂತೆ ಇಲ್ಲೂ ಕಾರ್ಮಿಕ ಸಂಘಗಳು ಪ್ರಮುಖ ಸಾಮಾಜಿಕ ಆರ್ಥಿಕ ಪಾತ್ರ ವಹಿಸುತ್ತವೆ. ಇವುಗಳ ಸದಸ್ಯ ಸಂಖ್ಯೆ 5,00,000ಕ್ಕಿಂತ ಹೆಚ್ಚು.
ರಾಜ್ಯದ ಎಲ್ಲ ಪ್ರಜೆಗಳಿಗೂ ಕೆಲಸ, ವಿಶ್ರಾಂತಿ, ಶಿಕ್ಷಣ, ಮುಪ್ಪಿನ ಹಾಗೂ ಆಶಕ್ತಿಯ ಕಾಲದ ಸಾಮಾಜಿಕ ವಿಮೆ-ಈ ಹಕ್ಕುಗಳಿವೆ. ಸಂವಿಧಾನದಲ್ಲಿ ಮಹಿಳೆಯರೂ ಸೇರಿ ಎಲ್ಲರಿಗೂ ಸಮಾನ ಹಕ್ಕುಗಳುಂಟು.
ಆರ್ಥಿಕತೆ
ತಾಜಿಕಿಸ್ತಾನದ ಮುಖ್ಯ ಬೆಳೆಗಳು ಹತ್ತಿ, ಗೋದಿ, ಬಾರ್ಲಿ, ಸೆಣಬು, ನೆಲಗಡಲೆ, ಸಕ್ಕರೆ ಬೀಟ್, ಬತ್ತ ಮತ್ತು ಮುಸುಕಿನ ಜೋಳ. ಹಣ್ಣಿನ ಕೃಷಿ ಹೆಚ್ಚು. ಬೇಸಾಯ ಪದ್ಧತಿ ಸಾಮಾನ್ಯ. ಪಶುಪಾಲನೆ, ಕುರಿಸಾಕಣೆ ಪ್ರಧಾನವಾಗಿವೆ. ಅನೇಕ ನೀರಾವರಿ ಕಾರ್ಯಕ್ರಮಗಳು ಜಾರಿಗೆ ಬಂದಿವೆ.
ಇಲ್ಲಿಯ ಮುಖ್ಯ ಕೈಗಾರಿಕೆಗಳು ಹತ್ತಿ ಜವಳಿ, ರಾಸಾಯನಿಕ ಟ್ರಾಕ್ಟರ್ ಮತ್ತು ಮೋಟಾರು ಬಿಡಿಭಾಗಗಳ ತಯಾರಿಕೆ. ರೇಷ್ಮೆ ನೂಲುವ ಹಾಗೂ ಉಣ್ಣೆ ಬಟ್ಟೆ ತಯಾರಿಕೆಯ ಗಿರಣಿಗಳಿವೆ. ಹಣ್ಣುಗಳ ಡಬ್ಬೀಕರಣವೂ ಒಂದು ಮುಖ್ಯ ಕೈಗಾರಿಕೆ. ಸೊಗಸಾದ ತುರ್ಕಿ ಜಮಖಾನೆಗಳಿಗೆ ಈ ರಾಜ್ಯ ಪ್ರಸಿದ್ಧವಾಗಿದೆ. ಕೈಗಾರಿಕೆಯ ಮುಖ್ಯ ನಗರಗಳು ದೂಷಾನ್‍ಬಿ, ಲೆನಿನಾಬಾದ್, ಕುರ್ಗಾನ್-ಟ್ಯುಬೇ, ಉರ-ಟ್ಯುಬೇ, ಕನಿಬಾದಾನ್.
ರಾಜ್ಯದಲ್ಲಿ ಸೀಸ, ತವರ, ಕಲ್ಲಿದ್ದಲು, ಪೆಟ್ರೋಲ್, ಚಿನ್ನ, ಬೆಳ್ಳಿ, ಕಟ್ಟಡಗಲ್ಲು ನಿಕ್ಷೇಪಗಳಿವೆ.
ರಾಜ್ಯದಲ್ಲಿ ಸು. 400 ಮೈ, ರೈಲು ಮಾರ್ಗಗಳುಂಟು. ಟರ್ಮೆಜ್‍ನಿಂದ ಅರ್ಜಾನಿಕಿಡ್‍ಜಾಬಾದ್ ವರೆಗಿರುವುದು ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರೈಲು ಮಾರ್ಗ, ದೂಷಾನ್‍ಬಿಯಿಂದ ವಾಕ್ಷ್ ಕಣಿವೆಗೂ ಅಲ್ಲಿಂದ ಕುಲ್ಯಾಬ್‍ಗೂ ನ್ಯಾರೋ ಗೇಜ್ ರೈಲು ಮಾರ್ಗವುಂಟು. ದೂಷಾನ್‍ಬಿ-ಕರೋಗ್, ಕರೋಗ್-ಆಷ್, ದೂಷಾನ್‍ಬಿ-ಉರ-ಟ್ಯುಬೇ ಕುರ್ಗಾನ್-ಟ್ಯುಬೇ-ಕುಲ್ಯಾಬ್ ರಸ್ತೆಗಳು ಹೆದ್ದಾರಿಗಳು. ಫೈಜಾಬಾದ್, ಕಾಲದಿಂದ ಕೆಳಕ್ಕೆ ಆಮೂ-ದಾರ್ಯನದಿ ನೌಕಾಯಾನ ಯೋಗ್ಯವಾಗಿದೆ. ರಾಜ್ಯದಲ್ಲಿ ವಿಮಾನ ಸಾರಿಗೆಗೆ ಹೆಚ್ಚಿನ ಪ್ರಾಮುಖ್ಯವುಂಟು. ದೂಷಾನ್‍ಬಿಯಿಂದ ಮಾಸ್ಕೋ, ತಾಷ್‍ಕೆಂಟ್, ಬಾಕು ಮತ್ತು ಇತರ ನಗರಗಳಿಗೆ ವಿಮಾನಗಳು ಹೋಗಿಬರುತ್ತವೆ.
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.