ಮಧ್ಯ ಏಷ್ಯಾದಲ್ಲಿ ಪರ್ವತ ಶ್ರೇಣಿಗಳ ವ್ಯವಸ್ಥೆ From Wikipedia, the free encyclopedia
ಟೀಯೆನ್ ಷಾನ್ ಮಧ್ಯ ಏಷ್ಯದ ಮಹಾಪರ್ವತವ್ಯವಸ್ಥೆಗಳಲ್ಲೊಂದು. ಸೋವಿಯೆತ್ ಒಕ್ಕೂಟ ಮತ್ತು ಚೀನದಲ್ಲಿ ಹಬ್ಬಿದೆ. ಉ.ಅ. 40'ಮತ್ತು 44' ನಡುವೆ, ಪೂ.ರೇ.67' ಯಿಂದ 96' ವರೆಗೆ-ಸಾಮರ್ ಕಾಂದ್ ಪ್ರದೇಶದಿಂದ ಕ್ಯಾನ್ಸೂವಿನ ಎಲ್ಲೆಕಟ್ಟಿನ ವರೆಗೆ-ಹಬ್ಬಿರುವ ಈ ವ್ಯವಸ್ಥೆಯ ಉದ್ದ ಸು. 1,500 ಮೈ. (2,500 ಕಿಮೀ.). ಸ್ಥೂಲವಾಗಿ ಇದು ಪಶ್ಚಿಮ-ನೈಋತ್ಯದಿಂದ ಪೂರ್ವ-ಈಶಾನ್ಯದ ಕಡೆಗೆ ಹಬ್ಬಿದೆ. ಇದರ ಉತ್ತರ-ದಕ್ಷಿಣ ಎಲ್ಲೆಗಳ ಯಾವುವೆಂಬ ಬಗ್ಗೆ ಏಕಾಭಿಪ್ರಾಯವಿಲ್ಲ. ಈ ಪರ್ವತಶ್ರೇಣಿಯನ್ನು ಪಶ್ಚಿಮವಲಯ ಹಾಗೂ ಪೂರ್ವವಲಯ ಅಥವಾ ಸೋವಿಯೆತ್ ವಲಯ ಹಾಗೂ ಚೀನೀವಲಯ ಎಂಬುದಾಗಿ ವಿಭಜಿಸಲಾಗಿದೆ. ಈ ಪರ್ವತವ್ಯವಸ್ಥೆ ಚೀನದ ಪಶ್ಚಿಮದ ತುತ್ತತುದಿಯಲ್ಲಿರುವ ಸಿಂಕಿಯಾಂಗ್ ಪ್ರಾಂತ್ಯದಲ್ಲಿ ಹಾಗೂ ಸೋವಿಯೆತ್ ಏಷ್ಯದಲ್ಲಿ ಸಮವಾಗಿ ವಿಭಕ್ತಗೊಂಡಿದೆ.
ಟೀಯೆನ್ ಷಾನ್ ಪರ್ವತಗಳು ಪೇಲಿಯೊಜೋಯಿಕ್ ಮತ್ತು ಪ್ರೀಕೇಂಬ್ರಿಯನ್ ಯುಗದ ಅವಸಾದನ, ರೂಪಾಂತರಿತ ಮತ್ತು ಅಗ್ನಿಶಿಲೆಗಳಿಂದ ಕೂಡಿವೆ. ಷಿಸ್ಟ್, ಮತಳುಗಲ್ಲು, ಸುಣ್ಣಕಲ್ಲು, ಅಮೃತಶಿಲೆ, ನೀಸ್, ಗ್ರಾನೈಟ್ ಮುಂತಾದ ಶಿಲೆಗಳ ಸಾಮಾನ್ಯ. ಸೋವಿಯೆತ್-ಚೀನೀ ಎಲ್ಲೆಯಲ್ಲಿರುವ ಕಾನ್-ಟಿಂಗ್ರಿಯೇ (22,949' ; 6,995 ಮೀ.) ಈ ವ್ಯವಸ್ಥೆಯ ಅತ್ಯುನ್ನತ ಶಿಖರವೆಂದು ಭಾವಿಸಲಾಗಿತ್ತು. ಆದರೆ 1943ರಲ್ಲಿ ಪತ್ತೆಯಾದ ಪಬೇಡ ಶಿಖರ ಇನ್ನೂ ಎತ್ತರವಾಗಿದೆ (24,406' ; 7,439 ಮೀ.) ಇದು ಕಾನ್-ಟಿಂಗ್ರಿಯ ದಕ್ಷಿಣಕ್ಕೆ 13 ಮೈ. ದೂರದಲ್ಲಿದೆ. ಈ ಪರ್ವತ ಗುಂಬದಿಂದ ಪೂರ್ವ ಪಶ್ಚಿಮಗಳ ಕಡೆಗೆ ಶಾಖೆಗಳು ಹಬ್ಬಿವೆ. ಪಶ್ಚಿಮದ ಸೋಮಿಯೆತ್ ಭಾಗದ್ದು ಸಂಕೀರ್ಣವ್ಯವಸ್ಥೆ. ಇದರ ಪ್ರಮುಖ ಉತ್ತರ ಶಾಖೆ ಕಂಗಿ ಆಲಟೌ. ಇದರ ನಡುವೆ ಇರುವ ಸರೋವರ ಇಸಿಕ್ ಕಲ್. ಕಂಗಿ ಆಲಟೌಗೆ ಸಮಾಂತರದಲ್ಲಿ ಟ್ರಾನ್ಸ್-ಈಲೀ ಆಲಟೌ ಹಬ್ಬಿದೆ. ಇದರ ಅತ್ಯುನ್ನತ ಶಿಖರ ಟಾಲ್ಗಾರ್ (16,243' ; 4,951 ಮೀ.). ಕಂಗಿ-ಆಲಟೌನ ಲಂಬಿತ ಶ್ರೇಣಿಯೇ ಕಿರ್ಗಿeóï. ಟ್ರಾನ್ಸ್-ಈಲೀ ಪಶ್ಚಮದಲ್ಲಿ ವಿಸ್ತರಿಸಿ ಚು-ಈಲೀ ಶ್ರೇಣಿಯಾಗಿ ಪರಿಣಮಿಸುತ್ತದೆ. ಪರ್ವತಗುಂಬದ ಮಧ್ಯದಿಂದ ಹೊರಡುವ ಶ್ರೇಣಿ ಟಸ್ರ್ಕಿ ಆಲಟೌ. ನೈಋತ್ಯಾಭಿಮುಖವಾದ ಶಾಖೆ ಕಾಕ್ ಷಾಲ್-ಟೌ. ಪಶ್ಚಿಮ ಟೀಯೆನ್ ಷಾನ್ ನ ಮುಖ್ಯ ಶ್ರೇಣಿಗಳೆಲ್ಲ ಹಿಮಾಚ್ಛಾದಿತ. ಉತ್ತರ ದಕ್ಷಿಣಗಳ ಕೆಲವು ಶ್ರೇಣಿಗಳು ನಗ್ನೀಕೃತವಾಗಿ, ವಿಶಾಲ ಕಣಿವೆಗಳನ್ನು ತಬ್ಬಿ ನಿಂತಿವೆ.
ಪೂರ್ವ ಟೀಯೆನ್ ಷಾನ್ ಚೀನೀ ಭಾಗ. ಇಲ್ಲಿ ಎರಡು ಸಮಾಂತರ ಉಪಶ್ರೇಣಿಗಳಿವೆ. ದಕ್ಷಿಣದ ಶ್ರೇಣಿಗಳು ಮುಖ್ಯವಾದವು. ಇವು ಕಾನ್-ಟೆಂಗ್ರಿ ಪರ್ವತ ಗುಂಬದಿಂದ ಪೂರ್ವಾಭಿಮುಖವಾಗಿ ಬಗ್ರಾಷ್ ಕಾಲ್ ಸರೋವರದ ವರೆಗೂ ಹಬ್ಬಿವೆ. ಇವುಗಳ ಉನ್ನತ ಶಿಖರಗಳು ಬಾಲಿಕ್-ಟೌ (12,920') ಮತ್ತು ಬೋರೋ ಹಟನ್ (11,975'). ಈ ಭಾಗದ ಉತ್ತರದ ಉಪಶ್ರೇಣಿಗಳು ಬೋರೋಖೋರೋ, ಬೋಗ್ಡೋ ಊಲ (17,946'), ಬಾಸ್ ಕಾಲ್ ಟೌಗ್ (14,094') ಮತ್ತು ಕಾರ್ಲಿಕ್ ಟೌಕ್ (16,158'). ಬೋಗ್ಡೋ ಊಲಕ್ಕೆ ದಕ್ಷಿಣದಲ್ಲಿ ಟರ್ಫಾನ್ ಅವನತ ಪ್ರದೇಶವಿದೆ.
ಟೀಯೆನ್ ಷಾನ್ ಪರ್ವತ ವ್ಯವಸ್ಥೆ ಸ್ಥೂಲವಾಗಿ ಪೂರ್ವಪಶ್ಚಿಮವಾದರೂ ಅಲ್ಲಲ್ಲಿರುವ ಗ್ರಂಥಿಗಳಿಂದ ದಕ್ಷಿಣೋತ್ತರವಾಗಿಯೂ ಕೆಲವು ಶಾಖೆಗಳು ಹಬ್ಬಿವೆ. ಟೀಯೆನ್ ಷಾನ್ ಪರ್ವತವ್ಯವಸ್ಥೆ ಯೂರೇಷಿಯದ ನಟ್ಟನಡುವೆ, ಮಧ್ಯ ಅಕ್ಷಾಂಶಗಳ ಒಣಮರುಭೂಮಿ ಪ್ರದೇಶದಲ್ಲಿರುವುದರಿಂದ ಇದರ ಸನ್ನಿವೇಶಕ್ಕೆ ಅನುಗುಣವಾದ ತೀವ್ರ ಖಂಡಾಂತರ ವಾಯುಗುಣವಿದೆ. ಪರ್ವತದ ಎತ್ತರ ಹಾಗೂ ಸಂಕೇರ್ಣತೆಗೆ ಅನುಗುಣವಾಗಿ ಒಂದೆಡೆಯಿಂದ ಇನ್ನೊಂದಿಡೆಗೆ ತೀವ್ರ ಭಿನ್ನತೆಯುಂಟು. ಪರ್ವತವ್ಯವಸ್ಥೆಯ ಪಶ್ಚಿಮ ಪಾಶ್ರ್ವದ ಮೇಲೆ ಅಟ್ಲಾಂಟಿಕ್ ಕಡೆಯಿಂದ ಬೀಸುವ ಮಾರುತಗಳು ಮಳೆ ತರುತ್ತವೆ. ಪಶ್ಚಿಮ ಇಳಿಜಾರುಗಳ ಮೇಲೆ ವಾರ್ಷಿಕ ಅವಪಾತ ಸು.30"ಗೂ (762 ಮಿಮೀ.) ಅಧಿಕ. ಪೂರ್ವದ ಇಳಿಜಾರುಗಳ ಹಾಗೂ ಪರ್ವತ ಶಾಖೆಗಳ ನಡುವಣ ತಗ್ಗು ನೆಲಗಳಲ್ಲಿ ಅವಪಾತ ಕೇವಲ ಸು. 10" (254 ಮಿಮೀ.) ಬೇಸಗೆಯಲ್ಲೇ ಅವಪಾತ ಗರಿಷ್ಠ. ಪೂರ್ವದ ಇಳಿಜಾರುಗಳು ಮತ್ತು ಕಣಿವೆಗಳಲ್ಲಿ ಚಳಿಗಾಲದಲ್ಲೂ ಸಾಮಾನ್ಯವಾಗಿ ಹಿಮ ಬೀಳುವುದಿಲ್ಲ. ಒಟ್ಟಿನಲ್ಲಿ ಯೂರೋಪಿಯನ್ ಆಲ್ಟ್ಸ್ ಮತ್ತು ಪಶ್ಚಿಮ ಕಾಕಸಸ್ ಪರ್ವತಗಳಲ್ಲಿರುವುದಕ್ಕಿಂತ ಇಲ್ಲಿ ಹಿಮರೇಖೆ ಹೆಚ್ಚು ಎತ್ತರದಲ್ಲಿದೆ. 13,000' ಎತ್ತರದ ಕೆಲವು ಕಣಿವೆಗಳು ಕೂಡ ಬೇಸಗೆಯಲ್ಲಿ ಹಿಮವಿಮುಕ್ತ. ಎತ್ತರಕ್ಕೆ ಅನುಗುಣವಾಗಿ ಸರಾಸರಿ ಉಷ್ಣತೆ ವ್ಯತ್ಯಾಸವಾಗುತ್ತದೆ. ಕಣಿವೆಗಳಲ್ಲೂ ತಗ್ಗಿನ ಇಳಿಜಾರುಗಳಲ್ಲೂ ಜುಲೈ ಸರಾಸರಿ ಉಷ್ಣತೆ 21ಲಿ-24ಲಿ ಅ. (70ಲಿ-75ಲಿಈ.). ಮಧ್ಯ ಎತ್ತರದಲ್ಲಿ 13ಲಿ-16ಲಿ ಅ. (55ಲಿ-60ಲಿ ಈ.). ಶಿಖರಗಳ ಮೇಲೆ ಗಡ್ಡೆಕಟ್ಟುವಷ್ಟು ಕಡಿಮೆ ಉಷ್ಣತೆ. ಅಲ್ಲಲ್ಲಿ ಹಿಮನದಿಗಳಿವೆ.
ಟೀಯನ್ ಷಾನ್ ನಲ್ಲಿ ಉಗಮಿಸುವ ನದಿಗಳು ಮಧ್ಯ ಏಷ್ಯದ ಮರು ಭೂಮಿಯ ಸರೋವರಗಳನ್ನೋ ಪರ್ವತ ಸರೋವರಗಳನ್ನೋ ಸೇರುತ್ತವೆ. ಪಶ್ಚಿಮ ಟೀಯನ್ ಷಾನ್ನ ಮುಖ್ಯಿ ನದಿ ಸಿರ್ ದಾರ್ಯ. ಇದು ಮಧ್ಯ ಏಷ್ಯದ ದೊಡ್ಡ ನದಿಗಳಲ್ಲೊಂದು. ಇದು ಆರಲ್ ಸಮುದ್ರವನ್ನು ಸೇರುತ್ತದೆ. ಟೀಯನ್ ಷಾನ್ನ ಉತ್ತರ ಪಾಶ್ರ್ವದ ನದಿಗಳು ಚೂ ಮತ್ತು ಈಲೀ. ಚೂ ನದಿ ಬಾಲ್ಕಾಷ್ ಸರೋವರದ ಪಶ್ಚಿಮದ ಮರುಭೂಮಿಯಲ್ಲಿ ಇಂಗಿಹೋಗುತ್ತದೆ. ಈಲೀ ನದಿ ಬಾಲ್ಕಷ್ ಸರೋವರವನ್ನು ಸೇರುತ್ತದೆ. ಟೀಯನ್ ಷಾನ್ನ ದಕ್ಷಿಣ ಪಾಶ್ರ್ವದ ಮುಖ್ಯ ನದಿ ಟಾರಿಮ್. ಇದು ಲಾಪ್ ನರ್ ಭಳಯ ಮರಳುಗಾಡಿನಲ್ಲಿ ಬತ್ತಿಹೋಗುತ್ತದೆ. ಟೀಯನ್ ಷಾನ್ನ ನದೀಕಣಿವೆಗಳು ಸಾಮಾನ್ಯವಾಗಿ ವಿಶಾಲವಾಗಿವೆ. ಹಲವು ನದಿಗಳು ಜಲವಿದ್ಯುತ್ತಿನ ಉತ್ಪಾದನೆಯ ದೃಷ್ಟಿಯಿಂದ ಉಪಯುಕ್ತ. ಇವುಗಳಲ್ಲಿ ಮುಖ್ಯವಾದವು ಚಿರ್ ಚೀಕ್, ಸಿರ್ ದಾರ್ಯ, ಮತ್ತು ಚೂ. ಟೀಯನ್ ಷಾನ್ ಪರ್ವತವ್ಯವಸ್ಥೆಯ ಅತ್ಯಂತ ದೊಡ್ಡ ಸರೋವರ ಇಸಿಕ್ ಕಲ್.
ಟೀಯನ್ ಷಾನ್ನ ಸಸ್ಯಗಳು ಪರ್ವತದ ಎತ್ತರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತವೆ. ತಗ್ಗಿನ ತಪ್ಪಲು ಬೆಟ್ಟಗಳ ಮೇಲೆ ಮರುಭೂಮಿಯ ಸಸ್ಯ. ನೀರಾವರಿ ಬೆಳೆಗಳು ಹತ್ತಿ ಮತ್ತು ಹಣ್ಣು. 1,200'ಗಿಂತ ಎತ್ತರದಲ್ಲಿ ಅವಪಾತ ಹೆಚ್ಚಾದ್ದರಿಂದ ಉಪಮರುಭೂಮಿ ಸಸ್ಯಗಳಿವೆ. ಇನ್ನೂ ಎತ್ತರವಾದ ಪ್ರದೇಶದಲ್ಲಿ ಶುಷ್ಕ ಹುಲ್ಲುಗಾಡು. 4,000' ಎತ್ತರದಲ್ಲಿ ಪೊದೆ ಮತ್ತು ಪರ್ಣಪಾತಿ ಮರಗಳಿಂದ ಕೂಡಿದ ಹುಲ್ಲುಗಾವಲಿದೆ. ಇಲ್ಲಿ ವಾಲ್ನಟ್, ಸೇಬಯ ಮತ್ತು ಮೇಪ್ ಲ್ ಮರಗಳೀವೆ. ಈ ಮಟ್ಟದಿಂದ ಇನ್ನೂ ಮೇಲಕ್ಕೆ ಉಪ ಆಲ್ಪೈನ್ ಹುಲ್ಲುಗಾವಲೂ ಶಂಕುಧಾರಿ ವೃಕ್ಷಗಳೂ ಇವೆ. ಇಪು ಹಿಮ ರೇಖೆಯ ವರೆಗೂ ವಿಸ್ತರಿಸಿವೆ.
ಟೀಯನ್ ಷಾನ್ನಲ್ಲಿ ಅನೇಕ ಖನಿಜನಿಕ್ಷೇಪಗಳುಂಟು. ಇವು ಮುಖ್ಯವಾಗಿ ಕಬ್ಬಿಣೇತರ ಮತ್ತು ವಿರಳ ಲೋಹಗಳು. ಸೋವಿಯೆತ್ ಪ್ರದೇಶದ ಉಜ್ಬೆಕ್ ಗಣರಾಜ್ಯದಲ್ಲಿ ತಾಮ್ರ ಮತ್ತು ಸೀಸ-ತವರ, ಕಿರ್ಗಿಜ್ ನಲ್ಲಿ ಆಂಟಿಮನಿ ಮತ್ತು ಪಾದರಸ, ತಜಿಕ್ ಗಣರಾಜ್ಯದಲ್ಲಿ ಟಂಗ್ಸ್ ಟನ್, ಉಜ್ಬೆಕ್ ಗಣರಾಜ್ಯದಲ್ಲಿ ಜುರಾಸಿಕ್ ಕಲ್ಲಿದ್ದಲು ಸಿಗುತ್ತವೆ. ಫರ್ಗಾನ ಕಣಿವೆಯಲ್ಲಿ ಪೆಟ್ರೋಲಿಯಂ ನಿಕ್ಷೇಪ ಇದೆ. ಚೀನೀ ವಿಭಾಗದಲ್ಲಿ ತೈಲಗಣಿಗಳಿವೆ. ಕಬ್ಬಣೇತರ ಮತ್ತು ವಿರಳ ಲೋಹಗಳೂ ಇವೆಯೆಂದು ತಿಳಿದುಬಂದಿದೆ.
ಟೀಯನ್ ಷಾನ್ ಪ್ರದೇಶದಲ್ಲಿ ಗರಿಷ್ಠ ಜನಸಾಂದ್ರತೆ ಇರುವುದು ಸೋಮಿಯೆತ್ ಪ್ರದೇಶದ ತಷ್ಕೆಂಟ್ ಓಯಸಿಸ್, ಫರ್ಗಾನ ಕಣಿವೆ, ಚೂ ಕಣಿವೆಗಳಲ್ಲಿ; ಚೀನದ ಸಿಂಜಿಯಾಂಗ್ ಪ್ರದೇಶದ ಉರಮ್ ಚೀ, ಕಾಷ್ಗಾರ್ ಗಳಲ್ಲಿ. ಟೀಯೆನ್ ಷಾನ್ ಕೆಳಕಣಿವೆಗಳು ಮತ್ತು ತಪ್ಪಲು ಬೆಟ್ಟಗಳಲ್ಲಿ ನೀರಾವರಿ ಬೇಸಾಯ ನಡೆಯುತ್ತದೆ. ಮುಖ್ಯ ಬೆಳೆ ಹತ್ತಿ. ಈ ಪ್ರದೇಶಗಳನ್ನೂ ಹಿಂದೆ ಮಧ್ಯ ಏಷ್ಯನ್ ಕೃಷಿಕರು ಆಕ್ರಮಿಸಿಕೊಂಡರು. ಪರ್ವತವಾಸಿಗಳು ದನಗಾಹಿಗಳು. ಪಶ್ಚಿಮ ಟೀಯೆನ್ ಷಾನ್ ನಲ್ಲಿ ಕಿರ್ಗಿಜರೂ ಪೂರ್ವದಲ್ಲಿ ಕಜಾಕರು ಮತ್ತು ಮಂಗೋಲರೂ ಇದ್ದಾರೆ.
ಸೋಮಿಯೆತ್ ಪ್ರದೇಶದ ಜನಕೇಂದ್ರಗಳಿಗೆ ರೈಲ್ಡೆ ಸಂಪರ್ಕ ಏರ್ಪಟ್ಟಿದೆ. ತಷ್ಕೆಂಟಿನಿಂದ ಫರ್ಗಾನ ಕಣಿವೆಗೂ ಫ್ರೂನ್ಜûದ ಮೂಲಕ ಚೂ ಕಣಿವೆಗೂ ಇಸಿಕ್ ಕಲ್ ಸರೋವರದ ದಂಡೆಯ ರಿಬಾದ್ಯೆಗೂ ರೈಲುಮಾರ್ಗಗಳಿವೆ. ಚೀನಸೋವಿಯೆತ್ ದೇಶಗಳನ್ನು ಕೂಡಿಸುವ ಮಧ್ಯ ಏಷ್ಯನ್ ರೈಲುಮಾರ್ಗ ಪೂರ್ವ ಟೀಯನ್ ಷಾನ್ನ ಉತ್ತರ ತಪ್ಪಲಿನ ಗುಂಟ, ಜಂಗಾರಿಯನ್ ಕಣಿವೆಯ ಮೂಲಕ ಸಾಗುತ್ತದೆ. ಟೀಯನ್ ಷಾನ್ನ ಉನ್ನತ ಕಣಿವೆಗಳಲ್ಲಿ ರಸ್ತೆಗಳುಂಟು. ಅವುಗಳಲ್ಲಿ ಹಲವು ಮೋಟಾರು ರಸ್ತೆಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.