ಜಾಜಿ
ಒಂದು ಸಸ್ಯ ಜಾತಿ(ಒಂದು ವಿಧವಾದ ಮಲ್ಲಿಗೆ ತಳಿ ) / From Wikipedia, the free encyclopedia
ಜಾಜಿ (ಜ್ಯಾಸ್ಮಿನಮ್ ಗ್ರ್ಯಾಂಡಿಫ಼್ಲೋರಮ್) ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಅಜ್ಜಿಗೆ, ಜಾತಿಮಲ್ಲಿಗೆ ಪರ್ಯಾಯ ನಾಮಗಳು. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ ಮಾರೀಷಸ್, ಜಾವಾ, ಮಧ್ಯ ಅಮೇರಿಕಾ ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಇದು ಉತ್ತರ ಹಿಮಾಲಯ, ಪಶ್ಚಿಮ ಬಂಗಾಳ, ಆಂಧ್ರದ ವಿಶಾಖಪಟ್ಟಣ, ತಮಿಳುನಾಡಿನ ತಿರುನಲ್ಲೇರಿ ಗುಡ್ಡ ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುತ್ತದೆ.