From Wikipedia, the free encyclopedia
ಗಿಲಿಕೆಯು ಶಬ್ದಮಾಡುವ ಒಂದು ಆಟಿಕೆ. ಇದನ್ನು ನಿರ್ದಿಷ್ಟವಾಗಿ ಒಂದು ಶಿಶುವಿನ ಮೋಜಿಗಾಗಿ ಉತ್ಪಾದಿಸಲಾಗುತ್ತದೆ. ಗಿಲಿಕೆಗಳನ್ನು ಪ್ರಾಚೀನ ಕಾಲದಿಂದ ಈ ಉದ್ದೇಶಕ್ಕಾಗಿ ಬಳಸಲಾಗಿದೆ, ಮತ್ತು ಇವು ಇಂದ್ರಿಯಗಳನ್ನು ಉದ್ರೇಕಿಸಿ ಶಿಶುವಿನ ಕೈ ಹಾಗೂ ಕಣ್ಣಿನ ನಡುವಿನ ಸಮನ್ವಯವನ್ನು ಸುಧಾರಿಸುತ್ತವೆ ಎಂದು ಮಕ್ಕಳ ಬೆಳವಣಿಗೆಯ ತಜ್ಞರು ನಂಬುತ್ತಾರೆ.[1][2]
ಗಿಲಿಕೆಗಳನ್ನು ಕಟ್ಟಿಗೆ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಬಹುದು. ಅನೇಕ ಗಿಲಿಕೆಗಳು ಹೊಳೆಯುವ ಬಣ್ಣಗಳನ್ನು ಹೊಂದಿದ್ದು ಪ್ರಾಣಿ ಅಥವಾ ಹೂವಿನ ಆಕಾರಗಳಲ್ಲಿ ಇರುತ್ತವೆ, ಮತ್ತು ಅಲುಗಾಡಿಸಿದಾಗ ಸಾಮಾನ್ಯವಾಗಿ ಶಬ್ದಮಾಡುತ್ತವೆ. ಈ ಶಬ್ದಗಳು ಕಟ್ಟಿಗೆಯ ಗಿಲಿಕೆಗಳಿಗೆ ಸಾಮಾನ್ಯವಾದ ನೀರಸ ಶಬ್ದಗಳಿಂದ ಹಿಡಿದು ಲೋಹದ ಗಿಲಿಕೆಗಳು ಮಾಡುವ ಕಿಂಕಿಣಿ ಅಥವಾ ಗಂಟೆಯಂಥ ಶಬ್ದಗಳವರೆಗೆ ವ್ಯಾಪಿಸುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.