ಕ್ರೈಸ್ಟ್ ಯೂನಿವರ್ಸಿಟಿ
ಬೆಂಗಳೂರಿನಲ್ಲಿರುವ ಒಂದು ಸ್ವಾಯತ್ತ ಕಾಲೇಜು / From Wikipedia, the free encyclopedia
ಕ್ರೈಸ್ಟ್ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರುನಲ್ಲಿದೆ. ಈ ಸಂಸ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು,೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' (ಡೀಮ್ಡ್ ಟು ಬಿ ಯೂನಿರ್ವಸಿಟಿ) [4]ಎಂಬ ಮಾನ್ಯತೆ ದೊರಕಿದೆ. ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಹತ್ತು ಸ್ಥಾನಗಳಲ್ಲಿ ಒಂದಾಗಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ವಿಭಾಗ ೪ನೇ ಸ್ಥಾನ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿದೆ.[5]
![Thumb image](http://upload.wikimedia.org/wikipedia/commons/thumb/b/bc/Aerial_view_of_Taverekere%2C_shot_from_Christ_University%2C_Bangalore.jpg/640px-Aerial_view_of_Taverekere%2C_shot_from_Christ_University%2C_Bangalore.jpg)
ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ. ವಿಕೀಕರಣದ ನಂತರ ಈ ಟೆಂಪ್ಲೇಟನ್ನು ತೆಗೆದುಹಾಕಿ. |
ಕ್ರೈಸ್ಟ್ ವಿಶ್ವವಿದ್ಯಾಲಯ | |
---|---|
ಧ್ಯೇಯ | ಶ್ರೇಷ್ಟತೆ ಮತ್ತು ಸೇವೆ |
ಸ್ಥಾಪನೆ | ೧೫ ಜುಲೈ ೧೯೬೯[1] |
ಪ್ರಕಾರ | ಖಾಸಗೀ |
ಉಪಕುಲಪತಿಗಳು | ಡಾ|ವಂ| ಥೋಮಸ್ ಸಿ.ಥೋಮಸ್, ಸಿಎಂಐ[2] |
ವಿದ್ಯಾರ್ಥಿಗಳ ಸಂಖ್ಯೆ | 12000 |
ಸ್ಥಳ | ಬೆಂಗಳೂರು, ಕರ್ನಾಟಕ[3], ಭಾರತ 12°56′5″N 77°36′19″E |
ಆವರಣ | ನಗರ |
ಅಂತರಜಾಲ ತಾಣ | www |
![Thumb image](http://upload.wikimedia.org/wikipedia/commons/thumb/a/a1/Christ_University_Auditorium.jpg/640px-Christ_University_Auditorium.jpg)
ವಿಶ್ವವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂರ್ತರಾಷ್ಟ್ರೀಯ ಮಾನ್ಯತೆ ಹೊಂದಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು(ಕೋರ್ಸುಗಳನ್ನು) ತನ್ನ ವಿವಿಧ ವಿಭಾಗಗಳಾದ ಕಾನೂನು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್, ವಾಣಿಜ್ಯ, ಮ್ಯಾನೇಜ್ಮೆಂಟ್, ಮಾನವಿಕ, ವಿಜ್ಞಾನ, ಹಾಗೂ ಸಾಮಾಜಿಕ ವಿಜ್ಞಾನಗಳಲ್ಲಿ ಸೇರಿಸಿದೆ. ಇದರ ಜೊತೆಯಲ್ಲಿಯೇ, ಅನೇಕ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಗಣಕ(ಕಂಪ್ಯೂಟರ್) ಅನ್ವಯಗಳು(ಆಪ್ಲಿಕೇಶನ್ಸ್), ಹೊಟೇಲ್ ನಿರ್ವಹಣೆ(ಮ್ಯಾನೇಜ್ಮೆಂಟ್), ಸಮೂಹ ಸಂವಹನ, ಸಮಾಜ ಸೇವೆ, ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮಗಳನ್ನು ಕೋರ್ಸುಗಳನ್ನು ಹೊಂದಿದೆ . [6][7]
೧೭ ಜೂನ್ ೧೯೭೨ ರಂದು ಕ್ರೈಸ್ಟ್ ಕಾಲೇಜು ಭಾರತದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ), ಮಾನ್ಯತೆ ಪಡೆದಿದೆ. ೧೯೯೮ರಲ್ಲಿ ಈ ಸಂಸ್ಥೆಯನ್ನು ಪರೀಕ್ಷಾ ಮಾನ್ಯತೆಗೆ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ (ಎನ್ಎಎಸಿ), ಒಂದು ಯುಜಿಸಿ-ಅನುದಾನಿತ ಅಂಗ ಸಂಸ್ಥೆ, ಎಂದು ಗುರುತಿಸಲಾಯಿತು. ಮತ್ತ್ತು ೨೦೦೫ರಲ್ಲಿ ಇದನ್ನು ಮರು-ಮಾನ್ಯತೆಗೆ ಪಡೆದಿದೆ . ಪ್ರಸ್ತುತ ಈ ವಿಶ್ವವಿದ್ಯಾಲಯವನ್ನು ಎನ್ಎಎಸಿ-ಯಿಂದ A+ ಪಡೆದಿದೆ .[8]