ಕುರಾನ್
From Wikipedia, the free encyclopedia
ಕುರಾನ್ ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಅಲ್-ಕುರಾನ್ ಅಲ್ಲಾಹನ ವಚನವಾಗಿದೆ, ಇದನ್ನು ಅಲ್ಲಾಹು ಮಲಕ್'ಗಳ ನಾಯಕರಾದ ಜಿಬ್ರೀಲ್ [ಅ]ರವರ ಮುಖಾಂತರ ಪ್ರವಾದಿ ಮುಹಮ್ಮದ್ [ಸ]ರವರಿಗೆ ಅವತೀರ್ಣಗೊಳಿಸಿದರು. "ನಿಶ್ಚಯವಾಗಿಯೂ ಇದು (ಕುರಾನ್) ಸರ್ವಲೋಕದ ಪ್ರಭುವಿನಿಂದ ಅವತೀರ್ಣಗೊಳಿಸಲ್ಪಟ್ಟಿದೆ. ರೂಹುಲ್ ಅಮೀನ್ (ಜಿಬ್ರೀಲ್ [ಅ]) ಇದನ್ನು ನಿಮ್ಮ ಹೃದಯಕ್ಕೆ ನೀವು ಮುನ್ನೆಚ್ಚರಿಕೆ ಕೊಡುವವಾರಾಗಲೆಂದು ತಂದಿರಿಸಿದ್ದಾರೆ. ಇದು ಅರಬೀ ಭಾಷೆಯಲ್ಲಿದೆ. ಮತ್ತು ಇದರ (ಕುರಾನ್) ಕುರಿತು ಹಿಂದಿನ ದಿವ್ಯಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ [ಕುರಾನ್, 26: 192-196]". ಕುರಾನಿನಲ್ಲಿ 114 ಸೂರಗಳು ಇದೆ. ಮೊದಲ ಸೂರದ ಹೆಸರು ಸೂರ ಅಲ್ ಫಾತಿಹಾ ಮತ್ತು ಕೊನೆಯ ಸೂರದ ಹೆಸರು ಸೂರ ಅನ್ನಾಸ್. ಕುರಾನ್ ಮೊದಲ ಬಾರಿಗೆ ರಮಝಾನ್ ತಿಂಗಳಲ್ಲಿ ಅವತೀರ್ಣವಾಗಿದೆ. "ಕುರಾನ್ ಅವತೀರ್ಣಗೊಂಡಿದ್ದು ರಮಝಾನ್ ತಿಂಗಳಲ್ಲಾಗಿದೆ. ಅದರಲ್ಲಿ ಜನರಿಗೆ ಸನ್ಮಾರ್ಗವೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸಿ ತಿಳಿಯುವ ಮಾನದಂಡವೂ ಇದೆ [ಕುರಾನ್, 2: 185]". ಕುರಾನ್ ಇನ್ನೊಂದು ಹೆಸರು ಪುರ್ಕಾನ್ ಎಂದು ಆಗಿದೆ. ಪುರ್ಕಾನ್ ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು. ಇದಲ್ಲದೆ ಅಲ್-ಕಿತಾಬ್ ಮತ್ತು ಅಧ್-ಧಿಕ್ರ್ ಎಂಬ ಹೆಸರುಗಳೂ ಕೂಡಾ ಇದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮುಸ್ಲಿಮರು ನಂಬಿಕೆ ಪ್ರಕಾರ ಅಲ್ಲಾಹು ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದೆಂದರೆ ತೌರಾತ್ ಗ್ರಂಥವನ್ನು ಮೂಸಾ ನಬಿ (ಅ. ಸ)ರವರಿಗೆ, ಝಬೂರ್ ಗ್ರಂಥವನ್ನು ದಾವೂದ್ ನಬಿ (ಅ. ಸ) ರವರಿಗೆ, ಇಂಜೀಲ್ ಗ್ರಂಥವನ್ನು ಈಸಾ ನಬಿ (ಅ. ಸ)ರವರಿಗೆ ಮತ್ತು ಕುರಾನ್ ಗ್ರಂಥವನ್ನು ಮುಹಮ್ಮದ್ (ಸ)ರವರಿಗೆ.