ಕಲ್ಲಿಕೋಟೆ
ಕೇರಳದಲ್ಲಿನ ಒಂದು ನಗರ / From Wikipedia, the free encyclopedia
ಕಲ್ಲಿಕೋಟೆ (ಕೋಝಿಕ್ಕೋಡ್, ಕೋೞಿಕ್ಕೋಡ್, ಅಥವಾ ಕ್ಯಾಲಿಕಟ್, ಮಲಯಾಳಂ : കോഴിക്കോട് ) ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ಅರಬ್ಬಿ ಸಮುದ್ರದ ನೈಋತ್ಯ ಕರಾವಳಿಯಲ್ಲಿದೆ. ಅದರ ಪಶ್ಚಿಮಕ್ಕೆ ವಿಶಾಲ ಮತ್ತು ನೆಮ್ಮದಿಯ ಅರಬ್ಬಿ ಸಮುದ್ರವಿದೆ ಮತ್ತು ಪೂರ್ವಕ್ಕೆ ವಯನಾಡ್ ಬೆಟ್ಟಗಳು ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಸಿರು, ಪ್ರಶಾಂತ ಪರಿಸರ, ಐತಿಹಾಸಿಕ ಕಟ್ಟಡಗಳು, ವನ್ಯಜೀವಿ ಅಭಯಾರಣ್ಯಗಳು, ನದಿಗಳು, ಬೆಟ್ಟಗಳು ಇತ್ಯಾದಿಗಳನ್ನು ನೋಡಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ.