ಕಲ್ಪನಾ
ಕನ್ನಡದ ನಟಿ / From Wikipedia, the free encyclopedia
Quick Facts ಕಲ್ಪನಾ, ಜನನ ...
ಕಲ್ಪನಾ | |
---|---|
ಜನನ | ಶರತ್ ಲತಾ 18 ಜುಲೈ 1943 ದಕ್ಷಿಣ ಕನ್ನಡ, ಬ್ರಿಟಿಷ್ ಭಾರತ |
ಮರಣ | 12 May 1979 (aged 36) ಗೋಟೂರು ಪ್ರವಾಸಿ ಮಂದಿರ. ಬೆಳಗಾವಿ, ಕರ್ನಾಟಕ. |
ಇತರೆ ಹೆಸರು | "ಮಿನುಗು ತಾರೆ" |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | 1963-1978 |
Close
- ಮಿನುಗುತಾರೆ ಕಲ್ಪನಾ(18-7-1943-/12-5-1979)ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು . ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು 'ಶರತ್ ಲತಾ'.1943 ಜುಲೈ 18ರ ಮಧ್ಯಾಹ್ನ 3ಗಂಟೆಗೆ ಶ್ರೀಯುತ ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ.ಜಾನಕಮ್ಮನವರ ಪುತ್ರಿಯಾಗಿ ಮಂಗಳೂರಿನ ವೆನ್ ಲ್ಯಾಕ್ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದರು.1963ರಲ್ಲಿ ಪಂತುಲುರವರ 'ಸಾಕುಮಗಳು' ಚಿತ್ರದಿಂದ ಆರಂಭವಾದ ಸಿನಿಮಾ ಪಯಣ 1978ರ ಶ್ರೀಯುತ ಜ್ಞಾನಪೀಠಿ ಶಿವರಾಮ ಕಾರಂತರ ನಿರ್ದೇಶನದ 'ಮಲೆಯಮಕ್ಕಳು' ರವರೆಗೂ 78 ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು.ಅಂತಹ ಒಬ್ಬ ಮಹಾನ್ ತಾರೆ ಕಲ್ಪನಾ ರವರ ಬಗ್ಗೆ ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಸುಮಾರು 1114ಪುಟಗಳ "ರಜತರಂಗದ ಧ್ರುವತಾರೆ"(ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ) ಬೃಹತ್ ಸಂಸ್ಮರಣ ಗ್ರಂಥವನ್ನು ತಂದಿರುವುದು ಕಲ್ಪನಾರಿಗೆ ನೀಡಿರುವ ಬಹು ದೊಡ್ಡ ಗೌರವ.