![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/20/S.L.Bhyrappa.jpg/640px-S.L.Bhyrappa.jpg&w=640&q=50)
ಎಸ್.ಎಲ್. ಭೈರಪ್ಪ
ಭಾರತೀಯ ಕಾದಂಬರಿಕಾರ / From Wikipedia, the free encyclopedia
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
Quick Facts ಎಸ್.ಎಲ್. ಭೈರಪ್ಪ, ಜನನ ...
ಎಸ್.ಎಲ್. ಭೈರಪ್ಪ | |
---|---|
![]() ಶ್ರೀ ಎಸ್.ಎಲ್. ಭೈರಪ್ಪ | |
ಜನನ | ೨೬-೦೭-೧೯೩೪ ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ |
ವೃತ್ತಿ | ಲೇಖಕ,ವಿಮರ್ಶಕ,ಅಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಥೆ, ಕಾದಂಬರಿ, ಇತಿಹಾಸ |
ಪ್ರಭಾವಗಳು
| |
slbhyrappa |
Close