ಆದಿಚನಲ್ಲೂರು
From Wikipedia, the free encyclopedia
ಅದಿಚನಲ್ಲೂರು ತಮಿಳು ನಾಡು ರಾಜ್ಯದ ಟುಟಿಕೋರಿನ್ ಜಿಲ್ಲೆಯ ಒಂದು ಪಟ್ಟಣ. ಇದು ಒಂದು ಪುರಾತತ್ವ ಕೇಂದ್ರ. ಇದು ತಾಮ್ರಪರ್ಣಿ ನದಿಯ ದಡದಲ್ಲಿದೆ. ಇಲ್ಲಿ ೧೮೯೯ ರಲ್ಲಿ ಪುರಾತತ್ವ ಇಲಾಖೆಯ ರೇ ಎಂಬವರು ನಡೆಸಿದ ಉತ್ಖನನದಲ್ಲಿ ಹಾಗೂ ನಂತರದ ಉತ್ಖನನದಲ್ಲಿ ಇತಿಹಾಸಪೂರ್ವ ಕಾಲದ ಅಂದರೆ ಸುಮಾರು ೩೮೦೦ ವರ್ಷಗಳಷ್ಟು ಹಳೆಯದಾದ ಅಸ್ಥಿಪಂಜರಗಳು ದೊರೆತಿವೆ.ಇದರೊಂದಿಗೆ ಕತ್ತಿ, ಗುರಾಣಿ,ಚೂರಿ, ಸುತ್ತಿಗೆ ಮುಂತಾದ ಕಬ್ಬಿಣದ ವಸ್ತುಗಳೂ, ಚಿನ್ನದ, ಹಿತ್ತಾಳೆ]ಯ ವಸ್ತುಗಳೂ ದೊರೆತಿವೆ. ರೇ ಅವರ ಅಭಿಪ್ರಾಯದಂತೆ ಈ ಪ್ರದೇಶ ಪಾಂಡ್ಯರ ಕಾಲದ ಒಂದು ಪಟ್ಟಣವಾಗಿತ್ತು.