ಅಪಭ್ರಂಶ
ಉಪಭಾಷೆ / From Wikipedia, the free encyclopedia
ಅಪಭ್ರಂಶ ಭಾಷೆ : - ಅಪಭ್ರಂಶ ಶಿಷ್ಟ ಸಂಸ್ಕೃತ ಭಾಷೆಯ ಸ್ವರೂಪಕ್ಕಿಂತ ಭಿನ್ನವಾದ ಶಬ್ದ ಅಥವಾ ಅಭಿವ್ಯಕ್ತಿಯನ್ನು ನಿರ್ದೇಶಿಸಲು ಪತಂಜಲಿ ತನ್ನ ಮಹಾಭಾಷ್ಯದಲ್ಲಿ ಈ ಶಬ್ದವನ್ನು ಮೊಟ್ಟಮೊದಲಬಾರಿಗೆ ಬಳಸಿದ್ದಾನೆ. ಬಹುಶಃ ಈ ಶಬ್ದ ಸಮಕಾಲೀನ ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಯ ಕೆಲವು ಪ್ರಾಂತೀಯ ಭೇದಗಳನ್ನು ಸೂಚಿಸುತ್ತಿದ್ದಿರಬೇಕು. ಆದರೆ ಇಂದು ಇದು ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಯ ಒಂದು ನಿರ್ದಿಷ್ಟ ಹಂತವನ್ನು ಸೂಚಿಸುತ್ತದೆ.