From Wikipedia, the free encyclopedia
ಸರೋಜ ಹೆಗ್ಡೆ ತಮ್ಮನ್ನು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಂಥ ಉತ್ತಮ ಕಲಾವಿದೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
೧೯೬೦, ಡಿಸೆಂಬರ್ ೪ರಂದು ಜನಿಸಿದ ಸರೋಜ ಅವರ ತಂದೆಯವರ ಹೆಸರು ಮಂಜುನಾಥ್ ಹೆಗ್ಡೆ. ಎಸ್ ಎಸ್ ಎಲ್ ಸಿಯವರೆಗೆ ವಿದ್ಯಾಭಾಸ ಮಾಡಿದ ಸರೋಜ ಅವರು ಯುತ್ ಸರ್ವೀಸ್ ನಲ್ಲಿ ತರಬೇತು ಪಡೆದಿರುವರಲ್ಲದೆ, ನೀನಾಸಂ ಪದವಿಧರರು ಹಾಗೂ ಒಂದು ವರ್ಷ ನೀನಾಸಂ ತಿರುಗಾಟದಲ್ಲಿ ಭಾಗವಹಿಸಿದವರು. ೧೯೯೦ರಿಂದ ಮೈಸೂರಿನ ರಂಗಾಯಣದಲ್ಲಿ ರಂಗಸೇವೆ ಸಲ್ಲಿಸುತ್ತಿರುವ ಸರೋಜ ಹೆಗ್ಡೆಯವರು ನಟಿಯಾಗಿ, ವಸ್ತ್ರವಿನ್ಯಾಸಕಿಯಾಗಿ, ಗಾಯಕಿಯಾಗಿ, ನಾಟಕಕಾರ್ತಿಯಾಗಿ, ನಿರ್ದೇಶಕಿಯಾಗಿ ಮತ್ತು ತಂಡದ ನಿರ್ವಾಹಕಿಯಾಗಿ, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಭಾಗವಹಿಸಿ, ಸಮರ್ಥವಾಗಿ ಎಲ್ಲ ವಿಭಾಗದಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಇವರ ಪತಿ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ಅವರು. ಮುದ್ದಾದ ಒಬ್ಬ ಮಗಳಿದ್ದಾಳೆ ಸರೋಜ-ರಮೇಶ್ ದಂಪತಿಗಳಿಗೆ.
Mr. Fridge Benwits (Germany)
Mr. Christian Strucle (Germany)
Mr. V. V. E. (Austria)
Mr. John Martin (London)
Mr. B. V. Karanath, N. S. D.
Mr. Prasanna, N. S. D.,
Mr. K. V. Subbanna (Magsese Award EE)
Mr. Basavalingaiah, N. S. D.
Mr. Raghunandan, N. S. D.
Mr. Jayateertha Joshi, N. S. D.
Mr. Chidambara Rao Jambe, N. S. D.
Mr. Janardhan, N. S. D.
Mr. Kannaiah Lal Manipura, N. S. D.
Mr. K. V. Akshara, N. S. D.
Mr. Suresh Anagalli, N. S. D.
Mr. C. G. K.
Mr. R. Nagesh.
Mr. K. G. Krishnamurthy, N. S. D.
Mr. Ramesh Verma.
Mr. M. S. Sathyu.
ನಿರ್ದೇಶಕಿಯಾಗಿ ಸರೋಜ ಹೆಗ್ಡೆಯವರು, ’ಮೃಚ್ಛಕಟಿಕ, ಮಿಡ್ ಸಮ್ಮರ್ ನೈಟ್ ಡ್ರೀಮ್ಸ್, ಕಣ್ಣಾ ಮುಚ್ಚೆ ಕಾಡೆಗೂಡೆ ಹಾಗೂ ಅಸಂಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಂಚಾರದಲ್ಲಿ ಇಡೀ ಭಾರತದಲ್ಲಿ ಹಲವಾರು ಕಡೆ ಅಭಿನಯಿಸಿದ್ದಲ್ಲದೆ, ಅಮೇರಿಕ, ಜರ್ಮನಿ ಮತ್ತು ಆಸ್ಟ್ರೀಯದಲ್ಲೂ ಸುತ್ತಾಡಿ ತಮ್ಮ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ.
Seamless Wikipedia browsing. On steroids.