From Wikipedia, the free encyclopedia
ಸಬ್ಬಸಿಗೆಯು (ಅನೇಥಮ್ ಗ್ರ್ಯಾವಿಯೋಲೆನ್ಸ್) ಒಂದು ಅಲ್ಪಕಾಲದ ಬಹುವಾರ್ಷಿಕ ಮೂಲಿಕೆ. ಅದು ಅನೇಥಮ್ ಪಂಗಡದ ಏಕಮಾತ್ರ ಜಾತಿ, ಆದರೆ ಕೆಲವು ಸಸ್ಯಶಾಸ್ತ್ರಜ್ಞರಿಂದ ಒಂದು ಸಂಬಂಧಿತ ಪಂಗಡದಲ್ಲಿ ಪ್ಯೂಸೇಡ್ಯಾನಮ್ ಗ್ರ್ಯಾವಿಯೋಲೆನ್ಸ್ ಎಂದು ವರ್ಗೀಕರಿಸಲಾಗುತ್ತದೆ. ಅದು ಕೃಶವಾದ ಕಾಂಡಗಳು ಮತ್ತು ೧೦-೨೦ ಸೆ.ಮಿ. ಉದ್ದದ ಪ್ರತಿಯಾದ, ನಯವಾಗಿ ವಿಭಜಿತವಾದ, ಕೋಮಲವಾದ ಮೆತ್ತಗಿನ ಎಲೆಗಳೊಂದಿಗೆ ೪೦-೬೦ ಸೆ.ಮಿ. ಎತ್ತರಕ್ಕೆ ಬೆಳೆಯುತ್ತದೆ. ಉಕ್ರೇನ್ ಮತ್ತು ರಷ್ಯಾದಲ್ಲಿ ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಸೊಪ್ಪು ಇಷ್ಟಪಡುವವರಿಗೆ ಸಬ್ಬಸಿಗೆ ಸೊಪ್ಪು (Dill Leaves) ಹೆಚ್ಚು ಇಷ್ಟ ಆಗುತ್ತದೆ. ಚಿಕ್ಕ ಸೂಜಿಯಂತೆ ಇದರ ಎಲೆ ಇರುತ್ತದೆ. ಇದು ನಾಲಿಗೆಗೆ ಹೆಚ್ಚು ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪರಿಮಳದಿಂದ ಕೂಡಿರುವ ಸಬ್ಬಸಿಗೆಯನ್ನು ಪಲ್ಯ, ಸಾಂಬಾರಿಗೆ ಬಳಸುತ್ತಾರೆ. ಉಕ್ರೇನ್ (Ukraine) ಮತ್ತು ರಷ್ಯಾದಲ್ಲಿ (Russia) ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
Dill | |
---|---|
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | ಆವೃತಬೀಜಿಗಳು |
(ಶ್ರೇಣಿಯಿಲ್ಲದ್ದು): | ಯೂಡಿಕೋಟ್ಸ್ |
(ಶ್ರೇಣಿಯಿಲ್ಲದ್ದು): | Asterids |
ಗಣ: | Apiales |
ಕುಟುಂಬ: | Apiaceae |
ಕುಲ: | Anethum L. |
ಪ್ರಜಾತಿ: | A. graveolens |
Binomial name | |
Anethum graveolens L. | |
Synonyms | |
Peucedanum graveolens (L.) C. B. Clarke |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.