1857ರ ಸಿಪಾಯಿ ದಂಗೆ From Wikipedia, the free encyclopedia
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಭಾರತೀಯ ಇತಿಹಾಸಕಾರರು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು 'ಸಿಪಾಯಿ ದಂಗೆ' ಮಾತ್ರ ಎಂದಿದ್ದಾರೆ.[೧]
ವಿವಿಧ ವಿದ್ವಾಂಸರ ಪ್ರಕಾರ ಇದೊಂದು ಸಂಪೂರ್ಣ ಸಿಪಾಯಿ ದಂಗೆ ಹೊರತು ಮತ್ತೇನೂ ಅಲ್ಲ ಸ್ವಲ್ಪಮಟ್ಟಿನ ಜನತೆಯ ಹೋರಾಟವಾಗಿತ್ತು ಎಂದು ಆಂಗ್ಲ ವಿದ್ವಾಂಸರಾದ ವಿ.ಎ.ಸ್ಮಿತ್ ಹೇಳಿದ್ದಾರೆ. ಭಾರತೀಯ ಇತಿಹಾಸಕಾರ ಹಾಗು ವಿದ್ವಾಂಸ ವಿ. ಡಿ. ಸಾರ್ವಕರ್ ತಮ್ಮ 1857 'ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸೈನಿಕ ಮತ್ತು ಸಂಗ್ರಾಮದ ಹಿನ್ನೆಲೆಯಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಚರ್ಚೆಗಳು ಮುಂದಿನಂತೆ ಇವೆ.[೨]
ಬ್ರಿಟಿಷರು ಜಾರಿಗೆ ತಂದಿದ್ದ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಹೌಸಿಯು ಜಾರಿಗೆ ತಂದಿದ್ದನು. ಈ ನೀತಿಯಿಂದಾಗಿ ಹಲವು ದೇಶಿ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಈ ನೀತಿಯಿಂದಾಗಿ ಸತಾರ, ಜೈಪುರ, ರವಾನಿ, ಉದಯಪುರ ಇತ್ಯಾದಿ ದೇಶೀಯ ಸಂಸ್ಥಾನಗಳು ಬ್ರಿಟಿಷರ ವಶವಾದವು. ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಪಡೆದ ಮಕ್ಕಳಿಗೆ ನೀಡುತ್ತಿದ್ದ. ಆದರೆ 'ದತ್ತುಮಕ್ಕಳಿಗೆ ಹಕ್ಕಿಲ್ಲ' ನೀತಿಯ ಪ್ರಕಾರ ಇದು ಕಾನೂನು ವಿರೋಧಿ ಆಗುತ್ತಿತ್ತು. ಈ ನೀತಿಯ ಪ್ರಕಾರ ಡಾಲ್ಹೌಸಿಯು ತಂಜಾವೂರು ಮತ್ತು ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು, ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ 1857ರ ಪ್ರತಿಭಟನೆಗೆ ಪ್ರೇರಕವಾಯಿತು.
ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನಡುವೆ ಸ್ಥಾನಮಾನ ಮತ್ತು ವೇತನಗಳಲ್ಲಿ ತಾರತಮ್ಯ, ಭಾರತೀಯರಿಗೆ ಸೈನ್ಯದಲ್ಲಿ ಉನ್ನತ ಹುದ್ದೆಗಳ ನಿರಾಕರಣೆ, ಈ ದಂಗೆಗೆ ತಕ್ಷಣದ ಕಾರಣವೆಂದರೆ ವಾಸ ಎನ್ಫೀಲ್ಡ್ ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದು ಈ ಬಂದೂಕಿನ ಮುಟ್ಟಲು ಹಿಂದೂಗಳು ಮತ್ತು ಮುಸ್ಲಿಮರು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಗಲ್ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಅಧಿಕಾರಿಯನ್ನು ಕೊಂದನು. ಆದ್ದರಿಂದ ಸಿಪಾಯಿಗಳನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದರು. ಸಿಪಾಯಿಗಳು ಕಾರಾಗೃಹ ಒಡೆದು ದೆಹಲಿಯತ್ತ ಸಾಗಿ ಕೆಂಪುಕೋಟೆಯಲ್ಲಿ ಎರಡನೇ ಬಹದ್ದೂರ್ ಷಾ ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿ ಉದ್ರೇಕಗೊಳಿಸಿತು ಮಾರ್ಚ್ 29 18 57 ರಲ್ಲಿ ಬ್ರಾಹ್ಮಣ ಸೈನಿಕ ಮಂಗಲಪಾಂಡೆ ಸೈನಿಕನು ಬಹಿರಂಗವಾಗಿ ದಂಗೆಯೆದ್ದು ,ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿದನು. ಜೊತೆಗಾರ ಸೈನಿಕರನ್ನೆಲ್ಲಾ ಸೇರಿಸಿ ನನ್ನ ಜೊತೆಗೂಡಿ, ನಮ್ಮ ಧರ್ಮ ಮತ್ತು ಜಾತಿ ರಕ್ಷಣೆಗೆ ಹೋರಾಡಲು ಕರೆ ನೀಡಿದರು. ಈ ಕ್ರಾಂತಿಯ ಮೊದಲು ಉಗಮವಾಗಿದ್ದು ಮೀರತ್ ನಲ್ಲಿ, ಮೀರತ್ ತಿನ ಒಂದು ತುಕಡಿ ಯು ಬಂದೂಕು ಮುಟ್ಟಲು ನಿರಾಕರಿಸಿದರು. ಇದರಿಂದ ಕೆರಳಿದ ಬ್ರಿಟಿಷರು 10 ವರ್ಷ ಕಠಿಣ ಶಿಕ್ಷೆ ವಿಧಿಸಿತು. ಸಾರ್ವಜನಿಕವಾಗಿ ಚಿತ್ರ ಹಿಂಸೆ ನೀಡಿ ಅವರಿಂದ ಸಮವಸ್ತ್ರ ಕಸಿದುಕೊಳ್ಳಲಾಯಿತು ಇದನ್ನು ನೋಡಿದ ಇತರ ಸೈನಿಕರು ಉದ್ರೇಕಗೊಂಡು ಸೈನಿಕರನ್ನು ಬಂಧಿಸಿಟ್ಟಿದ್ದ ಜೈಲಿಗೆ ನುಗ್ಗಿ ಅಲ್ಲಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿ ತಮ್ಮ ಸೈನಿಕರನ್ನು ಬಂಧಮುಕ್ತಗೊಳಿಸಿದರು. ನಂತರ ಈ ಸೈನಿಕರು ದೆಹಲಿಯತ್ತ ತೆರಳಿ ಮೊಘಲ್ ದೊರೆ ೨ನೇ ಬಹದ್ದೂರ್ ಷಾನನ್ನು ರಾಜನಾಗಿ ಮಾಡಿದರು. ಇದನ್ನು ತಿಳಿದ ಬ್ರಿಟಿಷರ ಕೆಂಪು ಕೋಟೆಯ ಮೇಲೆ ಬಾರಿ ದಾಳಿ ಮಾಡಿ ಬಹುದೂರ್ ಷಾ ಮೊಗಲ್ ದೊರೆಯ ಇಬ್ಬರು ಮಕ್ಕಳನ್ನು ಲೆಫ್ಟಿನೆಂಟ್ ಹಸ್ಸನ್ ಕೊಂದು ಹಾಕಿದ ಬಹುದುರ್ ಶಾನು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಇದೇ ರೀತಿ ಕಾನ್ ಪುರ್ ಲಕ್ನೋ ಜಾನ್ಸಿ ಗ್ವಾಲಿಯರ್ ಇತರೆ ಸ್ಥಳಗಳಲ್ಲಿ ಬಿಟಿಷರ ವಿರುದ್ಧ ಹೋರಾಟಗಳು ಸ್ಪೋಟಗೊಂಡ ಭಾರತದ ಬಹುತೇಕ ಸ್ಥಳಗಳಲ್ಲಿ ಆರಂಭವಾಯಿತು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು '1857 ರ ಭಾರತೀಯ ದಂಗೆ ಎಂದು ಬ್ರಿಟೀಷರು ಕರೆಯುತ್ತಾರೆ. ಈ ಸಂಗ್ರಾಮ ದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.
ಈ ಬಂಡಾಯ ಆರಂಭವಾಗಲು ಹಲವಾರು ಕಾರಣಗಳನ್ನು ಹುಡುಕಬಹುದು.
೨೬ ಫೆಬ್ರವರಿ ೧೮೫೭ರಂದು ೧೯ನೇ ಬಂಗಾಳ ಸ್ಥಳೀಯ ಕಾಲಾಳು ಸೈನಿಕರು ಹೊಸ ಕಾಡತೂಸುಗಳ ಬಗ್ಗೆ ತಿಳಿದು ಅವುಗಳನ್ನು ಉಪಯೋಗಿಸಲು ನಿರಾಕರಿಸಿದರು. ಸೈನ್ಯದ ಕರ್ನಲ್ ಇದನ್ನು ತಿಳಿದು ಆವೇಶಗೊಂಡರೂ, ಕೊನೆಗೆ ಸೈನಿಕರ ಒತ್ತಾಯಕ್ಕೆ ಮಣಿದು ಮರು ದಿನದ ತಾಲೀಮನ್ನು ರದ್ದು ಮಾಡಬೇಕಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.