From Wikipedia, the free encyclopedia
ಹಿಂದೂಸ್ತಾನ್ ಟೈಮ್ಸ್ (HT ) ಎಂಬುದು ಇಂಗ್ಲೀಷ್-ಭಾಷೆಯ ಭಾರತೀಯ ದೈನಿಕ ವೃತ್ತಪತ್ರಿಕೆಯಾಗಿದ್ದು, ಇದನ್ನು 1924ರಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಆರಂಭಿಸಲಾಯಿತು. ("ಹಿಂದೂಸ್ಥಾನ್" ಉತ್ತರ ಭಾರತದ ಐತಿಹಾಸಿಕ ಹೆಸರು).[1]
ಹಿಂದೂಸ್ತಾನ್ ಟೈಮ್ಸ್ , HT ಮೀಡಿಯಾ Ltd ಸಂಸ್ಥೆಯಡಿಯ ಪ್ರಧಾನ ಪ್ರಕಾಶನವಾಗಿದೆ. ಈ ವೃತ್ತಪತ್ರಿಕೆಯು, 2008 ರಲ್ಲಿನ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ ನ ಅಂಕಿಅಂಶದಂತೆ, ಅದರ ಪ್ರಸಾರ ಸಂಖ್ಯೆ 1.14 ಮಿಲಿಯನ್ ಆಗಿತ್ತು. ಭಾರತದ ಇಂಗ್ಲೀಷ್ ವೃತ್ತಪತ್ರಿಕೆಗಳಲ್ಲಿ ಮೂರನೆ ಸ್ಥಾನ ಪಡೆದಿದೆ ಎಂದೂ ವರದಿಯಾಗಿತ್ತು. ಇಂಡಿಯನ್ ರೀಡರ್ ಶಿಪ್ ಸರ್ವೇ, 2010 ರ ಪ್ರಕಾರ (IRS)ನ,(ಭಾರತೀಯ ಓದುಗರ ಸಮೀಕ್ಷೆ), HT (34.67 ಲಕ್ಷ ದಷ್ಟು) ಓದುಗರನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಓದುಗರಿರುವ ಇಂಗ್ಲೀಷ್ ವೃತ್ತಪತ್ರಿಕೆಗಳಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ದ ನಂತರ ಇದು ಎರಡನೆಯ ಸ್ಥಾನ ಪಡೆದಿದೆ,ಎಂದು ಬಹಿರಂಗಪಡಿಸಲಾಯಿತು.[2] ಈ ದೈನಿಕವು ನವದೆಹಲಿ ಮುಂಬಯಿ, ಕಲ್ಕತ್ತಾ, ಲಕ್ನೌ, ಪಟ್ನಾ, ರಾಂಚಿ, ಭೂಪಾಲ್ ಮತ್ತು ಚಂಡೀಗಡ ಗಳಿಂದ ಏಕಕಾಲಿಕವಾಗಿ ಮುದ್ರಣ ಆವೃತ್ತಿಗಳೊಂದಿಗೆ ಉತ್ತರ ಭಾರತದಲ್ಲಿ ವ್ಯಾಪಕ ಪ್ರಸಾರ ಹೊಂದಿದೆ. ಜೈಪುರದಲ್ಲಿದ್ದ ಮುದ್ರಣ ಕಚೇರಿಯನ್ನು 2006 ರ ಜೂನ್ ನಿಂದ ಸ್ಥಗಿತಗೊಳಿಸಲಾಗಿದೆ. HT , 2004 ರಲ್ಲಿ ಯುವಕರಿಗೆ ಮೀಸಲಾದ ದಿನಪತ್ರಿಕೆ HT ನೆಕ್ಸ್ಟ್ ಅನ್ನು ಆರಂಭಿಸಿತು. ಮುಂಬಯಿನ ಆವೃತ್ತಿಯನ್ನು 2005 ರ ಜುಲೈ 14 ರಂದು ಹಾಗು ಕಲ್ಕತ್ತಾ ಆವೃತ್ತಿಯನ್ನು 2000ನೆಯ ವರ್ಷದ ಆರಂಭದಲ್ಲಿ ಹೊರತಂದಿತು.
ಹಿಂದೂಸ್ತಾನ್ ಟೈಮ್ಸ್ ನ ಇತರ ಪ್ರಕಾಶನಗಳು ಕೆಳಕಂಡಂತಿವೆ: ಮಿಂಟ್ (ಇಂಗ್ಲೀಷ್ ಭಾಷೆಯ ವ್ಯಾಪಾರ-ವಹಿವಾಟು ವಿವರದ ದಿನಪತ್ರಿಕೆ), ಹಿಂದೂಸ್ತಾನ್ (ಹಿಂದಿ ಭಾಷೆಯ ದಿನ ಪತ್ರಿಕೆ), ನಂದನ್ (ಮಕ್ಕಳ ಮಾಸಿಕ ನಿಯತಕಾಲಿಕೆ) ಮತ್ತು ಕದಂಬನಿ (ಸಾಹಿತ್ಯದ ಮಾಸಿಕ ನಿಯತಕಾಲಿಕೆ). ಈ ಮಾಧ್ಯಮ ಸಮೂಹವು ಫೀವರ್ ರೇಡಿಯೋ ಚಾನಲ್ ನ ಒಡೆತನವನ್ನೂ ಪಡೆದಿದೆ.ಅದಕ್ಕಾಗಿ, ಅದ್ದೂರಿಯ ವಾರ್ಷಿಕ ಸಭೆ ಲಕ್ಸುರಿ ಕಾನಫೆರೆನ್ಸ್ ನ್ನು ಏರ್ಪಡಿಸಿತು. ಈ ಸಭೆಯು ಡೆನಾ ವಾನ್ ಫರ್ಸ್ಟೆನ್ ಬರ್ಗ್ ನಂತಹ ವಿನ್ಯಾಸಕಿ, ಕ್ರಿಸ್ಟೀನ್ ಲೌಬೌಟಿನ್ ನಂತಹ ಶೂ ತಯಾರಕನನ್ನು, ಗ್ಯೂಸಿಯ CEO ರಾಬರ್ಟ್ ಪೊಲೆಟ್ ಮತ್ತು ಕಾರ್ಟಿಯರ್ ನ MD ಪ್ಯಾಟ್ರಿಕ್ ನಾರ್ಮ್ಯಾಂಡ್ ರಂತಹ ಭಾಷಣಕಾರರನ್ನು ಒಳಗೊಂಡಿತ್ತು.
ಹಿಂದೂಸ್ತಾನ್ ಟೈಮ್ಸ್ ಅನ್ನು ಬಿರ್ಲಾ ಕುಟುಂಬದ ಒಡೆತನಯುಳ್ಳ, KK ಬಿರ್ಲಾ ಶಾಖೆಯು ನಡೆಸುತ್ತಿದೆ.
ಹಿಂದೂಸ್ತಾನ್ ಟೈಮ್ಸ್ ಅನ್ನು ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು 1924 ರಲ್ಲಿ ಆರಂಭಿಸಿದರು. ಇವರು ಅಕಾಲಿ ಚಳವಳಿಯ ಮತ್ತು ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳದ ಸ್ಥಾಪಕ-ಜನಕರಾಗಿದ್ದಾರೆ. ಎಸ್ ಮಂಗಲ್ ಸಿಂಗ್ ಗಿಲ್ (ತಾಶೀಲ್ದಾರ್) ಮತ್ತು ಎಸ್. ಚಂಚಲ್ ಸಿಂಗ್ (ಜಲಂಧರ್ ನ ಜಂಡಿಯಾಲಾ) ರವರನ್ನು ಈ ವೃತ್ತಪತ್ರಿಕೆಯ ಮೇಲ್ವಿಚಾರಣೆಗಾಗಿ ಆಗ ನೇಮಿಸಲಾಯಿತು. ಪಂಡಿತ್ ಮದನ್ ಮೋಹನ್ ಮಾಳವಿಯಾ ಮತ್ತು ಮಾಸ್ಟರ್ ತಾರಾ ಸಿಂಗ್ ರವರು ಕೂಡ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿದ್ದರು. ಮಾಸ್ಟರ್ ಸುಂದರ್ ಸಿಂಗ್ ಲ್ಯಾಲ್ ಪುರಿಯವರು ನಿರ್ವಾಹಕ ಅಧ್ಯಕ್ಷರು ಮತ್ತು ಪ್ರಧಾನ ಪೋಷಕರಾಗಿದ್ದರು.
ಸಂಪಾದಕೀಯ ವಿಭಾಗದ ಮಂಡಲಿಯಲ್ಲಿ ದೇವದಾಸ ಗಾಂಧಿ (ಮಹಾತ್ಮ ಗಾಂಧಿಯವರ ಪುತ್ರ) ಯೊಂದಿಗೆ ಕೆ.ಎಮ್. ಪಣಿಕ್ಕರ್ ರವರು ಇದರ ಮೊದಲ ಸಂಪಾದಕರಾಗಿದ್ದರು. ಇದರ ಉದ್ಘಾಟನಾ ಸಮಾರಂಭವನ್ನು, 1924 ರ ಸೆಪ್ಟೆಂಬರ್ 15 ರಂದು ಮಹಾತ್ಮ ಗಾಂಧಿ ನೆರವೇರಿಸಿದರು. ಮೊದಲ ಪ್ರತಿಯನ್ನು ದೆಹಲಿಯ ನಯಾ ಬಜಾರ್ (ಈಗ ಸ್ವಾಮಿ ಶಾರದ ನಂದ ಮಾರ್ಗ) ನಿಂದ ಪ್ರಕಟಿಸಲಾಯಿತು. ಆವಾಗ ಇದು, ಸಿ.ಎಫ್. ಆಂಡ್ರೀವ್ಯುಸ್, ಸೆಂಟ್. ನಿಹಾಲ್ ಸಿಂಗ್, ಮೌಲಾನಾ ಮೊಹಮದ್ ಅಲಿ, ಸಿ.ಆರ್. ರೆಡ್ಡಿ (ಡಾ. ಕಟ್ಟಮಂಚಿ ರಾಮಲಿಂಗ ರೆಡ್ಡಿ ),ಟಿ. ಎಲ್. ವಾಸ್ವಾನಿ, ರುಚಿ ರಾಮ್ ಸಹ್ನಿ, ಬರ್ನಾರ್ಡ್ ಹ್ಯಾಟನ್ , ಹರಿಂಧರ್ ನಾಥ್ ಚಟ್ಟೋಪಾಧ್ಯಾಯ, ಡಾ:ಸೈಫ್ ಉದ್ದೀನ್ ಕಿಚ್ಲೂ ಮತ್ತು ರೂಬಿ ವ್ಯಾಸ್ಟೋ ನಂತಹ ಪ್ರತಿಭಾವಂತರ ಲೇಖನ ಮತ್ತು ಬರಹಗಳನ್ನು ತನ್ನ ಆವೃತ್ತಿಯಲ್ಲಿ ಹೊಂದಿತ್ತು.
"ಸದರ್ ಪಣಿಕ್ಕರ್ ಹಿಂದೂಸ್ತಾನ್ ಟೈಮ್ಸ್ ಅನ್ನು ಗಂಭೀರವಾದ ಒಂದು ರಾಷ್ಟ್ರೀಯ ವೃತ್ತಪತ್ರಿಕೆಯನ್ನಾಗಿ ಆರಂಭಿಸಿದರು. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸದಸ್ಯ, ಇತಿಹಾಸಜ್ಞ, ಸಾಹಿತಿಯಾಗಿದ್ದ ಪಣಿಕ್ಕರ್, ಅವರು ಈ ಪತ್ರಿಕೆಯನ್ನು ಅಂತಿಮವಾಗಿ ಅಕಾಲಿ ಪತ್ರಿಕೆಗಿಂತ ಇನ್ನೂ ಹೆಚ್ಚಾಗಿ ಬೆಳೆಸುವ ಭರವಸೆ ಹೊಂದಿದ್ದರು. ಇವರು ಸಂಪಾದಕರಾದ ನಂತರ ಇದಕ್ಕೆ ಅಕಾಲಿ ಕಾರ್ಯಕರ್ತರು, ಪೋಷಕರಿಂದ ಉದಾರ ಧನಸಹಾಯವು ದೊರೆಯಿತು. ಸತತ ಶ್ರಮ,ಪ್ರಯತ್ನ ಮಾಡುವ ಮೂಲಕ ತಮ್ಮ ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ಕೂಡ ಪತ್ರಿಕೆ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಎರಡು ವರ್ಷಗಳಲ್ಲಿ ಪಣಿಕ್ಕರ್ ಅವರು 3,000 ಕ್ಕಿಂತ ಅಧಿಕ ಪ್ರತಿಗಳಿಗಾಗಿ ಎಲ್ಲಿಂದಲೂ ಮುದ್ರಣ ಆದೇಶ ಪಡೆಯಲಿಲ್ಲ. ಅನಂತರ ಅಕಾಲಿ ಚಳವಳಿ ತನ್ನೆಲ್ಲ ಶಕ್ತಿ ಕಳೆದುಕೊಂಡಿತಲ್ಲದೇ ಧನಸಹಾಯವೂ ನಿಂತುಹೋಯಿತು. ದೆಹಲಿಯಲ್ಲಿ, ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರು ವೃತ್ತಪತ್ರಿಕೆಯ ನೈಜ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವೆಡೆಗೆ ತಮ್ಮ ದೃಢ ಹೆಜ್ಜೆಯನಿಟ್ಟಾಗ, ಪತ್ರಿಕೆಯು ಅಕಾಲಿಕ ಅಳಿವಿನಿಂದ ಉಳಿದುಕೊಂಡಿತು."- TJS ಜಾರ್ಜ್, ಪತ್ರಿಕೋದ್ಯಮದಲ್ಲಿ ಪಾಠಗಳು, 2007, ವೈವಾ ಪುಸ್ತಕಗಳು, ನವದೆಹಲಿ.
ಪತ್ರಿಕೆಯನ್ನು ಸ್ವಾಧೀನಡಿಸಿಕೊಳ್ಳಲು 50,000 ರೂಪಾಯಿಗಳನ್ನು ಮಾಳವಿಯಾ ಅವರು ಸಂಗ್ರಹಿಸಿದರು.ರಾಷ್ಟ್ರೀಯತಾವಾದಿ ನಾಯಕರಾದ ಲಜಪತ ರಾಯ್, ಎಮ್.ಆರ್. ಜಯಕರ್ ಮತ್ತು ಕೈಗಾರಿಕೋದ್ಯಮಿ ಜಿ.ಡಿ. ಬಿರ್ಲಾ, ಅವರುಗಳೇ ಇದರ ಬಹುಪಾಲು ಸಹಾಯವನ್ನು ನೀಡಿದ್ದರು. ಪತ್ರಿಕೆಯ ಸಂಪೂರ್ಣ ನಿಯಂತ್ರಣವನ್ನು 1933 ರಲ್ಲಿ ಬಿರ್ಲಾ ಅವರು ತೆಗೆದುಕೊಂಡರು. ಹೀಗೆ ಬಿರ್ಲಾ ಕುಟುಂಬ ಪತ್ರಿಕೆಯ ಒಡೆತನವನ್ನು ಮುಂದುವರೆಸಿತು.
ಇಪ್ಪತ್ತನೇ ಶತಮಾನದ ಮೊದಲಾರ್ಧದಲ್ಲಿ ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನ ಮೂಲ ಬೇರುಗಳನ್ನು ಹೊಂದಿತ್ತು. ಅಲ್ಲದೇ ಇದು ತನ್ನ ವಿರುದ್ದ ಅಲಹಾಬಾದ್ ನ ಉಚ್ಚ ನ್ಯಾಯಾಲಯದಲ್ಲಿ ಹೂಡಲಾದ "ಹಿಂದೂಸ್ತಾನ್ ಟೈಮ್ಸ್ ನ್ಯಾಯಾಂಗ ನಿಂದನಾ ಪ್ರಕರಣದ ಮೊಕದ್ದಮೆ (ಆಗಸ್ಟ್- ನವೆಂಬರ್, 1941)"ಯನ್ನು ಕೂಡ ಎದುರಿಸಿದೆ.[3] ಇದನ್ನು ಕಾಲಕಾಲಕ್ಕೆ ದೇವದಾಸ ಗಾಂಧಿ ಮತ್ತು ಖುಷ್ವಂತ್ ಸಿಂಗ್ ರನ್ನು ಒಳಗೊಂಡಂತೆ ಭಾರತದ ಅನೇಕ ಪ್ರಮುಖ ವ್ಯಕ್ತಿಗಳು ಸಂಪಾದಿಸಿದ್ದರು. ಸಂಜಯ್ ನಾರಾಯಣ್ ಅವರು ಇದರ ಪ್ರಧಾನ ಸಂಪಾದಕತ್ವವನ್ನು 2008 ರ ಆಗಸ್ಟ್ ನಲ್ಲಿ ವಹಿಸಿಕೊಳ್ಳುವುದರೊಂದಿಗೆ ಇದರ ಸ್ವಾಧೀನಕ್ಕೂ ಮುಂದಾದರು.[4]
ಇತ್ತೀಚೆಗೆ[ಯಾವಾಗ?] ಸಂಪಾದಕೀಯ ಪುಟವು ಪ್ರಮುಖ ಬದಲಾವಣೆ ಕಂಡಿತು. ಅಲ್ಲದೇ ಅದರ ಕ್ಲಿಷ್ಟತೆ ಕಡಿಮೆ ಮಾಡಿ ಅದನ್ನು ಮತ್ತಷ್ಟು ಸರಳವಾಗುವಂತೆ ಮಾಡಲು, ಈ ಪುಟವನ್ನು "ಕಾಮೆಂಟ್"(ಟೀಕೆ) ಎಂದು ಹೆಸರಿಸಲಾಯಿತು.
HT ಮುಂಬಯಿ , HT ಕೆಫೆ ಎಂಬ ಶೀರ್ಷಿಕೆಯ ಎಂಟು ಪುಟಗಳ ದಿನನಿತ್ಯದ ಜೀವನ ಶೈಲಿಯ ಚಿತ್ರಣವಿರುವ ಪುರವಣಿ ಆಕಾರವನ್ನು(ಟ್ಯಾಬ್ಲಾಯ್ಡ್ ನ ಫಾರ್ಮೆಟ್ ನಲ್ಲಿದೆ)ಯನ್ನು ಹೊರತಂದಿತು. ಇದು ಪ್ರತಿ ಬುಧವಾರದಂದು ಹರೈಸನ್ಸ್ಎಂಬ ಶಿಕ್ಷಣಕ್ಕೆ ಸಂಬಂಧಿಸಿದ ಪುರವಣಿಯನ್ನು ಕೂಡ ಹೊಂದಿದೆ. ಪತ್ರಿಕೆಯ ಭಾನುವಾರದ ಪುರವಣಿಗಳಲ್ಲಿ ಬ್ರಂಚ್ ಎಂಬ ವಿಶೇಷಾಂಕವನ್ನೂ ನಿಯತಕಾಲಿಕೆಯೊಂದಿಗೂ ನೀಡಲಾಗುತ್ತಿದೆ. ಮುಂಬಯಿ ಆವೃತ್ತಿಯನ್ನು ಬಾಂಬೆಯ NMIMS ನ ಹಳೆಯ ವಿದ್ಯಾರ್ಥಿ ಮೋಹಿತ್ ಅಹುಜಾ ರವರು ನಿರ್ವಹಿಸುತ್ತಿದ್ದರು. ಮುಂಬಯಿನಲ್ಲಿ ಸೌಮ್ಯ ಭಟ್ಟಾಚಾರ್ಯಅವರು ಸ್ಥಾನೀಯ ಸಂಪಾದಕರಾಗಿದ್ದಾರೆ.
ದೆಹಲಿ ಮೂಲದ ಇಂಗ್ಲೀಷ್ ವೃತ್ತಪತ್ರಿಕೆ ಹಿಂದೂಸ್ತಾನ್ ಟೈಮ್ಸ್ KK ಬಿರ್ಲಾ ಉದ್ಯಮ ಸಮೂಹದ ಭಾಗವಾಗಿದ್ದು, ಇದನ್ನು ಶೋಭನಾ ಭಾರ್ತಿಯಾ ರವರು ನಿರ್ವಹಿಸುತ್ತಿದ್ದಾರೆ. ಇವರು ಕೈಗಾರಿಕೋದ್ಯಮಿ KK ಬಿರ್ಲಾ ರವರ ಪುತ್ರಿಯಾಗಿದ್ದು, ಜಿ ಡಿ ಬಿರ್ಲಾರವರ ಮೊಮ್ಮಗಳಾಗಿದ್ದಾರೆ. HT ಮೀಡಿಯಾ ಲಿಮಿಟೆಡ್ ಇದರ ಒಡೆತನ ಹೊಂದಿದೆ. KK ಬಿರ್ಲಾ ಉದ್ಯಮ ಸಮೂಹ HT ಮೀಡಿಯ ದಲ್ಲಿ 69 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ಪ್ರಸ್ತುತ ಇದು 834 ಕೋಟಿ ರೂಪಾಯಿ ಮೊತ್ತದ್ದಾಗಿದೆ. ಹಿಂದೂಸ್ತಾನ್ ಟೈಮ್ಸ್ ಅನ್ನು ಶೋಭನಾ ಭಾರ್ತಿಯಾ ಅವರು 1986 ರಲ್ಲಿ ಸೇರಿಕೊಂಡಾಗ, ಅವರು ರಾಷ್ಟ್ರೀಯ ವೃತ್ತಪತ್ರಿಕೆಯಲ್ಲಿ ಪ್ರಧಾನ ಕಾರ್ಯನಿರ್ವಾಹಕಿಯಾದ ಮೊದಲ ವ್ಯಕ್ತಿಯಾದರು. ಶೋಭನಾ ಕಾಂಗ್ರೆಸ್ ಪಕ್ಷದಿಂದ ರಾಜ್ಯ ಸಭೆಗೆ MP ಯಾಗಿ ನಾಮ ನಿರ್ದೇಶನಗೊಂಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ನೊಂದಿಗೆ, HT ಮೀಡಿಯ; ದೇಸಿಮಾರ್ಟಿನಿ, ಫೀವರ್ 104 FM, amd ಮಿಂಟ್(ವೃತ್ತಪತ್ರಿಕೆ) ಗಳನ್ನು ನಡೆಸುತ್ತದೆ.
ಇದು ನಿಜವಾಗಿಯೂ ಅತ್ಯುತ್ತಮ ಸಾಧನೆಯಾಗಿದ್ದು ಅಲ್ಲದೇ ಅವರು ಇದನ್ನು ಮುಂದುವರೆಸಬೇಕಾಗಿದೆ.
HT , ಹಿಂದಿನಿಂದಲೂ IFRA ನಲ್ಲಿ ಉತ್ತಮ ದಾಖಲೆ ಹೊಂದಿದೆ. ಅಲ್ಲದೇ ಈ ವರ್ಷ ಅನೇಕ ಪ್ರಶಸ್ತಿಗಳನ್ನು ಕೂಡ ಗಳಿಸಿದೆ.[ಸೂಕ್ತ ಉಲ್ಲೇಖನ ಬೇಕು]
ಟೆಂಪ್ಲೇಟು:Portal
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.