From Wikipedia, the free encyclopedia
ಸುಧಾ ಬೆಳವಾಡಿ[೧] ಭಾರತದ ಒಬ್ಬ ಚಲನಚಿತ್ರ ಅಭಿನೇತ್ರಿ. ಕನ್ನಡ ಭಾಷೆಯ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ಕರ್ನಾಟಕದಲ್ಲಿ ರಂಗ ಭೂಮಿಯಲ್ಲಿಯೂ ಹೆಚ್ಚಾಗಿ ಕೆಲಸಮಾಡಿದ್ದಾರೆ.ಸುಧಾ ಬೆಳವಾಡಿಯವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳು:
ಸುಧಾರವರು [೨] ಕನ್ನಡ ಅಭಿನೇತ್ರಿ, ಭಾರ್ಗವಿ ನಾರಾಯಣ್ ಮತ್ತು ಬೆಳವಾಡಿ ನಂಜುಂಡಯ್ಯ ನಾರಾಯಣ್ ರವರ ಮಗಳು. ತಂದೆ, ಬೆಳವಾಡಿ ನಂಜುಂಡಯ್ಯ ನಾರಾಯಣ್ ರಂಗಭೂಮಿಯಲ್ಲಿ 'ಮೇಕ್ ಅಪ್ ನಾಣಿ' ಎಂದು ಸುಪ್ರಸಿದ್ಧರಾಗಿದ್ದರು. ಅವರೊಬ್ಬ ಕನ್ನಡ ನಟರಾಗಿದ್ದರು ಸಹಿತ. ಒಡಹುಟ್ಟಿದವರು ಸುಜಾತ, ಪ್ರಕಾಶ್, ಮತ್ತು ಪ್ರದೀಪ್, ಪ್ರಕಾಶ್ ಬೆಳವಾಡಿಯವರು ಭಾರತೀಯ ರಂಗಭೂಮಿ, ಚಲನ ಚಿತ್ರ ಮತ್ತು ಕಿರುತೆರೆಯಲ್ಲಿ ಮೀಡಿಯಾ ಪರ್ಸನ್, ನ್ಯಾಷನಲ್ ಫಿಲಂ ಅವಾರ್ಡ್ ವಿಜೇತರಾಗಿದ್ದಾರೆ. ಸುಧಾರವರು ಎಂ.ಜಿ.ಸತ್ಯರಾವ್ ರವರನ್ನು ಮದುವೆಯಾಗಿದ್ದಾರೆ. ಸತ್ಯರಾವ್ ಅತ್ಯುತ್ತಮ್ಮ ಪಟ್ಕಥಾ ಲೇಖಕರು. ಅವರು ಸ್ವದೇಸ್ ಹಿಂದಿ ಚಲನ ಚಿತ್ರಕ್ಕೆ ಪಟ್ಕಥೆಯನ್ನು ಬರೆದು ವಿಖ್ಯಾತರಾಗಿದ್ದಾರೆ. ಈ ದಂಪತಿಗಳ ಮಕ್ಕಳು, ಶಾಂತನು ಮತ್ತು ಸಂಯುಕ್ತ. ಸಂಯುಕ್ತ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕೆಲಸಮಾಡುತ್ತಿದ್ದಾಳೆ.
ಒಟ್ಟಾರೆ ೭೦ ಚಿತ್ರಗಳಲ್ಲಿ ನಟಿಸಿದ ಸುಧಾ ಬೆಳವಾಡಿಯವರು, ೧೭ ನಾಟಕಗಳಲ್ಲೂ ಕೆಲಸಮಾಡಿದ್ದಾರೆ. ಕಿರು ತೆರೆಯಲ್ಲಿ ಮಂಥನ, ಮನ್ವಂತರ, ಮಹಾಪರ್ವ, ಮಗಳು ಜಾನಕಿ (೨೦೧೯) ಸುಧಾ ಬೆಳವಾಡಿಯವರು ಅಭಿನಯಿಸಿದ ಕೆಲವು ಪ್ರಮುಖ ಚಲನ ಚಿತ್ರಗಳು :
ಖ್ಯಾತ ನಿರ್ಮಾಪಕ,ನಿರ್ದೇಶಕ, ಟಿ.ಎನ್.ಸೀ ರವರ, ಕರ್ನಾಟಕದ ಬಹಳ ಜನಪ್ರಿಯ ಧಾರಾವಾಹಿ, "ಮಗಳು ಜಾನಕಿ" ಎಂಬ ಕಿರುತೆರೆ ಧಾರಾವಾಹಿಯ ಕೊಡುಗೆ ಈಗಾಗಲೇ ೨೨೦ (೦೩,ಮೇ,೨೦೧೯) ಕಂತುಗಳನ್ನು ಯಶಸ್ವಿಯಾಗಿ ಮುಟ್ಟಿದೆ. ಇದರಲ್ಲಿ ಸುಧಾ ಬೆಳವಾಡಿಯವರು ಸಿಎಸ್ಪಿಯವರ ತಂಗಿ, ಶ್ಯಾಮಲಮ್ಮನಾಗಿ, ಮಧುಕರನ ಅತ್ತೆಯಾಗಿ, ಅತ್ಯುತ್ತಮ ಅಭಿನಯವನ್ನು ಕೊಟ್ಟು ರಸಿಕರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.