From Wikipedia, the free encyclopedia
ಸಿಕ್ಕಿಲ್ ಮಾಲಾ ಚಂದ್ರಶೇಖರ್ರವರು ದಕ್ಷಿಣ ಭಾರತದ ಕೊಳಲು ವಾದಕರು.ಮಾಲಾ ಚಂದ್ರಶೇಖರ್ ಸಂಗೀತ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ತಾಯಿ ಮತ್ತು ಚಿಕ್ಕಮ್ಮರವರಿಂದ ಸಂಗೀತವನ್ನು ಕಲಿತರು. ಇವರ ತಾಯಿ ಮತ್ತು ಚಿಕ್ಕಮ್ಮ ಸಿಕ್ಕಿಲ್ ಸಹೋದರಿಯರೆಂದು ಬಿರುದು ಪಡೆದಿದ್ದಾರೆ.[1]
ಇವರು ೨೩ನೇ ಆಗಸ್ಟ್ ೧೯೬೩ ರಂದು ಹೆಸರಾಂತ ಸಂಗೀತ ಕುಟುಂಬದಲ್ಲಿ ಜನಿಸಿದರು.
ಇವರು ತಮ್ಮ ಐದನೇ ವಯಸ್ಸಿನಲ್ಲಿ ಸಂಗೀತವನ್ನು ಗುರುಗಳಾದ ಪದ್ಮಶ್ರೀ ಸಂಗೀತ ಕಲಾನಿಧಿ ಶ್ರೀಮತಿ ಸಿಕ್ಕಿಲ್ ನೀಲಾ (ತಾಯಿ) ಮತ್ತು ಶ್ರೀಮತಿ ಸಿಕ್ಕಿಲ್ ಕುಂಜುಮಣಿ (ಚಿಕ್ಕಮ್ಮ) ರವರ ಬಳಿ ಕಲಿತರು.
ನಂತರ ೧೫ ವರ್ಷವಾಗುವವರೆಗೂ ಸಂಗೀತ ಅಭ್ಯಾಸವನ್ನು ಮಾಡಿ ತಮ್ಮ ರಂಗ ಪ್ರವೇಶಕ್ಕೆ ತಯಾರಾದರು[2]. ಇದಾದ ನಂತರ ಮಾಲಾರವರು ಭಾರತೀಯ ಆಕಾಶವಾಣಿಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ೧೯೮೦ರಲ್ಲಿ ದೂರದರ್ಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದ್ದರು.
ಇವರು ಚೆನ್ನೈನ ರೋಸರಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮಾಲಾರವರು ಏಳನೇ ತರಗತಿಗೆ ಬರುವವರೆಗೂ ಕೊಳಲು ನುಡಿಸುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಇವರು ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಇವರ ಶಾಲಾ ಶಿಕ್ಷಕರು ಈ ವಿಚಾರವನ್ನು ಗಣನೀಯವಾಗಿ ಪರಿಗಣೀಸಿದ್ದರು. ಮಾಲಾರವರು ನಂತರದ ದಿನಗಳಲ್ಲಿ ಶಾಲಾ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಶಾಲೆಯಲ್ಲಿ ಮಾಲಾರವರ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಜೀವಶಾಸ್ತ್ರವಾಗಿತ್ತು. ಇದು ಮುಂದೆ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಸಸ್ಯಶಾಸ್ತ್ರವನ್ನು ತೆಗೆದುಕೊಳ್ಳಲು ಪ್ರೋತ್ಸಾಹವನ್ನು ನೀಡಿತು. ಇವರ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಇದರ ಪರಿಣಾಮವಾಗಿ, ಸಂಗೀತದ ಬಗ್ಗೆ ಅವರಿಗೆ ಆಸಕ್ತಿ ಮುಡಿತು ಮತ್ತು ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಅವರಿಗೆ ಹೆಚ್ಚಿನ ವಿಶ್ವಾಸವನ್ನು ನೀಡಿತು. ಅದೇ ಅವಧಿಯಲ್ಲಿ, ಅವರು ಚೆನ್ನೈ ಮತ್ತು ಹೊರಗಿನ ಸಭೆಗಳಲ್ಲಿ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿದರು. ಪದವಿಯ ನಂತರ, ಅವರು ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಾಗಿ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.