ಸಿಂಧೂರ
From Wikipedia, the free encyclopedia
ಸಿಂಧೂರವು ಭಾರತೀಯ ಉಪಖಂಡದ ಒಂದು ಸಾಂಪ್ರದಾಯಿಕ ಇಂಗಲೀಕ ಕೆಂಪು ಬಣ್ಣದ ಅಥವಾ ಕೇಸರಿಕೆಂಪು ಬಣ್ಣದ ಸೌಂದರ್ಯವರ್ಧಕ ಪುಡಿ. ಸಾಮಾನ್ಯವಾಗಿ ಇದನ್ನು ಮದುವೆಯಾದ ಸ್ತ್ರೀಯರು ತಮ್ಮ ಕೂದಲಿನ ಮಧ್ಯದಲ್ಲಿ ಹಚ್ಚಿಕೊಳ್ಳುತ್ತಾರೆ.[೧] ಹಿಂದೂ ಸಮುದಾಯಗಳಲ್ಲಿ ಸಿಂಧೂರದ ಬಳಕೆಯು ಮಹಿಳೆಯು ವಿವಾಹಿತೆ ಎಂದು ಮತ್ತು ಸಾಮಾನ್ಯವಾಗಿ ಅದನ್ನು ಹಚ್ಚಿಕೊಳ್ಳದಿರುವುದು ವೈಧವ್ಯವನ್ನು ಸೂಚಿಸುತ್ತದೆ. ಸಿಂಧೂರವನ್ನು ದೇವರ ಪೂಜೆಯಲ್ಲಿಯೂ ಬಳಸಲಾಗುತ್ತದೆ, ವಿಶೇಷವಾಗಿ ಗಣೇಶನ ಪೂಜೆಯಲ್ಲಿ.



ಸಾಮಾನ್ಯವಾಗಿ ರಸಸಿಂಧೂರ, ಅರಿಶಿನ ಮತ್ತು ಸುಣ್ಣ ಸಾಂಪ್ರದಾಯಿಕ ಸಿಂಧೂರದ ಮುಖ್ಯ ಘಟಕವಾಗಿದೆ. ಕೆಲವು ವಾಣಿಜ್ಯಿಕ ಸಿಂಧೂರ ಉತ್ಪನ್ನಗಳು ಕೃತಕ ಘಟಕಾಂಶಗಳನ್ನು ಹೊಂದಿರುತ್ತವೆ, ಮತ್ತು ಇವುಗಳಲ್ಲಿ ಕೆಲವು ಸರಿಯಾದ ಮಾನದಂಡದನುಸಾರ ತಯಾರಾಗಿರುವುದಿಲ್ಲ ಮತ್ತು ಪಾದರಸ ಹಾಗೂ ಸೀಸವನ್ನು ಹೊಂದಿರಬಹುದು.
ಉಲ್ಲೇಖಗಳು
Wikiwand - on
Seamless Wikipedia browsing. On steroids.