From Wikipedia, the free encyclopedia
ಸಾರ್ವಭೌಮತ್ವ ಅಥವಾ ಪರಮಾಧಿಕಾರ ವೆಂದರೆ, ಒಂದು ಭೌಗೋಳಿಕ ಪ್ರದೇಶದ ಮೇಲೆ ಪರಮ, ಸ್ವತಂತ್ರ ಅಧಿಕಾರವನ್ನು ಹೊಂದಿರುವ ಸಾಮರ್ಥ್ಯ, ಉದಾಹರಣೆಗೆ ಭೂಪ್ರದೇಶ.[1][2] ಈ ಲಕ್ಷಣವನ್ನು ಆಳುವ ಹಾಗೂ ಕಾನೂನನ್ನು ರೂಪಿಸುವ ಅಧಿಕಾರದಲ್ಲಿ ಕಾಣಬಹುದು, ಇದು ಒಂದು ರಾಜಕೀಯ ಆಧಾರದ ಮೇಲೆ ಅವಲಂಬಿತವಾಗಿರುವುದರಿಂದ ಇದಕ್ಕೆ ಸ್ಪಷ್ಟ ಯಾವುದೇ ಕಾನೂನು ವಿವರಣೆ ಒದಗಿಸಲಾಗುವುದಿಲ್ಲ. ಈ ಕಲ್ಪನೆಯು ಇತಿಹಾಸದುದ್ದಕ್ಕೂ ಚರ್ಚೆಗೆ ಒಳಪಟ್ಟು, ವಾದವಿವಾದಕ್ಕೆ ಈಡಾಗುವುದರ ಜೊತೆಗೆ ಪ್ರಶ್ನಾರ್ಹ ವಿಷಯವಾಗಿದೆ, ರೋಮನ್ನರ ಕಾಲದಿಂದ ಹಿಡಿದು ಇಂದಿನವರೆಗೂ, ಇದು ತನ್ನ ಅರ್ಥನಿರೂಪಣೆ, ಪರಿಕಲ್ಪನೆ, ಹಾಗು ಅಂದಿನಿಂದ ಹಿಡಿದು ಇಂದಿನವರೆಗೂ ತನ್ನ ಬಳಕೆಯನ್ನು ಬದಲಾವಣೆ ಮಾಡಿಕೊಂಡು ಬಂದಿದೆ, ಅದರಲ್ಲೂ ವಿಶೇಷವಾಗಿ ದಾರ್ಶನಿಕ ಚಳವಳಿ ಯುಗದ ಅವಧಿಯಲ್ಲಿ. ರಾಷ್ಟ್ರ ಸಾರ್ವಭೌಮತ್ವವೆಂಬ ಪ್ರಸಕ್ತದ ಕಲ್ಪನೆಯನ್ನು ವೆಸ್ಟ್ಫಾಲಿಯದ ಒಪ್ಪಂದ(1648)ರಲ್ಲಿ ರೂಪಿಸಲಾಯಿತು, ರಾಷ್ಟಗಳಿಗೆ ಸಂಬಂಧಿಸಿದಂತೆ ಇದು, ಪ್ರಾದೇಶಿಕ ಸಮಗ್ರತೆ, ಗಡಿ ಅನುಲ್ಲಂಘನೀಯತೆ, ಹಾಗು ರಾಷ್ಟ್ರದ ಪರಮಾಧಿಕಾರದ (ಚರ್ಚಿನ ಅಧಿಕಾರವನ್ನು ಹೊರತುಪಡಿಸಿ) ಬಗ್ಗೆ ಮೂಲಭೂತ ನಿಯಮಗಳನ್ನು ಸಂಹಿತೆಯಾಗಿ ರಚಿಸಿತು. ಸಾರ್ವಭೌಮತ್ವ ವೆಂದರೆ, ಒಂದು ಕಾನೂನು ರೂಪಿಸುವ ಪರಮಾಧಿಕಾರ.
This article includes a list of references, but its sources remain unclear because it has insufficient inline citations. (July 2010) |
ಸಾರ್ವಭೌಮ ರಾಷ್ಟ್ರ ಎಂದರೆ ಯಾವುದೇ ರಾಷ್ಟ್ರದ ಅಧೀನದಲ್ಲೊ ಇರದೆ ಪರಮಾಧಿಕರ ಹೊಂದಿರುವುದು ಎಂದರ್ಥ.
ವಿವಿಧ ಸಂಸ್ಕೃತಿ ಹಾಗು ಸರ್ಕಾರಗಳು ಅರ್ಥವಾಗುವ ರೀತಿಯಲ್ಲಿ ಸಾರ್ವಭೌಮತ್ವದ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹೊಂದಿವೆ.
ರೋಮನ್ ನ್ಯಾಯಶಾಸ್ತ್ರಜ್ಞ ಉಲ್ಪಿಯನ್ ಈ ಕೆಳಕಂಡ ಅಂಶಗಳನ್ನು ಗಮನಿಸುತ್ತಾನೆ:
ಚಕ್ರವರ್ತಿಯು ಸಾರ್ವಭೌಮತ್ವದ ಸ್ವಾತಂತ್ರಾಧಿಕಾರದ ರೂಪವನ್ನು ಚಲಾವಣೆ ಮಾಡುತ್ತಾನೆ ಎಂದು ಉಲ್ಪಿಯನ್ ಅಭಿಪ್ರಾಯಪಡುತ್ತಾನೆ, ಆದಾಗ್ಯೂ, ಈ ಪದವು ಆತ ಖಚಿತವಾಗಿ ಬಳಕೆಮಾಡಲಿಲ್ಲ. ಉಲ್ಪಿಯನ್ ನ ಹೇಳಿಕೆಗಳು ಮಧ್ಯ ಯುರೋಪ್ ನಲ್ಲಿ ಪರಿಚಿತವಾಗಿದ್ದವು, ಆದರೆ ಸಾರ್ವಭೌಮತ್ವವೆಂಬುದು ಮಧ್ಯಕಾಲೀನ ಅವಧಿಯಲ್ಲಿ ಪ್ರಮುಖ ಕಲ್ಪನೆಯಾಗಿರಲಿಲ್ಲ. ಮಧ್ಯಕಾಲೀನ ಅವಧಿಯ ಅರಸರು ಸಾರ್ವಭೌಮತ್ವ ಹೊಂದಿರಲಿಲ್ಲ , ಕಡೆಪಕ್ಷ ಅವರ ಅಧಿಕಾರವು ಅಂಥಹ ಬಲಯುತವಾಗಿರಲಿಲ್ಲ, ಏಕೆಂದರೆ ಅವರುಗಳು ನಿರ್ಬಂಧಕ್ಕೆ ಒಳಗಾಗಿದ್ದರು, ಹಾಗು ತಮ್ಮ ಊಳಿಗಮಾನ್ಯ ವರ್ಗದೊಂದಿಗೆ ಅಧಿಕಾರ ಹಂಚಿಕೊಂಡಿದ್ದರು. ಇದಲ್ಲದೆ, ಇವರಿಬ್ಬರು ಸಂಪ್ರದಾಯಗಳ ನಿರ್ಬಂಧಕ್ಕೊಳಗಾಗಿದ್ದರು.
ಸಾರ್ವಭೌಮತ್ವವು ಮಧ್ಯಕಾಲೀನ ಅವಧಿಯಲ್ಲಿ, ಡೀಜ್ಯೂರಿಯಲ್ಲಿ (ಕಾನೂನುರೀತ್ಯಾ) ಶ್ರೀಮಂತವರ್ಗ ಹಾಗು ರಾಜವಂಶಸ್ಥರ ಹಕ್ಕುಗಳಾಗಿ ಅಸ್ತಿತ್ವದಲ್ಲಿತ್ತು, ಹಾಗು ಡೀಫ್ಯಾಕ್ಟೋ(ವಾಸ್ತವಿಕವಾಗಿ)ನಲ್ಲಿ, ಜೀವನದಲ್ಲಿ ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳಲು ವ್ಯಕ್ತಿಗಳಿಗೆ ಸಾಮಾರ್ಥ್ಯ ಹಾಗು ಹಕ್ಕನ್ನು ನೀಡಿತ್ತು.
ಸುಮಾರು 1380-1400ರಲ್ಲಿ, ಸ್ತ್ರೀ ಸಾರ್ವಭೌಮತ್ವದ ಬಗ್ಗೆ ಉಲ್ಲೇಖವು, ಜಿಯೋಫರಿ ಚಾಸರ್ ರ ಮಧ್ಯಕಾಲೀನ ಇಂಗ್ಲಿಷ್ ಸಂಗ್ರಹ ಕ್ಯಾಂಟರ್ಬರಿ ಟೇಲ್ಸ್ ನಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ದಿ ವೈಫ್ ಆಫ್ ಬಾತ್'ಸ್ ಟೇಲ್ ನಲ್ಲಿ ಕಂಡುಬರುತ್ತದೆ. [3]
ನಂತರ ಆರ್ಥರನ ಕಾಲದ ಇಂಗ್ಲಿಷ್ ರಮ್ಯಸಾಹಿತ್ಯ, ದಿ ವೆಡ್ಡಿಂಗ್ ಆಫ್ ಸರ್ ಗವೈನ್ ಅಂಡ್ ಡೇಮ್ ರಗ್ನೆಲ್ (ಸುಮಾರು. 1450),[4] ವೈಫ್ ಆಫ್ ಬಾತ್'ಸ್ ಟೇಲ್ ನ ಮಾದರಿಯಲ್ಲಿ ಸದೃಶವಾದ ಹೆಚ್ಚಿನ ಅಂಶಗಳನ್ನು ಬಳಸಿಕೊಳ್ಳುತ್ತದೆ, ಆದಾಗ್ಯೂ ಇದು ರಾಜ ಆರ್ಥರ್ ಹಾಗು ನೈಟ್ಸ್ ಆಫ್ ದಿ ರೌಂಡ್ ಟೇಬಲ್ ನ ಆಸ್ಥಾನದಲ್ಲಿ ಸನ್ನಿವೇಶ ಜರುಗುತ್ತದೆ. ಕಥೆಯನ್ನು ನೈಟ್ ಸರ್ ಗವೈನ್ ನ ಸುತ್ತ ಹೆಣೆಯಲಾಗಿದೆ, ಈತ ತನ್ನ ನವವಧು ಡೇಮ್ ರಗ್ನೆಲ್ ಗೆ, ಹೆಚ್ಚಿಗೆ ಹೆಂಗಸರೇ ಮೆಚ್ಚುವ,ಅಭಿಪ್ರಾಯಪಡುವ: ಸಾರ್ವಭೌಮತ್ವ ದಯಪಾಲಿಸುತ್ತಾನೆ.
We desire most from men,
From men both rich and poor,
To have sovereignty without lies.
For where we have sovereignty, all is ours,
Though a knight be ever so fierce,
And ever win mastery.
It is our desire to have master
Over such a sir.
Such is our purpose.—The Wedding of Sir Gawain and Dame Ragnell (c. 1450), [4]
ಸಾರ್ವಭೌಮತ್ವವು, 16ನೇ ಶತಮಾನದ ನಂತರದ ಭಾಗದಲ್ಲಿ ಪುನರುದಯಿಸಿತು, ಈ ಅವಧಿಯಲ್ಲಿ ಅಂತರ್ಯುದ್ಧಗಳು ಒಂದು ಬಲಯುತ ಕೇಂದ್ರಾಡಳಿತಕ್ಕೆ ಹಂಬಲ,ಆಸ್ಥೆ ಸೃಷ್ಟಿಸಿದವು, ಶ್ರೀಮಂತವರ್ಗದ ಹೆಸರಿನಲ್ಲಿ ರಾಜರು ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಬಯಸಿದರು, ಆಗ ಆಧುನಿಕ ರಾಷ್ಟ್ರ ರಾಜ್ಯದ ಉದಯವಾಯಿತು. ಜೀನ್ ಬೋಡಿನ್, ಭಾಗಶಃ ಫ್ರೆಂಚ್ ಧಾರ್ಮಿಕ ಯುದ್ಧಗಳಿಂದ ಉಂಟಾದ ಅವ್ಯವಸ್ಥೆಗೆ ಪ್ರತಿಕ್ರಿಯೆಯಾಗಿ; ಹಾಗು ಭಾಗಶಃ ಇಂಗ್ಲಿಷ್ ಅಂತರ್ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಥಾಮಸ್ ಹಾಬ್ಸ್, ಇಬ್ಬರೂ ಸಾರ್ವಭೌಮತ್ವದ ಬಗ್ಗೆ ತತ್ತ್ವಗಳನ್ನು ಪ್ರಸ್ತುತಪಡಿಸಿದರು, ಇವರಿಬ್ಬರು ನಿರಂಕುಶ ಪ್ರಭುತ್ವದ ರೂಪದಲ್ಲಿ ಬಲವಾದ ಕೇಂದ್ರೀಕೃತ ಅಧಿಕಾರಕ್ಕೆ ಕೋರಿಕೊಂಡರು. 1576ರ ತಮ್ಮ ಪ್ರಬಂಧ ಸಿಕ್ಸ್ ಲಿವ್ರೆಸ್ ಡೇ ಲಾ ರಿಪಬ್ಲಿಕ್ ("ಸಿಕ್ಸ್ ಬುಕ್ಸ್ ಆಫ್ ದಿ ರಿಪಬ್ಲಿಕ್") ನಲ್ಲಿ ಬೋಡಿನ್, ಸಾರ್ವಭೌಮತ್ವವು ರಾಷ್ಟ್ರಕ್ಕೆ ಸ್ವಭಾವತಃ ಅಂತರ್ಗತವಾಗಿದೆಯೆಂದು ವಾದಿಸುತ್ತಾರೆ, ಇದು:
ಜನರಿಂದ ಸಾರ್ವಭೌಮನಿಗೆ ಸಾರ್ವಭೌಮತ್ವವನ್ನು ವರ್ಗಾವಣೆ ಮಾಡುವ ಅಭಿಪ್ರಾಯವನ್ನು ಬೋಡಿನ್ ತಿರಸ್ಕರಿಸುತ್ತಾರೆ; ಸಾರ್ವಭೌಮನಿಗೆ ನೀಡಲಾಗುವ ನೈಸರ್ಗಿಕ ನಿಯಮ ಹಾಗು ದೈವದತ್ತವಾದ ಕಾನೂನು, ಆತನಿಗೆ ಆಳುವ ಹಕ್ಕನ್ನು ನೀಡುತ್ತದೆ. ಹಾಗು ಸಾರ್ವಭೌಮನು ದೈವದತ್ತವಾದ ಕಾನೂನು ಅಥವಾ ನೈಸರ್ಗಿಕ ನಿಯಮಕ್ಕಿಂತ ಉನ್ನತವಾಗಿರುವುದಿಲ್ಲ. ಈತ (ಅಂದರೆ ಇದರ ಪರಿಮಿತಿಯೊಳಗಿರುವುದಿಲ್ಲ) ಕೇವಲ ಪಾಸಿಟಿವ್ ಲಾಗಳಿಂದ ಮಿಗಿಲಾಗಿರುತ್ತಾನೆ, ಅಂದರೆ, ಮಾನವ ನಿರ್ಮಿತ ನಿಯಮಗಳು. ಸಾರ್ವಭೌಮನು ದೈವದತ್ತ ಹಾಗು ನೈಸರ್ಗಿಕ ನಿಯಮವನ್ನು ಪಾಲಿಸಬೇಕೆಂಬ ವಾಸ್ತವವು ಆತನ ಮೇಲೆ ನೈತಿಕ ನಿರ್ಬಂಧ ಹೇರುತ್ತದೆ. ಬೋಡಿನ್, ಫ್ರೆಂಚ್ ರಾಜಪ್ರಭುತ್ವದ ಲೋಯಿಸ್ ರೋಯಾಲ್ಸ್ ಎಂಬ ಮೂಲಭೂತ ನಿಯಮಗಳನ್ನೂ ಸಹ ಎತ್ತಿ ಹಿಡಿದ, ಇದು ಉತ್ತರಾಧಿಕಾರ, ನೈಸರ್ಗಿಕ ನಿಯಮಗಳು ಹಾಗು ಫ್ರೆಂಚ್ ಸಾರ್ವಭೌಮನ ಮೇಲೆ ನಿರ್ಬಂಧ ಹೇರುತ್ತಿದೆಯೇ ಎಂಬಂತಹ ವಿಷಯಗಳನ್ನು ವಿಧಿಬದ್ಧಗೊಳಿಸಿತು. ದೈವದತ್ತವಾದ ಹಾಗು ನೈಸರ್ಗಿಕ ನಿಯಮವನ್ನು ಕಾರ್ಯತಃ ಹೇಗೆ ಸಾರ್ವಭೌಮನ ಮೇಲೆ ಹೇರಬಹುದೆಂಬುದೇ ಬೋಡಿನ್ ತತ್ತ್ವದ ಒಂದು ಸಮಸ್ಯಾತ್ಮಕ ಲಕ್ಷಣವೆನಿಸಿತು: ಸಾರ್ವಭೌಮನ ಮೇಲೆ ಅಧಿಕಾರವನ್ನು ಹೇರುವ ಯಾವುದೇ ವ್ಯಕ್ತಿಯು ಆತನಿಗಿಂತ ಉನ್ನತ ಮಟ್ಟದಲ್ಲಿರಬೇಕು.
ನಿರಂಕುಶಾಧಿಕಾರತತ್ತ್ವಕ್ಕೆ ತನ್ನ ಬದ್ಧತೆಯ ಹೊರತಾಗಿಯೂ, ಬೋಡಿನ್, ಕಾರ್ಯತಃ ಸರ್ಕಾರವನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಕೆಲವು ಮಧ್ಯಮಪಂಥಿ ಅಭಿಪ್ರಾಯಗಳನ್ನು ನೀಡಿದ. ಸಾರ್ವಭೌಮನು ಯಾವುದೇ ನಿರ್ಬಂಧಕ್ಕೆ ಒಳಪಡದಿದ್ದರೂ, ಒಬ್ಬ ಕಾರ್ಯತಃ ಸಮಯಸಾಧಕನಾಗಿ, ಒಂದು ಸೆನೆಟ್ ಸಭೆಯನ್ನು ನಡೆಸುವುದು ಸೂಕ್ತ, ಸಭೆಯಲ್ಲಿ ಪಾಲ್ಗೊಂಡವರಿಂದ ಈತ ಸಲಹೆಯನ್ನು ಪಡೆಯಬಹುದು, ಕಾನೂನಿನ ಕಾರ್ಯೋಪಯೋಗಿ ಆಡಳಿತ ನಡೆಸುವುದು , ಹಾಗು ಜನರ ಜೊತೆ ಸಂಪರ್ಕವನ್ನು ಹೊಂದಲು ಎಸ್ಟೇಟ್ ಗಳನ್ನು ಬಳಸಿಕೊಳ್ಳುವುದು.
ಸಾರ್ವಭೌಮತ್ವವು ದೈವದತ್ತವಾಗಿ ಅನುಗ್ರಹಿಸಲಾಗಿದೆ ಎಂಬ ತನ್ನ ತತ್ತ್ವದೊಂದಿಗೆ, ಬೋಡಿನ್ ರಾಜರ ದೈವದತ್ತ ಅಧಿಕಾರದ ಉದ್ದೇಶಕ್ಕಾಗಿ ಪೂರ್ವಭಾವಿ ವ್ಯಾಖ್ಯೆ ನೀಡುತ್ತಾರೆ.
ಹಾಬ್ಸ್, ಲೆವಿಯಾಥನ್ (1651)ನಲ್ಲಿ ಸಾಮಾಜಿಕ ಒಪ್ಪಂದ ಸಿದ್ಧಾಂತದ ಆರಂಭಿಕ ರೂಪಾಂತರವನ್ನು ಪರಿಚಯಿಸುತ್ತಾನೆ, ಈತ "ಆಕ್ಷೇಪಾರ್ಹವಾದ, ಪಾಶವ ಹಾಗು ಕಿರಿದಾದ" ಜೀವನದ ಗುಣಮಟ್ಟವನ್ನು ಇತರರ ಸಹಕಾರವಿಲ್ಲದೆ ಜಯಿಸುವುದು ಹೇಗೆಂದು ವಾದಿಸುತ್ತಾನೆ, ಜನರು "ಲೋಕಹಿತ"ಕ್ಕಾಗಿ ಒಟ್ಟುಗೂಡಿ "ಸಾರ್ವಭೌಮನ [sic] ಅಧಿಕಾರಕ್ಕೆ" ಒಳಪಡಬೇಕು, ಇದು ಅವರನ್ನು ಸಮಾನ ಒಳಿತಿಗಾಗಿ ಕಾರ್ಯನಿರ್ವಹಿಸಲು ಬದ್ಧಗೊಳಿಸುತ್ತದೆ. ಈ ಸಮಯಾನುಸಾರಿತ್ವದ ವಾದವು, ಸಾರ್ವಭೌಮತ್ವದ ಆರಂಭಿಕ ಪ್ರತಿಪಾದಕರನ್ನು ಆಕರ್ಷಿಸಿತು. ಹಾಬ್ಸ್, ಸಾರ್ವಭೌಮತ್ವದ ಅರ್ಥನಿರೂಪಣೆಯು ಈ ರೀತಿ ಇರಬೇಕೆಂದು ತರ್ಕಿಸಿದ:
ನಿರಂಕುಶವಾಗಿರಬೇಕು: ಏಕೆಂದರೆ, ಸಾರ್ವಭೌಮನು ಯಾವಾಗ ನಿಯಮಗಳನ್ನು ಉಲ್ಲಂಘಿಸಿದ್ದಾನೆಂದು ತೀರ್ಮಾನಿಸಲು ಒಬ್ಬ ಹೊರ ನಿಯಂತ್ರಕನಿಂದ ಮಾತ್ರ ಸಾಧ್ಯ, ಅಂತಹ ಸಮಯದಲ್ಲಿ ಮಾತ್ರ ಆತನ ಮೇಲೆ ಷರತ್ತನ್ನು ಹೇರಲು ಸಾಧ್ಯ, ಈ ಪರಿಸ್ಥಿತಿಯಲ್ಲಿ ಸಾರ್ವಭೌಮನು ಅಂತಿಮ ನಿರ್ಧಾರವನ್ನು ಕೈಗೊಳ್ಳುವ ವ್ಯಕ್ತಿಯಾಗಿರುವುದಿಲ್ಲ.
ಹಾಬ್ಸ್ ರ ಆಧಾರ ಕಲ್ಪನೆಯೆಂದರೆ ರಾಜನಿಗೆ ಸಾರ್ವಭೌಮತ್ವವನ್ನು ಜನರು ತಮಗೆ ರಕ್ಷಣೆ ಒದಗಿಸಿದ್ದಕ್ಕಾಗಿ ಬದಲಾಗಿ ನೀಡುತ್ತಾರೆ, ರಾಜನು ಅವರನ್ನು ರಕ್ಷಿಸಲು ಸೋತುಹೋದಲ್ಲಿ, ಜನರು ಆತನ ಆಜ್ಞೆಯನ್ನು ಪಾಲಿಸಬೇಕಾದಂತಹ ನಿರ್ಬಂಧದಿಂದ ಮುಕ್ತರಾಗುತ್ತಾರೆ ಎಂದು ಹಾಬ್ಸ್ ತೀರ್ಮಾನಕ್ಕೆ ಬರುತ್ತಾನೆ.
ಬೋಡಿನ್ ಹಾಗು ಹಾಬ್ಸ್ ರ ಸಿದ್ಧಾಂತಗಳು ಸಾರ್ವಭೌಮತ್ವದ ಕಲ್ಪನೆಯನ್ನು ನಿರ್ಧಾರಕವಾಗಿ ರೂಪಿಸಿತು, ಇದನ್ನು ಸಾಮಾಜಿಕ ಒಪ್ಪಂದದ ಸಿದ್ಧಾಂತಗಳಲ್ಲಿ ಮತ್ತೆ ಗುರುತಿಸಿದಾಗ, ಉದಾಹರಣೆಗೆ ರೂಸೋರ (1712–1778) ಜನಪ್ರಿಯ ಸಾರ್ವಭೌಮತ್ವದ ಅರ್ಥನಿರೂಪಣೆಯಲ್ಲಿ(ಫ್ರ್ಯಾನ್ಸಿಸ್ಕೋ ಸೌರೆಜ್ ರ ಅಧಿಕಾರದ ಹುಟ್ಟು ಸಿದ್ಧಾಂತದಲ್ಲಿನ ಆರಂಭಿಕ ಪೂರ್ವನಿರ್ದಿಷ್ಟತೆಯೊಂದಿಗೆ) ಇರುವ ಒಂದೇ ಒಂದು ವ್ಯತ್ಯಾಸವೆಂದರೆ, ಜನರು ಕಾನೂನುಬದ್ಧ ಸಾರ್ವಭೌಮರೆಂದು ಇವರು ಪರಿಗಣಿಸುತ್ತಾರೆ. ಅಂತೆಯೇ, ಇದನ್ನು ಪರಭಾರೆ ಮಾಡಲಾಗುವುದಿಲ್ಲ - ರೂಸೋ, ಸಾರ್ವಭೌಮತ್ವದ ಹುಟ್ಟು ಹಾಗು ಅದರ ಬಳಕೆಯ ನಡುವಿನ ವ್ಯತ್ಯಾಸವನ್ನು ಖಂಡಿಸಿದರು, ಈ ವ್ಯತ್ಯಾಸದ ಆಧಾರದ ಮೇಲೆ ಸಾಂವಿಧಾನಿಕ ರಾಜಪ್ರಭುತ್ವ ಅಥವಾ ಪ್ರಾತಿನಿಧಿಕ ಪ್ರಜಾಪ್ರಭುತ್ವವು ಸ್ಥಾಪನೆಯಾಯಿತು. ನಿಕೊಲೋ ಮೈಕಾವೆಲಿ, ಥಾಮಸ್ ಹಾಬ್ಸ್, ಜಾನ್ ಲೋಕೆ, ಹಾಗು ಮಾಂಟೆಸ್ಕ್ಯೂ ಸಹ ಸಾರ್ವಭೌಮತ್ವದ ಕಲ್ಪನೆಯನ್ನು ಪ್ರಕಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಜೀನ್ ಜಾಕ್ವೆಸ್ ರೂಸೋರ ಎರಡನೇ ಪುಸ್ತಕ ಡು ಕಾಂಟ್ರಾಟ್ ಸೋಶಿಯಲ್, ಔ ಪ್ರಿನಿಪೆಸ್ ಡು ಡ್ರೋಯಿಟ್ ಪೊಲಿಟೀಕ್ (1762), ಸಾರ್ವಭೌಮತ್ವ ಹಾಗು ಅದರ ಹಕ್ಕುಗಳ ಬಗ್ಗೆ ವಿವರಣೆ ನೀಡುತ್ತದೆ. ಒಂದು ಸಮಾನ ಇಚ್ಛೆಯಂತೆ, ಸಾರ್ವಭೌಮತ್ವವನ್ನು ಪರಭಾರೆ ಮಾಡಲಾಗುವುದಿಲ್ಲ, ಏಕೆಂದರೆ ಸಮಾನ ಇಚ್ಛೆಯನ್ನು ವರ್ಗಾವಣೆ ಮಾಡಲಾಗುವುದಿಲ್ಲ; ಇದು ಅವಿಭಾಜ್ಯವಾಗಿರುತ್ತದೆ, ಏಕೆಂದರೆ ಇದು ಅತ್ಯಗತ್ಯವಾಗಿ ಸಾರ್ವತ್ರಿಕವಾಗಿರುತ್ತದೆ; ಇದು ದೋಷಾತೀತವಾಗಿರುವುದರ ಜೊತೆಗೆ ಯಾವಾಗಲೂ ಸರಿಯಾಗಿರುತ್ತದೆ, ಸಮಾನ ಆಸಕ್ತಿಯಿಂದ ತನ್ನ ಬಲದಲ್ಲಿ ನಿರ್ಧಾರಿತವಾಗಿರುತ್ತದೆ ಹಾಗು ಸೀಮಿತವಾಗಿರುತ್ತದೆ; ಇದು ಕಾನೂನಿನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಸಮಾನ ಆಸಕ್ತಿಯ ಕೆಲವು ವಸ್ತುಗಳಿಗೆ ಸಂಬಂಧಿಸಿದಂತೆ ಕಾನೂನು, ಸಮಾನ ಇಚ್ಛೆಯ ನಿರ್ಧಾರವಾಗಿರುತ್ತದೆ, ಆದರೆ ಸಾಮಾನ್ಯ ಲಿಖಿತ ಸೂಚಿಯು ಯಾವಾಗಲೂ ಸರಿಯಾಗಿದ್ದು ಕೇವಲ ಒಳಿತನ್ನು ಬಯಸುವುದರಿಂದ, ಇದರ ತೀರ್ಪು ಯಾವಾಗಲೂ ಅರಿವನ್ನು ಉಂಟುಮಾಡುವುದಿಲ್ಲ, ಪರಿಣಾಮವಾಗಿ ಇದು ಸಮಾನವಾದ ಒಳಿತು ಎಲ್ಲಿರುತ್ತದೆಂಬುದನ್ನು ಇದು ಪರಿಗಣಿಸುವುದಿಲ್ಲ; ಈ ಕಾರಣಕ್ಕಾಗಿ ಒಬ್ಬ ಶಾಸಕನ ಅಗತ್ಯವಿರುತ್ತದೆ. ಆದರ ಒಬ್ಬ ಶಾಸಕನಿಗೆ, ಖುದ್ದು ಯಾವುದೇ ಅಧಿಕಾರವಿರುವುದಿಲ್ಲ; ಈತ ಕೇವಲ ಕಾನೂನುಗಳ ಕರಡುಪ್ರತಿ ಮಾಡುವ ಹಾಗು ಪ್ರಸ್ತಾಪಿಸುವ ಒಬ್ಬ ಮಾರ್ಗದರ್ಶಕನಾಗಿರುತ್ತಾನೆ, ಆದರೆ ಕೇವಲ ಜನರಿಗೆ ಇದನ್ನು ರೂಪಿಸುವ ಹಾಗು ನಿರ್ಬಂಧಿಸುವ ಅಧಿಕಾರವಿರುತ್ತದೆ.(ಅಂದರೆ, ಸಾರ್ವಭೌಮಾಧಿಕಾರ ಉಳ್ಳ ಅಥವಾ ಸಾಮಾನ್ಯ ಲಿಖಿತ ಸೂಚಿ)
ರೂಸೋ, ತನ್ನ 1763ರ ಆಫ್ ದಿ ಸೋಶಿಯಲ್ ಕಾಂಟ್ರ್ಯಾಕ್ಟ್ ನ ಪ್ರಬಂಧದಲ್ಲಿ[5] "ರಾಷ್ಟ್ರದ ಬೆಳವಣಿಗೆಯಲ್ಲಿ ನ್ಯಾಸದರ್ಶಿಗಳಿಗೆ ಹೆಚ್ಚಿನ ಸಾರ್ವಜನಿಕ ಅಧಿಕಾರದ ನೀಡಿಕೆಯೆಂದರೆ ಅಧಿಕಾರದ ದುರುಪಯೋಗವೆಂದೆ ಅರ್ಥ, ಸರ್ಕಾರವು ಹೆಚ್ಚಿನ ಜನಬಲವನ್ನು ಹೊಂದಿದ್ದರೆ, ಇದಕ್ಕೆ ಬದಲಾಗಿ ಸಾರ್ವಭೌಮತ್ವವು ಸರ್ಕಾರವನ್ನು ನಿರ್ಬಂಧಿಸುವ ಹೆಚ್ಚಿನ ಬಲವನ್ನು ಹೊಂದಿರಬೇಕು," ಜೊತೆಗೆ ಸಾರ್ವಭೌಮನು "ಅದ್ಭುತವಾದ ಗುಣಗಳನ್ನು ಹೊಂದಿರುವ ಒಬ್ಬ ಸಂಚಿತ ವ್ಯಕ್ತಿ"(ಪುಸ್ತಕ II, ಅಧ್ಯಾಯ I), ಈ ಗಣರ "ಸಾಮಾನ್ಯ ಇಚ್ಚೆಯ" ಪರಿಣಾಮದಿಂದ ಆಯ್ಕೆಯಾಗಿರುತ್ತಾನೆ, ಜೊತೆಗೆ "ಯಾವುದೇ ಮನುಷ್ಯ, ಆತ ಯಾರೇ ಆಗಿರಲಿ, ತನ್ನದೇ ಆದ ಪ್ರಕಾರಗಳನ್ನು ಹೊಂದಿದ್ದರೆ, ಅದು ಕಾನೂನು ಎನಿಸಿಕೊಳ್ಳುವುದಿಲ್ಲ" (ಪುಸಕ II, ಅಧ್ಯಾಯ VI) - ಹಾಗು ಇದಲ್ಲದೆ ಇದರ ಸ್ವೀಕರಣದ ಬಗ್ಗೆ ವಿಶೇಷಿಸುತ್ತದೆ, ಜನರು ಸಮಾನ ಇಚ್ಛೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಪಕ್ಷಪಾತವಿಲ್ಲದ ಮಾರ್ಗವನ್ನು ಅನುಸರಿಸುತ್ತಾರೆ. ಈ ರೀತಿಯಾಗಿ ಕಾನೂನು ನಿಯಮ, "ಒಬ್ಬ ಸಾರ್ವಭೌಮನಿಲ್ಲದೆ ಯಾವುದೇ ಕಾನೂನಿಲ್ಲ." ಸಾರ್ವಭೌಮತ್ವವು ವೆಸ್ಟ್ಫಾಲಿಯ ಒಪ್ಪಂದಗಳು ಹಾಗು ಮೂವತ್ತು ವರ್ಷಗಳ ಯುದ್ಧಗಳ ಕಲ್ಪನೆಯಿಂದ ಆರಂಭವಾಯಿತು.
1789ರ ಫ್ರೆಂಚ್ ಕ್ರಾಂತಿಯು ಸಾರ್ವಭೌಮತ್ವದ ಪ್ರತ್ಯಕ್ಷಸ್ವಾಮ್ಯವನ್ನು, ಸಾರ್ವಭೌಮನಿಂದ ರಾಷ್ಟ್ರ ಹಾಗು ಅದರಲ್ಲಿರತಕ್ಕ ಜನರಿಗೆ ವರ್ಗಾವಣೆ ಮಾಡಿತು.
ಕಾರ್ಲ್ ಸ್ಚ್ಮಿಟ್ಟ್(1888-1985), ಸಾರ್ವಭೌಮತ್ವವನ್ನು "ಸ್ಟೇಟ್ ಆಫ್ ಎಕ್ಸೆಪ್ಶನ್" ಅನ್ನು ನಿರ್ಧರಿಸುವ ಅಧಿಕಾರವೆಂದು ವರ್ಣಿಸುತ್ತಾನೆ, ಈ ಪ್ರಯತ್ನದಲ್ಲಿ, ಗಿಯೋರ್ಗಿಯೋ ಅಗಮ್ಬೇನ್, ವಾಲ್ಟರ್ ಬೆಂಜಮಿನ್ ರ ಥಿಯರಿ ಆಫ್ ವೈಲೆನ್ಸ್ ಗೆ ವಿರುದ್ಧವಾಗಿ ಇದು ಕಾನೂನಿನಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದು ವಾದಿಸುತ್ತಾನೆ. ಜಾರ್ಜಸ್ ಬಟೈಲ್ಲೇ ಅವರ ಸಾರ್ವಭೌಮತ್ವದ ಅಸಾಂಪ್ರದಾಯಿಕ ಕಲ್ಪನೆಯನ್ನು "ಸಾರ್ವಭೌಮತ್ವ ವಿರೋಧಿ" ಎಂದು ಹೇಳಬಹುದು, ಇದು ಹಲವು ಚಿಂತಕರನ್ನು ಉತ್ತೇಜಿಸಿತು, ಉದಾಹರಣೆಗೆ ಜಾಕ್ವೆಸ್ ಡೆರ್ರಿಡಾ, ಅಗಮ್ಬೇನ್ ಅಥವಾ ಜೀನ್-ಲುಕ್ ನ್ಯಾನ್ಸಿ
“ | There exists perhaps no conception the meaning of which is more controversial than that of sovereignty. It is an indisputable fact that this conception, from the moment when it was introduced into political science until the present day, has never had a meaning which was universally agreed upon. | ” |
ಸಾರ್ವಭೌಮತ್ವದ ಒಂದು ಪ್ರಮುಖ ಅಂಶವೆಂದರೆ ಅದರ ನಿರಂಕುಶತ್ವ ದ ಮಟ್ಟ. ಒಂದು ಪರಮಾಧಿಕಾರವು, ಎಲ್ಲವನ್ನು ನಿಯಂತ್ರಿಸುವ ಹಾಗು ತನ್ನ ಆಡಳಿತ ಪ್ರದೇಶದಲ್ಲಿ ಪ್ರತಿ ಚಟುವಟಿಕೆಗೆ ಇರುವ ಅಪರಿಮಿತ ಹಕ್ಕಿನಿಂದಾಗಿ ನಿರಂಕುಶ ಸಾರ್ವಭೌಮತ್ವವನ್ನು ಹೊಂದಿರುತ್ತದೆ. ಇದರರ್ಥ ಇದು ಸಂವಿಧಾನದಿಂದಾಗಲಿ, ಪೂರ್ವಾಧಿಕಾರಿಗಳು ರೂಪಿಸಿದ ಕಾನೂನುಗಳಿಂದಾಗಲಿ, ಸಂಪ್ರದಾಯದಿಂದಾಗಲಿ ನಿರ್ಬಂಧಕ್ಕೆ ಒಳಪಟ್ಟಿರುವುದಿಲ್ಲ, ಜೊತೆಗೆ ಕಾನೂನಿನ ಯಾವುದೇ ಕ್ಷೇತ್ರಗಳು ಅಥವಾ ನಡವಳಿಕೆಯನ್ನು ತನ್ನ ಕ್ಷೇತ್ರವ್ಯಾಪ್ತಿಯಿಂದಾಚೆಗಿದೆ ಎಂದು ಪ್ರತ್ಯೇಕಿಸಿಲ್ಲ. ಉದಾಹರಣೆಗೆ, ಪರಮಾಧಿಕಾರದಿಂದ ಸ್ವತಂತ್ರವಾಗಿ ತಮ್ಮ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರಿಗೆ ಕೆಲವು ಸಂಗತಿಗಳ ಮೇಲೆ ಹಕ್ಕನ್ನು ಖಾತರಿ ಮಾಡಿರುವುದಿಲ್ಲ, ಪುರಸಭೆಗಳಿಗೆ ಕೆಲವೊಂದು ಸ್ಥಳೀಯ ಸಂಗತಿಗಳಲ್ಲಿ ಹಸ್ತಕ್ಷೇಪ ಮಾಡಲು ಸ್ವಾತಂತ್ರ್ಯವಿರುವುದಿಲ್ಲ, ಮುಂತಾದವು. ತಾತ್ವಿಕ ಸಿದ್ಧಾಂತಿಗಳು ನಿರಂಕುಶಪ್ರಭುತ್ವದ ಅಗತ್ಯ ಅಥವಾ ಅಪೇಕ್ಷಣೀಯತೆಯ ಮೇಲೆ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಐತಿಹಾಸಿಕವಾಗಿ, ಯಾವುದೇ ಪರಮಾಧಿಕಾರವು ಸಂಪೂರ್ಣವಾದ ನಿರಂಕುಶಪ್ರಭುತ್ವವನ್ನು ಪ್ರತಿಪಾದಿಸಿಲ್ಲ, ಆದರೆ ವಾಸ್ತವವಾಗಿ ಅಧಿಕಾರವನ್ನು ನಿರ್ಬಂಧಿಸಲು ಮಾತ್ರ ಅವಕಾಶ ನೀಡಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಕಾನೂನುವಾದಿ ಅರ್ಥದಲ್ಲಿ ಸಾರ್ವಭೌಮತ್ವದ ಮುಖ್ಯ ಅಂಶವೆಂದರೆ ನ್ಯಾಯವ್ಯಾಪ್ತಿಯ ಪ್ರತ್ಯೇಕತೆ . ನಿರ್ದಿಷ್ಟವಾಗಿ, ಒಬ್ಬ ಪರಮಾಧಿಕಾರಿಯು ಒಂದು ನಿರ್ಣಯವನ್ನು ಕೈಗೊಂಡರೆ, ಇದನ್ನು ಸಾಧಾರಣವಾಗಿ ಉನ್ನತ ಅಧಿಕಾರಿಗಳು ತಳ್ಳಿಹಾಕುವಂತಿಲ್ಲ, ಸಾಮಾನ್ಯವಾಗಿ ಮತ್ತೊಂದು ರಾಷ್ಟ್ರವೂ ಸಹ ತಿರಸ್ಕರಿಸುವಂತಿಲ್ಲ.
ಡೀಜ್ಯೂರಿ , ಅಥವಾ ಕಾನೂನುರೀತ್ಯಾ , ಸಾರ್ವಭೌಮತ್ವವೆಂದರೆ, ಒಂದು ರಾಷ್ಟ್ರ ಪ್ರಜೆಗಳ ಮೇಲೆ ಏಕಮಾತ್ರವಾಗಿ ಅಧಿಕಾರವನ್ನು ಚಲಾವಣೆ ಮಾಡುವ ಸೈದ್ಧಾಂತಿಕ ಹಕ್ಕು.
ಡೀಫ್ಯಾಕ್ಟೋ , ಅಥವಾ ವಾಸ್ತವಿಕವಾದ ಸಾರ್ವಭೌಮತ್ವವು, ವಾಸ್ತವವಾಗಿ ನಿಯಂತ್ರಣವು ಅಸ್ತಿತ್ವದಲ್ಲಿದೆಯೇ ಎಂಬ ಅಂಶಕ್ಕೆ ಸಂಬಂಧಿಸಿದೆ. ಇದನ್ನು ಎರಡು ರೀತಿಯಾಗಿ ಸೂಚಿಸಬಹುದು:
ಸಾಮಾನ್ಯವಾಗಿ ಸಾರ್ವಭೌಮತ್ವಕ್ಕೆ ಅಧಿಕಾರವನ್ನು ಚಲಾಯಿಸಲು ಕೇವಲ ಕಾನೂನು ಹಕ್ಕೊಂದೇ ಅಲ್ಲ, ಇಂತಹ ಅಧಿಕಾರವನ್ನು ವಾಸ್ತವವಾಗಿ ಚಲಾಯಿಸುವ ಹಕ್ಕಿರುತ್ತದೆ. ಅದೆಂದರೆ, "ವಾಸ್ತವಿಕವಾದ ಸಾರ್ವಭೌಮತ್ವವಿಲ್ಲದೆ ಕಾನೂನುರೀತ್ಯಾ ಸಾರ್ವಭೌಮತ್ವವಿರುವುದಿಲ್ಲ." ಅರ್ಥಾತ್, ಸಾರ್ವಭೌಮನೆಂಬ ಪ್ರತಿಪಾದನೆ/ಘೋಷಣೆ, ಅಲ್ಲದೆ ಕೇವಲ ಪರಮಾಧಿಕಾರದ ಬಲವು ಕೇವಲ ಸಾಕಾಗುವುದಿಲ್ಲ; ಸಾರ್ವಭೌಮತ್ವಕ್ಕೆ ಎರಡೂ ಅಂಶಗಳ ಅಗತ್ಯವಿರುತ್ತದೆ.
ಆಂತರಿಕ ಸಾರ್ವಭೌಮತ್ವವೆಂದರೆ, ಸಾರ್ವಭೌಮತ್ವದ ಅಧಿಕಾರವನ್ನು ಹೊಂದಿರುವವನು ಹಾಗು ಆತನ ಪ್ರಜೆಗಳ ನಡುವಿನ ಸಂಬಂಧ. ಇದಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿಷಯವೆಂದರೆ ಕಾನೂನು ಸಮ್ಮತಿ: ಒಂದು ರಾಜಕೀಯ ಅಂಗವು (ಅಥವಾ ಒಬ್ಬ ವ್ಯಕ್ತಿ) ಯಾವ ಹಕ್ಕಿನಿಂದ ತನ್ನ ಪ್ರಜೆಗಳ ಮೇಲೆ ಅಧಿಕಾರವನ್ನು ಚಲಾಯಿಸುತ್ತದೆ? ಸಂಭವನೀಯ ಉತ್ತರಗಳು ಹೀಗಿವೆ: ರಾಜರ ದೈವದತ್ತ ಅಧಿಕಾರ ಅಥವಾ ಸಾಮಾಜಿಕ ಒಪ್ಪಂದದ ಮೂಲಕ(ಜನಪ್ರಿಯ ಸಾರ್ವಭೌಮತ್ವದ ವಿಧ)
ಬಾಹ್ಯ ಸಾರ್ವಭೌಮತ್ವವೆಂದರೆ, ಒಂದು ಪರಮಾಧಿಕಾರ ಹಾಗು ಇತರ ರಾಷ್ಟ್ರಗಳ ನಡುವಿನ ಸಂಬಂಧ. ಯಾವುದೇ ಒಂದು ಭೂಪ್ರದೇಶದ ಮೇಲೆ ಒಂದು ರಾಜಕೀಯ ಅಸ್ತಿತ್ವವು ಸಾರ್ವಭೌಮತ್ವವನ್ನು ಹೊಂದಿದೆ ಎಂದು ಇತರ ರಾಷ್ಟ್ರಗಳು ನಿರ್ಧರಿಸುವಲ್ಲಿ ಈ ವಿಧದ ನಿರ್ಣಾಯಕ ಅಂಶವನ್ನು ಬಳಕೆಮಾಡುತ್ತದೆ, ಉದಾಹರಣೆಗೆ ಯುನೈಟೆಡ್ ಕಿಂಗ್ಡಮ್, ಇದನ್ನು ರಾಷ್ಟ್ರವು ಈ ಕೆಳಕಂಡ ಅಂಶಗಳನ್ನು ನಿರ್ಧರಿಸುವಾಗ ಮಾದರಿ ವಿಧಾನವಾಗಿ ಬಳಕೆ ಮಾಡಿಕೊಳ್ಳುತ್ತವೆ:
“ | "Sovereignty." A government which exercises de facto administrative control over a country and is not subordinate to any other government in that country is a foreign sovereign state. | ” |
— (The Arantzazu Mendi, [1939] A.C. 256), Strouds Judicial Dictionary |
ಬಾಹ್ಯ ಸಾರ್ವಭೌಮತ್ವವು, ಅಂತಾರಾಷ್ಟ್ರೀಯ ಕಾನೂನಿನಲ್ಲಿ ಉದ್ಭವಿಸುವ ಸಮಸ್ಯೆಗಳೊಂದಿಗೆ ಸಂಬಂಧವನ್ನು ಹೊಂದಿದೆ, ಉದಾಹರಣೆಗೆ: ಎಂದಾದರೂ, ಒಂದು ರಾಷ್ಟ್ರವು ಮತ್ತೊಂದರ ಭೂಪ್ರದೇಶಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವುದು ಅನುಜ್ಞಾರ್ಹವೆ?
ಥರ್ಟಿ ಇಯರ್ಸ್ ವಾರ್ ನ ನಂತರ, ಭೂಖಂಡದ ಹೆಚ್ಚಿನ ಭಾಗದಲ್ಲಿ ಯುರೋಪಿಯನ್ ಧಾರ್ಮಿಕ ಘರ್ಷಣೆಗಳು ಗೊಂದಲಗಳನ್ನು ಉಂಟುಮಾಡಿದವು, 1648ರಲ್ಲಿ ಸ್ಥಾಪನೆಯಾದ ವೆಸ್ಟ್ಫಾಲಿಯದ ಶಾಂತಿ ಒಪ್ಪಂದವು ಪ್ರಾದೇಶಿಕ ಸಾರ್ವಭೌಮತ್ವದ ಕಲ್ಪನೆಯನ್ನು ಇತರ ರಾಷ್ಟ್ರಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವ ಸಿದ್ಧಾಂತವನ್ನು ರೂಪಿಸಿತು, ಇದನ್ನು ವೆಸ್ಟ್ಫಾಲಿಯನ್ ಸಾರ್ವಭೌಮತ್ವವೆಂದು ಕರೆಯಲಾಗುತ್ತದೆ. ಇದು ಕುಯಿಯುಸ್ ರೆಗಿಯೋ, ಇಯುಸ್ ರೆಲಿಗಿಯೋ ತತ್ತ್ವದ ಒಂದು ಸ್ವಾಭಾವಿಕ ವಿಸ್ತರಣೆಗೆ ಕಾರಣವಾಯಿತು (ಯಾರ ಜಗತ್ತೋ, ಅವರ ಧರ್ಮ), ಜೊತೆಗೆ ಇದು ರೋಮನ್ ಕ್ಯಾಥೊಲಿಕ್ ಚರ್ಚ್ ಗೆ ಹಲವು ಯುರೋಪಿಯನ್ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಹೆಚ್ಚಿನ ಅರ್ಹತೆಯನ್ನು ನೀಡಲಿಲ್ಲ.
ಅಂತಾರಾಷ್ಟ್ರೀಯ ಕಾನೂನಿನಲ್ಲಿ, ಸಾರ್ವಭೌಮತ್ವವೆಂದರೆ, ಸರ್ಕಾರವು ತನ್ನ ಭೂಪ್ರದೇಶ ಅಥವಾ ಭೌಗೋಳಿಕ ಪ್ರದೇಶ ಅಥವಾ ಗಡಿಯೊಳಗೆ ತನ್ನ ವ್ಯವಹಾರಗಳ ಮೇಲೆ ಸಂಪೂರ್ಣವಾದ ನಿಯಂತ್ರಣವನ್ನು ಹೊಂದಿರುತ್ತವೆ. ಒಂದು ನಿರ್ದಿಷ್ಟ ಅಸ್ತಿತ್ವವವು ಸಾರ್ವಭೌಮತ್ವವೇ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಂಶವು ನಿಖರವಾದ ವಿಜ್ಞಾನವೆನಿಸಿಕೊಳ್ಳುವುದಿಲ್ಲ, ಆದರೆ ಇದು ಸಾಮಾನ್ಯವಾಗಿ ರಾಜತಾಂತ್ರಿಕ ವಿವಾದದ ಒಂದು ವಿಷಯವಾಗಿರುತ್ತದೆ. ಡೀಜ್ಯೂರಿ ಹಾಗು ಡೀಫ್ಯಾಕ್ಟೋ ಸಾರ್ವಭೌಮತ್ವವು ಸಂಬಂಧಿತ ಸ್ಥಳ ಹಾಗು ಸಮಯದಲ್ಲಿ ಅಸ್ತಿತ್ವದಲ್ಲಿರುತ್ತದೆ. ಎಂಬ ನಿರೀಕ್ಷೆ ಇರುತ್ತದೆ, ಜೊತೆಗೆ ಉಳಿದವು ಅದೇ ಸಂಘಟನೆಯಲ್ಲಿ ಉಳಿಯುತ್ತವೆ. ವಿದೇಶಿ ಸರ್ಕಾರಗಳು ಒಂದು ಭೂಪ್ರದೇಶದ ಮೇಲೆ ಆ ರಾಷ್ಟ್ರದ ಸಾರ್ವಭೌಮತ್ವವನ್ನು ಗುರುತಿಸುತ್ತವೆ , ಅಥವಾ ಗುರುತಿಸಲು ನಿರಾಕರಿಸುತ್ತವೆ.
ಉದಾಹರಣೆಗೆ, ತಾತ್ತ್ವಿಕವಾಗಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಗು ರಿಪಬ್ಲಿಕ್ ಆಫ್ ಚೀನಾ ಎರಡೂ, ಚೀನಾದ ಮುಖ್ಯಭೂಮಿ ಹಾಗು ತೈವಾನ್ ನ ಸಂಪೂರ್ಣ ಭೂಪ್ರದೇಶದ ಮೇಲೆ ತಮಗೆ ಪರಮಾಧಿಕಾರವಿದೆಯೆಂದು ಪರಿಗಣಿಸುತ್ತವೆ. ಕೆಲವು ವಿದೇಶಿ ಸರ್ಕಾರಗಳು ರಿಪಬ್ಲಿಕ್ ಆಫ್ ಚೀನಾವನ್ನು ಕಾನೂನುಬದ್ಧವಾದ ರಾಜ್ಯವೆಂದು ಗುರುತಿಸಿದರೆ, ಇತ್ತೀಚಿಗೆ ಕೆಲವು ಸರ್ಕಾರಗಳು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಕಾನೂನುಬದ್ಧ ರಾಜ್ಯವೆಂದು ಗುರುತಿಸುತ್ತವೆ. ಆದಾಗ್ಯೂ, ಕಾನೂನುರೀತ್ಯಾ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಕೇವಲ ಚೀನಾದ ಮುಖ್ಯಭೂಮಿಯ ಮೇಲೆ ತನ್ನ ಅಧಿಕಾರ ಹೊಂದಿದೆ, ತೈವಾನ್ ನ ಮೇಲಲ್ಲ, ಈ ನಡುವೆ ರಿಪಬ್ಲಿಕ್ ಆಫ್ ಚೀನಾ ಕೇವಲ ತೈವಾನ್ ಹಾಗು ಕೆಲವು ಹೊರವಲಯದಲ್ಲಿರುವ ದ್ವೀಪಗಳ ಮೇಲೆ ತನ್ನ ಅಧಿಕಾರವನ್ನು ಹೊಂದಿದೆ, ಚೀನಾದ ಮುಖ್ಯಭೂಮಿಯ ಮೇಲಲ್ಲ. ಕೇವಲ ಸಾರ್ವಭೌಮತ್ವದ ಉನ್ನತ ವರ್ಗಗಳ ನಡುವೆ ಮಾತ್ರ ರಾಯಭಾರಿಗಳು ಕಾರ್ಯನಿರ್ವಹಿಸುವುದರಿಂದ, ಪೀಪಲ್ಸ್ ರಿಪಬ್ಲಿಕ್ ಎಂದು ಗುರುತಿಸುವ ರಾಷ್ಟ್ರಗಳು ರಿಪಬ್ಲಿಕ್ ನೊಂದಿಗೆ ಸಾಮಾನ್ಯವಾಗಿ ವಾಸ್ತವಿಕವಾದ ರಾಜತಾಂತ್ರಿಕ ಸಂಬಂಧಗಳನ್ನು ಸ್ವಾಗತಿಸುತ್ತದೆ, ಕಾನೂನುರೀತ್ಯಾ ಸಂಬಂಧಗಳನ್ನಲ್ಲ, ಇದು ಅಲ್ಲಿನ ರಾಯಭಾರ ಕಚೇರಿಗಳಿಗಿಂತ ಹೆಚ್ಚಾಗಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ತೈವಾನ್ ನಂತಹ "ಪ್ರಾತಿನಿಧಿಕ ಕಚೇರಿಗಳನ್ನು" ಪಾಲಿಸಿಕೊಂಡು ಬರುತ್ತದೆ.
ಸಾರ್ವಭೌಮತ್ವದ ಅಂಗವು ಯಾವುದೇ ಭೂಪ್ರದೇಶವನ್ನು ಹೊಂದಿರದಿದ್ದರೂ ಅಥವಾ ಅದರ ಭೂಪ್ರದೇಶವನ್ನು ಇನ್ನೊಂದು ರಾಷ್ಟ್ರವು ಭಾಗಶಃ ಅಥವಾ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರೂ ಸಹ ಸಾರ್ವಭೌಮತ್ವವನ್ನು ಗುರುತಿಸಬಹುದು. 1870ರಲ್ಲಿ ಇಟಲಿಯಿಂದ ಪೇಪಲ್ ರಾಜ್ಯಗಳ ಮೇಲೆ ಆಕ್ರಮಣ ಹಾಗು 1929ರಲ್ಲಿ ಸಹಿ ಹಾಕಲಾದ ಲಾಟೆರನ್ ಒಪ್ಪಂದಗಳ ನಡುವಿನಲ್ಲಿ ಹೋಲಿ ಸೀಯು ಇಂತಹ ಪರಿಸ್ಥಿತಿಯಲ್ಲಿತ್ತು, ಇದು ತನ್ನದೇ ಆದ ಯಾವುದೇ ಭೂಪ್ರದೇಶವನ್ನು ಹೊಂದಿರದಿದ್ದರೂ ಸಹ ಇದನ್ನು ಹಲವು ರಾಜ್ಯಗಳು ಪರಮಾಧಿಕಾರವುಳ್ಳ ಪ್ರದೇಶವೆಂದು ಗುರುತಿಸಿದವು.(ಹೆಚ್ಚಾಗಿ ರೋಮನ್ ಕ್ಯಾಥೊಲಿಕರು) - ಈ ಪರಿಸ್ಥಿತಿಯು ಲಾಟೆರನ್ ಒಪ್ಪಂದಗಳಿಗೆ, ವ್ಯಾಟಿಕನ್ ನಗರದ ಮೇಲೆ ಹೋಲಿ ಸೀಗೆ ಸಾರ್ವಭೌಮತ್ವವನ್ನು ಕಾನೂನುರೀತ್ಯಾ ವರ್ಗಾವಣೆ ಮಾಡುವಂತಾಯಿತು. ಮತ್ತೊಂದು ಉದಾಹರಣೆಯೆಂದರೆ, ಆದಾಗ್ಯೂ ಸಾಮಾನ್ಯವಾಗಿ ಸ್ಪರ್ಧಿಸುತ್ತಿದ್ದ ಸುಯಿ ಜೆನೆರಿಸ್ , ಮಾಲ್ಟದ ಪರಮಾಧಿಕಾರ ಮಿಲಿಟರಿ ಆರ್ಡರ್, ಇದು ಇಟಾಲಿಯನ್ ರಾಜಧಾನಿಯ ಪರಾವೃತ ಪ್ರದೇಶದಲ್ಲಿ ನೆಲೆಯೂರಿದ್ದ ಪರಮಾಧಿಕಾರ ಹೊಂದಿದ ಮೂರನೇ[clarification needed] ಚಿಕ್ಕ ರಾಜ್ಯ (ಅದರಂತೆ 1869ರಲ್ಲಿ ಪಲಜ್ಜೊ ಡೀ ಮಾಲ್ಟ ಹಾಗು ವಿಲ್ಲ ಮಾಲ್ಟ ದೇಶಾತೀತ ಹಕ್ಕುಗಳನ್ನು ಪಡೆದರು, ಈ ರೀತಿಯಾಗಿ ಆಧುನಿಕ ಆರ್ಡರ್ ನ ಏಕೈಕ "ಸಾರ್ವಭೌಮತ್ವದ" ಪ್ರಾದೇಶಿಕ ಒಡೆತನ ಸಂಪಾದಿಸಿತು), ಇದು ಒಂದೊಮ್ಮೆ ಸೈನಿಕಪಡೆಯ ಮೆಚ್ಚುಗೆಯಾಗಿ ಮಹತ್ವ ಗಳಿಸಿದ್ದ ಪರಮಾಧಿಕಾರ ಮಿಲಿಟರಿ ಆರ್ಡರ್ ಗಳ ಧಾರ್ಮಿಕಯೋಧರ ರಾಜ್ಯಗಳಲ್ಲಿ ಕಡೆಯದಾಗಿ ಅಸ್ತಿತ್ವದಲ್ಲಿದ್ದ ಉತ್ತರಾಧಿಕಾರಿಯಾಗಿತ್ತು. 1607ರಲ್ಲಿ, ಇದರ ಗ್ರ್ಯಾಂಡ್ ಮಾಸ್ಟರ್ ಗಳನ್ನು('ನೈಟ್' ಬಿರುದಿನ ದರ್ಜೆಯ ನಾಯಕ) ಪವಿತ್ರ ರೋಮನ್ ಚಕ್ರವರ್ತಿಯು ರೆಯಿಂಚುಸ್ಫುರ್ಸ್ಟ್ ಗಳನ್ನಾಗಿ(ಪವಿತ್ರ ರೋಮನ್ ಸಾಮ್ರಾಜ್ಯದ ರಾಜಕುಮಾರರುಗಳು) ಮಾಡಿದ, ಇವರುಗಳಿಗೆ ರೆಯಿಚ್ಸ್ಟಾಗ್ ನಲ್ಲಿ ಸ್ಥಾನ ಕಲ್ಪಿಸಿಕೊಟ್ಟ, ಆ ಅವಧಿಯಲ್ಲಿ ಇದು UN-ಮಾದರಿಯ ಸಾಮಾನ್ಯ ಶಾಸನ ಸಭೆಗೆ ಅತ್ಯಂತ ಸಮೀಪದ ಶಾಶ್ವತ ಸಮಾನತೆಯನ್ನು ಹೊಂದಿತ್ತು; ಅಲ್ಲದೇ 1620ರಲ್ಲಿ ದೃಢಪಟ್ಟಿತು). ಈ ಪರಮಾಧಿಕಾರದ ಹಕ್ಕುಗಳನ್ನು ಎಂದಿಗೂ ಪದಚ್ಯುತಗೊಳಿಸಲಿಲ್ಲ, ಕೇವಲ ಭೂಪ್ರದೇಶಗಳನ್ನು ಮಾತ್ರ ಕಳೆದುಕೊಳ್ಳಬೇಕಾಯಿತು. ಆಧುನಿಕ ರಾಜ್ಯಗಳಲ್ಲಿ 100 ಇಂದಿಗೂ ಆರ್ಡರ್ ನೊಂದಿಗೆ ಸಂಪೂರ್ಣವಾದ ರಾಜತಾಂತ್ರಿಕ ಸಂಬಂಧಗಳನ್ನು ಉಳಿಸಿಕೊಂಡು ಬಂದಿವೆ.[7](ಇದೀಗ ಡೀಫ್ಯಾಕ್ಟೋ "ಅತ್ಯಂತ ಪ್ರತಿಷ್ಠಿತ ಸರ್ವಿಸ್ ಕ್ಲಬ್"), ಹಾಗು ಉಂ ಇದಕ್ಕೆ ಅಗತ್ಯ ಸ್ಥಾನಮಾನ ನೀಡಿ ಗೌರವಿಸಿದೆ.
ಹಲವು ಯುರೋಪಿಯನ್ ರಾಷ್ಟ್ರಗಳ ಗಡಿಪಾರಾದ ಸರ್ಕಾರಗಳು(ಉದಾಹರಣೆಗೆ, ನಾರ್ವೆ, ನೆದರ್ಲೆಂಡ್ಸ್ ಅಥವಾ ಜೆಕೊಸ್ಲೊವಾಕಿಯ) ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಅವುಗಳ ಭೂಪ್ರದೇಶಗಳು ವಿದೇಶಿ ಆಕ್ರಮಣಕ್ಕೆ ಒಳಪಟ್ಟಿದ್ದರೂ, ಅವುಗಳನ್ನು ಸಾರ್ವಭೌಮತ್ವವುಳ್ಳ ಪ್ರದೇಶಗಳೆಂದು ಪರಿಗಣಿಸಲಾಗಿತ್ತು; ಅವುಗಳು ಆಕ್ರಮಣದಿಂದ ಮುಕ್ತಗೊಂಡ ನಂತರ ಅವುಗಳ ಆಧಿಪತ್ಯವು ಮತ್ತೊಮ್ಮೆ ಆರಂಭಗೊಂಡಿತು. ಇರಾಕಿ ಆಕ್ರಮಣಕ್ಕೆ ಸಂಬಂಧಿಸಿದಂತೆ ಕುವೈತ್ ನ ಸರ್ಕಾರವೂ ಸಹ 1990-1991ರಲ್ಲಿ ತನ್ನ ರಾಷ್ಟ್ರದ ಮೇಲೆ ನಡೆದ ಆಕ್ರಮಣದ ಸಂದರ್ಭದಲ್ಲಿ ಇದೇ ರೀತಿಯಾದ ಪರಿಸ್ಥಿತಿ ಎದುರಿಸಿತ್ತು.
ಇದೇ ರೀತಿಯಾದ ಮತ್ತೊಂದು ಉದಾಹರಣೆಯೆಂದರೆ ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್, ಸ್ವಿಟ್ಜರ್ಲ್ಯಾಂಡ್ ನಲ್ಲಿ ನೋಂದಣಿಯಾದ ಒಂದು ಖಾಸಗಿ ಸಂಘಸಂಸ್ಥೆ, ಇದು ಹಲವು ರಾಷ್ಟ್ರಗಳಲ್ಲಿ ಹಲವಾರು ಮಟ್ಟಗಳ ವಿಶೇಷ ಸವಲತ್ತುಗಳನ್ನು ಹಾಗು ಕಾನೂನಿನ ವಿನಾಯಿತಿಯನ್ನು ಅನುಭವಿಸುತ್ತದೆ, ಸ್ವಿಟ್ಜರ್ಲ್ಯಾಂಡ್ ನಂತಹ ರಾಜಕೀಯ ಸನ್ನಿವೇಶದಲ್ಲಿ ವಾಸ್ತವಿಕತೆ ಪ್ರಮಾಣ ಹೆಚ್ಚಾಗಿರುತ್ತದೆ, ಕಾನೂನುರೀತ್ಯಾ ಸಾರ್ವಭೌಮತ್ವವಲ್ಲ.
ರಾಜ್ಯದ ಮುಖ್ಯಸ್ಥನ ಕಚೇರಿಯ ಮಾದರಿಯಲ್ಲಿ(ಸಾರ್ವಭೌಮತ್ವವವನ್ನು ಅವರಿಗೆ ವಹಿಸಿಕೊಟ್ಟಿರಲಿ-ಬಿಡಲಿ), ರಾಜ್ಯದೊಳಗಿರುವ ಹಲವಾರು ವ್ಯಕ್ತಿಗಳಿಗೆ ಜಂಟಿಯಾಗಿ ಅಧಿಕಾರ ವಹಿಸಿಕೊಡಬಹುದು, ಏಕೈಕ ಭೂಪ್ರದೇಶದ ಮೇಲಿನ ಪರಮಾಧಿಕಾರ ನ್ಯಾಯವ್ಯಾಪ್ತಿಯನ್ನು ಜಂಟಿಯಾಗಿ ಇಬ್ಬರಿಗೆ ಅಥವಾ ಹೆಚ್ಚಿನ ಅನುಮೋದಿತ ಅಧಿಕಾರಗಳಿಗೆ ವಹಿಸಿಕೊಡಬಹುದು, ಗಮನಾರ್ಹವಾಗಿ, ಸಹಪ್ರಭುತ್ವ ಅಥವಾ (ಆಂಡೋರಾದಲ್ಲಿ ಇಂದಿಗೂ ಇರುವ ಮಾದರಿಯಲ್ಲಿ) ಒಂದು ಸಹರಾಜ್ಯಗಳ ರೂಪದಲ್ಲಿ ವಹಿಸಿಕೊಡಬಹುದು.
ಸ್ವಯಂ ನಿರ್ಣಯದ ಹಕ್ಕನ್ನು ಪ್ರತಿಪಾದಿಸುವ ರಾಷ್ಟ್ರಗಳು, ಸಾಮಾನ್ಯವಾಗಿ ತಮಗಾಗಿ ಸಾರ್ವಭೌಮತ್ವ ರಾಜ್ಯಗಳನ್ನು ಸ್ಥಾಪಿಸಿಕೊಳ್ಳುತ್ತವೆ, ಈ ರೀತಿಯಲ್ಲಿ ರಾಷ್ಟ್ರ-ರಾಜ್ಯಗಳ ಸೃಷ್ಟಿಯಾಗುತ್ತದೆ. ಒಂದು ರಾಷ್ಟ್ರ-ರಾಜ್ಯವಾಗಲು ಬಯಸುವ ಭೂಪ್ರದೇಶಗಳು, ಇತರ ರಾಷ್ಟ್ರ-ರಾಜ್ಯಗಳಿಂದ ಸಾರ್ವಭೌಮತ್ವವೆಂದು ಗುರುತಿಸಲ್ಪಟ್ಟಿರಬೇಕು.
ಸಂಯುಕ್ತ ವ್ಯವಸ್ಥೆಗಳ ಸರ್ಕಾರದಲ್ಲಿ, ಸಾರ್ವಭೌಮತ್ವ ವು, ಕೇಂದ್ರಾಡಳಿತದಿಂದ ಒಂದು ರಾಜ್ಯ ರಾಜ್ಯ ಸರ್ಕಾರವು ಸ್ವತಂತ್ರವಾಗಿ ಅಧಿಕಾರ ಹೊಂದಿರುವುದಕ್ಕೆ ಸೂಚಿತವಾಗಿದೆ. ರಾಜ್ಯದ ಸಾರ್ವಭೌಮತ್ವವು, ಕೇಂದ್ರಾಡಳಿತ ಸಾರ್ವಭೌಮತ್ವಕ್ಕಿಂತ ಉನ್ನತವಾಗಿದೆಯೇ ಅಥವಾ ಇದರ ಪ್ರತಿಕ್ರಮವು, ಒಂದು ರಾಷ್ಟ್ರವು ಒಂದು ಒಕ್ಕೂಟವೇ (ಉದಾಹರಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನ) ಅಥವಾ ಒಂದು ಮೈತ್ರಿಕೂಟವೇ(ಉದಾಹರಣೆಗೆ ಸ್ವಿಟ್ಜರ್ಲ್ಯಾಂಡ್) ಎಂಬ ಪರಿಗಣನೆಯನ್ನು ನಿರ್ಧರಿಸುತ್ತದೆ. ರಾಜ್ಯಗಳ ಹಕ್ಕುಗಳ ಮೇಲಿನ ವಿವಾದವು ಅಂತಿಮವಾಗಿ ಅಮೆರಿಕನ್ ಸಿವಿಲ್ ಯುದ್ಧದ ಆರಂಭಕ್ಕೆ ನಾಂದಿ ಹಾಡಿತು.
ಸಾರ್ವಭೌಮತ್ವದ ಗಳಿಕೆಗೆ ಹಲವಾರು ವಿಧಾನಗಳನ್ನು ಇಂದಿಗೂ ಅಥವಾ ಹಿಂದಿನಿಂದಲೂ ಅಂತರರಾಷ್ಟ್ರೀಯ ಕಾನೂನು ಗುರುತಿಸಿಕೊಂಡು ಬಂದಿದೆ. ಇದು ಕಾನೂನುಸಮ್ಮತ ವಿಧಾನವಾಗಿದ್ದು ಇದರಲ್ಲಿ ಒಂದು ರಾಷ್ಟ್ರವು ತನ್ನ ಭೂಪ್ರದೇಶದ ಮೇಲೆ ಸಾರ್ವಭೌಮತ್ವ ಗಳಿಸಿಕೊಳ್ಳಬಹುದು.
ಸಾರ್ವಭೌಮತ್ವದ ನೈತಿಕ ತತ್ವಗಳ ಆಧಾರದ ಮೇಲೆ ವ್ಯಾಪಕವಾಗಿ ಭಿನ್ನಾಭಿಪ್ರಾಯಗಳು ಅಸ್ತಿತ್ವದಲ್ಲಿವೆ. ಮೂಲಭೂತವಾಗಿ ಇರುವ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳೆಂದರೆ, ಸಾರ್ವಭೌಮತ್ವವನ್ನು ಸಾರ್ವಭೌಮನಿಗೆ ನೇರವಾಗಿ ದೈವದತ್ತವಾದ ಅಥವಾ ಸ್ವಾಭಾವಿಕ ಅಧಿಕಾರದಿಂದ ವಹಿಸಲಾಗುತ್ತದೆ ಎಂಬ ಸಮರ್ಥನೆ, ಹಾಗು ಅದನ್ನು ಜನರು ಸಾರ್ವಭೌಮನಿಗೆ ವಹಿಸಿಕೊಡುತ್ತಾರೆಂಬ ಮತ್ತೊಂದು ಸಮರ್ಥನೆ. ನಂತರದ ಸಿದ್ಧಾಂತದಲ್ಲಿ ಮತ್ತಷ್ಟು ಭಿನ್ನ ಅಭಿಪ್ರಾಯಗಳು ಕಂಡುಬರುತ್ತವೆ, ಅದೆಂದರೆ ಜನರು ಸಾರ್ವಭೌಮನಿಗೆ ಸಾರ್ವಭೌಮತ್ವವನ್ನು ವರ್ಗಾವಣೆ ಮಾಡುತ್ತಾರೆಂಬ ಸಮರ್ಥನೆ(ಹಾಬ್ಸ್), ಹಾಗು ಜನರು ಸಾರ್ವಭೌಮತ್ವವನ್ನು ತಾವೇ ಉಳಿಸಿಕೊಳ್ಳುತ್ತಾರೆಂಬ ಸಮರ್ಥನೆ(ರೂಸೋ).
ಮತ್ತೊಂದು ವಿಷಯವೆಂದರೆ ಕಾನೂನನ್ನು ಪರಮಾಧಿಕಾರವಾಗಿ ಎತ್ತಿ ಹಿಡಿಯಬೇಕೆ ಬೇಡವೇ ಎಂಬ ಪ್ರಶ್ನೆ, ಅಂದರೆ, ಇದು ರಾಜಕೀಯ ಅಥವಾ ಇತರ ಹಸ್ತಕ್ಷೇಪಕ್ಕೂ ಮಿಗಿಲಾಗಿದೆಯೇ ಎಂಬ ಪ್ರಶ್ನೆ. ಸಾರ್ವಭೌಮತ್ವದ ಕಾನೂನು ರಾಜ್ಯದ ಒಂದು ವಾಸ್ತವ ಕಾನೂನನ್ನು ಒಳಗೊಂಡಿರುತ್ತದೆ, ಇದರರ್ಥ ಕಾನೂನು ಪತ್ರವು (ಸಾಂವಿಧಾನಿಕವಾಗಿ ಸರಿಯಾಗಿದ್ದ ಪಕ್ಷದಲ್ಲಿ), ರಾಷ್ಟ್ರದ ರಾಜಕೀಯ ಇಚ್ಚೆಗೆ ವಿರುದ್ಧವಾಗಿ ಸಮಂಜಸವಾಗಿರುತ್ತದೆ. ಅಲ್ಲದೇ ನಿರ್ಬಂಧಕ್ಕೊಳಪಟ್ಟಿರುತ್ತದೆ, ಇದು ಸಾಂವಿಧಾನಿಕ ಪ್ರಕ್ರಿಯೆ ಅನುಸರಿಸಿ ವಿಧ್ಯುಕ್ತವಾಗಿ ಬದಲಾವಣೆಯಾಗದ ಹೊರತು ಹಾಗೆಯೇ ಇರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ನಿಯಮದಿಂದಾಗುವ ಯಾವುದೇ ಮಾರ್ಗ ಬದಲಾವಣೆಯು ಉದ್ದೇಶಗಳನ್ನು ಪರಿಗಣಿಸದೆ ಒಂದು ಕ್ರಾಂತಿ ಅಥವಾ ಕ್ಷಿಪ್ರ-ಕ್ರಾಂತಿಗೆ ಕಾರಣವಾಗುತ್ತದೆ.
ಕೆಲವೊಂದು ಪರಿಸ್ಥಿತಿಗಳಲ್ಲಿ, ಸಾರ್ವಭೌಮತ್ವ ಎಂಬ ನಾಮಧೇಯವು ಕೇವಲ ಸಾರ್ವತ್ರಿಕ ಪದವಲ್ಲ, ಆದರೆ ಇದು ವಾಸ್ತವವಾಗಿ (ಭಾಗವಾಗಿ)ರಾಜ್ಯದ ಮುಖ್ಯಸ್ಥನ ವಿಧ್ಯುಕ್ತ ಶೈಲಿ.
ಈ ರೀತಿಯಾಗಿ 22 ಜೂನ್ 1934 ರಿಂದ 29 ಮೇ 1953ರವರೆಗೂ, ("ಭಾರತದ ಚಕ್ರವರ್ತಿ" ಎಂಬ ನಾಮಾಂಕಿತವನ್ನು 15 ಆಗಸ್ಟ್ 1947ರವರೆಗೂ ಕೈಬಿಡಲಾಗಿತ್ತು, ದಿನಾಂಕ 22 ಜೂನ್ 1948ಕ್ಕೆ ಪೂರ್ವಾನ್ವಯ ಹೊಂದಿರುವ ಪ್ರಕಟಣೆ), ದಕ್ಷಿಣ ಆಫ್ರಿಕಾದ ರಾಜನಿಗೆ ದಕ್ಷಿಣ ಆಫ್ರಿಕಾದ ಪರಮಾಧಿಕಾರಿ ಎಂಬ ಬಿರುದು ನೀಡಲಾಗಿತ್ತು: "ದೇವರ ಕೃಪೆಯಿಂದ, ಗ್ರೇಟ್ ಬ್ರಿಟನ್, ಐರ್ಲ್ಯಾಂಡ್ ಹಾಗು ಸೇಸ್ ರಾಜನಿಗೆ ಮಿಗಿಲಾದ ಬ್ರಿಟಿಶ್ ಪರಮಾಧಿಕಾರಿಗಳು, ಶ್ರದ್ಧೆಯ ರಕ್ಷಕ, ಭಾರತದ ಚಕ್ರವರ್ತಿ ಹಾಗು ಸಾರ್ವಭೌಮ ಹಾಗು ದಕ್ಷಿಣ ಆಫ್ರಿಕಾದ ಒಕ್ಕೂಟಕ್ಕಿಂತ ಮಿಗಿಲಾಗಿದ್ದರು." 1952ರಲ್ಲಿ ದಕ್ಷಿಣ ಆಫ್ರಿಕಾದ ಆಡಳಿತಕ್ಕೆ ಎಲಿಜಬೆತ್ II ಅಧಿಕಾರ ಪಡೆದುಕೊಂಡ ಮೇಲೆ, ನಾಮಾಂಕಿತವಾಯಿತು. ದಕ್ಷಿಣ ಆಫ್ರಿಕಾದ ರಾಣಿ ಎಂದು ಬದಲಾವಣೆ ಮಾಡಲಾಯಿತು, ಜೊತೆಗೆ ಆಕೆಯ ಇತರ ರಾಜ್ಯಗಳು ಹಾಗು ಭೂಪ್ರದೇಶಗಳು, ಕಾಮನ್ವೆಲ್ತ್ ನ ಮುಖ್ಯಸ್ಥರಿಗೆ ಇತರ ಕಾಮನ್ವೆಲ್ತ್ ರಾಜ್ಯಗಳಲ್ಲಿ ಬಹುತೇಕ ಬಳಕೆಯಾಗುತ್ತಿದ್ದ ಹೆಸರಿಗಿಂತ ಸದೃಶವಾದ ಬಿರುದನ್ನು ನೀಡಲಾಯಿತು. ವ್ಯಾಟಿಕನ್ ನಗರಕ್ಕೆ ಸಂಬಂಧಿಸಿದಂತೆ ಪೋಪ್ ಅಧಿಕಾರ ವತಿಯಿಂದ "ವ್ಯಾಟಿಕನ್ ಸಿಟಿ ಸ್ಟೇಟ್ ನ ಸಾರ್ವಭೌಮನೆಂಬ" ಬಿರುದು ಪಡೆದಿದ್ದಾರೆ.
ವಿಶೇಷಣ ರೂಪವನ್ನೂ ಸಹ ರಾಜನ ಪೂರ್ಣ ಬಿರುದಿನಲ್ಲಿ ಬಳಕೆ ಮಾಡಿಕೊಳ್ಳಬಹುದು, ಪೂರ್ವ-ಸಾಮ್ರಾಜ್ಯಶಾಹಿ ರಷ್ಯಾದಲ್ಲಿದ್ದ ಮಾದರಿ, 16 ಜನವರಿ 1547 - 22 ನವಂಬರ್ 1721: Bozhiyeyu Milostiyu Velikiy/Velikaya Gosudar'/Gosudarynya Tsar'/Tsaritsa i Velikiy/Velikaya Knyaz'/Knyaginya N.N. vseya Rossiy Samodyerzhets "ದೇವರ ಕೃಪೆಯಿಂದ, ಸಾರ್ವಭೌಮ ಜಾರ್/ಜರೀನ ಹಾಗು ಪೂಜ್ಯ ರಾಜಕುಮಾರ/ರಾಜಕುಮಾರಿ, N.N., ಸಂಪೂರ್ಣವಾಗಿ ರಷ್ಯಾದ, ನಿರಂಕುಶ ಪ್ರಭು"
ಟೆಂಪ್ಲೇಟು:Portal
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.