From Wikipedia, the free encyclopedia
ಶಂಕು ಎನ್ನುವುದು ಸರಳರೇಖೆಯ (l) ಒಂದು ಕೊನೆ (V) ಸ್ಥಿರವಾಗಿದ್ದು ಇನ್ನೊಂದು ಕೊನೆ V ಯನ್ನು ಒಳಗೊಳ್ಳದ ಸ್ಥಿರ ಸಂವೃತ ಸಮತಲೀಯ ವಕ್ರರೇಖೆಯೊಂದರ (fixed closed planar curve) (S) ಮೇಲೆ ಮುಕ್ತವಾಗಿ ಸರಿಯುತ್ತಿರುವಾಗ ಆ ಚರರೇಖೆ ರೂಪಿಸುವ ಮೂರು ಆಯಾಮಗಳ ಆಕೃತಿ (ಕೋನ್). l ಗೆ ಶಂಕುವಿನ ಜನಕರೇಖೆ (generating line) ಅಥವಾ ಸರಳವಾಗಿ ಜನಕ ಎಂದೂ, V ಗೆ ಶೃಂಗವೆಂದೂ, S ಗೆ ತಳವೆಂದೂ (base) ಹೆಸರು. ವಾಸ್ತವವಾಗಿ ಜನಕಗಳನ್ನು ಶೃಂಗದ ಉಭಯ ಪಾರ್ಶ್ವಗಳಲ್ಲಿಯೂ ವಿಸ್ತರಿಸಬಹುದು. ಹೀಗೆ ಮಾಡಿದಾಗ ದೊರೆಯುವ ಆಕೃತಿ ಪರಿಪೂರ್ಣ ಶಂಕು (ಕಂಪ್ಲೀಟ್ ಕೋನ್).
ಈಗ S ಒಂದು ವೃತ್ತವೂ O ಇದರ ಕೇಂದ್ರವೂ ಆಗಿರಲಿ. O ನಲ್ಲಿ S ಗೆ ಎಳೆದ ಲಂಬ V ಯನ್ನು ಒಳಗೊಂಡಿರಲಿ. ಈ ಸಂದರ್ಭದಲ್ಲಿ ದೊರೆಯುವ ವಿಶಿಷ್ಟ ಆಕೃತಿಯೇ ಲಂಬವೃತ್ತೀಯ ಶಂಕು (ರೈಟ್ ಸರ್ಕ್ಯುಲರ್ ಕೋನ).[೧] OV ಇದರ ಅಕ್ಷ (axis). ಈ ಶಂಕು ತನ್ನ ಅಕ್ಷ ಕುರಿತಂತೆ ಸಮಮಿತೀಯವಾಗಿದೆ (ಸಿಮೆಟ್ರಿಕಲ್).
ಈ ಮೇಲಿನ ಚಿತ್ರದಲ್ಲಿ S=ವೃತ್ತ, O=ವೃತ್ತಕೇಂದ್ರ, V=ಶೃಂಗ, l=ಜನಕರೇಖೆ
ಮೇಲಿನ ಚಿತ್ರದಲ್ಲಿ ತಳ ಒಂದು ದೀರ್ಘವೃತ್ತವಾಗಿದೆ. S=ಸಮತಲೀಯ ವಕ್ರರೇಖೆ, V=ಶೃಂಗ, A,B,C,D ಇದರ ಪರಿಧಿ ಮೇಲಿನ ಕೆಲವು ಬಿಂದುಗಳು, VA,VB,VC,VD ಕೆಲವು ಜನಕ ರೇಖೆಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.