ವಿಶ್ವರೂಪ

ವಿಶ್ವರೂಪ ಕೃಷ್ಣನ ಒಂದು ರೂಪ From Wikipedia, the free encyclopedia

ವಿಶ್ವರೂಪ

ವಿಶ್ವರೂಪ ದರ್ಶನ ಮತ್ತು ವಿರಾಟ ರೂಪ ಎಂದೂ ಜನಪ್ರಿಯವಾಗಿ ಪರಿಚಿತಿವಿರುವ ವಿಶ್ವರೂಪ ಹಿಂದೂ ದೇವತೆ ವಿಷ್ಣು ಅಥವಾ ಅವನ ಅವತಾರ ಕೃಷ್ಣನ ಮೂರ್ತಿಶಿಲ್ಪೀಯ ರೂಪ ಅಥವಾ ದೇವತಾಭಿವ್ಯಕ್ತಿ. ಅನೇಕ ವಿಶ್ವರೂಪ ದೇವತಾಭಿವ್ಯಕ್ತಿಗಳಿವೆಯಾದರೂ, ಅತ್ಯಂತ ಪ್ರಸಿದ್ಧವಾಗಿರುವುದು ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣನಿಂದ ಕೊಡಲ್ಪಟ್ಟ ಭಗವದ್ಗೀತೆಯಲ್ಲಿರುವುದು, ಇದನ್ನು ಪಾಂಡವ ರಾಜಕುಮಾರ ಅರ್ಜುನನಿಗೆ ಪಾಂಡವ ಮತ್ತು ಕೌರವರ ನಡುವಿನ ಯುದ್ಧದಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಹೇಳಲಾಗಿತ್ತು. ವಿಶ್ವರೂಪವನ್ನು ವಿಷ್ಣುವಿನ ಪರಮರೂಪವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿ ಸಂಪೂರ್ಣ ಬ್ರಹ್ಮಾಂಡ ಅವನಲ್ಲಿ ಒಳಗೊಂಡಿದೆ ಮತ್ತು ಅವನಿಂದ ಮೂಲಹೊಂದಿದೆ ಎಂದು ವಿವರಿಸಲಾಗಿದೆ.

Thumb

Wikiwand - on

Seamless Wikipedia browsing. On steroids.