Remove ads
ಸ್ವಾತಂತ್ರ್ಯ ಹೋರಾಟಗಾರ, ತತ್ವಶಾಸ್ತ್ರಜ್ಞ, ಕವಿ, ಇತಿಹಾಸಕಾರ From Wikipedia, the free encyclopedia
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.
ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ್ಯ ವೀರ | |
---|---|
Born | 28 ಮೇ 1883 ಭಗ್ರೂರ್, ನಾಸಿಕ್, ಮಹಾರಾಷ್ಟ್ರ |
Died | ೨೬ ಫೆಬ್ರವರಿ ೧೯೬೬ (ತೀರಿದಾಗ ವಯಸ್ಸು ೮೨) ಮುಂಬೈ, ಭಾರತ |
Cause of death | ಸಲ್ಲೇಖನ/ಆತ್ಮಾರ್ಪಣೆ |
Nationality | ಭಾರತೀಯ |
Other names | ವೀರ ಸಾವರ್ಕರ್ |
Education | ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಲಂಡನ್ನ ಶಿಕ್ಷಣ ಕೇಂದ್ರವೊಂದರಿಂದ ಬ್ಯಾರಿಸ್ಟರ್ ಪದವಿ. |
Known for | ಭಾರತದ ಸ್ವಾತಂತ್ರ್ಯ ಚಳುವಳಿ, ಹಿಂದುತ್ವ |
Political party | ಹಿಂದೂ ಮಹಾಸಭಾ |
Spouse | ಯಮುನಾಬಾಯಿ |
Children | ಪ್ರಭಾಕರ್ ಸಾವರ್ಕರ್ (ಶಿಶುವಾಗಿದ್ದಾಗಲೇ ಮರಣವನ್ನಪಿದರು), ವಿಶ್ವಾಸ್ ಸಾವರ್ಕರ್ ಹಾಗು ಮಗಳು ಪ್ರಭಾತ್ ಚಿಪ್ಲುನ್ಕರ್ |
Parent(s) | ದಾಮೋದರ ಸಾವರ್ಕರ್ ಯಶೋಧಾ ಸಾವರ್ಕರ್ |
Relatives | ಗಣೇಶ ದಾಮೋದರ್ ಸಾವರ್ಕರ್ (ಸೋದರ),ನಾರಾಯಣ ದಾಮೋದರ್ ಸಾವರ್ಕರ್ (ಸೋದರ), ಮೈನಾ ದಾಮೋದರ್ ಸಾವರ್ಕರ್ (ಸೋದರಿ) |
1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು. 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು. ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ ತೆರಳಿದರು.
ಮಹಾತ್ಮಾ ಗಾಂಧಿ ಹತ್ಯೆ ಪ್ರಯತ್ನ ಮತ್ತು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾದವರು ಮತ್ತು ಹತ್ಯೆ ಪ್ರಯತ್ನದ ಆರೋಪಿಗಳು :
ಹಿಂದುತ್ವದ ಪರಿಕಲ್ಪನೆಯನ್ನು ಸಾವರ್ಕರ್ ಮೊಟ್ಟಮೊದಲು ಜಾಹೀರು ಮಾಡಿ, ಅದರ ವಿಷಯವಾಗಿ ಬಹಳಷ್ಟು ಬರೆದರು. ಸಾವರ್ಕರ್ "ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು" ಎಂದು ವ್ಯಾಖ್ಯಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.