From Wikipedia, the free encyclopedia
ವಿದ್ಯುದ್ವಾರವು ( ಎಲೆಕ್ಟ್ರೋಡ್ ) ವಿದ್ಯುನ್ಮಂಡಲದ (ಸರ್ಕ್ಯೂಟ್) ಒಂದು ಅಖಂಡ ಭಾಗವನ್ನು (ಉದಾ. ಅರೆವಾಹಕ , ವಿದ್ಯುದ್ವಿಭಜನೀಯ , ನಿರ್ವಾತ ಅಥವಾ ಗಾಳಿ) ಸಂಪರ್ಕಿಸಲು ಬಳಸುವ ವಿದ್ಯುತ್ ವಾಹಕವಾಗಿದೆ . . [1] [2]
ವಿದ್ಯುತ್ ರಾಸಾಯನಿಕ ಕೋಶದಲ್ಲಿನ ವಿದ್ಯುದ್ವಾರವನ್ನು ಆನೋಡ್ ಅಥವಾ ಕ್ಯಾಥೋಡ್ ಎಂದು ಕರೆಯಲಾಗುತ್ತದೆ (ಫ್ಯಾರಡೆಯ ಕೋರಿಕೆಯ ಮೇರೆಗೆ ವಿಲಿಯಂ ವ್ಹೀಲ್ ಸೃಷ್ಟಿಸಿದ ಪದಗಳು). [1] ಎಲೆಕ್ಟ್ರಾನುಗಳು ಕೋಶವನ್ನು ಬಿಟ್ಟು ಉತ್ಕರ್ಷಣ ಪ್ರಕ್ರಿಯೆಯನ್ನು ಉಂಟು ಮಾಡುವ ವಿದ್ಯುದ್ವಾರವನ್ನು ಆನೋಡ್ (ಧನಧ್ರುವ) ಎನ್ನುವರು. ಎಲೆಕ್ಟ್ರಾನುಗಳು ಕೋಶವನ್ನು ಸೇರಿ ಅಪಕರ್ಷಣ ಪ್ರಕ್ರಿಯೆಯನ್ನು ಉಂಟು ಮಾಡುವ ವಿದ್ಯುದ್ವಾರವನ್ನು ಕ್ಯಾಥೋಡ್ (ಋಣಧ್ರುವ) ಎನ್ನುವರು. ಪ್ರತಿ ವಿದ್ಯುದ್ವಾರವು ಕೋಶದ ಮೂಲಕ ವಿದ್ಯುತ್ ದಿಕ್ಕಿನ ಮೇಲೆ ಅವಲಂಬಿಸಿ ಆನೋಡ್ ಅಥವಾ ಕ್ಯಾಥೋಡ್ ಆಗಿ ಪರಿಣಮಿಸಬಹುದು. ಬೈಪೋಲಾರ್ ಎಲೆಕ್ಟ್ರೋಡ್ (ದ್ವಿಧ್ರುವ ವಿದ್ಯುದ್ವಾರ)ಎನ್ನುವುದು ಒಂದು ಎಲೆಕ್ಟ್ರೋಡ್ ಆಗಿದ್ದು ಅದು ಒಂದು ಕೋಶದ ಆನೋಡ್ ಮತ್ತು ಮತ್ತೊಂದು ಕೋಶದ ಕ್ಯಾಥೋಡ್ ಆಗಿ ಕಾರ್ಯನಿರ್ವಹಿಸುತ್ತದೆ.
ವಿದ್ಯುದ್ವಾರಗಳನ್ನು ಅಸಂಖ್ಯಾತ ವಸ್ತುಗಳ ಮೂಲಕ ಪ್ರವಾಹವನ್ನು ಹಲವು ರೀತಿಯಲ್ಲಿ ಮಾರ್ಪಡಿಸಲು ಮತ್ತು ಹಲವಾರು ಉದ್ದೇಶಗಳಿಗಾಗಿ ವಾಹಕತೆಯನ್ನು ಅಳೆಯಲು ಬಳಸಲಾಗುತ್ತದೆ. ವಿದ್ಯುದ್ವಾರಗಳನ್ನು ಈ ಕೆಳಕಂಡ ರೀತಿಯಲ್ಲಿ ಉಪಯೋಗಿಸುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.