Remove ads
From Wikipedia, the free encyclopedia
ಆಲ್ಕೆಮಿ ಎಂಬ ಪದವನ್ನು, ಅರೇಬಿಕ್ ಪದ ಅಲ್-ಕಿಮಿಯಾ (الكيمياء)ದಿಂದ ವ್ಯುತ್ಪನ್ನವಾದದ್ದಾಗಿದ್ದು, ಬೆರಕೆ/ಕೀಳು ಲೋಹಗಳನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವ ವಿಧಾನಗಳ ಬಗ್ಗೆ, "ದೀರ್ಘಾಯಸ್ಸಿನ ಸಿದ್ಧರಸ"ದ ತಯಾರಿಕೆಯ ಬಗ್ಗೆ ಸಂಶೋಧನೆ, ಸರ್ವೋತ್ಕೃಷ್ಠ ಜ್ಞಾನ ಪಡೆಯುವ ಯತ್ನ ರಸವಾದಿ/ರಸಸಿದ್ಧಾಂತಿಯ ಅಭಿವೃದ್ಧಿಯನ್ನೂ ಒಳಗೊಂಡು ಇನ್ನಿತರ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿರುವಂತಹಾ ವಸ್ತುಗಳ ರಚನೆಗಳ ಬಗ್ಗೆ ಕೇಂದ್ರೀಕೃತವಾದ ಸಿದ್ಧಾಂತ ಹಾಗೂ ಒಂದು ಪ್ರಾಚೀನ ಪದ್ಧತಿಯಾಗಿದೆ.[೧] ರಸವಿದ್ಯೆಯ ಪ್ರಾಯೋಗಿಕ ಅಂಶಗಳು ಆಧುನಿಕ ಅಜೈವಿಕ ರಸಾಯನಶಾಸ್ತ್ರದ ಮೂಲಭೂತ ಅಂಶಗಳ ತಿಳುವಳಿಕೆ ನೀಡಿದ್ದು, ಸಂಬಂಧಪಟ್ಟ ಪ್ರಕ್ರಿಯೆಗಳು, ಉಪಕರಣಗಳು ಹಾಗೂ ಈಗಿನ ಅನೇಕ ವಸ್ತುಗಳ ಗುರುತಿಸುವಿಕೆ ಹಾಗೂ ಬಳಕೆಯ ಬಗ್ಗೆ ತಿಳಿದುಬರಲು ಕಾರಣವಾಗಿವೆ.
ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ (ಆಧುನಿಕ ಇರಾಕ್), ಭಾರತ (ಆಧುನಿಕ ಭಾರತೀಯ ಉಪಖಂಡ), ಪರ್ಷಿಯ (ಆಧುನಿಕ ಇರಾನ್), ಚೀನಾ, ಜಪಾನ್, ಕೊರಿಯಾ, ಪ್ರಾಚೀನ ಗ್ರೀಕ್-ರೋಮನ್ ವಿಶ್ವ, ಮಧ್ಯಯುಗೀಯ ಮಹಮ್ಮದೀಯ ವಿಶ್ವ, ಹಾಗೂ ಆಗಿನ ಮಧ್ಯಯುಗೀಯ ಯೂರೋಪ್ಗಳಲ್ಲಿ 20ನೇ ಶತಮಾನದವರೆಗೆ ಕನಿಷ್ಠ 2,500 ವರ್ಷಗಳ ಕಾಲ ವ್ಯಾಪಿಸಿದ ಶಾಲೆಗಳು ಹಾಗೂ ಸಿದ್ಧಾಂತೀಯ ವ್ಯವಸ್ಥೆಗಳ ಸಂಕೀರ್ಣ ಜಾಲಗಳಲ್ಲಿ ರಸವಿದ್ಯೆಯು ಬಳಕೆಯಲ್ಲಿತ್ತು.
ಆಲ್ಕೆಮಿ ಎಂಬ ಪದವು ಅರೇಬಿಕ್ ಅಲ್-ಕಿಮಿಯಾ (الكيمياء)ದಿಂದ ವ್ಯುತ್ಪನ್ನವಾದ ಮಧ್ಯಯುಗೀಯ ಲ್ಯಾಟಿನ್ ಪದ ಅಲ್ಕಿಮಿಯಾ ಮೂಲದ ಪ್ರಾಚೀನ ಫ್ರೆಂಚ್ ಪದ ಅಲ್ಕಿಮೀ ಎಂಬ ಪದದಿಂದ ವ್ಯುತ್ಪನ್ನವಾಗಿದೆ. ಆ ಪದವನ್ನೇ ಪ್ರಾಚೀನ ಗ್ರೀಕ್ ಪದ ಕೆಮಿಯಾ (χημεία)ವನ್ನು ಅರೇಬಿಕ್ನ ನಿರ್ದೇಶಕ ಗುಣವಾಚಿ ಅಲ್- (الـ)ನೊಂದಿಗೆ ಸೇರಿಸಿ ವ್ಯುತ್ಪನ್ನವಾಗಿದೆ.[೨] ಈ ಪ್ರಾಚೀನ ಗ್ರೀಕ್ ಪದವನ್ನು ಮೂಲತಃ "ಕೆಮಿಯಾ" (Χημία),[೩] ಈಜಿಪ್ಟ್ ಪದದ ಈಜಿಪ್ಟ್ ಭಾಷೆಯ ಹೆಸರಿನ ಒಂದು ವಿಧವಾಗಿದ್ದು ಅದೂ ಕೂಡಾ, ಪ್ರಾಚೀನ ಈಜಿಪ್ಟ್ನ ಪದ ಕೆಮೆ (ಚಿತ್ರಲಿಪಿಕ ಖ್ಮಿ, ಮರಳಿನ ಬದಲಾಗಿ ಕಪ್ಪು ಭೂಮಿ )ಯಿಂದ ವ್ಯತ್ಪನ್ನವಾಗಿದೆ ಎಂದು ಭಾವಿಸಲಾಗಿತ್ತು.[೨] ಈಗಿನ ಅಭಿಪ್ರಾಯದ ಪ್ರಕಾರ ಈ ಪದವು ಮೂಲತಃ "ಮಿಶ್ರಣ" ಎಂಬರ್ಥದ ಕುಮಿಯಾ (χυμεία)ದಿಂದ ವ್ಯುತ್ಪನ್ನವಾಗಿದೆ ಹಾಗೂ ಔಷಧೀಯ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದುದಾಗಿತ್ತು.[೪] ನಂತರ ಅಲೆಕ್ಸಾಂಡ್ರಿಯಾದಲ್ಲಿ ರಸವಿದ್ಯೆಯ ಉತ್ಕರ್ಷದೊಂದಿಗೆ, ಪ್ರಾಚೀನ ಲೇಖಕರು ಇದನ್ನು ತಪ್ಪಾಗಿ Χημίαನಿಂದ ವ್ಯುತ್ಪನ್ನವಾಗಿದ್ದೆಂದು ಭಾವಿಸಿದುದರಿಂದ χημεία ಎಂಬಂತೆ ಉಚ್ಚರಿಸುತ್ತಾ ಮೂಲ ಅರ್ಥವೇ ಮರೆತುಹೋದಂತಾಯಿತು.[೫]
16ನೇ ಶತಮಾನದಲ್ಲಿ ಬಹುಶಃ ಪ್ಯಾರಾಸೆಲ್ಸಸ್ರಿಂದ ಟಂಕಿಸಲ್ಪಟ್ಟ ಪದವಾಗಿ ಬೇರ್ಪಡಿಸಿ ಸಂಯೋಜಿಸುವುದು ಎಂಬರ್ಥದ ಗ್ರೀಕ್ ಪದಗಳ ಆಧಾರದ ಮೇಲೆ ಸ್ಪಾಗಿರಿಕ್ ಕಲೆ/ಆರ್ಟ್ ಎಂಬ ಹೆಸರಿನಲ್ಲಿ ರಸವಿದ್ಯೆ ಪರಿಚಿತಗೊಂಡಿತು. ಇದನ್ನು : ಸಾಲ್ವ್ ಎಟ್ ಕೋಗ್ಯುಲಾ — ಪ್ರತ್ಯೇಕಿಸು, ನಂತರ ಸೇರಿಸು (ಅಥವಾ "ಕರಗಿಸು ನಂತರ ಘನೀಕರಿಸು ") ಎಂಬ ಲ್ಯಾಟಿನ್ ಭಾಷೆಯ ರಸವಿದ್ಯೆಯ ಸೂತ್ರವೊಂದರ ಜೊತೆ ಹೋಲಿಸಬಹುದು.[೬]
ರಸವಾದಿ/ರಸಸಿದ್ಧಾಂತಿಗಳ ಹೆಚ್ಚು ಪರಿಚಿತ ಗುರಿಯೇನೆಂದರೆ ಕೀಳು ಲೋಹಗಳನ್ನು ಚಿನ್ನ/ಸ್ವರ್ಣ (ಕ್ರಿಸೋಪೋಯಿಯಾ ಎಂದು ಕರೆಯಲಾಗುವ) ಅಥವಾ ಬೆಳ್ಳಿ (ಅಲ್ಪ ಪರಿಚಿತವಾದದ್ದು ಸಸ್ಯ ರಸವಿದ್ಯೆ, ಅಥವಾ "ಸ್ಪಾಗಿರಿಕ್")ವಾಗಿ ಪರಿವರ್ತನೆ; ಎಲ್ಲಾ ರೋಗಗಳನ್ನು ಗುಣಪಡಿಸಿ ಅನಿರ್ದಿಷ್ಟವಾಗಿ ಆಯಸ್ಸನ್ನು ಹೆಚ್ಚಿಸಬಲ್ಲ "ಸರ್ವೌಷಧಿ", ಅಥವಾ ದೀರ್ಘಾಯಸ್ಸಿನ ಸಿದ್ಧರಸವನ್ನು ಸಿದ್ಧಪಡಿಸುವುದು ಹಾಗೂ ಸಾರ್ವತ್ರಿಕ ವಿಲೇಯಕದ ಪತ್ತೆ.[೭] ಇವುಗಳು ಮಾತ್ರವೇ ಈ ಸಿದ್ದಾಂತದ ಬಳಕೆಗಳಲ್ಲವಾದರೂ, ಹೆಚ್ಚು ದಾಖಲಾಗಿರುವ ಹಾಗೂ ಹೆಚ್ಚು ತಿಳಿದುಬಂದಿರುವ ಬಳಕೆಗಳು ಇವಾಗಿವೆ. ನಿರ್ದಿಷ್ಟ ರಸವಿದ್ಯಾ ಪಂಥಗಳು ಸೀಸವನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವುದು ಅಮರತ್ವ ಪಡೆಯುವ ಉದ್ದೇಶದೊಂದಿಗೆ ಭೌತಿಕ ವಸ್ತುವನ್ನು (ಸ್ಯಾಟರ್ನ್ ಅಥವಾ ಸೀಸ) (ಚಿನ್ನ/ಸ್ವರ್ಣ)ವನ್ನಾಗಿ ಪರಿವರ್ತಿಸುವುದಕ್ಕೆ ಸದೃಶವಾಗಿದೆ ಎಂದು ವಾದಿಸುತ್ತವೆ.[೮] ಇದನ್ನು ಆಂತರಿಕ ರಸವಿದ್ಯೆ ಎಂದು ಹೇಳಲಾಗುತ್ತದೆ. ಮಧ್ಯಯುಗದಿಂದ ಆರಂಭಿಸಿ, ಪರ್ಷಿಯನ್ ಹಾಗೂ ಐರೋಪ್ಯ ರಸವಾದಿ/ರಸಸಿದ್ಧಾಂತಿಗಳು ಮೇಲ್ಕಂಡ ಎರಡೂ ಅಥವಾ ಯಾವುದೇ ಉದ್ದೇಶವನ್ನು ಸಾಧಿಸಲು ಅಗತ್ಯವಾದದ್ದೆಂದು ಭಾವಿಸಲಾದ "ಸಿದ್ಧಾಂತಿಗಳ ಶಿಲೆ " ಎಂಬ ಕಲ್ಪಿತ ವಸ್ತುವನ್ನು ಹುಡುಕಲು ಬಹಳಷ್ಟು ಯತ್ನಿಸಿದ್ದಾರೆ. ಪೋಪ್ ಜಾನ್ XXIIರವರು ರಸವಿದ್ಯೆಯ ಮೂಲಕ ನಕಲಿ ವಸ್ತುಗಳನ್ನು ತಯಾರು ಮಾಡುವುದರ ವಿರುದ್ಧ ಶಾಸನ ಹೊರಡಿಸಿದ್ದರು, ಹಾಗೂ ಸಿಸ್ಟರ್ಷಿಯನ್ನರು ತಮ್ಮ ಸದಸ್ಯರುಗಳಲ್ಲಿ ಈ ಪದ್ಧತಿಯನ್ನು ನಿಷೇಧಿಸಿದ್ದರು. 1403ರಲ್ಲಿ, ಇಂಗ್ಲೆಂಡ್ನ ಹೆನ್ರಿ IVರು ರಸವಿದ್ಯೆಯ ಪದ್ಧತಿಯನ್ನು ನಿಷೇಧಿಸಿದ್ದರು. 14ನೇ ಶತಮಾನದ ಕೊನೆಯ ಹೊತ್ತಿಗೆ, ಪಿಯೆರ್ಸ್ ದ ಪ್ಲಫ್ಮನ್ ಹಾಗೂ ಚಾಸರ್ರು ಈರ್ವರೂ ರಸವಾದಿ/ರಸಸಿದ್ಧಾಂತಿಗಳನ್ನು ಕಳ್ಳರು ಹಾಗೂ ಸುಳ್ಳರು ಎಂಬ ಉತ್ಪ್ರೇಕ್ಷೆರಹಿತರಾಗಿ ಜನರಲ್ಲಿ ಭಾವನೆ ಬಿತ್ತುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಪವಿತ್ರ ರೋಮ್ ಸಾಮ್ರಾಜ್ಯದ ರುಡಾಲ್ಫ್ II ಚಕ್ರವರ್ತಿ, 16ನೇ ಶತಮಾನದ ಕೊನೆಯಲ್ಲಿ, ಪ್ರೇಗ್ನಲ್ಲಿನ ತನ್ನ ಆಸ್ಥಾನದಲ್ಲಿ ಅನೇಕ ರಸವಾದಿ/ರಸಸಿದ್ಧಾಂತಿಗಳಿಗೆ ಅವರ ಕಾರ್ಯಗಳನ್ನು ನಡೆಸಲು ಪ್ರೋತ್ಸಾಹ ನೀಡಿದ್ದರು.
ರಸವಾದಿ/ರಸಸಿದ್ಧಾಂತಿಗಳು ಆಗಿನ ಕಾಲದ "ರಾಸಾಯನಿಕ" ಉದ್ಯಮಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆಂಬುದು ಜನಪ್ರಿಯ ನಂಬಿಕೆಯಾಗಿದೆ — ಎಂದರೆ ಅದಿರು ಪರೀಕ್ಷೆ ಹಾಗೂ ಪರಿಷ್ಕರಣೆ, ಲೋಹದ ಕೆಲಸಗಳು, ಕೋವಿಮದ್ದಿನ ಉತ್ಪಾದನೆ, ಶಾಯಿ, ವರ್ಣದ್ರವ್ಯಗಳು, ಪೇಂಟ್ಗಳು, ಪ್ರಸಾಧನ ವಸ್ತುಗಳು, ಚರ್ಮ ಸಂಸ್ಕರಣ, ಸಿರಾಮಿಕ್ಸ್, ಗಾಜಿನ ಉತ್ಪಾದನೆ, ನಿಗಮನ/ಹೊರತೆಗೆಯುವಿಕೆಯ ಸಿದ್ಧತೆ, ಮದ್ಯಗಳು, ಹಾಗೂ ಇನ್ನಿತರ ( "ಜೀವದ ಜಲ " ಎಂದೆನಿಸಿದ ಸಾರವತ್ತಾದ ಮದ್ಯಗಳ ತಯಾರಿಕೆಯು ಐರೋಪ್ಯ ರಸವಾದಿ/ರಸಸಿದ್ಧಾಂತಿಗಳಲ್ಲಿ ಜನಪ್ರಿಯ ಪ್ರಯೋಗವಾಗಿತ್ತೆನ್ನಲಾಗಿದೆ). ರಸವಾದಿ/ರಸಸಿದ್ಧಾಂತಿಗಳು ಪಾಶ್ಚಿಮಾತ್ಯ ಯೂರೋಪ್ಗೆ ಬಟ್ಟಿ ಇಳಿಸುವುದನ್ನು ಕೊಡುಗೆಯಾಗಿತ್ತಿದ್ದಾರೆ. ಗ್ರೀಕ್ ತತ್ವಶಾಸ್ತ್ರ ಹಾಗೂ ಈಜಿಪ್ಟ್ನ ಮತ್ತು ಮೆಸೊಪೊಟೇಮಿಯನ್ ತಂತ್ರಜ್ಞಾನ ಪರಿಸರಗಳಲ್ಲಿ ರಸವಿದ್ಯೆಯು ಎರಡು ಆಕರಗಳಿವೆ, ಮೊದಲಿಂದಲೇ, ಎರಡು ಅನುಸಂಧಾನಗಳು: ಮೇರಿ-ಲೂಸೀ ವಾನ್ ಫ್ರಾನ್ಜ್ ಬಾಹ್ಯವ್ಯಕ್ತ ಎಂದು ಕರೆಯುತ್ತಿದ್ದ ತಾಂತ್ರಿಕವಾದ, ಕಾರ್ಯಸಾಧ್ಯವಾದದ್ದು ಒಂದಾದರೆ ಮತ್ತೊಂದು ಫ್ರಾನ್ಜ್ ಅಂತರ್ವ್ಯಕ್ತ ಎಂದು ಕರೆಯುತ್ತಿದ್ದ ಗೂಢಾತ್ಮಕ, ಆಲೋಚನಾಶೀಲ, ಮಾನಸಿಕವಾದದ್ದು. ಇವೆರಡೂ ಪರಸ್ಪರ ವ್ಯಾವರ್ತಕವಲ್ಲ ಬದಲಿಗೆ ಪೂರಕವಾಗಿದ್ದವು ವಾಸ್ತವ ವಿಶ್ವದಲ್ಲಿ ಧ್ಯಾನಕ್ಕೆ ಹೇಗೆ ಒಂದು ಪದ್ಧತಿಯ ಅವಶ್ಯಕತೆ ಇದೆಯೋ ಅದರ ವಿಪರ್ಯಾಯವಾಗಿಯೂ ಹಾಗೆಯೇ.[೯]
ಪಾನೋಪೊಲಿಸ್ನ ಝಾಸಿಮಾಸ್ನಂತಹಾ, ಹಿಂದಿನ ಅನೇಕ ರಸವಾದಿ/ರಸಸಿದ್ಧಾಂತಿಗಳು ರಸವಿದ್ಯೆಯನ್ನು ಪಾರಮಾರ್ಥಿಕ ಪಂಥವನ್ನಾಗಿ ಭಾವಿಸಿದ್ದರೆಂದು ದಾಖಲಾಗಿದ್ದರೆ ಮಧ್ಯಯುಗದಲ್ಲಿ, ಅಭೌತಿಕ ಅಂಶಗಳು, ವಸ್ತುಗಳು, ಭೌತಿಕ ಸ್ಥಿತಿಗಳು ಹಾಗೂ ಸೂಕ್ಷ್ಮ ವಸ್ತು ಪ್ರಕ್ರಿಯೆಗಳನ್ನು ಪಾರಮಾರ್ಥಿಕ ಅಂಶಗಳು, ಪಾರಮಾರ್ಥಿಕ ಸ್ಥಿತಿಗಳು ಹಾಗೂ ಅಂತಿಮವಾಗಿ ಪರಿವರ್ತನೆಗಳಿಗೆ ಉಪಮೆಗಳಾಗಿ ಭಾವಿಸಲಾಗಿತ್ತು. ಈ ಅರ್ಥದಲ್ಲಿ, 'ರಸವಿದ್ಯೆಯ ಸೂತ್ರಗಳು' ಅಗೋಚರ, ತಮ್ಮ ನಿಜವಾದ ಪಾರಮಾರ್ಥಿಕ ಸಿದ್ಧಾಂತಗಳನ್ನು ಮರೆ ಮಾಡಿರುವಂತಹವಾಗಿದ್ದು ಮಧ್ಯಯುಗೀಯ ಕ್ರೈಸ್ತಮತೀಯ ಚರ್ಚ್ಗಳೊಂದಿಗೆ ವೈರುಧ್ಯ ಹೊಂದಿದ್ದರಿಂದಾಗಿ ಅನಿವಾರ್ಯವಾಗಿತ್ತು, ಇಲ್ಲವಾಗಿದ್ದರೆ ಪಾಷಂಡಿಗಳೆಂಬ ಆರೋಪದ ಮೇಲೆ ವಿಚಾರಣೆಗೊಳಗಾಗಿ "ಚಿತ್ರಹಿಂಸೆ ಹಾಗೂ ದಹನವಧೆ"ಗಳಿಗೆ ಒಳಪಡಬೇಕಾಗಿತ್ತು.[೧೦] ಹಾಗಾಗಿ, ಕೀಳು ಲೋಹಗಳನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವುದೂ ಹಾಗೂ ಸಾರ್ವತ್ರಿಕ ಸರ್ವೌಷಧಿಗಳೆರಡೂ ದೋಷಯುಕ್ತ, ರೋಗಯುಕ್ತ, ಕೆಡಬಹುದಾದ, ಹಾಗೂ ಅಲ್ಪಕಾಲಿಕ ಸ್ಥಿತಿಯಿಂದ ದೋಷರಹಿತ, ರೋಗಮುಕ್ತ, ಕೆಡಲಾರದ, ಹಾಗೂ ಶಾಶ್ವತ ಸ್ಥಿತಿಗಳೆಡೆಗೆ ವಿಕಸನ ಹೊಂದುವುದನ್ನು ಸೂಚಿಸುತ್ತವೆ; ಹಾಗೂ ರಸವಾದಿಯ ಶಿಲೆಯು ಆ ವಿಕಸನವನ್ನು ಸಾಧನೆಯನ್ನು ಆಗಗೊಡುವ ಒಂದು ಅತೀಂದ್ರಿಯ ಕೀಲಿಕೈ ಆಗಿದೆ. ಇದೇ ವಿಚಾರವನ್ನು ರಸವಾದಿ/ರಸಸಿದ್ಧಾಂತಿಯ ವ್ಯಕ್ತಿತ್ವಕ್ಕೆ ಅನ್ವಯಿಸುವುದಾದರೆ ಈ ಅವಳಿ ಗುರಿಗಳು ಅಜ್ಞಾನದಿಂದ ಜ್ಞಾನೋದಯದೆಡೆಗೆ ಆತನ ವಿಕಸನವನ್ನು ಹಾಗೂ ಶಿಲೆಯು ಆ ಗುರಿಯೆಡೆಗೆ ಕರೆದೊಯ್ಯುವ ಗುಪ್ತವಾದ ಪಾರಮಾರ್ಥಿಕ ಸತ್ಯ ಅಥವಾ ಶಕ್ತಿ ಆಗಿರುತ್ತದೆ. ಈ ಅಭಿಪ್ರಾಯದಿಂದ ಬರೆದ ಗ್ರಂಥಗಳಲ್ಲಿನ ಗೂಢ ರಸವಿದ್ಯಾ ಸಂಕೇತಗಳು, ಚಿತ್ರಗಳು ಹಾಗೂ ಹಿಂದಿನ ರಸವಿದ್ಯಾ ಸಾಧನೆಗಳ ಬಗೆಗಿನ ಗ್ರಾಂಥಿಕ ಚಿತ್ರಣಗಳು ಅಷ್ಟೇ ಗೂಢವಾದ ಇತರೆ ಸಾಧನೆಗಳ ಆಕರಗಳು, ಅರ್ಥಗಳು, ಅನ್ಯೋಕ್ತಿಗಳು ಸಾಧಾರಣವಾಗಿ ಅನೇಕ ಪದರಗಳಲ್ಲಿ ವ್ಯಕ್ತವಾಗಿರುತ್ತವೆ; ಹಾಗೂ ಅವುಗಳ ನಿಜವಾದ ಅರ್ಥವನ್ನು ತಿಳಿಯಲು "ಸಂಕೇತಗಳ ಅರ್ಥೈಸುವಿಕೆ"ಯನ್ನು ಕೈಗೊಳ್ಳಲು ಪ್ರಯಾಸಪೂರ್ವಕ ಪ್ರಯತ್ನ ಅಗತ್ಯವಾಗಿರುತ್ತದೆ.
ತನ್ನ ಆಲ್ಕೆಮಿಕಲ್ ಕ್ಯಾಟೆಚಿಸಂ ಗ್ರಂಥದಲ್ಲಿ, ಪ್ಯಾರಾಸೆಲ್ಸಸ್ ಸ್ಪಷ್ಟವಾಗಿ ಲೋಹಗಳನ್ನು ಚಿಹ್ನೆಯಾಗಿ ಬಳಸಿದ ಬಗ್ಗೆ ಸೂಚಿಸುತ್ತಾರೆ:
Q. ಸಿದ್ಧಾಂತಿಗಳು/ರಸವಾದಿಗಳು ತಮ್ಮ ವಸ್ತುಗಳ ಹೊರತೆಗೆಯುವುದರ ಬಗ್ಗೆ ಮಾತಾಡುವಾಗ ಚಿನ್ನ/ಸ್ವರ್ಣ ಹಾಗೂ ಬೆಳ್ಳಿಗಳ ಬಗೆಗಿನ ಪ್ರಸ್ತಾಪ ಮಾಡುತ್ತಾರೆ, ಅದನ್ನು ನಾವು ಏನೆಂದು ಭಾವಿಸಬೇಕು ಕಳಪೆ ಲೋಹಗಳಿಂದಾದ ಚಿನ್ನ/ಸ್ವರ್ಣ ಹಾಗೂ ಬೆಳ್ಳಿಗಳೆಂದೇ? A. ಖಂಡಿತಾ ಅಲ್ಲ; ಕಳಪೆ ಬೆಳ್ಳಿ ಹಾಗೂ ಚಿನ್ನ/ಸ್ವರ್ಣಗಳು ಸಂಪೂರ್ಣ ಸತ್ವವಿಲ್ಲದವುಗಳಾದರೆ, ಸಿದ್ಧಾಂತಿಗಳ ಲೋಹಗಳು ಸತ್ವಪೂರ್ಣವಾದವು.[೧೧]
ರಸವಿದ್ಯಾ ಸಂಕೇತಗಳನ್ನು ಮನಶ್ಶಾಸ್ತ್ರಜ್ಞರು ಹಾಗೂ ತತ್ವಜ್ಞಾನಿಗಳು ಆಗ್ಗಾಗ್ಗೆ ಬಳಸುತ್ತಾರೆ. ಕಾರ್ಲ್ ಜಂಗ್ ರಸವಿದ್ಯಾ ಸಂಕೇತಗಳನ್ನು ಹಾಗೂ ಸಿದ್ಧಾಂತವನ್ನು ಮರುಅಧ್ಯಯನ ನಡೆಸಿದರಲ್ಲದೇ ರಸವಿದ್ಯಾ ಕಾರ್ಯಗಳ ಆಂತರಿಕ ಅರ್ಥವನ್ನು ಪಾರಮಾರ್ಥಿಕ ಮಾರ್ಗವೆಂದು ಬಿಂಬಿಸಲು ಆರಂಭಿಸಿದರು.[೧೨][೧೩] ರಸವಿದ್ಯಾ ಸಿದ್ಧಾಂತ, ಸಂಕೇತಗಳು ಹಾಗೂ ವಿಧಾನಗಳು ಆಧುನಿಕಾ-ನಂತರದ ನವೋದಯ ಅಂಶಗಳ ಅನುಕೂಲತೆಯನ್ನು ತಕ್ಕಮಟ್ಟಿಗೆ ಪಡೆದುಕೊಂಡವು.[ಸೂಕ್ತ ಉಲ್ಲೇಖನ ಬೇಕು]
ಜಂಗ್ರವರು ವ್ಯಕ್ತೀಕರಣವನ್ನು ಸಾಧಿಸಲೆಂದೇ ಉದ್ದೇಶಿತವಾದ ಪಾಶ್ಚಿಮಾತ್ಯ ಪೂರ್ವ-ಮನಶ್ಶಾಸ್ತ್ರವನ್ನಾಗಿ ರಸವಿದ್ಯೆಯನ್ನು ಪರಿಭಾವಿಸುತ್ತಾರೆ.[೧೨] ಅವರ ಅರ್ಥೈಸುವಿಕೆಯಲ್ಲಿ, ರಸವಿದ್ಯೆಯು ನಾಸ್ಟಿಕ್ ಪಂಥವು ನವೋದಯದ,[೧೪] ಸಮಯದಲ್ಲಿ ತನ್ನ ಮೇಲೆ ನಡೆದ ಅನೇಕ ಶುದ್ಧೀಕರಣಗಳ ನಂತರವೂ ಉಳಿಯಲು ಸಾಧ್ಯವಾದಂತಹಾ ನಾಳ/ಪಾತ್ರ/ಮಾರ್ಗವಾಗಿತ್ತು, ಇದೇ ಕಲ್ಪನೆಯನ್ನೇ ಸ್ಟೀಫನ್ A. ಹೊಯೆಲರ್ರಂತಹಾ ಇನ್ನಿತರರೂ ಅನುಸರಿಸಿದ್ದರು. ಈ ಅರ್ಥದಲ್ಲಿ, ಜಂಗ್ರವರು ರಸವಿದ್ಯೆಯನ್ನು ಪೂರ್ವದ ಯೋಗವಿದ್ಯೆಗೆ ಸಮಾನವಾದದ್ದೆಂದು ಹಾಗೂ ಪೌರ್ವಾತ್ಯ ಧರ್ಮಗಳು ಹಾಗೂ ಸಿದ್ಧಾಂತಗಳಿಗಿಂತ ಪಾಶ್ಚಿಮಾತ್ಯ ಮನಸ್ಥಿತಿಗೆ ಹೆಚ್ಚು ಸೂಕ್ತವಾದದ್ದೆಂದು ಭಾವಿಸಿದರು. ರಸವಿದ್ಯೆಯ ಪದ್ಧತಿಯು ರಸವಾದಿ/ರಸಸಿದ್ಧಾಂತಿಯ ಮನಸ್ಥಿತಿ ಹಾಗೂ ಆತ್ಮವನ್ನು ಬದಲಿಸುವಂತೆ ತೋರುತ್ತಿತ್ತು. ಇದಕ್ಕೆ ವ್ಯತಿರೇಕವಾಗಿ, ವ್ಯಕ್ತೀಕರಣದ ಪ್ರಮುಖ ಘಟ್ಟದಲ್ಲಿರುವ ಪಾಶ್ಚಿಮಾತ್ಯ ಜನರ ಮನಸ್ಥಿತಿಯಲ್ಲಾದ ಸ್ವಾಭಾವಿಕ ಬದಲಾವಣೆಗಳು ಕೆಲ ಸಂದರ್ಭಗಳಲ್ಲಿ ರಸವಿದ್ಯೆಗೆ ಅನ್ವಯಿಸುವ ವ್ಯಕ್ತಿಯ ಸನ್ನಿವೇಶಕ್ಕೆ ಹೊಂದುವಂತಹಾ ಕಲ್ಪನೆಗಳನ್ನು ಸೃಷ್ಟಿಸುತ್ತವೆ.[೧೫]
ವಿಶ್ಲೇಷಣಾತ್ಮಕ ಮನಶ್ಶಾಸ್ತ್ರದ ಪರಿಭಾಷೆಯಲ್ಲಿ ಚೀನೀ ರಸವಿದ್ಯೆಯ ಗ್ರಂಥಗಳ ವ್ಯಾಖ್ಯಾನವು ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ರಸವಿದ್ಯಾ ಕಲ್ಪನೆಗಳನ್ನು ಹಾಗೂ ಮೂಲಭೂತ ಅಂಶಗಳನ್ನು ಹಾಗೂ ಅದರಿಂದಲೇ ಸಾಧ್ಯವಾದ ಆಂತರಿಕ ಮೂಲಗಳನ್ನು(ಮೂಲರೂಪಗಳು) ಹೋಲಿಸುವ ಉದ್ದೇಶವನ್ನೂ ಪೂರೈಸಿವೆ.[೧೬][೧೭]
ಜಂಗ್ರ ಓರ್ವ ಶಿಷ್ಯನಾದ ಮೇರಿ-ಲೂಸೀ ವಾನ್ ಫ್ರಾನ್ಜ್, ಜಂಗ್'ರ ರಸವಿದ್ಯೆಯ ಮೇಲಿನ ಹಾಗೂ ಅದರ ಮನೋವೈಜ್ಞಾನಿಕ ಅರ್ಥಗಳ ಬಗೆಗಿನ ಕುರಿತ ಅಧ್ಯಯನಗಳನ್ನು ಮುಂದುವರೆಸಿದರು.
ದ ಗ್ರೇಟ್ ವರ್ಕ್/ಅದ್ಭುತ ಕೃತಿ ; ಅದರ ನಾಲ್ಕು ಹಂತಗಳ ಅತೀಂದ್ರಿಯ ವ್ಯಾಖ್ಯಾನಗಳು:[೧೮]
15ನೇ ಶತಮಾನದ ನಂತರ, ಅನೇಕ ಲೇಖಕರು ಸಿಟ್ರಿನಿಟಾಸ್ ಅನ್ನು ರುಬೆಡೋ ನ ಮಟ್ಟಿಗೆ ಸಂಕ್ಷಿಪ್ತೀಕರಣಕ್ಕೆ ಪ್ರಯತ್ನಿಸಿದ್ದರಲ್ಲದೇ ಕೇವಲ ಮೂರು ಹಂತಗಳನ್ನು ಮಾತ್ರವೇ ಪರಿಗಣಿಸುತ್ತಾರೆ.[೧೯]
ಆದಾಗ್ಯೂ, ಸಿಟ್ರಿನಿಟಾಸ್ನಲ್ಲೇ ರಾಸಾಯನಿಕ ವಿವಾಹವು ನಡೆಯುವುದಲ್ಲದೇ ಸೈದ್ಧಾಂತಿಕ ಪಾದರಸವನ್ನು ಉತ್ಪಾದಿಸುವಲ್ಲದೇ, ಅದಿಲ್ಲದೇ ಈ ಕಾರ್ಯಗಳ ದಿಗ್ವಿಜಯಗಳಿಗೆ ಬೇಕಾದ ಸಿದ್ಧಾಂತಿಗಳ ಶಿಲೆಯನ್ನು ತಯಾರಿಸಲು ಸಾಧ್ಯವಾಗುವುದೇ ಇಲ್ಲ.[೨೦]
ಮ್ಯಾಗ್ನಮ್ ಓಪಸ್/ಮೇರು ಕೃತಿಯಲ್ಲಿಯೇ ಮ್ಯಾಗ್ನಮ್ ಓಪಸ್/ಮೇರು ಕೃತಿಅನ್ನು ಸಾಧಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಾಗಿದ್ದ ಸೇಕ್ರಮ್ ಪರ್ಟಿಕ್ಯುಲೇಗಳಿಂದ, ಅರ್ಥಾತ್ 'ಪವಿತ್ರ ಕಣಗಳಿಂದ' ವ್ಯುತ್ಪನ್ನವಾದ, ಸ್ಯಾಂಕ್ಟಮ್ ಮಾಲಿಕ್ಯುಲೇಗಳ, ಅರ್ಥಾತ್ 'ಪವಿತ್ರ ವಸ್ತುಗಳು/ದಿವ್ಯಪೂಜೆಗಳ'ನ್ನು ರಚಿಸುವ ಬಗ್ಗೆ ವಿವರಗಳಿತ್ತು.[ಸೂಕ್ತ ಉಲ್ಲೇಖನ ಬೇಕು]
ರಸವಿದ್ಯೆಯ ಇತಿಹಾಸವು ಸತ್ವವುಳ್ಳ ಶೈಕ್ಷಣಿಕ ಕ್ಷೇತ್ರವಾಗಿದೆ. ಸಾವಕಾಶವಾಗಿ ರಸಸಿದ್ಧಾಂತಿಗಳ ಅಸ್ಪಷ್ಟ ರಸವಿದ್ಯೆಯ ಪರಿಭಾಷೆಯ "ಅರ್ಥಗ್ರಹಿಕೆಯು" ಸಾಧ್ಯವಾಗುತ್ತಿದ್ದ ಹಾಗೆ ಆ ಪಂಥ ಹಾಗೂ ಪಾಶ್ಚಿಮಾತ್ಯ ಸಾಂಸ್ಕೃತಿಕ ಇತಿಹಾಸದ ಇತರೆ ವಿವಿಧ ಮುಖಗಳಾದ, ಬೌದ್ಧಿಕ ಸಮುದಾಯಗಳ ಸಾಮಾಜಿಕತೆ ಹಾಗೂ ಮಾನಸಿಕತೆ, ಕಬ್ಬಾಲ ಪಂಥ, ಪ್ರೇತಸಂಪರ್ಕ ಪಂಥ/ಆಧ್ಯಾತ್ಮಿಕ ಪಂಥ, ರೋಸಿಕ್ಯೂಷಿಯನ್ ಸಿದ್ಧಾಂತ, ಹಾಗೂ ಇತರ ಅತೀಂದ್ರಿಯ ಚಳುವಳಿಗಳು, ಗೂಢಲಿಪಿಶಾಸ್ತ್ರ, ಮಾಟ ಹಾಗೂ ವಿಜ್ಞಾನ ಹಾಗೂ ತತ್ವಜ್ಞಾನಗಳ ವಿಕಸನಗಳ ನಡುವಿನ ಬೌದ್ಧಿಕ ಸಂಪರ್ಕಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಹೊಂದುತ್ತಾ ಬಂದರು.
ಐತಿಹಾಸಿಕ ಗ್ರಹಿಕೆಯ ಪ್ರಕಾರ, ರಸವಿದ್ಯೆಯೆಂಬುದು ಕೀಳು ಲೋಹಗಳನ್ನು ಬೆಲೆಬಾಳುವ ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವ ವಿಧಾನಗಳ ಅನ್ವೇಷಣೆ. ಮೇರಿ-ಲೂಸೀ ವಾನ್ ಫ್ರಾನ್ಜ್ರ ಪ್ರಕಾರ, ರಸವಿದ್ಯೆಯ ಪ್ರಾರಂಭಿಕ ಮೂಲ ಸ್ರೋತಗಳು ಈಜಿಪ್ಟ್ನ ಲೋಹ ತಂತ್ರಜ್ಞಾನ ಹಾಗೂ ಮಮ್ಮೀಕರಣ, ಮೆಸೊಪೊಟೇಮಿಯನ್ ತಂತ್ರಜ್ಞಾನ ಹಾಗೂ ಜ್ಯೋತಿಷಶಾಸ್ತ್ರ, ಹಾಗೂ ಸಾಕ್ರಟೀಸ್-ಪೂರ್ವ ಗ್ರೀಕ್ ತತ್ವಜ್ಞಾನಿಗಳಾದ ಎಂಪೆಡಾಕ್ಲಸ್, ಮಿಲೆಟಸ್ನ ಥೇಲ್ಸ್ ಹಾಗೂ ಹೆರಾಕ್ಲಿಟಸ್ಗಳಾಗಿದ್ದರು.[೯]
ಪಾಶ್ಚಿಮಾತ್ಯ ರಸವಿದ್ಯೆಯ ಮೂಲಗಳು ಪ್ರಾಚೀನ ಈಜಿಪ್ಟ್ನೆಡೆಗೆ ಮರಳಿ ಕರೆದೊಯ್ಯುತ್ತವೆ.[೨೧] ಗ್ರೀಕ್ ಮಾಂತ್ರಿಕ ಜಂಬುಕಾಗದ ಗ್ರಂಥಗಳೊಂದಿಗೆ ಲೇಡೆನ್ ಜಂಬುಕಾಗದ ಗ್ರಂಥ X ಹಾಗೂ ಸ್ಟಾಕ್ಹೋಮ್ ಜಂಬುಕಾಗದ ಗ್ರಂಥವು ಇದುವರೆಗೆ ಅಸ್ತಿತ್ವದಲ್ಲಿರುವ ರಸವಿದ್ಯೆಯ ಮೇಲಿನ ಪ್ರಥಮ "ಗ್ರಂಥ"ವೆನಿಸಿದೆ. ಬೆ/ಬ್ಯಾಬಿಲೋನಿಯಾದ,[೨೨] ಗ್ರೀಕ್ ಹಾಗೂ ಭಾರತೀಯ ತತ್ವಜ್ಞಾನಿಗಳು ಒಟ್ಟಾರೆಯಾಗಿ ಕೇವಲ ನಾಲ್ಕು ಪ್ರಮಾಣಭೂತವಾದ ಮೂಲವಸ್ತುಗಳಿವೆ (ಇಂದಿನ 117 ರಾಸಾಯನಿಕ ಮೂಲವಸ್ತುಗಳ ಬದಲಿಗೆ, ಉಪಯುಕ್ತ ಹೋಲಿಕೆಯೆಂದರೆ ವಸ್ತುಗಳ ಬಹುಪಾಲು ಸದೃಶ ಸ್ಥಿತಿಗಳು); ಧರೆ, ಅಗ್ನಿ, ಜಲ, ಹಾಗೂ ವಾಯು. ಗ್ರೀಕ್ ತತ್ವಜ್ಞಾನಿಗಳು, ತಮ್ಮ ವಾದವನ್ನು ರುಜುವಾತುಪಡಿಸಲು ದಿಮ್ಮಿಯೊಂದನ್ನು ಸುಡುತ್ತಾ: ದಿಮ್ಮಿಯು ಧರೆ, ಅದನ್ನ ಸುಡುತ್ತಿರುವ ಜ್ವಾಲೆಗಳು ಅಗ್ನಿ, ಅದರಿಂದ ಹೊರಬರುವ ಹೊಗೆಯು ವಾಯು ಹಾಗೂ ಹೊಗೆಯಾಡುತ್ತಿರುವ ಇದ್ದಿಲು ಗುಳ್ಳೆಗಳೇಳುವ ನೀರು ಎನ್ನುತ್ತಾರೆ. ಇದರಿಂದಾಗಿ, ಈ ನಾಲ್ಕು "ಮೂಲವಸ್ತುಗಳು" ಎಲ್ಲಾವಸ್ತುಗಳ ಜೀವಾಳವಾಗಿವೆ ಎಂಬ ನಂಬಿಕೆ ಎಲ್ಲೆಡೆ ಹರಡಿತು, ನಂತರ ಮಧ್ಯಯುಗದಲ್ಲಿ ಜಬೀರ್ ಇಬನ್ ಹಯ್ಯಾನ್'ನ ಏಳು ಮೂಲವಸ್ತುಗಳ ಸಿದ್ಧಾಂತವು ಆ ಭಾವನೆಯನ್ನು ಬದಲಿಸಿದರೆ (ಗಂಧಕ ಹಾಗೂ ಪಾದರಸಗಳನ್ನೂ ಮೂಲವಸ್ತುಗಳಾಗಿ ಪರಿಗಣಿಸಿ), ಕೇವಲ ಆದಿ ಆಧುನಿಕ ಅವಧಿಯಲ್ಲಿ ಅದನ್ನೂ ಕೂಡಾ ರಾಸಾಯನಿಕ ಮೂಲವಸ್ತುಗಳ ಆಧುನಿಕ ಸಿದ್ಧಾಂತವು ಬದಲಿಸಿತು.
ರಸವಿದ್ಯೆಯು ನಾಲ್ಕು ಸಹಸ್ರವರ್ಷಗಳ ಕಾಲ ಹಾಗೂ ಮೂರು ಖಂಡಗಳಲ್ಲಿ ವ್ಯಾಪಿಸಿದ್ದ ಅನೇಕ ಸೈದ್ಧಾಂತಿಕ ಪರಂಪರೆಗಳನ್ನು ಹೊಂದಿದೆ. ಈ ಪರಂಪರೆಗಳು ಸಾಧಾರಣವಾಗಿ ಹೊಂದಿರುವ ಸಾಂಕೇತಿಕ ಹಾಗೂ ಗೂಢಲಿಪಿ ಭಾಷೆಗಳ ಬಗೆಗಿನ ಒಲವು, ಅವುಗಳ ಪರಸ್ಪರ ಪ್ರಭಾವಗಳನ್ನು ಹಾಗೂ "ಆನುವಂಶಿಕ" ಸಂಬಂಧಗಳನ್ನು ಪತ್ತೆಹಚ್ಚಲು ಕಷ್ಟಸಾಧ್ಯಗೊಳಿಸಿವೆ. ರಸವಿದ್ಯೆಯು 8ನೇ ಶತಮಾನದಲ್ಲಿ ಪ್ರಮುಖವಾಗಿ ಲಾಕ್ಷಣಿಕ/ಗೂಢಾರ್ಥದ ಸಾಧನೆಗಳನ್ನು ನಡೆಸಿದ ಪ್ರಾಚೀನ ಗ್ರೀಕ್ ಹಾಗೂ ಈಜಿಪ್ಟ್ನ ರಸವಾದಿ/ರಸಸಿದ್ಧಾಂತಿಗಳಿಗೆ ವ್ಯತಿರಿಕ್ತವಾಗಿ ಪ್ರಯೋಗಶಾಲೆ ಆಧಾರಿತ ವ್ಯವಸ್ಥಿತ ಹಾಗೂ ಪ್ರಾಯೋಗಿಕತೆಯನ್ನು ಪರಿಚಯಿಸಿದ ಮಹಮ್ಮದೀಯ ರಸವಾದಿ/ರಸಸಿದ್ಧಾಂತಿ, ಜಬೀರ್ ಇಬನ್ ಹಯ್ಯಾನ್ನ (ಯೂರೋಪ್ನಲ್ಲಿ "ಜೆ/ಗೆಬೆರ್" ಎಂದು ಪರಿಚಿತವಾಗಿರುವ) ವಿಧಾನಗಳೊಂದಿಗೆ ಮತ್ತಷ್ಟು ಸ್ಪಷ್ಟವಾಗುತ್ತಾ ಹೋಗುತ್ತದೆ.[೨೩]
ಇತರೆ ಪ್ರಸಿದ್ಧ ರಸವಾದಿ/ರಸಸಿದ್ಧಾಂತಿಗಳಲ್ಲಿ ಪರ್ಷಿಯಾದ ರ್ರ್ಹೇಜಸ್, ಅವಿಸೆನ್ನಾ ಹಾಗೂ ಇಮಾದ್ ಉಲ್-ದಿನ್; ಚೀನೀ ರಸವಿದ್ಯೆಯಲ್ಲಿ ವೇಯ್ ಬಾಯಂಗ್; ಹಾಗೂ ಭಾರತೀಯ ರಸವಿದ್ಯೆಯಲ್ಲಿ ನಾಗಾರ್ಜುನ; ಐರೋಪ್ಯ ರಸವಿದ್ಯೆಯಲ್ಲಿ ಆಲ್ಬರ್ಟಸ್ ಮ್ಯಾಗ್ನಸ್ ಹಾಗೂ ಸ್ಯೂಡೋ-ಗೆಬೆರ್; 17ನೇ ಶತಮಾನದ ಉತ್ತರಾರ್ಧದಲ್ಲಿ ಫ್ರಾನ್ಸ್ನಲ್ಲಿ ಪ್ರಕಟವಾದ 15 ಸಂಕೇತಗಳು ಹಾಗೂ ಚಿತ್ರಗಳ ಸರಣಿಯನ್ನು ಬಳಸಿ ಸಿದ್ಧಾಂತಿ ಶಿಲೆಯನ್ನು ರಚಿಸುವ ವಿಧಾನದ ಕೈಪಿಡಿ ಎಂದು ಹೇಳಲಾದ 'ಪದರಹಿತ ಗ್ರಂಥ' ಮುಟಸ್ ಲಿಬರ್ ,ದ ಅನಾಮಿಕ ಲೇಖಕ ಸೇರಿದ್ದಾರೆ. ಸಿದ್ಧಾಂತಿ ಶಿಲೆ ಎಂದರೆ ರಸವಿದ್ಯೆಯಲ್ಲಿ ಓರ್ವ ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಆತನು ಸುಡುವಿಕೆ ಇಲ್ಲವೇ ಮುಳುಗುವಿಕೆಗಳಿಗೆ ಒಳಗಾಗದೇ ಇದ್ದು ಸಾಧ್ಯವಾದರೆ ಆತನಿಗೆ ಮುಪ್ಪಿಲ್ಲದ ಅಮರತ್ವ ನೀಡುವ ಒಂದು ವಸ್ತುವಾಗಿತ್ತು; ಸಾಧಾರಣ ನಂಬಿಕೆ ಏನಿತ್ತೆಂದರೆ ಅಗ್ನಿ ಹಾಗೂ ಜಲಗಳು ಶಿಲೆಯನ್ನು ನಿರ್ಮಿಸುವಲ್ಲಿ ಬಳಸಲಾಗುವ ಎರಡು ಅತ್ಯುನ್ನತ ಅಂಶಗಳೆಂದು.
ಚೀನೀಯ ಹಾಗೂ ಐರೋಪ್ಯ ರಸವಾದಿ/ರಸಸಿದ್ಧಾಂತಿಗಳ ಸಂದರ್ಭದಲ್ಲಿ, ಅವೆರಡರ ನಡುವೆ ವ್ಯತ್ಯಾಸಗಳಿದ್ದವು. ಐರೋಪ್ಯ ರಸವಾದಿ/ರಸಸಿದ್ಧಾಂತಿಗಳು ಸೀಸವನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸಲು, ಪ್ರಯತ್ನದಲ್ಲಿನ ವಸ್ತುವು ಎಷ್ಟೇ ನಿರರ್ಥಕ ಅಥವಾ ವಿಷಕಾರಿಯಾಗಿದ್ದರೂ, ಶತಮಾನದ ಉತ್ತರಭಾಗದಲ್ಲಿ ಕಾನೂನುಬಾಹಿರವೆನಿಸುವವರೆಗೂ ಪ್ರಯತ್ನವನ್ನು ಮುಂದುವರೆಸುತ್ತಿದ್ದರು. ಚೀನೀಯರು ಸಿದ್ಧಾಂತಿ ಶಿಲೆ ಅಥವಾ ಸೀಸವನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವುದರ ಕಡೆಗೆ ಯಾವ ಗಮನವನ್ನೂ ಕೊಡದಿದ್ದರೂ; ಹೆಚ್ಚಿನ ಉತ್ತಮತೆಗೆ ಔಷಧಿಗಳ ಬಗ್ಗೆ ಹೆಚ್ಚು ಗಮನವನ್ನು ಕೊಟ್ಟಿದ್ದರು. ಜ್ಞಾನೋದಯದ ಕಾಲದಲ್ಲಿ, ಈ "ಸಿದ್ಧೌಷಧಗಳು" ಪರೀಕ್ಷಾ ಔಷಧವಾಗಿರದೇ ಇದ್ದ ಪಕ್ಷದಲ್ಲಿ ಅನಾರೋಗ್ಯಕ್ಕೆ ಪ್ರಬಲ ಮದ್ದಾಗಿರುತ್ತಿದ್ದವು. ಸಾಧಾರಣವಾಗಿ ಅನೇಕ ಪರೀಕ್ಷೆಗಳು ಮಾರಣಾಂತಿಕವಾಗಿರುತ್ತಿದ್ದವು, ಆದರೆ ಸ್ಥಿರೀಕರಣಗೊಂಡ ಸಿದ್ಧೌಷಧಗಳು ಶ್ರೇಷ್ಠ ಉದ್ದೇಶಗಳನ್ನು ಈಡೇರಿಸುತ್ತಿದ್ದವು. ಮತ್ತೊಂದೆಡೆ, ಮಹಮ್ಮದೀಯ ರಸವಾದಿ/ರಸಸಿದ್ಧಾಂತಿಗಳು ಲೋಹ ಪರಿವರ್ತನೆಯಿರಲಿ ಅಥವಾ ಕೃತ್ರಿಮ ಜೀವ ರಚನೆಯಾಗಲಿ ಅಥವಾ ಔಷಧಿಗಳಂತಹಾ ಪ್ರಾಯೋಗಿಕ ಉದ್ದೇಶಗಳೂ ಸೇರಿದಂತೆ ಅನೇಕ ಕಾರಣಗಳಿಗಾಗಿ ರಸವಿದ್ಯೆಯಲ್ಲಿ ಆಸಕ್ತಿ ತಳೆದಿದ್ದರು.
ಹದಿನೇಳನೇ ಶತಮಾನದ ಅವಧಿಯಲ್ಲಿ ರಸಾಯನಶಾಸ್ತ್ರವು "ದ ಸ್ಕೆಪ್ಟಿಕಲ್ ಕೈಮಿಸ್ಟ್" ಎಂಬ ಗ್ರಂಥದಲ್ಲಿ ಪ್ಯಾರಾಸೆಲ್ಸಸ್ ಹಾಗೂ ಹಿಂದಿನ ಅರಿಸ್ಟಾಟಲರ ಮೂಲವಸ್ತುಗಳ ಕಲ್ಪನೆಗಳ ಬಗ್ಗೆ ಹರಿಹಾಯ್ದಿದ್ದ ಕೆಲವೊಮ್ಮೆ "ರಸಾಯನಶಾಸ್ತ್ರದ ಪಿತಾಮಹ"ನೆಂದು,[೨೪] ಕರೆಯಲ್ಪಡುವ ರಾಬರ್ಟ್ ಬಾಯ್ಲೆರ ಕೃತಿಗಳ ಮೂಲಕ ರಸವಿದ್ಯೆಯಿಂದ ವ್ಯುತ್ಪನ್ನವಾದ ಪ್ರತ್ಯೇಕ ವಿಜ್ಞಾನ ಶಾಖೆಯಾಗಿ ಮೂಡಿತು. ಆದಾಗ್ಯೂ ಬಾಯ್ಲೆರ ಜೀವನಚರಿತ್ರಾಕಾರರು ಆಧುನಿಕ ರಸಾಯನಶಾಸ್ತ್ರದ ಬುನಾದಿಗಳನ್ನು ಹೇಗೆ ಸಿದ್ಧಪಡಿಸಿದರು ಎಂಬುದನ್ನು ಉತ್ಪ್ರೇಕ್ಷಿಸುವ ಭರದಲ್ಲಿ ತಾರ್ಕಿಕ ವಿಜ್ಞಾನಗಳು ಹಾಗೂ ರಸವಿದ್ಯೆಗಳ ಬಗ್ಗೆ ವಾದ, ಪದ್ಧತಿ ಹಾಗೂ ಸಿದ್ಧಾಂತಗಳೆಲ್ಲದರಲ್ಲೂ ಎಷ್ಟು ಸ್ಥಿರವಾಗಿ ಅಂಟಿಕೊಂಡಿದ್ದರು ಎಂಬುದನ್ನು ನಿರ್ಲಕ್ಷಿಸುತ್ತಾರೆ.[೨೫]
ಅದರ ತಾತ್ಕಾಲಿಕ ರೂಪರೇಖೆ ಹೀಗಿದೆ:
ಪರ್ಷಿಯನ್ ರಸವಿದ್ಯೆಯು ಆಧುನಿಕ ವೈಜ್ಞಾನಿಕ ರಸಾಯನಶಾಸ್ತ್ರದ ಹರಿಕಾರನಾಗಿತ್ತು. ರಸವಾದಿ/ರಸಸಿದ್ಧಾಂತಿಗಳು ಈಗ ಬಳಸುತ್ತಿರುವ ಅದೇ ಪ್ರಯೋಗಶಾಲೆಯ ಸಾಧನಗಳನ್ನೇ ಬಳಸುತ್ತಿದ್ದರು. ಈ ಸಾಧನಗಳು ಸಾಧಾರಣವಾಗಿ ಉತ್ತಮ ಸ್ಥಿತಿ ಅಥವಾ ದೃಢವಾಗಿರುತ್ತಿರಲಿಲ್ಲ, ವಿಶೇಷವಾಗಿ ಮಧ್ಯಯುಗೀಯ ಅವಧಿಯ ಯೂರೋಪ್ನಲ್ಲಿ ಈ ಸ್ಥಿತಿ ಇತ್ತು. ರಸವಾದಿ/ರಸಸಿದ್ಧಾಂತಿಗಳು ತಿಳುವಳಿಕೆಯಿಲ್ಲದ ಕಾರಣ ಅಸ್ಥಿರ ರಾಸಾಯನಿಕಗಳನ್ನು ತಯಾರಿಸಿದ ಕಾರಣ ಅನೇಕ ಪರಿವರ್ತನಾ ಪ್ರಯತ್ನಗಳು ವಿಫಲವಾದವು. ಇದನ್ನು ರಸವಾದಿ/ರಸಸಿದ್ಧಾಂತಿಗಳು ಕಾರ್ಯನಿರ್ವಹಿಸುತ್ತಿದ್ದ ಅಸುರಕ್ಷಿತ ವಾತಾವರಣವು ಮತ್ತಷ್ಟು ಹದಗೆಡಿಸಿತು.
16ನೇ ಶತಮಾನದವರೆಗೂ, ರಸವಿದ್ಯೆಯು ಯೂರೋಪ್ನಲ್ಲಿ ಮಹತ್ವದ ವಿಜ್ಞಾನವೆಂದು ಪರಿಗಣಿಸಲ್ಪಟ್ಟಿತ್ತು; ಉದಾಹರಣೆಗೆ, ಐಸಾಕ್ ನ್ಯೂಟನ್ ತನ್ನ ಬರವಣಿಗೆಗಳಲ್ಲಿ ಬಹಳಷ್ಟನ್ನು ಅವರು ಪ್ರಸಿದ್ಧರಾಗಿರುವ ದ್ಯುತಿಶಾಸ್ತ್ರ ಅಥವಾ ಭೌತಶಾಸ್ತ್ರಗಳಿಗಿಂತ ಹೆಚ್ಚಿಗೆ ರಸವಿದ್ಯೆಯ ಅಧ್ಯಯನದ ಬಗ್ಗೆ ಮೀಸಲಿಟ್ಟಿದ್ದರು (ನೋಡಿ ಐಸಾಕ್ ನ್ಯೂಟನ್'ರ ಅತೀಂದ್ರಿಯ ಅಧ್ಯಯನಗಳು). ಪಾಶ್ಚಿಮಾತ್ಯ ವಿಶ್ವದ ಇತರೆ ಶ್ರೇಷ್ಠರೆನಿಸಿದ ರಸವಾದಿ/ರಸಸಿದ್ಧಾಂತಿಗಳೆಂದರೆ ರೋಜ/ಗರ್ ಬೇಕನ್, ಸಂತ ಥಾಮಸ್ ಆಕ್ವಿನಾಸ್, ಟೈಚೋ ಬ್ರಾಹೇ, ಥಾಮಸ್ ಬ್ರೌನೆ, ಹಾಗೂ ಪಾರ್ಮಿಗಿಯಾನಿನೋ. 18ನೇ ಶತಮಾನದಲ್ಲಿ ವಸ್ತುಗಳ ಪರಿವರ್ತನೆ ಹಾಗೂ ಔಷಧಿಗಳ ಬಗ್ಗೆ ಹೆಚ್ಚು ನಿಖರವಾದ ಹಾಗೂ ಭರವಸೆದಾಯಕ ಚೌಕಟ್ಟನ್ನು ನೀಡಿದ ತರ್ಕಬದ್ಧ ಭೌತದ್ರವ್ಯವಾದ ಆಧಾರಿತ ಬ್ರಹ್ಮಾಂಡದ ಭವ್ಯ ಕಲ್ಪನೆಯ ಆಧುನಿಕ ರಸಾಯನಶಾಸ್ತ್ರದ ಹುಟ್ಟಿನೊಂದಿಗೆ ರಸವಿದ್ಯೆಯ ಪತನವು ಆರಂಭವಾಯಿತು.
ಸಾಂಪ್ರದಾಯಿಕ ಔಷಧಿಗಳು ಔಷಧವಿಜ್ಞಾನ ಅಥವಾ ಔಷಧವಿಜ್ಞಾನದ ಹಾಗೂ ಅತೀಂದ್ರಿಯ ತಂತ್ರಗಳ ಸಂಯೋಜನೆಯನ್ನು ಬಳಸಿಕೊಂಡು ರಸವಿದ್ಯೆಯ ಮೂಲಕ ಪರಿವರ್ತಿಸುವಿಕೆಯನ್ನು ಒಳಗೊಂಡಿರುತ್ತವೆ. ಚೀನೀಯ ಔಷಧವಿಜ್ಞಾನದಲ್ಲಿ ಪಾವೋ ಝಿರವರ ರಸವಿದ್ಯೆಯ ಸಂಪ್ರದಾಯಗಳು ಉಷ್ಣತೆ, ರುಚಿ, ಒಳಪಟ್ಟ ದೇಹಭಾಗ ಅಥವಾ ವಿಷತ್ವಗಳ ಪ್ರವೃತ್ತಿಯನ್ನು ಬದಲಿಸುತ್ತಿದ್ದವು. ಆಯುರ್ವೇದದಲ್ಲಿ ಭಾರೀ ಲೋಹಗಳನ್ನು ಪರಿವರ್ತಿಸಲು ಹಾಗೂ ವಿಷಯುಕ್ತ ಮೂಲಿಕೆಗಳ ವಿಷತ್ವವನ್ನು ಹೋಗಲಾಡಿಸಲು ಸಂಸ್ಕರಣವನ್ನು/ಸಂಸ್ಕಾರಗಳನ್ನು ಒಂದು ವಿಧಾನದಲ್ಲಿ ಬಳಸಲಾಗುತ್ತಿತ್ತು. ಇಂದಿನ ದಿನಮಾನದಲ್ಲೂ ಅದೇ ಪ್ರಕ್ರಿಯೆಗಳನ್ನು ಸಕ್ರಿಯವಾಗಿ ಬಳಸಲಾಗುತ್ತಿದೆ.[೨೭]
1919ರಲ್ಲಿ, ಅರ್ನೆಸ್ಟ್ ರುದರ್ಫರ್ಡ್ ಸಾರಜನಕವನ್ನು ಆಮ್ಲಜನಕವನ್ನಾಗಿ ಪರಿವರ್ತಿಸಲು ಕೃತ್ರಿಮ ವಿಯೋಜನೆಯನ್ನು ಬಳಸಿದ್ದರು.[೨೮] ಆಗಿನಿಂದ, ಈ ಮಾದರಿಯ ವೈಜ್ಞಾನಿಕ ಪರಿವರ್ತನೆ ಗಳನ್ನು ನಿಯತವಾಗಿ ಅಣುಭೌತಶಾಸ್ತ್ರ-ಸಂಬಂಧಿತ ವಿದಳನ ಹಾಗೂ ಇನ್ನಿತರ ಭೌತಿಕ ಪ್ರಕ್ರಿಯೆಗಳ ಉಪ-ಉತ್ಪನ್ನವಾಗಿ ಕಣ ವೇಗವರ್ಧಕಗಳು, ಅಣುಶಕ್ತಿ ಕೇಂದ್ರಗಳು ಹಾಗೂ ಅಣ್ವಸ್ತ್ರಗಳಂತಹಾ ಅಣು ಪ್ರಯೋಗಾಲಯಗಳು ಹಾಗೂ ಸೌಕರ್ಯಗಳಲ್ಲಿ ನಡೆಸಲಾಗುತ್ತಿತ್ತು.
ಆರ್ಕ್ನೆಯ ಸರ್ ಗರೇತ್ನ ವೈಯಕ್ತಿಕ, ಮಾನಸಿಕ, ಹಾಗೂ ಕಲಾತ್ಮಕ ಅಭಿವೃದ್ಧಿಯ ಮುಖ್ಯೋದ್ದೇಶವಾಗಿ ರಸವಿದ್ಯೆಯನ್ನು ಲೆ ಮೋರ್ಟೆ ಡಿ'ಅರ್ಥರ್[ಸೂಕ್ತ ಉಲ್ಲೇಖನ ಬೇಕು]ನಲ್ಲಿ ಸರ್ ಥಾಮಸ್ ಮೆಲೋರಿ ಬಳಸುತ್ತಾರೆ. ಸರ್ ಗರೇತ್'ನ ಶೋಧನೆಯು ಆತ ಮೊದಲು ಕಪ್ಪು ರಾವುತನನ್ನು ಸೋಲಿಸಿ ಆತನ ಲಾಂಛನ/ರಕ್ಷಾಕವಚವನ್ನು ಧರಿಸಿದಾಗ ನಿಗ್ರೆಡೋ ಹಂತಕ್ಕೆ ತಲುಪಿದಂತೆ ರಸವಿದ್ಯೆಯ ಪ್ರಕ್ರಿಯೆಗೆ ಏಕಕಾಲಿಕವಾಗಿ/ಸಂವಾದಿಯಾಗಿ/ಸಾದೃಶ್ಯವಾಗಿದೆ. ಇದಾದ ನಂತರ, ಗರೇತ್ ನಾಲ್ಕು ಮೂಲವಸ್ತುಗಳನ್ನು ಪ್ರತಿನಿಧಿಸುವ ರಾವುತರನ್ನು ಸೋಲಿಸಿ ಅವರ ಶಕ್ತಿಯನ್ನು ಅಂತರ್ಗತಗೊಳಿಸಿಕೊಳ್ಳುತ್ತಾನೆ. ಕೆಂಪು ರಾವುತನೊಂದಿಗೆ ಹೋರಾಡಿ ಸೋಲಿಸುವಾಗ (ಆತನ ಸಂಶೋಧನೆಯ ಒಟ್ಟಾರೆ ಗಮ್ಯ/ಉದ್ದೇಶ) ಆತ ರುಬೆಡೋ ಹಂತವನ್ನು ಒಳಗೊಂಡು ಹಾದುಹೋಗುತ್ತಾನೆ. ತನ್ನ ಶೋಧನೆಯ ಅಂತ್ಯದಲ್ಲಿ ಗರೇತ್, ತನ್ನ ಪ್ರೇಯಸಿ ಲಯನೆಸ್ಳಿಂದ ಉಂಗುರವೊಂದನ್ನು ಸ್ವೀಕರಿಸಿದಾಗ ಅದು ಆತನ ಲಾಂಛನ/ರಕ್ಷಾಕವಚವು ಬಹುವರ್ಣೀಯವಾಗುತ್ತದೆ. ಇದು ಸಾರ್ವವರ್ಣಿಕ ಸಿದ್ಧಾಂತಿ ಶಿಲೆಯನ್ನು ಸೂಚಿಸುತ್ತದಲ್ಲದೇ ಆತ ಬಹುವರ್ಣೀಯ ಲಾಂಛನ/ರಕ್ಷಾಕವಚವನ್ನು ಧರಿಸಿದಾಗ ಅಭೇದ್ಯನಾಗಿರುತ್ತಾನೆ.
ಬೆನ್ ಜಾನ್ಸನ್ರ, ದ ಆಲ್ಕೆಮಿಸ್ಟ್ ಎಂಬ ನಾಟಕವು ಈ ವಿಷಯವನ್ನು ವಿಡಂಬಿಸುವ ಹಾಗೂ ಸಂದೇಹದಿಂದ ನೋಡುವ ಕೃತಿಯಾಗಿದೆ.
ಗೊಯೆಟೆ'ಸ್ ಫಾಸ್ಟ್ನ, ಭಾಗ 2 ರಸವಿದ್ಯೆಯ ಸಂಕೇತಗಳಿಂದಲೇ ಸಂಪೂರ್ಣವಾಗಿ ಕೂಡಿದೆ.[೨೯]
ಡೇವಿಡ್ ಮೀಕಿನ್ರ ಹರ್ಮೆಟಿಕ್ ಫಿಕ್ಷನ್ಸ್ : ಆಲ್ಕೆಮಿ ಅಂಡ್ ಐರನಿ ಇನ್ ದ ನಾವೆಲ್ (ಕೀಲೆ ವಿಶ್ವವಿದ್ಯಾಲಯ ಮುದ್ರಣಾಲಯ, 1995)ನ ಪ್ರಕಾರ ವಿಲಿಯಮ್ ಗಾಡ್ವಿನ್, ಪರ್ಸಿ ಬೈಷೆ ಷೆಲ್ಲೆ, ಎಮೈಲ್ ಝೋಲಾ, ಜ್ಯೂಲ್ಸ್ ವರ್ನೆ, ಮಾರ್ಸೆಲ್ ಪ್ರೌಸ್ಟ್, ಥಾಮಸ್ ಮನ್ನ್, ಹರ್ಮನ್ ಹೆಸ್ಸೆ, ಜೇಮ್ಸ್ ಜಾಯ್ಸ್, ಗುಸ್ಟಾವ್ ಮೇರಿಂಕ್, ಲಿಂಡ್ಸೆ ಕ್ಲಾರ್ಕೆ, ಮಾರ್ಗ್ಯುರೈಟ್ ಯುವರ್ಸೆನಾರ್, ಉಂಬರ್ಟೋ ಎಕೋ, ಮೈಕೆಲ್ ಬ್ಯೂಟರ್, ಪಾಲೋ ಕೊಯೆಹ್ಲೋ, ಅಮಂಡಾ ಕ್ವಿಕ್, ಗೇಬ್ರಿಯೆಲ್ ಗರ್ಷಿಯಾ ಮಾರ್ಕ್ವೆಜ್ ಹಾಗೂ ಮಾರಿಯಾ ಝೆಪೆಸ್ರಂತಹಾ ಕಾದಂಬರಿಗಳು ಹಾಗೂ ಕವನಗಳಲ್ಲಿ, ರಸವಿದ್ಯೆಯನ್ನೂ ಪ್ರಸ್ತಾಪಿಸಲಾಗಿದೆ.
ಹಿಲರಿ ಮಾಂಟೆಲ್, ತಮ್ಮ ಫ್ಲಡ್ (1989, ಪೆಂಗ್ವಿನ್), ಕಾದಂಬರಿಯಲ್ಲಿ ಸ್ಪಾಗಿರಿಕ್ ಕಲೆಯನ್ನು ನಮೂದಿಸುತ್ತಾರೆ. 'ಪ್ರತ್ಯೇಕಿಸುವಿಕೆ, ಒಣಗಿಸುವಿಕೆ, ತೇವಗೊಳಿಸುವಿಕೆ, ಕರಗಿಸುವಿಕೆ, ಹೆಪ್ಪುಗಟ್ಟಿಸುವಿಕೆ, ಹುದುಗುಬರಿಸುವಿಕೆಗಳ ನಂತರ, ಶುದ್ಧೀಕರಣ ಹಾಗೂ ಮರುಜೋಡಣೆಗಳು ಬರುತ್ತವೆ: ವಿಶ್ವದಲ್ಲಿ ವಸ್ತುಗಳ ರಚಿಸುವಿಕೆಯನ್ನು ಇದುವರೆಗೂ ಅವಲೋಕಿಸಲಾಗಿಲ್ಲ. ಇದು ಓಪಸ್ ಕಾಂಟ್ರಾ ನೇಚರೆಮ್, ಇದೇ ಸ್ಪಾಗಿರಿಕ್ ಕಲೆ, ಇದೇ ರಸವಿದ್ಯಾ ವಿವಾಹ'. (ಪುಟ 79)
ಡಾಂಟೆ'ರ ಇನ್ಫರ್ನೋ/ನರಕದಲ್ಲಿ, ಇದನ್ನು 8ನೇ ವೃತ್ತದ ಹತ್ತನೇ ವರ್ತುಲದೊಳಗೆ ಇಡಲಾಗಿರುತ್ತದೆ.[೩೦]
ಏಂಜೀ ಸೇಜ್'ರ ಸೆಪ್ಟಿಮಸ್ ಹೀಪ್ ಸರಣಿಯಲ್ಲಿ, ಮಾರ್ಸೆಲಸ್ ಪೈನು ಮೂರನೇ ಪುಸ್ತಕವಾದ ಫಿಸಿಕ್ನಲ್ಲಿ ಮೊದಲು ಕಾಣಿಸಿಕೊಳ್ಳುವ ಓರ್ವ ಪ್ರಮುಖ ರಸವಾದಿ/ರಸಸಿದ್ಧಾಂತಿಯಾಗಿದ್ದಾನೆ.
ದ ಸೀಕ್ರೆಟ್ಸ್ ಆಫ್ ದ ಇಮ್ಮಾರ್ಟಲ್ ನಿಕೋಲಸ್ ಫ್ಲಾಮೆಲ್ ಸರಣಿಯಲ್ಲಿ, ಪ್ರಮುಖ ಪಾತ್ರಗಳಲ್ಲಿ ಒಬ್ಬ ರಸವಾದಿ/ರಸಸಿದ್ಧಾಂತಿಯಾಗಿದ್ದಾನೆ.
ಸ್ಟಾರ್ ವಾರ್ಸ್ ನಲ್ಲಿ, ಸಿತ್ಗಳು ತಮ್ಮದೇ ಆದ ಸ್ವರೂಪದಲ್ಲಿನ ಸಿತ್ ರಸವಿದ್ಯೆ ಎಂಬುದನ್ನು ಬಳಸುತ್ತಿರುತ್ತಾರೆ.
ಹ್ಯಾರಿ ಪಾಟ್ಟರ್ ಅಂಡ್ ದ ಫಿಲಾಸಫರ್ಸ್ ಸ್ಟೋನ್ ನಲ್ಲಿ, ನಿಕೋಲಸ್ ಫ್ಲಾಮೆಲ್ ಬಗ್ಗೆ ಲೋಹವನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವ ಶಿಲೆಯನ್ನು ಹಾಗೂ ಅಮರತ್ವದ ದಿವ್ಯೌಷಧವನ್ನು ತಯಾರಿಸುವ ಇಚ್ಛೆಯು ವಿವಿಧ ಕಾರಣಗಳಿಗೋಸುಗ ಖಳರು ಹಾಗೂ ಹ್ಯಾರಿ ಮತ್ತು ಸ್ನೇಹಿತರಲ್ಲಿ ಇರುತ್ತದೆಂಬುದರ ಬಗ್ಗೆ ಅನೇಕ ಉಲ್ಲೇಖಗಳಿವೆ.
ಮಂಗಾ ಹಾಗೂ ಸಜೀವಚಿತ್ರ ಸರಣಿ ಫುಲ್ಮೆಟಲ್ ಆಲ್ಕೆಮಿಸ್ಟ್ ಸಮಾನ ವಿನಿಮಯವನ್ನು ಆಧರಿಸಿದ ರಸವಿದ್ಯೆಯ ಮತ್ತಷ್ಟು ಕಾಲ್ಪನಿಕವಾದ ಆವೃತ್ತಿಯನ್ನು ತನ್ನ ಆಧಾರವಾಗಿ ಹೊಂದಿದೆ.
ಮಂಗಾ ಹಾಗೂ ಸಜೀವಚಿತ್ರ ಸರಣಿ ಬುಸೋ ರೆಂಕಿನ್ನಲ್ಲಿ, ರಸವಿದ್ಯೆಯನ್ನು ಆಯಾ ವ್ಯಕ್ತಿಯ ಹೋರಾಟ ಪ್ರವೃತ್ತಿಯ ಮೇಲೆ ಆಧಾರಿತವಾಗಿ ಆಯುಧವನ್ನಾಗಿ ಪರಿವರ್ತಿಸುವ ಕಾಕುಗನೆಯನ್ನು ರೂಪಿಸಲು ಬಳಸಲಾಗಿದೆ. ಅಷ್ಟೇ ಅಲ್ಲದೇ, ರಸವಿದ್ಯೆಯನ್ನು ಹೋಮನ್ಕುಲಿಯನ್ನು ರಚಿಸಲು ಸಹಾ ಬಳಸಲಾಗುತ್ತದೆ.
ಆನ್-ಮೇರಿ ಮೆಕ್ಡೊನಾಲ್ಡ್ರ ಗುಡ್ನೈಟ್ ಡೆಸ್ಟೆಮೋನಾ(ಶುಭೋದಯ ಜ್ಯೂಲಿಯೆಟ್) ನಾಟಕದಲ್ಲಿ ಪ್ರಮುಖ ಪಾತ್ರವು, ಷೇಕ್ಸ್ಪಿಯರ್ರ ಕೃತಿ ಒಥೆಲೋವನ್ನು ಆಧರಿಸಿ ರಸವಿದ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸಿ (ಯಶಸ್ವಿಯೂ) ಆಗುತ್ತಾನೆ.
ಇಪ್ಪತ್ತನೇ ಶತಮಾನದಲ್ಲಿ ರಸವಿದ್ಯೆಯ ಸಂಕೇತತ್ವವನ್ನು ತನ್ನ ಕೃತಿಯ ಬಗ್ಗೆ ತಿಳಿಸಲು ಹಾಗೂ ಮಾರ್ಗದರ್ಶಿಕೆಯಾಗಿ ಬಳಸಿದ್ದ ಅತಿ ವಾಸ್ತವಿಕತಾವಾದಿ ಕಲಾವಿದ ಮ್ಯಾಕ್ಸ್ ಅರ್ನೆಸ್ಟ್ರಿಗೆ ರಸವಿದ್ಯೆಯೇ ಅತ್ಯಂತ ಮೂಲಸ್ರೋತವಾಗಿತ್ತು. M.E. ವಾರ್ಲಿಕ್ ತಮ್ಮ ಮ್ಯಾಕ್ಸ್ ಅರ್ನೆಸ್ಟ್ ಅಂಡ್ ಅಲ್ಕೆಮಿ ಕೃತಿಯಲ್ಲಿ ಈ ಸಂಬಂಧವನ್ನು ವಿಷದವಾಗಿ ವಿವರಿಸಿದ್ದಾರೆ.
ರಿಚರ್ಡ್ ವೈನ್ರಿಂದ ಗಮನಿಸಲಾದಂತೆ ಆಡ್ ನೆಡ್ರಮ್, ಹಾಗೂ ರಸವಿದ್ಯೆಯಲ್ಲಿನ ಆಸಕ್ತಿಯು ಕೃತಿಯಲ್ಲಿ ಎದ್ದುಕಾಣಿಸುವ ವರ್ಣಚಿತ್ರಕಾರ ಮೈಕೆಲ್ ಪಿಯರ್ಸ್,[೩೧] ಗಳಂತಹಾ ಸಮಕಾಲೀನ ಕಲಾವಿದರು ರಸವಿದ್ಯೆಯನ್ನು ಸ್ಫೂರ್ತಿಯ ವಿಷಯವನ್ನಾಗಿ ಬಳಸುತ್ತಿದ್ದಾರೆ. ಆತನ ಕೃತಿಗಳಾದ ಫಾಮಾ [೩೨] ಹಾಗೂ ದ ಏವಿಯೇಟರ್ಸ್ ಡ್ರೀಮ್ [೩೩] ನಿರ್ದಿಷ್ಟವಾಗಿ ರಸವಿದ್ಯೆಯ ಕಲ್ಪನೆಗಳನ್ನು ಚಿತ್ರಕಲೆಯ ಅನ್ಯೋಕ್ತಿಯ ರೂಪದಲ್ಲಿ ಅಭಿವ್ಯಕ್ತಿಪಡಿಸುತ್ತವೆ.
This "see also" section may contain an excessive number of suggestions. Please ensure that only the most relevant suggestions are given and that they are not red links, and consider integrating suggestions into the article itself. (April 2010) |
ಇತರೆ ರಸವಿದ್ಯೆಯ ಪುಟಗಳು
ರಸವಿದ್ಯೆ ಹಾಗೂ ಮನೋವಿಶ್ಲೇಷಣೆ
ಇತರೆ ಮೂಲಗಳು
|
ಸಂಬಂಧಿತ ಹಾಗೂ ಪರ್ಯಾಯ ಸಿದ್ಧಾಂತಗಳು
ರಸವಾದಿ/ರಸಸಿದ್ಧಾಂತಿಗಳ ವಸ್ತುಗಳು
ವೈಜ್ಞಾನಿಕ ಸಂಪರ್ಕಗಳು
|
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.