ರಕ್ಷಣೆ
From Wikipedia, the free encyclopedia
Remove ads
From Wikipedia, the free encyclopedia
ರಕ್ಷಣೆ ಎಂದರೆ ಹೊರಗಿನ ಶಕ್ತಿಗಳಿಂದ ಉಂಟಾದ ಹಾನಿಯ ವಿರುದ್ಧ ಒಂದು ವಸ್ತುವನ್ನು ರಕ್ಷಿಸಲು ಕೈಗೊಳ್ಳಲಾದ ಯಾವುದೇ ಕ್ರಮ. ರಕ್ಷಣೆಯನ್ನು ಜೀವಿಗಳು ಸೇರಿದಂತೆ ಭೌತಿಕ ವಸ್ತುಗಳಿಗೆ, ವ್ಯವಸ್ಥೆಗಳಿಗೆ ಮತ್ತು ನಾಗರಿಕ ಹಾಗೂ ರಾಜಕೀಯ ಹಕ್ಕುಗಳಂತಹ ಅಮೂರ್ತ ವಸ್ತುಗಳಿಗೆ ಒದಗಿಸಬಹುದು. ರಕ್ಷಣೆಯನ್ನು ಒದಗಿಸುವ ಕಾರ್ಯವಿಧಾನಗಳು ವ್ಯಾಪಕವಾಗಿ ಬದಲಾಗುತ್ತಾವಾದರೂ, ಈ ಪದದ ಮೂಲಭೂತ ಅರ್ಥವು ಹಾಗೆಯೇ ಉಳಿಯುತ್ತದೆ. ವಿದ್ಯುತ್ ತಂತಿ ಅಳವಡಿಕೆಯ ಕೈಪಿಡಿಯಲ್ಲಿ ಕಂಡುಬಂದ ವಿವರಣೆಯಿಂದ ಇದನ್ನು ವಿಶದಗೊಳಿಸಲಾಗಿದೆ:
ವಿದ್ಯುತ್ ಉದ್ಯಮದಲ್ಲಿ ಬಳಸಲಾದ ರಕ್ಷಣೆ ಶಬ್ದದ ಅರ್ಥವು ದೈನಂದಿನ ಬಳಕೆಯಲ್ಲಿನ ಅರ್ಥಕ್ಕೆ ಭಿನ್ನವಾಗಿಲ್ಲ. ವೈಯಕ್ತಿಕ ಅಥವಾ ಹಣಕಾಸು ನಷ್ಟದಿಂದ ವಿಮೆಯ ಮೂಲಕ ಜನರು ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ ಮತ್ತು ಗಾಯ ಅಥವಾ ಅಸೌಖ್ಯದಿಂದ ರಕ್ಷಣಾತ್ಮಕ ಉಡುಪಿನ ಬಳಕೆಯಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳುತ್ತಾರೆ. ಮುಂದಕ್ಕೆ ಅವರು ತಮ್ಮ ಸ್ವತ್ತನ್ನು ಬೀಗಗಳು ಮತ್ತು/ಅಥವಾ ಅಲಾರಮ್ ವ್ಯವಸ್ಥೆಗಳಂತಹ ಭದ್ರತಾ ಕ್ರಮಗಳ ಅನುಸ್ಥಾಪನೆಯ ಮೂಲಕ ರಕ್ಷಿಸಿಕೊಳ್ಳುತ್ತಾರೆ.[೧]
ಯಾವುದೋ ರೀತಿಯ ರಕ್ಷಣೆಯು ಎಲ್ಲ ಜೀವಿಗಳ ಲಕ್ಷಣವಾಗಿದೆ, ಏಕೆಂದರೆ ಜೀವಿಗಳು ಅತಿನೇರಳೆ ಬೆಳಕಿನಂತಹ ಹಾನಿಮಾಡುವ ಪಾರಿಸರಿಕ ವಿದ್ಯಮಾನಗಳನ್ನು ಎದುರಿಸಲು ಕನಿಷ್ಠಪಕ್ಷ ಯಾವುದಾದರೂ ರಕ್ಷಣಾತ್ಮಕ ವಿಧಾನಗಳನ್ನು ವಿಕಸಿಸಿಕೊಂಡಿವೆ. ಮರಗಳ ಮೇಲಿನ ತೊಗಟೆ ಮತ್ತು ಪ್ರಾಣಿಗಳ ಮೇಲಿನ ಚರ್ಮದಂತಹ ಜೈವಿಕ ಕವಚಗಳು ವಿವಿಧ ಅಪಾಯಗಳಿಂದ ರಕ್ಷಣೆ ನೀಡುತ್ತವೆ, ಮತ್ತು ರೋಗಕಾರಕಗಳು ಹಾಗೂ ಅಳತೆಮೀರಿದ ನೀರಿನ ನಷ್ಟದಿಂದ ಜೀವಿಗಳನ್ನು ರಕ್ಷಿಸುವಲ್ಲಿ ಚರ್ಮವು ಪ್ರಮುಖ ಪಾತ್ರವಹಿಸುತ್ತದೆ. ಶಲ್ಕಗಳು ಮತ್ತು ಕೂದಲಿನಂತಹ ಹೆಚ್ಚುವರಿ ರಚನೆಗಳು ಹವಾಮಾನ ಮತ್ತು ಪರಭಕ್ಷಕಗಳಿಂದ ಮತ್ತಷ್ಟು ರಕ್ಷಣೆಯನ್ನು ನೀಡುತ್ತವೆ, ಮತ್ತು ಕೆಲವು ಪ್ರಾಣಿಗಳು ಸೂಜಿಯಂತಹ ರಚನೆಗಳು ಅಥವಾ ಛದ್ಮದಂತಹ ಲಕ್ಷಣಗಳನ್ನು ಹೊಂದಿರುತ್ತವೆ. ಇವು ಕೇವಲ ಪರಭಕ್ಷಕ ವಿರೋಧಿ ರೂಪಾಂತರಗಳಾಗಿ ಕಾರ್ಯನಿರ್ವಹಿಸುತ್ತವೆ. ತಮ್ಮ ಶರೀರವು ಒದಗಿಸಿದ ರಕ್ಷಣೆಗೆ ಅನೇಕ ಪ್ರಾಣಿಗಳು ಬಿಲ ತೋಡುವುದು ಅಥವಾ ಬೇರೆ ರೀತಿಯಾಗಿ ಹಾನಿಯ ಸಂಭಾವ್ಯ ಮೂಲಗಳಿಂದ ತಮ್ಮನ್ನು ಪ್ರತ್ಯೇಕಿಸುವ ಆವಾಸಸ್ಥಾನಗಳು ಅಥವಾ ವರ್ತನೆಗಳನ್ನು ಅಳವಡಿಸಿಕೊಳ್ಳುವ ಚಟುವಟಿಕೆಗಳನ್ನು ಸೇರಿಸಿಕೊಳ್ಳುತ್ತವೆ. ಮಾನವರು ಮೂಲತಃ ಬಾಹ್ಯ ಹವಾಮಾನದಿಂದ ತಮ್ಮನ್ನುಅ ರಕ್ಷಿಸಿಕೊಳ್ಳಲು ಪ್ರಾಗೈತಿಹಾಸಿಕ ಕಾಲದಲ್ಲಿ ಉಡುಪುಗಳು/ಬಟ್ಟೆಗಳನ್ನು ಧರಿಸುವುದು ಮತ್ತು ಮನೆಗಳನ್ನು ಕಟ್ಟಿಕೊಳ್ಳಲು ಆರಂಭಿಸಿದರು. ಮಾನವರು ಮತ್ತು ಪ್ರಾಣಿಗಳು ಇಬ್ಬರೂ ಹಲವುವೇಳೆ ಇತರರ ರಕ್ಷಣೆಯ ಬಗ್ಗೆ ಕೂಡ ಕಾಳಜಿ ಹೊಂದಿರುತ್ತಾರೆ, ಮತ್ತು ವಯಸ್ಕ ಪ್ರಾಣಿಗಳು ವಿಶೇಷವಾಗಿ ತಮ್ಮ ಮರಿಗಳನ್ನು ಪ್ರಕೃತಿಯ ಅಂಶಗಳು ಮತ್ತು ಪರಭಕ್ಷಕರಿಂದ ರಕ್ಷಿಸಲು ಒಲವು ಹೊಂದಿರುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.