ಕುಮಾರ ಗುಪ್ತ I ಗುಪ್ತ ಸಾರ್ವಭೌಮರಲ್ಲಿ ಪ್ರಸಿದ್ಧನಾದ ಎರಡನೆಯ ಚಂದ್ರಗುಪ್ತ ಮತ್ತು ಆತನ ಪಟ್ಟದ ರಾಣಿ ಧೃವಾ ದೇವಿಯ ಮಗ. ಇವನಿಗೆ ಮಹೇಂದ್ರಾದಿತ್ಯ ಮತ್ತು ಶಂಕರಾದಿತ್ಯ ಎಂಬ ಬಿರುದುಗಳಿದ್ದವು.[೨]

Quick Facts ಆಳ್ವಿಕೆ, ಪೂರ್ವಾಧಿಕಾರಿ ...
ಕುಮಾರ ಗುಪ್ತ I
Thumb
ಕುಮಾರ ಗುಪ್ತ ಹೊರಡಿಸಿದ ಚಿನ್ನದ ನಾಣ್ಯ
7th Gupta Emperor
ಆಳ್ವಿಕೆ c.414 – c.455 CE
ಪೂರ್ವಾಧಿಕಾರಿ ಚಂದ್ರಗುಪ್ತ II
ಉತ್ತರಾಧಿಕಾರಿ ಸ್ಕಂದಗುಪ್ತ
ಸಂತಾನ
Skandagupta
Purugupta[೧]
ತಂದೆ ಚಂದ್ರಗುಪ್ತ II
ತಾಯಿ ಧ್ರುವದೇವಿ
Close

ರಾಜ್ಯಭಾರ

ತನ್ನ ತಂದೆಯ ತರುವಾಯ ಈತ ಸಿಂಹಾಸನವನ್ನೇರಿ 415 ರಿಂದ 455 ವರೆಗೆ 40 ವರ್ಷಕಾಲ ರಾಜ್ಯವಾಳಿದ. ಈತ ಸ್ಕಂಧ ಕಾರ್ತಿಕೇಯನ ಭಕ್ತ. ಆ ದೇವತೆಯ ಚಿತ್ರವಿದ್ದ ನಾಣ್ಯಗಳನ್ನು ಹೊರಡಿಸಿದ. ಕಾಳಿದಾಸ ಮಹಾಕವಿಯ ಕುಮಾರಸಂಭವ ಕಾವ್ಯದ ನಾಯಕ ಕುಮಾರಗುಪ್ತನೆಂಬುದು ವಿದ್ವಾಂಸರ ಅಭಿಪ್ರಾಯ. ಇವನು ಅನೇಕ ಜೈತ್ರಯಾತ್ರೆಗಳನ್ನು ಕೈಗೊಂಡು ಅಶ್ವಮೇಧ ಯಾಗ ಮಾಡಿದ. ಕುಮಾರಗುಪ್ತನ ಆಡಳಿತ ಕಾಲದಲ್ಲಿ ಶಾಂತಿ ಸುಭದ್ರತೆಗಳು ನೆಲಸಿದ್ದುವು. ಆದರೆ ಇವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೂಣರ ದಾಳಿ ಆರಂಭವಾಯಿತು. ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು. ಕುಮಾರ ಗುಪ್ತನ ಮರಣಾನಂತರ ಸ್ಕಂಧಗುಪ್ತ ಪಟ್ಟಕ್ಕೆ ಬಂದ.

ವಂಶಾವಳಿ

More information Regnal titles ...
Regnal titles
ಪೂರ್ವಾಧಿಕಾರಿ
ಚಂದ್ರಗುಪ್ತ II
ಗುಪ್ತ ಸಾಮ್ರಾಜ್ಯ
414–455 CE
ಉತ್ತರಾಧಿಕಾರಿ
ಸ್ಕಂಧಗುಪ್ತ
Close

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.