Remove ads
From Wikipedia, the free encyclopedia
ಮೆಲ್ಬರ್ನ್ , (/[unsupported input]ˈmɛlbərn/, ಸ್ಥಳೀಯವಾಗಿ [ˈmælbən, -bn̩][೩][೪]) ವಿಕ್ಟೋರಿಯಾ ರಾಜ್ಯದ ರಾಜಧಾನಿಯಾಗಿದ್ದು, ಅತ್ಯಂತ ಜನಪ್ರಿಯ ನಗರವಾಗಿದೆ, ಹಾಗು ಸಿಡ್ನಿಯ ನಂತರ ಆಸ್ಟ್ರೇಲಿಯಾದ ಎರಡನೇ ಅತ್ಯಂತ ಜನಪ್ರಿಯ ನಗರವೆನಿಸಿದೆ.[೨] ಮೆಲ್ಬರ್ನ್ ಸಿಟಿ ಸೆಂಟರ್("ಸೆಂಟ್ರಲ್ ಬಿಸ್ನೆಸ್ ಡಿಸ್ಟ್ರಿಕ್ಟ್" ಅಥವಾ "CBD" ಎಂದೂ ಸಹ ಕರೆಯಲ್ಪಡುತ್ತದೆ)[೫] ವಿಸ್ತಾರವಾದ ಭೌಗೋಳಿಕ ಪ್ರದೇಶದ ಪ್ರಮುಖ ಕೇಂದ್ರಭಾಗ (ಅಥವಾ "ಮೆಟ್ರೋಪಾಲಿಟನ್ ಪ್ರದೇಶ") ಹಾಗು ಜನಗಣತಿಯ ಸಂಖ್ಯಾಶಾಸ್ತ್ರೀಯ ವಿಭಾಗವೆನಿಸಿದೆ—ಹಾಗು ಇವೆಲ್ಲವಕ್ಕೂ "ಮೆಲ್ಬರ್ನ್" ಎಂಬುದು ಸಾಮಾನ್ಯ ಹೆಸರಾಗಿದೆ. ಜೂನ್ ೨೦೦೯ರವರೆಗೂ, ವಿಸ್ತಾರವಾದ ಭೌಗೋಳಿಕ ಪ್ರದೇಶವು ಸರಿಸುಮಾರು ನಾಲ್ಕು ದಶಲಕ್ಷ ಜನಸಂಖ್ಯೆಯನ್ನು ಹೊಂದಿತ್ತು.[೧][೬] ಮೆಲ್ಬರ್ನ್ ನ ನಿವಾಸಿಗಳನ್ನು ಮೇಲ್ಬರ್ನಿಯನ್ಸ್ ಎಂದು ಕರೆಯಲಾಗುತ್ತದೆ.[೭]
Melbourne Victoria | |||||||||
---|---|---|---|---|---|---|---|---|---|
Coordinates | 37°48′49″S 144°57′47″E | ||||||||
Population | 4,077,036(Metropolitan area)[೧] (2nd) | ||||||||
• Density | ೧,೫೬೬/km2 (4,060/sq mi) (Urban area; 2006)[೨] | ||||||||
Established | 30 August 1835 | ||||||||
Elevation | 31 m (102 ft) | ||||||||
Area | ೮,೮೦೬ km2 (೩,೪೦೦�0 sq mi)(LGAs total) | ||||||||
Time zone | AEST (UTC+10) | ||||||||
• Summer (DST) | AEDT (UTC+11) | ||||||||
LGA(s) | 31 Municipalities across Greater Melbourne | ||||||||
County | Grant, Bourke, Mornington | ||||||||
State electorate(s) | 54 electoral districts and regions | ||||||||
Federal Division(s) | 23 Divisions | ||||||||
|
ಮಹಾನಗರವು, ಪೋರ್ಟ್ ಫಿಲಿಪ್ ಎಂದು ಕರೆಯಲ್ಪಡುವ ದೊಡ್ಡದಾದ ನೈಸರ್ಗಿಕ ಕೊಲ್ಲಿಯಲ್ಲಿ ಸ್ಥಿತವಾಗಿದೆ, ಜೊತೆಗೆ ನಗರದ ಹೃದಯಭಾಗವು ಯಾರ್ರ ನದಿಯ ನದಿಮುಖದಲ್ಲಿ ಸ್ಥಾಪಿತವಾಗಿದೆ(ಇದು ಕೊಲ್ಲಿಯ ಉತ್ತರ-ದಿಕ್ಕಿನಲ್ಲಿ ಸ್ಥಿತವಾಗಿದೆ).[೫] ಮಹಾನಗರ ಪ್ರದೇಶವು ನಂತರದಲ್ಲಿ ನಗರದ ಮಧ್ಯಭಾಗದಿಂದ ಪೋರ್ಟ್ ಫಿಲಿಪ್ ನ ಪೂರ್ವ ಹಾಗು ಪಶ್ಚಿಮ ತೀರ ರೇಖೆಗಳೊಂದಿಗೆ ದಕ್ಷಿಣಕ್ಕೆ ವಿಸ್ತರಿಸುತ್ತದೆ, ಹಾಗು ಒಳನಾಡಿಗೆ ವಿಸ್ತರಣೆಯನ್ನು ಹೊಂದುತ್ತದೆ. ನಗರದ ಹೃದಯಭಾಗವು ಮೆಲ್ಬರ್ನ್ ನಗರವೆಂದು ಕರೆಯಲ್ಪಡುವ ಪುರಸಭೆಯಲ್ಲಿ ಸ್ಥಿತವಾಗಿ, ಹಾಗು ಮೆಟ್ರೋಪಾಲಿಟನ್ ಪ್ರದೇಶವು ೩೦ಕ್ಕೂ ಹೆಚ್ಚಿನ ಪುರಸಭೆಗಳನ್ನು ಒಳಗೊಂಡಿದೆ.[೮]
ಮೆಲ್ಬರ್ನ್ ನಗರವು ೧೮೩೫ರಲ್ಲಿ (ಆಸ್ಟ್ರೇಲಿಯಾದಲ್ಲಿ ಯುರೋಪಿಯನ್ನರು ನೆಲೆಗೊಂಡ೪೭ ವರ್ಷಗಳ ನಂತರ) ವ್ಯಾನ್ ಡಿಯೇಮೆನ್'ಸ್ ಲ್ಯಾಂಡ್ ನ ನೆಲೆಗಾರರು ಸ್ಥಾಪಿಸಿದರು.[೯] ಇದಕ್ಕೆ ೧೮೩೭ರಲ್ಲಿ ಗವರ್ನರ್ ರಿಚರ್ಡ್ ಬೌರ್ಕೆ, ಮೆಲ್ಬರ್ನ್ ನ ಎರಡನೇ ವೈಕೌಂಟ್(ಅರ್ಲ್ ಗೂ, ಬ್ಯಾರನ್ ಗೂ ನಡುವಣ ಅಂತಸ್ತಿನ ಬ್ರಿಟಿಶ್ ವರಿಷ್ಠ) ವಿಲ್ಲಿಯಮ್ ಲ್ಯಾಂಬ್ ರ ಗೌರವಾರ್ಥವಾಗಿ ಈ ಹೆಸರನ್ನು ಇರಿಸಿದರು.[೯] ಮೆಲ್ಬರ್ನ್ ನನ್ನು ಒಂದು ನಗರವೆಂದು ೧೮೪೭ರಲ್ಲಿ ರಾಣಿ ವಿಕ್ಟೋರಿಯಾ ಅಧಿಕೃತವಾಗಿ ಘೋಷಿಸಿದಳು.[೧೦] ೧೮೫೧ರಲ್ಲಿ, ವಿಕ್ಟೋರಿಯಾದಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ವಸಾಹತು ನೆಲೆಯ ರಾಜಧಾನಿ ನಗರವಾಯಿತು.[೧೦] ೧೮೫೦ರಲ್ಲಿ ನಡೆದ ವಿಕ್ಟೋರಿಯನ್ ಗೋಲ್ಡ್ ರಷ್ ನ ಅವಧಿಯಲ್ಲಿ, ಇದನ್ನು ವಿಶ್ವದ ಅತ್ಯಂತ ದೊಡ್ಡ ಹಾಗು ಶ್ರೀಮಂತ ನಗರವಾಗಿ ಮಾರ್ಪಡಿಸಲಾಯಿತು.[೧೧] ೧೯೦೧ರಲ್ಲಿ ಆಸ್ಟ್ರೇಲಿಯಾ ಒಕ್ಕೂಟವು ರಚನೆಯಾದ ನಂತರ, ಇದು ೧೯೨೭ರವರೆಗೂ ಆಸ್ಟ್ರೇಲಿಯಾ ರಾಷ್ಟ್ರದಲ್ಲಿ ಹೊಸತಾಗಿ ನಿರ್ಮಾಣಗೊಂಡಿದ್ದ ಸರ್ಕಾರದ ಹಂಗಾಮಿ ಪೀಠವಾಗಿ ಕಾರ್ಯ ನಿರ್ವಹಿಸಿತು.[೧೨]
ಇಂದು ನಗರವು, ಕಲೆ, ವಾಣಿಜ್ಯ, ಶಿಕ್ಷಣ, ಮನರಂಜನೆ, ಕ್ರೀಡೆ ಹಾಗು ಪ್ರವಾಸದ ಕೇಂದ್ರಬಿಂದುವಾಗಿದೆ. ಇದು ಸಾಂಸ್ಕೃತಿಕ ಸಂಸ್ಥೆಗಳಾದ ಆಸ್ಟ್ರೇಲಿಯನ್ ಚಲನಚಿತ್ರ,(ಜೊತೆಗೆ ವಿಶ್ವದ ಮೊದಲ ಚಲನಚಿತ್ರದ ಮೂಲ ತಾಣವಾಗಿದೆ),[೧೩][೧೪] ಆಸ್ಟ್ರೇಲಿಯನ್ ದೂರದರ್ಶನ,[೧೫] ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್,[೧೬] ಆಸ್ಟ್ರೇಲಿಯನ್ ಚಿತ್ತಪ್ರಭಾವ ನಿರೂಪಣಾವಾದಿ ಕಲಾ ಚಳವಳಿ(ಇದು ಹೆಯಿಡೆಲ್ಬರ್ಗ್ ಪರಂಪರೆ ಎಂದು ಪರಿಚಿತವಾಗಿದೆ)[೧೭] ಹಾಗು ಆಸ್ಟ್ರೇಲಿಯನ್ ನೃತ್ಯ ಶೈಲಿಗಳ(ಉದಾಹರಣೆಗೆ ನ್ಯೂ ವೋಗ್ ಹಾಗು ಮೆಲ್ಬರ್ನ್ ಶಫ್ಫಲ್) ಗಳ ಉಗಮಸ್ಥಾನವಾಗಿದೆ.[೧೮][೧೯] ಇದು ಸಮಕಾಲೀನ ಹಾಗು ಸಾಂಪ್ರದಾಯಿಕ ಆಸ್ಟ್ರೇಲಿಯನ್ ಸಂಗೀತಕ್ಕೂ ಸಹ ಪ್ರಮುಖ ಕೇಂದ್ರವೆನಿಸಿದೆ.[೧೮] ಇದನ್ನು ಸಾಮಾನ್ಯವಾಗಿ "ಆಸ್ಟ್ರೇಲಿಯಾದ ಸಾಂಸ್ಕೃತಿಕ ರಾಜಧಾನಿ" ಎಂದು ಸೂಚಿಸಲಾಗುತ್ತದೆ.[೨೦]
ಇಕನಾಮಿಸ್ಟ್ ಗ್ರೂಪ್ ನ ಇಂಟೆಲಿಜೆನ್ಸ್ ಯೂನಿಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಮೆಲ್ಬರ್ನ್ ಮೂರು ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಒಂದೆನಿಸಿದೆ(೨೦೦೨ರಿಂದೀಚೆಗೆ),[೨೧][೨೨][೨೩][೨೪] RMITನ ಗ್ಲೋಬಲ್ ಯೂನಿವರ್ಸಿಟಿ ಸಿಟೀಸ್ ಇಂಡೆಕ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಅಗ್ರ ೧೦ ಗ್ಲೋಬಲ್ ಯೂನಿವರ್ಸಿಟಿ ನಗರವೆಂದು ಪರಿಚಿತವಾಗಿದೆ(೨೦೦೬ರಿಂದೀಚೆಗೆ)[೨೫][೨೬][೨೭] ಹಾಗು ೨ಥಿಂಕ್ ನೌ ಗ್ಲೋಬಲ್ ಇನೋವೇಷನ್ ಏಜೆನ್ಸಿ ಪ್ರಕಾರ ಅಗ್ರ ೨೦ ಗ್ಲೋಬಲ್ ಇನೋವೇಷನ್ ನಗರವೆಂದು ಪ್ರಸಿದ್ದವಾಗಿದೆ (೨೦೦೭ರಿಂದೀಚೆಗೆ).[೨೮][೨೯][೩೦][೩೧] ಈ ಮಹಾನಗರವು ವಿಶ್ವದ ಅತ್ಯಂತ ದೊಡ್ಡ ಟ್ರಾಮ್(ರಸ್ತೆ ರೈಲು ಕಂಬಿ) ವ್ಯವಸ್ಥೆಗೂ ಸಹ ತವರೆನಿಸಿದೆ.[೩೨] ಮೆಲ್ಬರ್ನ್ ಗೆ ಪ್ರಯಾಣ ಸೇವೆಯನ್ನು ಒದಗಿಸುವ ಮುಖ್ಯ ವಿಮಾನ ನಿಲ್ದಾಣವೆಂದರೆ ಮೆಲ್ಬರ್ನ್ ವಿಮಾನ ನಿಲ್ದಾಣ.
ಯುರೋಪಿಯನ್ ವಸಾಹತುಗಾರರ ಆಗಮನಕ್ಕೆ ಮುನ್ನ, ಈ ಪ್ರದೇಶವನ್ನು ಅಂದಾಜು ೩೧,೦೦೦ದಿಂದ ೪೦,೦೦೦ ವರ್ಷಗಳ ಕಾಲ[೩೩] ಮೂರು ಸ್ಥಳೀಯ ಬುಡಕಟ್ಟು ಜನಾಂಗಗಳ ೨೦,೦೦೦ ಅನಾಗರೀಕರು ಆಕ್ರಮಿಸಿಕೊಂಡಿದ್ದರು[೩೪]: ವುರುಂಡ್ಜೆರಿ, ಬೂನ್ವುರ್ರುಂಗ್ ಹಾಗು ವಥೌರೊಂಗ್.[೩೫] ಕುಲಿನ್ ರಾಷ್ಟ್ರೀಯ ಮೈತ್ರಿಕೂಟದ ಗುಂಪಿಗೆ ಈ ಪ್ರದೇಶವು ಸಭೆ ಸೇರುವ ಒಂದು ಪ್ರಮುಖ ಸ್ಥಳವಾಗಿತ್ತು, ಜೊತೆಗೆ ಆಹಾರ ಹಾಗು ನೀರಿನ ಒಂದು ಜೀವಾಧಾರ ನೆಲೆಯಾಗಿತ್ತು.[೩೬][೩೭] ವಿಕ್ಟೋರಿಯಾನಲ್ಲಿ ಮೊದಲ ಯುರೋಪಿಯನ್ ವಸಾಹತು ನೆಲೆಯು ಸಲೈವಾನ್ ಕೊಲ್ಲಿಯಲ್ಲಿ ೧೮೦೩ರಲ್ಲಿ ಸ್ಥಾಪನೆಯಾಗಿತ್ತು, ಇದು ಇಂದಿನ ಸೊರ್ರೆನ್ಟೋ ಪ್ರದೇಶಕ್ಕೆ ಹತ್ತಿರದಲ್ಲಿದೆ, ಆದರೆ ಮೂಲಾಧಾರಗಳ ಕೊರತೆಯ ಕಾರಣದಿಂದಾಗಿ ಈ ಪ್ರದೇಶವನ್ನು ನೆಲೆಯನ್ನಾಗಿ ಮಾಡಿಕೊಳ್ಳಬೇಕೆಂಬ ಉದ್ದೇಶವನ್ನು ಕೈಬಿಡಲಾಯಿತು. ಇದಾದ ೩೦ ವರ್ಷಗಳ ಬಳಿಕ, ಮತ್ತೊಂದು ವಸಾಹತು ನೆಲೆಗೆ ಪ್ರಯತ್ನಿಸಲಾಯಿತು.[೩೮]
೧೮೩೫ರ ಮೇ ಹಾಗು ಜೂನ್ ನಲ್ಲಿ, ಇದೀಗ ಕೇಂದ್ರ ಹಾಗು ಉತ್ತರ ಮೆಲ್ಬರ್ನ್ ಎಂದು ಕರೆಯಲ್ಪಡುವ ಪ್ರದೇಶವನ್ನು ಜಾನ್ ಬ್ಯಾಟ್ಮನ್ ಪರಿಶೋಧಿಸಿದರು, ಇವರು ತಾಸ್ಮೆನಿಯನ್ ಪೋರ್ಟ್ ಫಿಲಿಪ್ ಅಸೋಸಿಯೇಶನ್ ನ ಒಬ್ಬ ಪ್ರಮುಖ ಸದಸ್ಯನಾಗಿದ್ದರು, ಇವರು ಎಂಟು ಮಂದಿ ವುರುಂಡ್ಜೆರಿ ಹಿರಿಯರೊಂದಿಗೆ ಮಾತನಾಡಿ ಪ್ರದೇಶವನ್ನು600,000 acres (2,400 km2) ಖರೀದಿಸಿದರು.[೩೬][೩೭] ಬ್ಯಾಟ್ಮನ್, ಯಾರ್ರ ನದಿಯ ಉತ್ತರ ದಂಡೆಯಲ್ಲಿ ಒಂದು ಪ್ರದೇಶವನ್ನು ಆಯ್ದುಕೊಂಡು "ಹಳ್ಳಿಯ ನಿರ್ಮಾಣ ಮಾಡಲು ಈ ಸ್ಥಳ ಸೂಕ್ತವೆಂದು" ಘೋಷಿಸಿದರು, ಹಾಗು ತಾಸ್ಮೇನಿಯಾನಲ್ಲಿರುವ ಲುನ್ಸೆಸ್ಟನ್ ಗೆ ಹಿಂದಿರುಗಿದರು(ಅಲ್ಲಿಂದೀಚೆಗೆ ಇದು ವ್ಯಾನ್ ಡಿಯೇಮೆನ್'ಸ್ ಲ್ಯಾಂಡ್ ಎಂದು ಪರಿಚಿತವಾಗಿದೆ). ಈ ವೇಳೆಗೆ ಹೊಸ ಹಳ್ಳಿಯನ್ನು ನಿರ್ಮಾಣ ಮಾಡಲು ಅಸೋಸಿಯೇಶನ್ ನಿಂದ ಒಂದು ವ್ಯವಹಾರ ಗುಂಪು ಬಂದಿತು, ಈ ಪ್ರತ್ಯೇಕ ಗುಂಪನ್ನು ರಚಿಸಿ, ಅದಕ್ಕೆ ಹಣಕಾಸಿನ ನೆರವನ್ನು ಜಾನ್ ಪಸ್ಕಾಯೇ ಫಾವ್ಕ್ನರ್ ನೀಡಿದರು, ಇವರು ಈಗಾಗಲೇ ಈ ಪ್ರದೇಶಕ್ಕೆ (೩೦ ಆಗಸ್ಟ್ ೧೮೩೫) ತಮ್ಮ ಹಡಗು ಎಂಟರ್ಪ್ರೈಜ್ ಮೂಲಕ ಆಗಮಿಸಿರುತ್ತಾರೆ ಹಾಗು ಈ ಪ್ರದೇಶದಲ್ಲಿ ವಸಾಹತು ನೆಲೆಯನ್ನು ಸ್ಥಾಪಿಸಿರುತ್ತಾರೆ. ಎರಡೂ ಗುಂಪುಗಳು ವಸಾಹತು ನೆಲೆಯನ್ನು ಹಂಚಿಕೊಳ್ಳಲು ಅಂತಿಮವಾಗಿ ನಿರ್ಧರಿಸಿದವು.
ಮೂಲನಿವಾಸಿಗಳೊಂದಿಗೆ ಬ್ಯಾಟ್ಮನ್ ರ ಒಪ್ಪಂದವನ್ನು ನ್ಯೂ ಸೌತ್ ವೇಲ್ಸ್ ಸರ್ಕಾರವು ಅಕ್ರಮವೆಂದು ಘೋಷಿಸಿತು(ಆ ಅವಧಿಯಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಮುಖ್ಯಭೂಮಿಯು ಈ ಸರ್ಕಾರದ ಆಡಳಿತದಲ್ಲಿತ್ತು), ಇದು ಅಸೋಸಿಯೇಶನ್ ಗೆ ಪರಿಹಾರವನ್ನು ನೀಡಿತು.[೩೬] ಆದಾಗ್ಯೂ, ಇದರರ್ಥ ವಸಾಹತುಗಾರರು ಇದೀಗ ಸರ್ಕಾರಿ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದರು, ಸರ್ಕಾರವು ಒಲ್ಲದ ಮನಸ್ಸಿನಿಂದ ವಸಾಹತುಗಾರರ ನಿರ್ಧಾರಿತ ಸಂಗತಿ ಯನ್ನು ಸ್ವೀಕರಿಸಿತು ಹಾಗು ಪಟ್ಟಣದ ಸ್ಥಾಪನೆಗೆ ಅವಕಾಶ ನೀಡಿತು(ಇದು ಮೊದಲಿಗೆ ಹಲವಾರು ಹೆಸರುಗಳಿಂದ ಪರಿಚಿತವಾಗಿತ್ತು, ಇದರಲ್ಲಿ 'ಬ್ಯಾಟ್ಮನಿಯ' ಹಾಗು 'ಡುಟರ್ಗಲ್ಲ' ಎಂಬ ಹೆಸರುಗಳು ಸೇರಿವೆ).[೩೯][೪೦]
೧೮೩೬ರಲ್ಲಿ, ಗವರ್ನರ್ ಬೌರ್ಕೆ, ನ್ಯೂ ಸೌತ್ ವೇಲ್ಸ್ ನ ಪೋರ್ಟ್ ಫಿಲಿಪ್ ಜಿಲ್ಲೆಯ ಆಡಳಿತಾತ್ಮಕ ರಾಜಧಾನಿ ನಗರವೆಂದು ಘೋಷಿಸಿದ, ಹಾಗು ನಗರಕ್ಕೆ ಮೊದಲ ಯೋಜನೆಗೆ ಹೊಡಾಲ್ ಗ್ರಿಡ್ ನ್ನು ೧೮೩೭ರಲ್ಲಿ ನಿಯೋಜಿಸಿದ.[೪೧] ನಂತರ ಅದೇ ವರ್ಷದಲ್ಲಿ ಈ ವಸಾಹತುನೆಲೆಯನ್ನು ಮೆಲ್ಬರ್ನ್ ಎಂದು ಆಗಿನ ಬ್ರಿಟಿಶ್ ಪ್ರಧಾನಿ ವಿಲ್ಲಿಯಮ್ ಲ್ಯಾಂಬ್, ಮೆಲ್ಬರ್ನ್ ನ ಎರಡನೇ ವೈಕೌಂಟ್ ರ ಗೌರವಾರ್ಥವಾಗಿ ಇರಿಸಲಾಯಿತು, ಇವರು ಡರ್ಬಿಶೈರ್ ನ ಮೆಲ್ಬರ್ನ್ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ಸಾರ್ವಜನಿಕ ಅಂಚೆ ಕಚೇರಿಯು ಇದೆ ಹೆಸರಿನಡಿಯಲ್ಲಿ ೧೩ ಏಪ್ರಿಲ್ ೧೮೩೭ರಲ್ಲಿ ಆರಂಭಗೊಂಡಿತು.[೪೨] ಮೆಲ್ಬರ್ನ್ ನನ್ನು ಒಂದು ನಗರವೆಂದು ೨೫ ಜೂನ್ ೧೮೪೭ರಲ್ಲಿ ರಾಣಿ ವಿಕ್ಟೋರಿಯಾಳ ಅಂಗೀಕಾರ ಪತ್ರದ ನೀಡಿಕೆಯೊಂದಿಗೆ ಘೋಷಿಸಲಾಯಿತು.[೧೦] ಪೋರ್ಟ್ ಫಿಲಿಪ್ ಜಿಲ್ಲೆಯು ೧೮೫೧ರಲ್ಲಿ ವಿಕ್ಟೋರಿಯಾದ ಪ್ರತ್ಯೇಕ ವಸಾಹತು ನೆಲೆಯಾಯಿತು, ಜೊತೆಗೆ ಮೆಲ್ಬರ್ನ್ ಇದರ ರಾಜಧಾನಿ ನಗರವಾಯಿತು.
೧೮೫೧ರಲ್ಲಿ ವಿಕ್ಟೋರಿಯಾನಲ್ಲಿ ಆವಿಷ್ಕಾರವಾದ ಚಿನ್ನವು ವಿಕ್ಟೋರಿಯನ್ ಗೋಲ್ಡ್ ರಷ್ ಗೆ ದಾರಿ ಮಾಡಿಕೊಟ್ಟಿತು, ಹಾಗು ಪ್ರಮುಖ ಬಂದರಾಗಿದ್ದ ಮೆಲ್ಬರ್ನ್, ಪ್ರದೇಶಕ್ಕೆ ಹೆಚ್ಚಿನ ಸೇವೆಗಳನ್ನು ಒದಗಿಸುವುದರ ಜೊತೆಗೆ, ತ್ವರಿತ ಬೆಳವಣಿಗೆಯನ್ನು ಕಂಡಿತು. ಕೆಲವೇ ತಿಂಗಳುಗಳೊಳಗೆ, ನಗರದ ಜನಸಂಖ್ಯೆಯು ಸುಮಾರು ೨೫,೦೦೦ ರಿಂದ ೪೦,೦೦೦ ಸ್ಥಳೀಯರಿಂದ ಮುಕ್ಕಾಲರಷ್ಟು ಅಧಿಕಗೊಂಡಿತು.[೪೩] ಅಲ್ಲಿಂದೀಚೆಗೆ, ಜನಸಂಖ್ಯೆಯು ಶೀಘ್ರತರವಾಗಿ ಬೆಳೆಯಿತು ಹಾಗು ೧೮೬೫ರ ಸುಮಾರಿಗೆ ಸಿಡ್ನಿಗಿಂತ ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ನಗರವಾಗಿ ಪ್ರಸಿದ್ಧಿಯನ್ನು ಪಡೆಯಿತು.[೪೪]
ಅಂತರರಾಜ್ಯ ಹಾಗು ವಿದೇಶಿ ವಲಸಿಗರ ಮಹಾಪೂರವು, ಅದರಲ್ಲೂ ವಿಶೇಷವಾಗಿ ಐರಿಶ್, ಜರ್ಮನ್ ಹಾಗು ಚೈನೀಸ್ ಜನಸಂಖ್ಯೆಯು, ಯಾರ್ರ ನದಿಯ ದಕ್ಷಿಣ ದಂಡೆಯಲ್ಲಿ ಸ್ಥಿತವಾಗಿದ್ದಂತಹ ತಾತ್ಕಾಲಿಕ "ಡೇರೆ ನಗರ"ವನ್ನು ಒಳಗೊಂಡಂತೆ ಕೊಳೆಗೇರಿಗಳ ಅಭಿವೃದ್ಧಿಯನ್ನು ಕಂಡಿತು. ಚೈನಾದಿಂದ ಬಂದಂತಹ ವಲಸಿಗರು ೧೮೫೧ರಲ್ಲಿ ಚೈನಾಟೌನ್ ನನ್ನು ಸ್ಥಾಪಿಸಿದರು, ಇದು ಪಾಶ್ಚಿಮಾತ್ಯ ಜಗತ್ತಿನ ಅತ್ಯಂತ ದೀರ್ಘಕಾಲಿಕವಾದ ಚೈನೀಸ್ ವಸಾಹತು ನೆಲೆಯಾಗಿ ಉಳಿದಿದೆ.[೪೫] ಯುರೇಕ ದಂಗೆಯ ಪರಿಣಾಮವಾಗಿ, ಮೆಲ್ಬರ್ನ್ ನಲ್ಲಿದ್ದ ಗಣಿಗಾರರು ಪಲಾಯನವಾಗುವಂತೆ ಸಾರ್ವಜನಿಕರು ನೀಡಿದ ಬೆಂಬಲವು, ವಸಾಹತು ನೆಲೆಯಲ್ಲಿ ಪ್ರಮುಖವಾದ ರಾಜಕೀಯ ಬದಲಾವಣೆಗಳಿಗೆ ನಾಂದಿ ಹಾಡಿತು. ಯುರೇಕ ಸ್ಟಾಕೇಡ್ ದಂಗೆಯಲ್ಲಿ ಭಾಗಿಯಾಗಿದ್ದ ಹಲವು ರಾಷ್ಟ್ರಗಳ ಜನರು ಹಾಗು ಬುರ್ಕೆ ಹಾಗು ವಿಲ್ಸ್ ದಂಡಯಾತ್ರೆಯು, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ವಲಸೆಯ ಹರಿವಿನ ಬಗ್ಗೆ ಕೆಲವು ಸೂಚನೆಯನ್ನು ನೀಡಿತು.[೪೬]
ಜನಸಂಖ್ಯೆಯಲ್ಲಿ ಬೆಳವಣಿಗೆ ಹಾಗು ನಗರಕ್ಕೆ ಚಿನ್ನದ ಹರಿವು, ಬೃಹತ್ತಾದ ಪೌರೋಚಿತ ಕಟ್ಟಡಗಳ ನಿರ್ಮಾಣದ ಆರಂಭಿಕ ಯೋಜನೆಯನ್ನು ಚುರುಕುಗೊಳಿಸಿತು, ಜೊತೆಗೆ ಮೆಲ್ಬರ್ನ್ ನಲ್ಲಿ ಇಂದಿಗೂ ಉಳಿದಿರುವ ಸಾಂಸ್ಥಿಕ ಕಟ್ಟಡಗಳ ವಿನ್ಯಾಸ ಹಾಗು ನಿರ್ಮಾಣವು ಆರಂಭಗೊಂಡವು, ಇದರಲ್ಲಿ ಸಂಸತ್ತು ಭವನ, ಖಜಾನೆ ಕಟ್ಟಡ, ಖಜಾನೆ ಸ್ಥಳಾವಕಾಶ, ಹಳೆ ಮೆಲ್ಬರ್ನ್ ಸೆರೆಮನೆ, ವಿಕ್ಟೋರಿಯಾ ಸೈನಿಕ ಸಾಲುಮನೆ, ಸರ್ಕಾರಿ ಗ್ರಂಥಾಲಯ, ಸರ್ವೋಚ್ಚ ನ್ಯಾಯಾಲಯ, ವಿಶ್ವವಿದ್ಯಾನಿಲಯ, ಸಾರ್ವಜನಿಕ ಅಂಚೆ ಕಚೇರಿ, ಸರ್ಕಾರಿ ಕಟ್ಟಡ, ಕಸ್ಟಮ್ಸ್ ಕಟ್ಟಡ ಮೆಲ್ಬರ್ನ್ ಟೌನ್ ಹಾಲ್, ಸೇಂಟ್ ಪಾಲ್ಸ್, ಸೇಂಟ್ ಪ್ಯಾಟ್ರಿಕ್ಸ್ ಕಥಿಡ್ರಲ್ ಗಳು ಹಾಗು ಇಂದಿಗೂ ಇರುವ ರಾಣಿ ವಿಕ್ಟೋರಿಯಾ ಮಾರುಕಟ್ಟೆಯನ್ನು ಒಳಗೊಂಡಂತೆ ಹಲವಾರು ಪ್ರಮುಖ ಮಾರುಕಟ್ಟೆಗಳು ಸೇರಿವೆ. ನಗರದ ಒಳಗಿರುವ ಉಪನಗರಗಳನ್ನು, ಅಗಲ ಹೆದ್ದಾರಿಗಳು ಹಾಗು ಉದ್ಯಾನವನಗಳಿಗೆ ಸಂಪರ್ಕ ಹೊಂದುವಂತೆ ಯೋಜಿಸಲಾಗಿತ್ತು. ಮೆಲ್ಬರ್ನ್ ಒಂದು ಪ್ರಮುಖ ಹಣಕಾಸು ವಹಿವಾಟಿನ ಕೇಂದ್ರವಾಗಿದೆ, ಹಲವಾರು ಬ್ಯಾಂಕುಗಳಿಗೆ ನೆಲೆಯೆನಿಸಿದೆ, ೧೮೬೧ರಲ್ಲಿ ಸ್ಥಾಪನೆಯಾದ ಆಸ್ಟ್ರೇಲಿಯಾದ ಮೊದಲ ಶೇರು ವಿನಿಮಯಕ್ಕೆ ರಾಜವಂಶದ ಟನ್ಕ ಸಾಲೆಯಾಗಿತ್ತು.[೪೭]
ಬಿಳಿಯ ವಸಾಹತು ನೆಲೆಗಾರರ ಆಗಮನಕ್ಕೆ ಮುನ್ನ, ಆ ಪ್ರದೇಶದಲ್ಲಿದ್ದ ಸ್ಥಳೀಯರ ಜನಸಂಖ್ಯೆಯು ೧೫,೦೦೦ವೆಂದು ಅಂದಾಜಿಸಲಾಗಿತ್ತು, ಆದರೆ ನೆಲೆಯನ್ನು ಅನುಸರಿಸಿ ಈ ಸಂಖ್ಯೆಯು ೮೦೦ಕ್ಕೂ ಕಡಿಮೆ ಸಂಖ್ಯೆಗೆ ಇಳಿಯಿತು,[೪೮] ಹಾಗು ೧೮೬೩ರ ಹೊತ್ತಿಗೆ ಅಂದಾಜು ೮೦%ನಷ್ಟು ಜನಸಂಖ್ಯೆಯು ಕ್ಷೀಣಿಸಿತು, ಇದಕ್ಕೆ ಮುಖ್ಯ ಕಾರಣವೆಂದರೆ ಸಾಂಕ್ರಾಮಿಕ ರೋಗಗಳು, ಅದರಲ್ಲೂ ವಿಶೇಷವಾಗಿ ಸಿಡುಬು ಕಾಯಿಲೆ.[೩೪]
ವಿಕ್ಟೋರಿಯನ್ ಗೋಲ್ಡ್ ರಷ್ ನ ಆರ್ಥಿಕ ಏರಿಕೆಯು ೧೮೮೦ರ ಅವಧಿಯಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು ಹಾಗು ಮೆಲ್ಬರ್ನ್ ವಿಶ್ವದ ಅತ್ಯಂತ ಶ್ರೀಮಂತ ನಗರವೆನಿಸಿತು[೧೧] ಹಾಗು ಬ್ರಿಟಿಶ್ ಸಾಮ್ರಾಜ್ಯದಲ್ಲಿದ್ದ ಲಂಡನ್ ನಗರದ ನಂತರ ಎರಡನೇ ಅತ್ಯಂತ ದೊಡ್ಡ ನಗರವೆನಿಸಿತು.[೪೯] ದೊಡ್ಡ ಸಮಾರಂಭಗಳಿಗೆಂದೇ ನಿರ್ಮಿಸಲಾಗಿದ್ದ ವಸ್ತುಪ್ರದರ್ಶನದ ಕಟ್ಟಡದಲ್ಲಿ ೧೮೮೦ ರಿಂದ ೧೮೯೦ರ ನಡುವೆ ಮೆಲ್ಬರ್ನ್ ಎರಡು ಅಂತಾರಾಷ್ಟ್ರೀಯ ವಸ್ತುಪ್ರದರ್ಶನಗಳಿಗೆ ಆತಿಥೇಯ ನೀಡಿತು, ಇದು ಮೆಂಜಿಯೆಸ್, ಫೆಡರಲ್ ಹಾಗು ಗ್ರ್ಯಾಂಡ್(ವಿಂಡ್ಸರ್)ನಂತಹ ಹೋಟೆಲುಗಳನ್ನು ಒಳಗೊಂಡಂತೆ ಹಲವಾರು ಪ್ರತಿಷ್ಠಿತ ಹೋಟೆಲುಗಳ ನಿರ್ಮಾಣಕ್ಕೆ ಉತ್ತೇಜನ ನೀಡಿತು.
೧೮೮೫ರಲ್ಲಿ ಇಲ್ಲಿಗೆ ಭೇಟಿ ನೀಡಿದ ಇಂಗ್ಲಿಷ್ ಪತ್ರಕರ್ತ ಜಾರ್ಜ್ ಅಗಸ್ಟಸ್ ಹೆನ್ರಿ ಸಲಾ "ಮಾರ್ವಲಸ್ ಮೆಲ್ಬರ್ನ್"(ಅದ್ಭುತ ಮೆಲ್ಬರ್ನ್) ಎಂಬ ಪದಗುಚ್ಛವನ್ನು ಸೃಷ್ಟಿಸಿದರು, ಈ ಪದವು ಇಪ್ಪತ್ತನೆ ಶತಮಾನದುದ್ದಕ್ಕೂ ಬಳಕೆಯಲ್ಲಿತ್ತು ಹಾಗು ಇದನ್ನು ಇಂದಿಗೂ ಮೇಲ್ಬರ್ನಿಯನ್ನರು ಬಳಸುತ್ತಾರೆ.[೫೦] ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿದ ಚಟುವಟಿಕೆಯು "ಭೂಮಿಯ ಬೆಲೆಯಲ್ಲಿ ಏರಿಕೆಯೊಂದಿಗೆ" ಅತ್ಯುನ್ನತ ಸ್ಥಿತಿಯನ್ನು ತಲುಪಿತು, ಇದು ೧೮೮೮ರಲ್ಲಿ, ಗ್ರಾಹಕರ ಭರವಸೆ ಹಾಗು ಭೂಮಿಯ ಮೇಲಿನ ಮೌಲ್ಯದ ಕ್ರಮೇಣ ವರ್ಧನೆಯಿಂದ ಉತ್ತೇಜನಗೊಂಡು ಊಹನಾತ್ಮಕ ಬೆಳವಣಿಗೆಯ ತುತ್ತ ತುದಿಯನ್ನು ಮುಟ್ಟಿತು.[೫೧] ಬೆಲೆ ಏರಿಕೆಯ ಪರಿಣಾಮವಾಗಿ, ದೊಡ್ಡ ದೊಡ್ಡ ವಾಣಿಜ್ಯಕ ಕಟ್ಟಡಗಳು, ಕಾಫಿ ಭವನಗಳು, ತಾರಸಿ ಗೃಹಗಳು ಹಾಗು ವೈಭವೋಪೇತ ಮಹಲುಗಳ ಸಂಖ್ಯೆಯು ನಗರದಲ್ಲಿ ಹೆಚ್ಚುತ್ತಾ ಹೋಯಿತು.[೫೧] ೧೮೮೭ರಲ್ಲಿ ಜಲಸಂಪೀಡಿತ ವ್ಯವಸ್ಥೆಯ ಸ್ಥಾಪನೆಯು, ಎಲಿವೇಟರ್(ಉತ್ಥಾನಕ) ಗಳ ಸ್ಥಳೀಯ ತಯಾರಿಕೆಗೆ ಅವಕಾಶ ಮಾಡಿಕೊಟ್ಟಿತು, ಇದರ ಪರಿಣಾಮವಾಗಿ ಗಗನಚುಂಬಿ ಕಟ್ಟಡಗಳು ಮೊದಲ ಬಾರಿಗೆ ನಿರ್ಮಾಣಗೊಂಡವು;[೫೨] ಇದರಲ್ಲಿ ಗಮನಾರ್ಹವಾದುದೆಂದರೆ ೧೮೮೯ರ APA(ದಿ ಆಸ್ಟ್ರೇಲಿಯನ್) ಕಟ್ಟಡ, ನಿರ್ಮಾಣದ ನಂತರ ಇದು ವಿಶ್ವದ ಅತಿ ಎತ್ತರದ ಕಚೇರಿ ಕಟ್ಟಡವೆನಿಸಿತು ಹಾಗು ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಗೆ ಮೆಲ್ಬರ್ನ್ ನ ಅತ್ಯಂತ ಎತ್ತರದ ಕಟ್ಟಡವೆನಿಸಿತ್ತು.[೫೧] ಈ ಅವಧಿಯು, ಪ್ರಮುಖ ರೇಡಿಯಲ್ ರೈಲು-ಆಧಾರಿತ ವಾಹನ ಸಂಚಾರ ವ್ಯವಸ್ಥೆಯ ವಿಸ್ತರಣೆಯನ್ನೂ ಸಹ ಕಂಡಿತು.[೫೩]
ಈ ಅವಧಿಯಲ್ಲಿ ಮೆಲ್ಬರ್ನ್ ನನ್ನು ಮಾದರಿಯನ್ನಾಗಿಸಿದ್ದ ಉದ್ಧಟತನದ ವರ್ಧನೆಯು ೧೮೯೧ರ ಹೊತ್ತಿಗೆ ನಗರದ ಆರ್ಥಿಕತೆಯಲ್ಲಿ ಉಂಟಾದ ಹಿನ್ನಡೆಯಿಂದ ಕೊನೆಗೊಂಡಿತು, ಇದು ಸ್ಥಳೀಯ ಹಣಕಾಸು ವ್ಯವಹಾರ ಹಾಗು ಆಸ್ತಿ ಸಂಬಂಧಿತ ವ್ಯವಹಾರಗಳನ್ನು ಸಂಪೂರ್ಣ ಅವ್ಯವಸ್ಥೆಗೆ ದೂಡಿತು[೫೧][೫೪] ಈ ಅವಧಿಯಲ್ಲಿ ೧೬ ಸಣ್ಣ ಬ್ಯಾಂಕುಗಳು ಹಾಗು ಗೃಹ ನಿರ್ಮಾಣ ಸೊಸೈಟಿಗಳು ಕುಸಿತವನ್ನು ಕಂಡವು ಹಾಗು ೧೩೩ ಲಿಮಿಟೆಡ್ ಕಂಪನಿಗಳು ದಿವಾಳಿಯೆದ್ದವು. ಮೆಲ್ಬರ್ನ್ ಆರ್ಥಿಕ ಬಿಕ್ಕಟ್ಟು ೧೮೯೦ರ ಆಸ್ಟ್ರೇಲಿಯಾದ ಆರ್ಥಿಕ ಹಿನ್ನಡೆಗೆ ಒಂದು ಬಲವಾದ ಅಂಶವಾಯಿತು ಹಾಗು ೧೮೯೩ರಲ್ಲಿ ಆಸ್ಟ್ರೇಲಿಯನ್ ಬ್ಯಾಂಕಿಂಗ್ ಬಿಕ್ಕಟ್ಟು ಉಂಟಾಯಿತು. ನಗರದ ಮೇಲೆ ಉಂಟಾದ ಆರ್ಥಿಕ ಹಿನ್ನಡೆಯ ಪರಿಣಾಮವು ತೀವ್ರವಾಗಿತ್ತು, ಆದಾಗ್ಯೂ ಇಪ್ಪತ್ತನೆ ಶತಮಾನದ ಆರಂಭದ ಹೊತ್ತಿಗೆ ನಿಧಾನವಾಗಿ ಹಿನ್ನಡೆಯಲ್ಲಿ ಚೇತರಿಕೆ ಉಂಟಾಯಿತು.[೫೫][೫೬]
೧ ಜನವರಿ ೧೯೦೧ರಿಂದ ವಿಧ್ಯುಕ್ತವಾಗಿ ಆರಂಭಗೊಂಡ ಆಸ್ಟ್ರೇಲಿಯಾದ ಒಕ್ಕೂಟಕ್ಕೆ, ಮೆಲ್ಬರ್ನ್, ಸರ್ಕಾರದ ಹಂಗಾಮಿ ಕಾರ್ಯಸ್ಥಾನವಾಯಿತು. ಒಕ್ಕೂಟದ ಮೊದಲ ಸಂಸತ್ತು ೯ ಮೇ ೧೯೦೧ರಲ್ಲಿ ರಾಯಲ್ ವಸ್ತುಪ್ರದರ್ಶನದ ಕಟ್ಟಡದಲ್ಲಿ ಸಭೆ ಸೇರಿತು, ಸಂಸತ್ತು ಕ್ಯಾನ್ಬೆರಾಕ್ಕೆ ೧೯೨೭ರಲ್ಲಿ ಸ್ಥಳಾಂತರಗೊಳ್ಳುವವರೆಗೂ ಇಲ್ಲಿಯೇ ಸಭೆ ಸೇರುತ್ತಿತ್ತು. ೧೯೩೦ರವರೆಗೂ ಆಸ್ಟ್ರೇಲಿಯಾದ ಗವರ್ನರ್-ಜನರಲ್, ಸರ್ಕಾರಿ ಗೃಹದಲ್ಲಿ ವಾಸಿಸುತ್ತಿದ್ದರು ಹಾಗು ಇಪ್ಪತ್ತನೆ ಶತಮಾನದವರೆಗೂ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳು ಮೆಲ್ಬರ್ನ್ ನಲ್ಲೆ ನೆಲೆಯಾಗಿದ್ದವು.[೫೭] ಫ್ಲಿನ್ಡರ್ಸ್ ಸ್ಟ್ರೀಟ್ ಸ್ಟೇಶನ್, ೧೯೨೭ರಲ್ಲಿ ವಿಶ್ವದ ಅತ್ಯಂತ ನಿಬಿಡವಾದ ಪ್ರಯಾಣಿಕ ನಿಲ್ದಾಣವಾಗಿತ್ತು ಹಾಗು ಮೆಲ್ಬರ್ನ್ ನ ಟ್ರಾಮ್ ವ್ಯವಸ್ಥೆಯು ಸಿಡ್ನಿಯ ಟ್ರಾಮ್ ವ್ಯವಸ್ಥೆಯನ್ನು ಹಿಂದಿಕ್ಕೆ ೧೯೪೦ರ ಸುಮಾರಿಗೆ ವಿಶ್ವದ ಅತ್ಯಂತ ದೊಡ್ಡ ವ್ಯವಸ್ಥೆಯೆನಿಸಿತು II ವಿಶ್ವ ಸಮರದ ಅವಧಿಯಲ್ಲಿ, ಮೆಲ್ಬರ್ನ್ ನ ಕೈಗಾರಿಕೆಗಳು ಯುದ್ಧಾವಧಿಯ ಉತ್ಪನ್ನದಿಂದ ಅಭಿವೃದ್ಧಿಯಾದವು ಹಾಗು ನಗರವು ಆಸ್ಟ್ರೇಲಿಯಾದ ಮುಂಚೂಣಿ ವಸ್ತು ತಯಾರಿಕಾ ಕೇಂದ್ರವಾಯಿತು.[ಸೂಕ್ತ ಉಲ್ಲೇಖನ ಬೇಕು]
IIನೇ ವಿಶ್ವ ಸಮರದ ನಂತರದ ವರ್ಷಗಳಲ್ಲಿ, ಮೆಲ್ಬರ್ನ್ ಶೀಘ್ರತಮವಾಗಿ ಬೆಳವಣಿಗೆಯಾಯಿತು, ಇದರ ಬೆಳವಣಿಗೆಯು ಆಸ್ಟ್ರೇಲಿಯಾಕ್ಕೆ ಯುದ್ಧಾನಂತರದ ವಲಸೆಗಾರಿಕೆಯಿಂದ ವರ್ಧನೆಯಾಯಿತು, ಪ್ರಾಥಮಿಕವಾಗಿ ಇಲ್ಲಿಗೆ ಜನರು ದಕ್ಷಿಣ ಯುರೋಪ್ ಹಾಗು ಮೆಡಿಟರೇನಿಯನ್ ನಿಂದ ವಲಸೆ ಬಂದಿದ್ದರು.[೫೮] ಕಾಲಿನ್ಸ್ ರಸ್ತೆಯ "ಪ್ಯಾರಿಸ್ ಎಂಡ್" ಮೆಲ್ಬರ್ನ್ ನ ಬಾಟೀಕ್ ಶಾಪಿಂಗ್ ಹಾಗು ಹೊರಾಂಗಣದ ಕೆಫೆ ಸಂಸ್ಕೃತಿಗೆ ನಾಂದಿ ಹಾಡಿದರೆ,[೫೯] ನಗರದ ಕೇಂದ್ರಭಾಗವನ್ನು ಕಚೇರಿ ಕೆಲಸಗಾರರ ಉತ್ಸಾಹಶೂನ್ಯ ಜಾಗವೆಂದು ಹಲವರು ನೀರಸವೆಂದು ಭಾವಿಸುತ್ತಾರೆ, ಇದನ್ನು ಜಾನ್ ಬ್ರ್ಯಾಕ್ ತಮ್ಮ ಪ್ರಸಿದ್ಧ ವರ್ಣಚಿತ್ರ ಕಾಲಿನ್ಸ್ St., ೫ pm ನಲ್ಲಿ (೧೯೫೫) ವಿವರಿಸಿದ್ದಾರೆ.[೬೦] ಮೆಲ್ಬರ್ನ್ CBDಯ ಎತ್ತರದ ಪರಿಮಿತಿಯನ್ನು, ICI ಹೌಸ್ ನ ನಿರ್ಮಾಣದ ನಂತರ ಹೆಚ್ಚಿಸಲಾಯಿತು, ಇದು ನಗರಕ್ಕೆ ಗಗನಚುಂಬಿ ಕಟ್ಟಡಗಳ ಪರಿಚಯದಿಂದ ನಗರದ ಉನ್ನತ ಸೌಧಗಳನ್ನು ಮಾರ್ಪಡಿಸಿತು. ನಗರವು ೧೯೫೬ರ ಬೇಸಿಗೆ ಒಲಂಪಿಕ್ಸ್ ಗೆ ಆತಿಥೇಯ ನೀಡಿದಾಗ ನಗರದ ಮೇಲೆ ವಿಶ್ವದ ಗಮನ ಹರಿಯಿತು. ನಂತರದಲ್ಲಿ ಉಪನಗರಗಳ ವಿಸ್ತರಣೆಯು ತೀವ್ರಗೊಂಡಿತು, ಚಾಡ್ ಸ್ಟೋನ್ ಶಾಪಿಂಗ್ ಸೆಂಟರ್ ನ ಆರಂಭದೊಂದಿಗೆ ಹೊಸ ಒಳಾಂಗಣ ಮಾಲ್ ಗಳು ತಮ್ಮ ಸೇವೆಯನ್ನು ಒದಗಿಸಲು ಆರಂಭಿಸಿದವು.[೬೧] ಯುದ್ಧಾನಂತರದ ಅವಧಿಯು CBDಯ ಒಂದು ಪ್ರಮುಖ ನವೀಕರಣವನ್ನೂ ಸಹ ಕಂಡಿತು ಹಾಗು ಸೇಂಟ್ ಕಿಲ್ಡ ರಸ್ತೆಯು ನಗರವನ್ನು ಮಹತ್ವದ ರೀತಿಯಲ್ಲಿ ಆಧುನೀಕರಣಗೊಳಿಸಿತು.[೬೨] ಹೊಸತಾದ ಅಗ್ನಿ ನಿಯಂತ್ರಣಗಳು ಹಾಗು ಮರುಅಭಿವೃದ್ದಿಯು ಯುದ್ಧಕ್ಕೆ ಮುಂಚಿನ ಗಗನಚುಂಬಿ CBD ಕಟ್ಟಡಗಳು ನೆಲಸಮಗೊಂಡಿದ್ದು ಅಥವಾ ಭಾಗಶಃ ಫಸಾಡಿಸಂ ನೀತಿಯ ಮೂಲಕ ಉಳಿಕೆಯಾಗಿದ್ದು ಕಂಡುಬಂದಿತು. ಉಚ್ಛ್ರಾಯ ಶಕೆಯಲ್ಲಿದ್ದ ಉಪನಗರದ ದೊಡ್ದಾದಾದ ಹಲವು ಭವನಗಳೂ ಸಹ ನೆಲಸಮವಾದವು ಅಥವಾ ಪುನರ್ವಿಭಜನೆಗೊಂಡವು.
ಹೆಚ್ಚಿನ ಸಾಂದ್ರತೆಯಿಲ್ಲದ ಉಪನಗರದ ವಸತಿ ನೆಲೆಯೆಡೆಗೆ ಜನರು ಬೆಳೆಸಿಕೊಂಡ ಒಲವನ್ನು ಎದುರಿಸಲು, ಸರ್ಕಾರವು, ನಗರದ ಒಳಭಾಗದಲ್ಲಿದ್ದ ಹೌಸಿಂಗ್ ಕಮಿಷನ್ ಆಫ್ ವಿಕ್ಟೋರಿಯಾದಲ್ಲಿ ಸರಣಿಯಾಗಿ ವಿವಾದಾಸ್ಪದ ಸಾರ್ವಜನಿಕ ಹೌಸಿಂಗ್ ಯೋಜನೆಗಳನ್ನು ಆರಂಭಿಸಿತು, ಇದರ ಪರಿಣಾಮವಾಗಿ ಹಲವು ನೆರೆಹೊರೆಯವರ ಕಟ್ಟಡಗಳನ್ನು ನೆಲೆಸಮ ಮಾಡಲಾಯಿತು ಹಾಗು ಅತಿ ಎತ್ತರದ ಕಟ್ಟಡಗಳ ಸಂಖ್ಯೆಯು ಅಧಿಕಗೊಂಡಿತು.[೬೩] ನಂತರದ ವರ್ಷಗಳಲ್ಲಿ, ಮೋಟಾರು ವಾಹನಗಳ ಒಡೆತನದಲ್ಲಿ ತ್ವರಿತ ವೃದ್ಧಿಯು ಕಂಡುಬಂದಾಗ, ಮುಕ್ತಮಾರ್ಗ ಹಾಗು ಹೆದ್ದಾರಿಗಳ ಅಭಿವೃದ್ದಿಗಳ ಮೇಲೆ ಬಂಡವಾಳ ಹೂಡಿಕೆಯು ತ್ವರೆಗೊಳ್ಳುವುದರ ಜೊತೆಗೆ ಹೊರವಲಯದ ಉಪನಗರಗಳ ಅವ್ಯವಸ್ಥಿತ ಬೆಳವಣಿಗೆಗೆ ಕಾರಣವಾಯಿತು ಹಾಗು ನಗರದ ಒಳಭಾಗದಲ್ಲಿದ್ದ ಜನಸಂಖ್ಯೆಯು ಕ್ಷೀಣಿಸಿತು. ಬೋಲ್ಟೆ ಸರ್ಕಾರವು, ಮೆಲ್ಬರ್ನ್ ನ ಆಧುನಿಕೀಕರಣವನ್ನು ತ್ವರಿತವಾಗಿ ಹೆಚ್ಚಿಸುವ ಬಗ್ಗೆ ಗಮನ ಹರಿಸಿತು. ಪ್ರಮುಖ ರಸ್ತೆ ಯೋಜನೆಗಳಲ್ಲಿ ಸೇಂಟ್ ಕಿಲ್ಡ ಜಂಕ್ಷನ್ ನ ಮರುರೂಪ, ಹಾಡಲ್ ರಸ್ತೆಯ ಅಗಲೀಕರಣ ಹಾಗು ನಂತರದಲ್ಲಿ ವ್ಯಾಪಕವಾದ ೧೯೬೯ರ ಮೆಲ್ಬರ್ನ್ ಟ್ರ್ಯಾನ್ಸ್ಪೋರ್ಟೆಶನ್ ಪ್ಲ್ಯಾನ್ ನಗರದ ವಿನ್ಯಾಸವನ್ನು ಕಾರ್-ಪ್ರಧಾನ ವಾತಾವರಣವನ್ನಾಗಿ ಬದಲಾಯಿಸಿತು.[೬೪]
೧೯೬೯ ಹಾಗು ೧೯೭೦ರ ನಡುವೆ ನಡೆದ ಆಸ್ಟ್ರೇಲಿಯಾದ ಆರ್ಥಿಕ ಹಾಗು ಗಣಿಗಾರಿಕೆಯ ತೀವ್ರತೆಯು ಹಲವು ಪ್ರಮುಖ ಕಂಪನಿಗಳು ನಗರದಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ತೆರೆಯವಂತೆ ಅನುವು ಮಾಡಿಕೊಟ್ಟಿತು(ಈ ಕಂಪನಿಗಳಲ್ಲಿ BHP ಬಿಲ್ಲಿಟನ್ ಹಾಗು ರಿಯೋ ಟಿನ್ಟೊಗಳೂ ಸಹ ಸೇರಿವೆ). ನಂತರದಲ್ಲಿ ನೌರುನ ವರ್ಧಿತ ಆರ್ಥಿಕತೆಯು ಮೆಲ್ಬರ್ನ್ ನಲ್ಲಿ ಹಲವಾರು ಮಹತ್ತ್ವಾಕಾಂಕ್ಷೆಯ ಬಂಡವಾಳ ಹೂಡಿಕೆಗೆ ಕಾರಣವಾಯಿತು, ಉದಾಹರಣೆಗೆ ನೌರು ಹೌಸ್.[ಸೂಕ್ತ ಉಲ್ಲೇಖನ ಬೇಕು] ಮೆಲ್ಬರ್ನ್, ೧೯೭೦ರ ಉತ್ತರಾರ್ಧದವರೆಗೂ ಸಿಡ್ನಿ ನಗರಕ್ಕೆ ಈ ಪ್ರಮುಖತೆಯನ್ನು ಕಳೆದುಕೊಳ್ಳುವವರೆಗೂ ಆಸ್ಟ್ರೇಲಿಯಾದ ಪ್ರಮುಖ ವ್ಯಾಪಾರ ಹಾಗು ಆರ್ಥಿಕ ಕೇಂದ್ರವಾಗಿತ್ತು.[೬೫]
ಆಸ್ಟ್ರೇಲಿಯಾದ "ಜನನಿಬಿಡ ಪ್ರದೇಶ"ದ ಕೇಂದ್ರಭಾಗವಾದ ಮೆಲ್ಬರ್ನ್, ಹಲವಾರು ಸ್ಥಳೀಯ ಹಣಕಾಸು ಸಂಸ್ಥೆಗಳ ಕುಸಿತದಿಂದಾಗಿ ೧೯೮೯ರಿಂದ ೧೯೯೨ರ ನಡುವೆ ಆರ್ಥಿಕ ಹಿಂಜರಿತವನ್ನು ಎದುರಿಸಿತು ೧೯೯೨ರಲ್ಲಿ ಹೊಸತಾಗಿ ಚುನಾಯಿತಗೊಂಡ ಕೆನೆಟ್ ಸರ್ಕಾರವು, ಪ್ರಮುಖ ಘಟನಾವಳಿಗಳು ಹಾಗು ಕ್ರೀಡಾ ಪ್ರವಾಸೋದ್ಯಮದೊಂದಿಗೆ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ನಗರದ ಏಳಿಗೆಯೊಂದಿಗೆ ಸಾರ್ವಜನಿಕ ಕಾರ್ಯಗಳಿಗಾಗಿ ಹುರುಪಿನಿಂದ ಕೂಡಿದ ಕಾರ್ಯಚಟುವಟಿಕೆಯ ಮೂಲಕ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಆರಂಭಿಸಿತು.[೬೬] ಈ ಅವಧಿಯಲ್ಲಿ ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ಸ್ ಮೆಲ್ಬರ್ನ್ ನಿಂದ ಅಡಿಲೈಡ್ ಗೆ ಸ್ಥಳಾಂತರಗೊಂಡಿತು. ಪ್ರಮುಖ ಯೋಜನೆಗಳಲ್ಲಿ ಮೆಲ್ಬರ್ನ್ ವಸ್ತುಸಂಗ್ರಹಾಲಯ, ಫೆಡರೇಶನ್ ಸ್ಕ್ವೇರ್, ಮೆಲ್ಬರ್ನ್ ಎಕ್ಸಿಬಿಶನ್ ಅಂಡ್ ಕನ್ವೆನ್ಶನ್ ಸೆಂಟರ್, ಕ್ರೌನ್ ಕ್ಯಾಸಿನೋ ಹಾಗು ಸಿಟಿಲಿಂಕ್ ಟಾಲ್ವೇಗಾಗಿ ಹೊಸ ಸೌಲಭ್ಯಗಳ ನಿರ್ಮಾಣಗಳು ಸೇರಿದ್ದವು. ಇತರ ನೀತಿಗಳಲ್ಲಿ, ಕೆಲವು ಮೆಲ್ಬರ್ನ್ ಸೇವೆಗಳ ಖಾಸಗೀಕರಣಗಳು ಸೇರಿದ್ದವು, ಇದರಲ್ಲಿ ವಿದ್ಯುತ್ ಹಾಗು ಸಾರ್ವಜನಿಕ ಸಾರಿಗೆ, ಹಾಗು ಆರೋಗ್ಯ, ಶಿಕ್ಷಣ ಹಾಗು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೂಲಭೂತ ಸೌಕರ್ಯಗಳಂತಹ ಸಾರ್ವಜನಿಕ ಸೇವೆಗಳ ಮೇಲೆ ಕಡಿಮೆ ಬಂಡವಾಳ ಹೂಡಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು.[೬೭]
೧೯೯೦ರ ದಶಕದ ಮಧ್ಯಭಾಗದಿಂದಲೂ, ಮೆಲ್ಬರ್ನ್ ಮಹತ್ವವಾಗಿ ಜನಸಂಖ್ಯೆಯ ಹಾಗು ಔದ್ಯೋಗಿಕ ಬೆಳವಣಿಗೆಯನ್ನು ಉಳಿಸಿಕೊಂಡು ಬಂದಿದೆ. ನಗರದ ಕೈಗಾರಿಕೆಗಳು ಹಾಗು ಆಸ್ತಿ ಮಾರುಕಟ್ಟೆಯಲ್ಲಿ ಸುಭದ್ರವಾದ ಅಂತಾರಾಷ್ಟ್ರೀಯ ಬಂಡವಾಳಗಳು ಹೂಡಿಕೆಯಾದವು. ನಗರದ ಒಳಭಾಗದಲ್ಲಿ ಪ್ರಮುಖ ನವೀಕರಣವು, ಸೌತ್ ಬ್ಯಾಂಕ್, ಪೋರ್ಟ್ ಮೆಲ್ಬರ್ನ್, ಮೆಲ್ಬರ್ನ್ ಡಾಕ್ಲ್ಯಾಂಡ್ಸ್ ಹಾಗು ತೀರ ಇತ್ತೀಚಿಗೆ ಸೌತ್ ವಾರ್ಫ್ ನಂತಹ ಪ್ರದೇಶಗಳಲ್ಲಿ ನಡೆದವು. ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ನ ಪ್ರಕಾರ, ಮೆಲ್ಬರ್ನ್ ಅತ್ಯಧಿಕ ಜನಸಂಖ್ಯಾ ಹೆಚ್ಚಳವನ್ನು ಎದುರಿಸಿತು ಹಾಗು ಮೂರು ವರ್ಷಗಳಲ್ಲಿ ಯಾವುದೇ ಆಸ್ಟ್ರೇಲಿಯನ್ ರಾಜಧಾನಿ ನಗರವು ಕಂಡಿರದಂತಹ ಆರ್ಥಿಕ ಬೆಳವಣಿಗೆ ಪ್ರಮಾಣವು ಜೂನ್ ೨೦೦೪ರಲ್ಲಿ ಕೊನೆಗೊಂಡಿತು.[೬೮] ಈ ಅಂಶಗಳು ಜನಸಂಖ್ಯಾ ಬೆಳವಣಿಗೆಗೆ ಹಾಗು ೨೦೦೦ದ ದಶಕದುದ್ದಕ್ಕೂ ಉಪನಗರಗಳ ಮತ್ತಷ್ಟು ವಿಸ್ತರಣೆಗೆ ಎಡೆ ಮಾಡಿಕೊಟ್ಟಿತು.
೨೦೦೬ರಿಂದ, ನಗರದ ಅಭಿವೃದ್ಧಿಯು "ಹಸಿರು ಬೆಣೆಯವರೆಗೂ" ಹಾಗು ನಗರದ ನಗರಾಭಿವೃದ್ಧಿ ಪರಿಮಿತಿಯಾಚೆಗೂ ವಿಸ್ತರಿಸಿತು. ನಗರದ ಜನಸಂಖ್ಯೆಯು ೫ ದಶಲಕ್ಷ ಜನರೆಂಬ ಊಹನೆಯು ರಾಜ್ಯ ಸರ್ಕಾರವನ್ನು, ೨೦೦೮ರ ಮೆಲ್ಬರ್ನ್ @ ಫೈವ್ ಮಿಲಿಯನ್ ಸ್ಟ್ರ್ಯಾಟೆಜಿ ಕಾರ್ಯಕ್ರಮದ ಒಂದು ಭಾಗವಾಗಿ ಬೆಳವಣಿಗೆ ಪರಿಮಿತಿಯನ್ನು ಮರುಪರಿಶೀಲಿಸುವಂತೆ ಮಾಡಿತು.[೬೯] ಮೆಲ್ಬರ್ನ್, ಇತರ ಯಾವುದೇ ಆಸ್ಟ್ರೇಲಿಯನ್ ನಗರಕ್ಕಿಂತ ಉತ್ತಮವಾಗಿ ೨೦೦೭-೨೦೧೦ರ ಆರ್ಥಿಕ ಮುಗ್ಗಟ್ಟನ್ನು ಎದುರಿಸಿತು. ೨೦೦೯ರಲ್ಲಿ, ಹೊಸತಾದ ಹೆಚ್ಚಿನ ಉದ್ಯೋಗಗಳನ್ನು ಇತರ ಯಾವುದೇ ಆಸ್ಟ್ರೇಲಿಯನ್ ರಾಜಧಾನಿಗಿಂತ ಮೆಲ್ಬರ್ನ್ ನಲ್ಲಿ ಸೃಷ್ಟಿಸಲಾಯಿತು - ಬಹುತೇಕವಾಗಿ ಇದರ ನಂತರದ ಅತಿ ಶೀಘ್ರವಾಗಿ ಬೆಳವಣಿಗೆಯಾಗುತ್ತಿದ್ದ ನಗರಗಳಾದ ಬ್ರಿಸ್ಬೇನ್ ಹಾಗು ಪರ್ತ್ ನ ಒಟ್ಟಾರೆ ಸಂಖ್ಯೆಯಲ್ಲಿ ಉದ್ಯೋಗದ ಸೃಷ್ಟಿಯಾಯಿತು.[೭೦] ಹಾಗು ಮೆಲ್ಬರ್ನ್ ನ ಆಸ್ತಿ ಮಾರುಕಟ್ಟೆಯು ಸುಭದ್ರವಾಗಿತ್ತು,[೭೧] ಇದು ಐತಿಹಾಸಿಕವಾಗಿ ಆಸ್ತಿಯ ಬೆಲೆಯಲ್ಲಿ ಹೆಚ್ಚಳವನ್ನು ಉಂಟುಮಾಡುವುದರ ಜೊತೆಗೆ ಬಾಡಿಗೆ ದರದಲ್ಲಿ ಹೆಚ್ಚಳವು ಉಂಟಾಯಿತು.[೭೨]
ಮೆಲ್ಬರ್ನ್, ವಿಕ್ಟೋರಿಯಾ ರಾಜ್ಯದೊಳಗೆ ಆಸ್ಟ್ರೇಲಿಯಾದ ಮುಖ್ಯಭೂಮಿಯ ಆಗ್ನೇಯದಲ್ಲಿ ಸ್ಥಿತವಾಗಿದೆ. ಭೂವೈಜ್ಞಾನಿಕವಾಗಿ, ನಗರವನ್ನು ಪಶ್ಚಿಮಕ್ಕೆ ಹರಿಯುವ ಕ್ವಾರ್ಟರ್ನರಿ ಶಿಲಾರಸದ ಸಮ್ಮಿಳನ, ಪೂರ್ವದಲ್ಲಿರುವ ಸೈಲೂರಿಯನ್ ಮಣ್ಣುಕಲ್ಲುಗಳು, ಹಾಗು ಹೊಲೊಸೆನೆಯಲ್ಲಿ ಪೋರ್ಟ್ ಫಿಲಿಪ್ ನೊಂದಿಗೆ ಆಗ್ನೇಯದಲ್ಲಿ ಉಂಟಾಗುವ ಮರುಳಿನ ಸಂಚಯದಿಂದ ಕಟ್ಟಲಾಗಿದೆ. ಆಗ್ನೇಯ ದಿಕ್ಕಿನಲ್ಲಿರುವ ಉಪನಗರಗಳು ಸೆಲ್ವಿನ್ ಎಲ್ಲೆಯಲ್ಲಿ ಸ್ಥಿತವಾಗಿದೆ ಇದು ಮೌಂಟ್ ಮಾರ್ಥಾ ಹಾಗು ಕ್ರಾನ್ಬೌರ್ನೆವನ್ನು ವಿಭಜಿಸುತ್ತದೆ.
ಮೆಲ್ಬರ್ನ್ ಯಾರ್ರದುದ್ದಕ್ಕೂ ಯಾರ್ರ ಕಣಿವೆ ಎಡೆಗೆ ವಿಸ್ತರಿಸುತ್ತದೆ, ಇದು ಪೂರ್ವ ದಿಕ್ಕಿನ ಡನ್ಡೆನಾಂಗ್ ಪರ್ವತ ಶ್ರೇಣಿಗಳು ಹಾಗು ಯಾರ್ರ ಶ್ರೇಣಿಗಳೆಡೆಗೆ ವಿಸ್ತರಿಸುತ್ತದೆ. ಇದು ಉತ್ತರ ದಿಕ್ಕಿನ್ನು ಯಾರ್ರ ಉಪನದಿಗಳ ಅಲೆಯಾಕಾರದಲ್ಲಿರುವ ಕುರುಚಲು ಪ್ರದೇಶಗಳಲ್ಲಿರುವ ಕಣಿವೆಗಳ ಮೂಲಕ ವಿಸ್ತರಿಸುತ್ತದೆ – ಮೂನೀ ಪಾಂಡ್ಸ್ ಕ್ರೀಕ್(ಟುಲ್ಲಮರೀನ್ ವಿಮಾನ ನಿಲ್ದಾಣದೆಡೆಗೆ), ಮೆರ್ರಿ ಕ್ರೀಕ್, ಡರೆಬಿನ್ ಕ್ರೀಕ್ ಹಾಗು ಪ್ಲೆಂಟಿ ರಿವರ್ ನಿಂದ ಹಿಡಿದು ಕ್ರೈಗಿಯೇಬರ್ನ್ ಹಾಗು ವಿಟ್ಟಲ್ಸೀನ ಹೊರಭಾಗದ ಉಪನಗರಗಳ ಮುಚ್ಚುದಾರಿಗಳವರೆಗೂ ವಿಸ್ತರಿಸಿರುತ್ತದೆ. ನಗರವು, ಡನ್ಡೆನಾಂಗ್ ನಿಂದ ಪಶ್ಚಿಮ ಗಿಪ್ಪ್ಸ್ಲ್ಯಾಂಡ್ ನೆಡೆಗೆ ಪಾಕೆನ್ಹ್ಯಾಮ್ ನ ಮುಚ್ಚುದಾರಿಗಳ ಮೂಲಕ ಆಗ್ನೇಯ ದಿಕ್ಕಿನಲ್ಲಿ ಅವ್ಯವಸ್ಥಿತವಾಗಿ ಬೆಳವಣಿಗೆಯನ್ನು ಹೊಂದಿದೆ, ಹಾಗು ದಕ್ಷಿಣದಲ್ಲಿ ಡನ್ಡೆನಾಂಗ್ ಕ್ರೀಕ್ ಮೂಲಕ, ಆಲಿವರ್ಸ್ ಹಿಲ್ ನ ತುದಿಯಲ್ಲಿರುವ ಮಾರ್ನಿಂಗ್ಟನ್ ಪೆನಿನ್ಸುಲ ಹಾಗು ಫ್ರ್ಯಾನ್ಕ್ಸ್ಟನ್ ನಗರದವರೆಗೆ, ಮೌಂಟ್ ಮಾರ್ಥಾ ಹಾಗು ಆರ್ಥರ್ಸ್ ಸೀಟ್, ಪೋರ್ಟ್ಸೀ ಹಾಗು ಪಾಯಿಂಟ್ ನೇಪಿಯನ್ ನ ಏಕಮಾತ್ರ ಉಪನಗರವನ್ನು ಮುಟ್ಟಲು ಏಕೈಕ ನಗರಕೂಟವಾಗಿ ಪೋರ್ಟ್ ಫಿಲಿಪ್ ನ ದಂಡೆಯುದ್ದಕ್ಕೂ ವಿಸ್ತರಿಸಿದೆ. ಪಶ್ಚಿಮದಲ್ಲಿ, ಇದು ಮಾರಿಬೈರ್ನಾಂಗ್ ನದಿ ಹಾಗು ಅದರ ಉಪನದಿಗಳೊಟ್ಟಿಗೆ ಉತ್ತರದ ಸನ್ಬರಿ ಹಾಗು ಮ್ಯಾಸೆಡಾನ್ ಪರ್ವತಶ್ರೇಣಿಗಳ ಪರ್ವತ ತಪ್ಪಲುಗಳೆಡೆಗೆ ಸಾಗುತ್ತದೆ, ಹಾಗು ಪಶ್ಚಿಮದಲ್ಲಿ ಮೆಲ್ಟನ್ ನೆಡೆಗೆ ಚಪ್ಪಟ್ಟೆಯಾದ ಜ್ವಾಲಾಮುಖಿ ಪ್ರದೇಶದೆಡೆಗೆ ಸಾಗುತ್ತದೆ, ಯೌ ಯಾಂಗ್ಸ್ ಗ್ರಾನೈಟ್ ಬೆಟ್ಟಸಾಲಿನ ತಪ್ಪಲಿನಲ್ಲಿರುವ ವೆರ್ರಿಬೀ ಹಾಗು ಗೀಲೋಂಗ್ ನ್ನು ಮೇಲಿನ ಮೆಟ್ರೋಪಾಲಿಟನ್ ಪ್ರದೇಶದ ಭಾಗವಾಗಿ ನೈಋತ್ಯ ದಿಕ್ಕಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಮೆಲ್ಬರ್ನ್ ನ ಕೊಲ್ಲಿಬದಿಯ ಪ್ರಮುಖ ದಂಡೆಗಳು ಪೋರ್ಟ್ ಫಿಲಿಪ್ ಕೊಲ್ಲಿಯ ದಂಡೆಗಳುದ್ದಕ್ಕೂ ಆಗ್ನೇಯ ಉಪನಗರಗಳಲ್ಲಿ ಸ್ಥಿತವಾಗಿದೆ, ಈ ಪ್ರದೇಶಗಳೆಂದರೆ ಪೋರ್ಟ್ ಮೆಲ್ಬರ್ನ್, ಆಲ್ಬರ್ಟ್ ಪಾರ್ಕ್, ಸೇಂಟ್ ಕಿಲ್ಡ, ಎಲ್ವುಡ್, ಬ್ರೈಟನ್, ಸ್ಯಾಂಡ್ರಿಂಗಹ್ಯಾಮ್, ಮೆನ್ಟೋನೆ ಹಾಗು ಫ್ರಾಂಕ್ಸ್ಟನ್, ಆದಾಗ್ಯೂ ಆಲ್ಟೋನ ಹಾಗು ವಿಲ್ಲಿಯಮ್ಸ್ ಟೌನ್ ನ ಪಶ್ಚಿಮ ಉಪನಗರಗಳಲ್ಲೂ ಸಹ ಸಮುದ್ರ ತೀರಗಳಿವೆ. ಹತ್ತಿರದ ಕಡಲಲೆ ಸವಾರಿ ದಂಡೆಗಳು85 kilometres (53 mi) ಮೆಲ್ಬರ್ನ್ ನ ಆಗ್ನೇಯದಲ್ಲಿರುವ CBDಯ ರೈ, ಸೊರೆನ್ಟೋ ಹಾಗು ಪೋರ್ಟ್ಸೀನ ಹಿಂದಿನ ದಂಡೆಗಳಲ್ಲಿ ಸ್ಥಿತವಾಗಿವೆ.[೭೩][೭೪]
ಮೆಲ್ಬರ್ನ್ ಮಂದವಾದ ಸಾಗರಪರಿಣಾಮಿ ವಾತಾವರಣವನ್ನು ಹೊಂದಿದೆ(ಕೊಪ್ಪೆನ್ ಹವಾಮಾನ ವರ್ಗಾವಣೆ Cfb )[೭೫][೭೬] ಹಾಗು ಇದು ಬದಲಾಗುವ ವಾತಾವರಣದ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮೆಲ್ಬರ್ನ್, ಬಹಳ ಶಾಖದಿಂದ ಕೂಡಿದ ಒಳನಾಡಿನ ಪ್ರದೇಶಗಳು ಹಾಗು ತಂಪಾದ ದಕ್ಷಿಣದ ಸಾಗರ ಸೀಮೆಯಲ್ಲಿ ಸ್ಥಿತವಾಗಿದೆ. ಈ ಭಿನ್ನವಾದ ತಾಪಮಾನವು ವಸಂತ ಋತು ಹಾಗು ಬೇಸಿಗೆಯ ತಿಂಗಳುಗಳಲ್ಲಿ ಕಂಡುಬರುತ್ತದೆ ಹಾಗು ಇದು ಬಹಳ ಬಲವಾದ ಶೀತಮುಖವನ್ನು ಉಂಟುಮಾಡುತ್ತದೆ. ಈ ಶೀತಮುಖಗಳು ಚಂಡಮಾರುತದಿಂದ ಉಂಟಾಗುವ ಎಲ್ಲ ಬಗೆಯ ತೀವ್ರತರವಾದ ಹವಾಮಾನದಿಂದ ತೀವ್ರತರವಾದ ಚಂಡಮಾರುತ ಮಳೆ ಹಾಗು ಆಲಿಕಲ್ಲುಗಳು, ವಾತಾವರಣದಲ್ಲಿ ತೀವ್ರತರವಾದ ಬದಲಾವಣೆ, ಹಾಗು ಭಾರಿ ಮಳೆಗೆ ಕಾರಣವಾಗುತ್ತದೆ. ಪೋರ್ಟ್ ಫಿಲಿಪ್ ಸಾಮಾನ್ಯವಾಗಿ ಸುತ್ತಮುತ್ತಲಿನ ಇತರ ಸಾಗರಗಳು ಹಾಗು/ಅಥವಾ ಭೂಮಿಯ ವಿಸ್ತಾರಕ್ಕಿಂತ ಹೆಚ್ಚು ಶಾಖವನ್ನು ಹೊಂದಿರುತ್ತದೆ, ಅದರಲ್ಲೂ ವಿಶೇಷವಾಗಿ ವಸಂತ ಋತು ಹಾಗು ಶರತ್ಕಾಲದಲ್ಲಿ ಈ ರೀತಿಯಾದ ವಾತಾವರಣ ಕಂಡು ಬರುತ್ತದೆ; ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತೀವ್ರತರವಾದ ಗಾಳಿಮರೆಯ ದಿಕ್ಕಿನಲ್ಲಿ ಕೊಲ್ಲಿಯಲ್ಲಿ ಬೀಳುವ ಮಳೆಯಿಂದಾಗಿ ಉಂಟಾಗುವ "ಸರೋವರ ಪರಿಣಾಮ"ದ ಮಾದರಿ "ಕೊಲ್ಲಿ ಪರಿಣಾಮ"ವನ್ನು ಉಂಟುಮಾಡಬಹುದು. ಇದಕ್ಕೆ ಸಂಬಂಧಿಸಿದಂತೆ ಸಂಕುಚಿತ ಕಣಿವೆಗಳಲ್ಲಿ ಬೀಳುವ ಭಾರಿ ಮಳೆಯು ಸಾಮಾನ್ಯವಾಗಿ ಇದೆ ಸ್ಥಳಗಳಿಗೆ ದೀರ್ಘಾವಧಿಯಲ್ಲಿ ಹಾನಿಯುಂಟುಮಾಡಬಹುದು(ಸಾಮಾನ್ಯವಾಗಿ ಪೂರ್ವದ ಉಪನಗರಗಳು), ಆದರೆ ಮೆಲ್ಬರ್ನ್ ನ ಉಳಿದ ಪ್ರದೇಶಗಳು ಹಾಗು ಸುತ್ತಮುತ್ತಲಿನ ಪ್ರದೇಶಗಳು ನಿರಾರ್ದ್ರವಾಗಿರುತ್ತವೆ. ತಂಪಾದ ಕೊಳ್ಳವು ಮಿತಿ ಮೀರಿ ಹರಿದಾಗ ಉಂಟಾಗುವ ಅಪರೂಪದ ಸಂವಾಹಕ ಮಳೆಗೂ ಸಹ ಮೆಲ್ಬರ್ನ್ ಗುರಿಯಾಗುವ ಸಂಭವವಿರುತ್ತದೆ. ಈ ಮಳೆಗಳು ಸಾಮಾನ್ಯವಾಗಿ ಭಾರಿ ಪ್ರಮಾಣದಲ್ಲಿ ಸುರಿಯುತ್ತದೆ ಹಾಗು ಆಲಿಕಲ್ಲಿನಿಂದ ಕೂಡಿರಬಹುದು ಜೊತೆಗೆ ಆಕಸ್ಮಿಕವಾದ ತೀವ್ರತರ ಗಾಳಿ ಹಾಗು ತಾಪಮಾನದಲ್ಲಿ ಬದಲಾವಣೆಗಳು ಉಂಟಾಗಬಹುದು, ಆದರೆ ಇದು ಕೆಲವೊಂದು ಬಾರಿ ಶೀಘ್ರದಲ್ಲಿ ಬಂದು ಹೋಗಬಹುದು, ನಂತರದಲ್ಲಿ ಸೂರ್ಯನ ಬೆಳಕು ಉಂಟಾಗುವುದರ ಜೊತೆಗೆ ಶಾಂತವಾದ ವಾತಾವರಣ ಸೃಷ್ಟಿಯಾಗಬಹುದು ಹಾಗು ಮಳೆಗೆ ಮುಂಚೆ ಇದ್ದ ತಾಪಮಾನವು ಮತ್ತೆ ಸೃಷ್ಟಿಯಾಗಬಹುದು. ಇದು ಕೆಲವೇ ಕೆಲವು ನಿಮಿಷಗಳ ಅಂತರದಲ್ಲಿ ನಡೆಯಬಹುದು ಹಾಗು ದಿನದಲ್ಲಿ ಹಲವು ಬಾರಿ ಇದೆ ರೀತಿಯಾಗಿ ಪುನರಾವರ್ತನೆಯಾಗಬಹುದು, ಇದು ಮೆಲ್ಬರ್ನ್ ನಗರಕ್ಕೆ "ಒಂದೇ ದಿನದಲ್ಲಿ ನಾಲ್ಕು ಋತುಮಾನಗಳನ್ನು" ಹೊಂದಿರುವ ನಗರವೆಂಬ ಖ್ಯಾತಿಯನ್ನು ನೀಡುತ್ತದೆ,[೭೭] ಈ ಪದಗುಚ್ಛವು ಸ್ಥಳೀಯ ಜನಪ್ರಿಯ ಸಂಸ್ಕೃತಿಯ ಭಾಗವಾಗಿದ್ದು, ನಗರಕ್ಕೆ ಭೇಟಿ ನೀಡುವ ಹಲವು ಪ್ರವಾಸಿಗರಿಗೆ ಪರಿಚಿತವಾಗಿದೆ.[೭೮]
ಮೆಲ್ಬರ್ನ್, ಚಳಿಗಾಲದಲ್ಲಿ, ಆಸ್ಟ್ರೇಲಿಯನ್ ಮುಖ್ಯಭೂಮಿಯ ಇತರ ರಾಜಧಾನಿ ನಗರಗಳಿಗಿಂತ ಹೆಚ್ಚು ಚಳಿಯಿಂದ ಕೂಡಿರುತ್ತದೆ. −2.8 °C (27.0 °F)ರಷ್ಟು ಅತ್ಯಂತ ಕಡಿಮೆ ತಾಪಮಾನವು ೪ ಜುಲೈ ೧೯೦೧ರಲ್ಲಿ ದಾಖಲೆಯಾಗಿತ್ತು.[೭೯] ಆದಾಗ್ಯೂ, ಹಿಮ ಬೀಳುವುದು ಬಹಳ ವಿರಳ: CBDಯಲ್ಲಿ ತೀರ ಇತ್ತೀಚಿಗೆ ಅಂದರೆ ೨೫ ಜುಲೈ ೧೯೮೬ರಲ್ಲಿ ಪೂರ್ವದ ಹೊರನಾಡಿನ ಉಪನಗರಗಳಲ್ಲಿ ಹಾಗು ೧೦ ಅಗಸ್ಟ್ ೨೦೦೫ರಲ್ಲಿ ಮೌಂಟ್ ಡನ್ಡೆನಾಂಗ್ ಹಿಮವೃಷ್ಟಿಯಾಯಿತು,[೮೦][೮೧] ತೀರ ಅಪರೂಪವೆನಿಸುವಂತೆ ಮೆಲ್ಬರ್ನ್ ಚಳಿಗಾಲದಲ್ಲಿ ಘನೀಕರಣ ಹಾಗು ದಟ್ಟ ಮಂಜನ್ನು ಎದುರಿಸುತ್ತದೆ.
ವಸಂತ ಋತುವಿನಲ್ಲಿ, ಮೆಲ್ಬರ್ನ್ ಸಾಮಾನ್ಯವಾಗಿ ಸೌಮ್ಯವಾದ ಹವಾಮಾನ ಹಾಗು ಶುಭ್ರ ಆಕಾಶವನ್ನು ದೀರ್ಘಾವಧಿಯಲ್ಲಿ ಅನುಭವಿಸುತ್ತದೆ. ಮೆಲ್ಬರ್ನ್ ಹಾಗು ಸಿಡ್ನಿಯ ಸರಾಸರಿ ಜನವರಿ ಹಾಗು ಫೆಬ್ರವರಿ ತಿಂಗಳ ದಿನನಿತ್ಯದ ಬಿಸಿಲಿನ ಪ್ರಮಾಣವು ಸದೃಶವಾಗಿರುತ್ತದೆ".[೭೭][೮೨] ಮೆಲ್ಬರ್ನ್ ನ ಬೇಸಿಗೆ ಕಾಲವು ಸಾಂದರ್ಭಿಕವಾಗಿ ತೀವ್ರತರವಾದ ಶಾಖದಿಂದ ಕೂಡಿರುವುದಕ್ಕೆ ಹೆಸರಾಗಿದೆ. ಇತರ ಯಾವುದೇ ಆಸ್ಟ್ರೇಲಿಯನ್ ರಾಜಧಾನಿ ನಗರಕ್ಕಿಂತ ಮೆಲ್ಬರ್ನ್ 46.4 °C (115.5 °F)ನಷ್ಟು ತೀವ್ರತರವಾದ ಬಿಸಿಲಿನ ದಾಖಲೆಯನ್ನು ಹೊಂದಿದೆ46.4 °C (115.5 °F) ಇದು ೭ ಫೆಬ್ರವರಿ ೨೦೦೯ರಲ್ಲಿ ದಾಖಲಾಗಿತ್ತು.[೭೭]
Melbourneದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | ೪೫.೬ | ೪೬.೪ | ೪೧.೭ | ೩೪.೯ | ೨೮.೭ | ೨೨.೪ | ೨೩.೧ | ೨೬.೫ | ೩೧.೪ | ೩೬.೯ | ೪೦.೯ | ೪೩.೭ | ೪೬.೪ (nil) |
ಅಧಿಕ ಸರಾಸರಿ °C (°F) | ೨೫.೯ | ೨೫.೮ | ೨೩.೯ | ೨೦.೩ | ೧೬.೭ | ೧೪.೦ | ೧೩.೪ | ೧೫.೦ | ೧೭.೨ | ೧೯.೭ | ೨೧.೯ | ೨೪.೨ | ೧೯.೮ |
ಕಡಮೆ ಸರಾಸರಿ °C (°F) | ೧೪.೩ | ೧೪.೬ | ೧೩.೨ | ೧೦.೮ | ೮.೬ | ೬.೯ | ೬.೦ | ೬.೭ | ೮.೦ | ೯.೫ | ೧೧.೨ | ೧೬.೯ | ೧೦.೨ |
Record low °C (°F) | ೫.೫ | ೪.೫ | ೨.೮ | ೧.೫ | −೧.೧ | −೨.೨ | −೨.೮ | −೨.೧ | −೦.೫ | ೦.೧ | ೨.೫ | ೪.೪ | −೨.೮ (nil) |
Average precipitation mm (inches) | ೪೭.೬ | ೪೭.೩ | ೫೦.೨ | ೫೭.೩ | ೫೬.೨ | ೪೯.೨ | ೪೭.೭ | ೫೦.೨ | ೫೭.೯ | ೬೬.೨ | ೫೯.೫ | ೫೯.೨ | ೬೪೮.೫ |
Average precipitation days | ೮.೩ | ೭.೪ | ೯.೩ | ೧೧.೪ | ೧೩.೯ | ೧೪.೧ | ೧೫.೧ | ೧೫.೬ | ೧೪.೭ | ೧೪.೧ | ೧೧.೭ | ೧೦.೪ | — |
Mean sunshine hours | ೩೧೦ | ೩೨೮.೮ | ೨೭೦.೮ | ೨೨೮ | ೨೧೪.೯ | ೧೬೮ | ೧೪೪.೭ | ೧೮೫.೭ | ೧೯೧ | ೨೧೦.೩ | ೨೫೦ | ೨೮೨.೫ | ೨೭೮೪.೭ |
[ಸೂಕ್ತ ಉಲ್ಲೇಖನ ಬೇಕು] |
ಮೆಲ್ಬರ್ನ್ ನ ಪ್ರಮುಖ ವ್ಯಾಪಾರ ಪ್ರದೇಶದ ಕೇಂದ್ರಭಾಗವನ್ನು ಹಾಡಲ್ ಗ್ರಿಡ್ ರೂಪಿಸುತ್ತದೆ (1 by 0.5 miles (1.61 by 0.80 km)ರಷ್ಟು ಅಳತೆಯನ್ನು ಹೊಂದಿದೆ). ಗ್ರಿಡ್ ಜಾಲರಿಯ ದಕ್ಷಿಣದ ಅಂಚು ಯಾರ್ರ ನದಿಯ ದಿಕ್ಕಿಗೆ ಎದುರಾಗಿದೆ. ನಗರಕ್ಕೆ ಹೊಂದಿಕೊಂಡಂತೆ ಇರುವ ಸೌತ್ ಬ್ಯಾಂಕ್ ಹಾಗು ಡಾಕ್ ಲ್ಯಾಂಡ್ಸ್ ಜಿಲ್ಲೆಗಳಲ್ಲಿರುವ ಕಚೇರಿ, ವಾಣಿಜ್ಯ ಹಾಗು ಸಾರ್ವಜನಿಕ ಅಭಿವೃದ್ಧಿಗಳು ಹೆಸರಿಗೆ ಮಾತ್ರ ಈ CBDಯ ಪ್ರದೇಶಗಳನ್ನು ಬಡಾವಣೆಗಳನ್ನಾಗಿ ಮರು ಅಭಿವೃದ್ಧಿಪಡಿಸಿದೆ. ನಗರದ ಕೇಂದ್ರಭಾಗವು ತನ್ನ ಐತಿಹಾಸಿಕ ಹಾಗು ಆಕರ್ಷಕ ಓಣಿಗಳು ಹಾಗು ಕಮಾನುದಾರಿಗಳಿಗೆ ಪ್ರಸಿದ್ಧವಾಗಿದೆ(ಇದರಲ್ಲಿ ಬಹಳ ಗಮನಾರ್ಹವಾದುದೆಂದರೆ ಬ್ಲಾಕ್ ಪ್ಲೇಸ್ ಹಾಗು ರಾಯಲ್ ಆರ್ಕೇಡ್, ಇವುಗಳು ಹಲವಾರು ಅಂಗಡಿಗಳು ಹಾಗು ಕೆಫೆಗಳನ್ನು ಹೊಂದಿರುವುದರ[೮೩] ಜೊತೆಗೆ ನಗರದ ವಿನ್ಯಾಸರಚನೆಯ ಒಂದು ಉಪ ಪರಿಣಾಮವಾಗಿದೆ.[೮೪]
ಇತರ ಆಸ್ಟ್ರೇಲಿಯನ್ ನಗರಗಳಿಗೆ ಹೋಲಿಸಿದರೆ ಮೆಲ್ಬರ್ನ್ CBDಯು ತುಲನಾತ್ಮಕವಾಗಿ ಪರಿಮಿತಿಯಿಲ್ಲದ ಎತ್ತರದ ಕಟ್ಟಡಗಳನ್ನು ಹೊಂದಿದೆ ಹಾಗು ಇದರ ಪರಿಣಾಮವಾಗಿ ಯುದ್ಧಾನಂತರದ ಬೆಳವಣಿಗೆಯಲ್ಲಿ ಆರರಲ್ಲಿ ಐದು ಆಸ್ಟ್ರೇಲಿಯಾದ ಅತ್ಯಂತ ಎತ್ತರದ ಕಟ್ಟಡಗಳನ್ನು ಒಳಗೊಂಡಿದೆ, ಇವುಗಳಲ್ಲಿ ಅತ್ಯಧಿಕ ಎತ್ತರವನ್ನು ಹೊಂದಿರುವ ಕಟ್ಟಡವೆಂದರೆ ಸೌತ್ ಬ್ಯಾಂಕ್ ನಲ್ಲಿ ನೆಲೆಯಾಗಿರುವ ಯುರೇಕ ಟವರ್. ಕಟ್ಟಡದ ಮೇಲ್ಭಾಗದಲ್ಲಿ ಒಂದು ವೀಕ್ಷಣಾ ವೇದಿಕೆಯಿದ್ದು, ಮೆಲ್ಬರ್ನ್ ನ ಎಲ್ಲ ವಿನ್ಯಾಸಗಳನ್ನು ಮೇಲಿನಿಂದ ವೀಕ್ಷಿಸಬಹುದಾಗಿದೆ.[೮೫] ನಗರದ ಎರಡನೇ ಅತ್ಯಂತ ಎತ್ತರದ ಕಟ್ಟಡವಾದ ರಿಯಾಲ್ಟೋ ಗೋಪುರವು, ಹಳೆ CBDಯ ಅತಿ ಎತ್ತರದ ಕಟ್ಟಡವಾಗಿ ಉಳಿದಿದೆ; ಇದರ ವೀಕ್ಷಣಾ ವೇದಿಕೆಯಲ್ಲಿ ನಿಂತು ನಗರವನ್ನು ವೀಕ್ಷಿಸಲು ಪ್ರವಾಸಿಗರಿಗೆ ಸ್ವಲ್ಪ ದಿನಗಳ ಹಿಂದಿನಿಂದ ಅವಕಾಶವನ್ನು ನೀಡಲಾಗುತ್ತಿಲ್ಲ.[೮೬] CBD ಹಾಗು ಸುತ್ತಮುತ್ತಲಿನ ಪ್ರದೇಶಗಳು ಹಲವು ಮಹತ್ವಪೂರ್ಣ ಐತಿಹಾಸಿಕ ಕಟ್ಟಡಗಳನ್ನೂ ಸಹ ಒಳಗೊಂಡಿದೆ ಉದಾಹರಣೆಗೆ ರಾಯಲ್ ಎಕ್ಸಿಬಿಶನ್ ಕಟ್ಟಡ, ಮೆಲ್ಬರ್ನ್ ಟೌನ್ ಹಾಲ್ ಹಾಗು ಸಂಸತ್ತು ಭವನ.[೮೭][೮೮] ಆದಾಗ್ಯೂ ಪ್ರದೇಶವನ್ನು ಕೇಂದ್ರಭಾಗ ವೆಂದು ವಿವರಿಸಲಾಗುತ್ತಾದರೂ, ಇದು ವಾಸ್ತವವಾಗಿ ಜನಸಂಖ್ಯಾಶಾಸ್ತ್ರದ ಪ್ರಕಾರವಾದ ಮೆಲ್ಬರ್ನ್ ನ ಹೃದಯಭಾಗವಲ್ಲ, ಆಗ್ನೇಯ ದಿಕ್ಕಿಗೆ ನಗರದ ಜನರು ವ್ಯಾಪಿಸಿರುವ ಕಾರಣ, ಜನಸಂಖ್ಯಾಶಾಸ್ತ್ರ ರೀತ್ಯಾ ನಗರದ ಕೇಂದ್ರಭಾಗವು ಗ್ಲೆನ್ ಐರಿಸ್ ನಲ್ಲಿ ನೆಲೆಯಾಗಿದೆ.[೮೯]
ಮೆಲ್ಬರ್ನ್ ಒಂದು ಮಾದರಿಯಾದ ಆಸ್ಟ್ರೇಲಿಯನ್ ರಾಜಧಾನಿ ನಗರಗಳಲ್ಲಿ ಒಂದಾಗಿದ್ದು, ೨೦ನೇ ಶತಮಾನದ ನಂತರ ಪ್ರತಿ ಕುಟುಂಬಕ್ಕೆ 'ಮನೆ ಹಾಗು ಉದ್ಯಾನವನಕ್ಕಾಗಿ ಕಾಲು ಎಕರೆ ಜಾಗ' ಎಂಬ ಸಿದ್ಧಾಂತವನ್ನು ವಿಸ್ತರಿಸಿತು, ಸಾಮಾನ್ಯವಾಗಿ ಇದನ್ನು ಸ್ಥಳೀಯ ಭಾಷೆಯಲ್ಲಿ ಆಸ್ಟ್ರೇಲಿಯನ್ ಕನಸು ಎಂದು ಸೂಚಿಸಲಾಗುತ್ತಿತ್ತು. ಇದು, ೧೯೪೫ರ ನಂತರ ಖಾಸಗಿ ಆಟೋಮೊಬೈಲ್ ನ ಜನಪ್ರಿಯತೆಯೊಂದಿಗೆ ಬೆರೆತು, ಇಂದು ಮಧ್ಯ ಹಾಗು ಹೊರ ಉಪನಗರಗಳಲ್ಲಿ ಜನಪ್ರಿಯವಾಗಿರುವ ವಾಹನ-ಆಧಾರಿತ ನಗರದ ವಿನ್ಯಾಸಕ್ಕೆ ಎಡೆ ಮಾಡಿಕೊಟ್ಟಿತು. ಈ ಪ್ರಕಾರವಾಗಿ ಹೆಚ್ಚಿನ ಮೆಟ್ರೋಪಾಲಿಟನ್ ಮೆಲ್ಬರ್ನ್ ಕಡಿಮೆ ಸಾಂದ್ರತೆಯ ಸಮೂಹದಿಂದ ವೈಶಿಷ್ಟ್ಯತೆಯನ್ನು ಪಡೆದಿದೆ, ಆದರೆ ನಗರದ ಒಳಾಂಗಣ ಪ್ರದೇಶಗಳು ಮುಖ್ಯವಾಗಿ ಮಧ್ಯಮ ಸಾಂದ್ರತೆಯನ್ನು ಹೊಂದಿದ್ದು, ಸಾಗಣೆ-ಆಧಾರಿತ ನಗರ ವಿನ್ಯಾಸವನ್ನು ಹೊಂದಿದೆ. ನಗರದ ಹೃದಯಭಾಗ, ಡಾಕ್ ಲ್ಯಾಂಡ್ಸ್, ಸೇಂಟ್ ಕಿಲ್ಡ ರಸ್ತೆ ಹಾಗು ಸೌತ್ ಬ್ಯಾಂಕ್ ಪ್ರದೇಶಗಳಲ್ಲಿ ಜನಸಂಖ್ಯೆಯ ಅಧಿಕ ಸಾಂದ್ರತೆಯಿದೆ.
ಮೆಲ್ಬರ್ನ್ ನನ್ನು ಸಾಮಾನ್ಯವಾಗಿ ಆಸ್ಟ್ರೇಲಿಯಾದ ಉದ್ಯಾನ ನಗರಿ ಎಂದು ಸೂಚಿಸಲಾಗುತ್ತದೆ, ಹಾಗು ವಿಕ್ಟೋರಿಯಾ ರಾಜ್ಯವು ಒಂದೊಮ್ಮೆ ಉದ್ಯಾನ ರಾಜ್ಯ ವೆಂದು ಪ್ರಸಿದ್ಧವಾಗಿತ್ತು.[೯೦][೯೧][೯೨] ಮೆಲ್ಬರ್ನ್ ನಲ್ಲಿ ಉದ್ಯಾನವನಗಳು ಹಾಗು ತೋಟಗಳು ಸಾಕಷ್ಟು ಸಂಖ್ಯೆಯಲ್ಲಿದೆ,[೯೩] ಇದರಲ್ಲಿ ಹಲವು CBDಗೆ ಬಹಳ ನಿಕಟವಾಗಿದೆ, ಜೊತೆಗೆ ಭೂಸದೃಶವಾದ ದೀರ್ಘದೃಶ್ಯಗಳ ನಡುವೆ ಸಾಮಾನ್ಯವಾದ ಹಾಗು ವಿರಳವಾದ ಸಸ್ಯ ಜಾತಿಗಳು ಕಂಡುಬರುತ್ತದೆ, ಇದಲ್ಲದೆ ಪಾದಚಾರಿಗಳಿಗಾಗಿ ಮಾರ್ಗಗಳು ಹಾಗು ಸಾಲು ಮರದ ವಿಶಾಲ ಬೀದಿಗಳಿವೆ. ಮೆಲ್ಬರ್ನ್ ಉಪನಗರಗಳ ಸುತ್ತಮುತ್ತಲೂ ಸಹ ಹಲವು ಉದ್ಯಾನವನಗಳಿವೆ, ಉದಾಹರಣೆಗೆ ವ್ಯಾಪಾರ ಮುಖ್ಯ ಕೇಂದ್ರಗಳಾದ ಸ್ಟೋನ್ನಿಂಗ್ಟನ್, ಬೊರೂನ್ಡರ ಹಾಗು ಪೋರ್ಟ್ ಫಿಲಿಪ್ ನ ಆಗ್ನೇಯಕ್ಕಿರುವ ಪುರಸಭೆಗಳಲ್ಲಿ ಇಂತಹ ಉದ್ಯಾನವನಗಳು ಕಂಡುಬರುತ್ತದೆ. ಮೆಲ್ಬರ್ನ್ ನಗರವು ಒಳಗೊಳ್ಳುವ ವ್ಯಾಪಕ ಪ್ರದೇಶವು ವಿಧ್ಯುಕ್ತವಾಗಿ ನೂರಾರು ಉಪನಗರಗಳಾಗಿ ವಿಭಾಗವಾಗಿದೆ(ವಿಳಾಸ ಹಾಗು ಅಂಚೆ ಉದ್ದೇಶಗಳಿಗಾಗಿ), ಹಾಗು ಇವುಗಳು ಸ್ಥಳೀಯ ಸರ್ಕಾರದ ಆಡಳಿತದಲ್ಲಿರುತ್ತವೆ[೯೪] ಇವುಗಳಲ್ಲಿ ೩೧ ಪ್ರದೇಶಗಳು ಮೆಟ್ರೋಪಾಲಿಟನ್ ಪ್ರದೇಶದೊಳಗೆ ಸ್ಥಿತವಾಗಿದೆ.[೯೫]
ಮೆಲ್ಬರ್ನ್ ನ ವಸತಿ ವ್ಯವಸ್ಥೆಯು ಅಧಿಕ ಬೆಲೆಯನ್ನು ಹೊಂದಿರುವ ಖಾಸಗಿ ವಸತಿ ಒಡೆತನದಿಂದ ವಿಶಿಷ್ಟವಾಗಿದೆ[ಸೂಕ್ತ ಉಲ್ಲೇಖನ ಬೇಕು], ಕನಿಷ್ಠ ಮಟ್ಟದ ಹಾಗು ಸಾರ್ವಜನಿಕ ವಸತಿಯ ಕೊರತೆ ಹಾಗು ಅಧಿಕ ಬೇಡಿಕೆ ಹಾಗು ಬಹುತೇಕವಾಗಿ ಕೈಗೆಟುಕದ ಬಾಡಿಗೆ ವಸತಿಯ ವ್ಯವಸ್ಥೆಯು ಇಲ್ಲಿದೆ.[ಸೂಕ್ತ ಉಲ್ಲೇಖನ ಬೇಕು] ಸಾರ್ವಜನಿಕ ವಸತಿ ಸೇವೆಯನ್ನು ಸಾಮಾನ್ಯವಾಗಿ ಹೌಸಿಂಗ್ ಕಮಿಷನ್ ಆಫ್ ವಿಕ್ಟೋರಿಯಾ ಒದಗಿಸುತ್ತದೆ ಹಾಗು ಕಾಮನ್ವೆಲ್ತ್-ಸ್ಟೇಟ್ ಹೌಸಿಂಗ್ ಅಗ್ರಿಮೆಂಟ್ ನ ಚೌಕಟ್ಟಿನೊಳಗೆ ನಿರ್ವಹಿಸುತ್ತದೆ, ಈ ಮೂಲಕ ಸಾರ್ವಜನಿಕ ವಸತಿಗಾಗಿ ಹಣವನ್ನು ಫೆಡರಲ್ ಹಾಗು ರಾಜ್ಯ ಸರ್ಕಾರಗಳು ನೀಡುತ್ತವೆ.[ಸೂಕ್ತ ಉಲ್ಲೇಖನ ಬೇಕು] ಸಾರ್ವಜನಿಕ ವಸತಿಯು ದೊರೆಯಲು ಕಷ್ಟಕರವಾಗಿರುತ್ತದೆ, ಹಲವರು ನಿವಾಸಿಗಳ ಹೆಸರನ್ನು ಕಾಯುತ್ತಿರುವವರ ಪಟ್ಟಿಯಲ್ಲಿ ಸೇರಿಸಿ ದೀರ್ಘಾವಧಿಯವರೆಗೂ ಕಾಯುವಂತೆ ಮಾಡಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಪ್ರಸಕ್ತದಲ್ಲಿ, ಮೆಲ್ಬರ್ನ್ ಅಧಿಕ ಜನಸಂಖ್ಯಾ ಬೆಳವಣಿಗೆಯನ್ನು ಎದುರಿಸುತ್ತಿರುವ ಕಾರಣದಿಂದಾಗಿ, ವಸತಿಗಾಗಿ ಅಧಿಕ ಬೇಡಿಕೆಯು ಉಂಟಾಗುತ್ತಿದೆ. ಇದು ವಸತಿಯಲ್ಲಿ ಉಚ್ಛ್ರಾಯ ಸ್ಥಿತಿಯನ್ನು ಸೃಷ್ಟಿಸಿದೆ, ಇದು ವಸತಿ ಬೆಲೆಯನ್ನು ಅಧಿಕಗೊಳಿಸುವುದರ ಜೊತೆಗೆ ಬಾಡಿಗೆ ದರದ ಮೇಲೆ ಹಾಗು ಎಲ್ಲ ಮಾದರಿಯ ವಸತಿ ಲಭ್ಯತೆ ಮೇಲೆ ಪರಿಣಾಮವನ್ನು ಬೀರುತ್ತದೆ. ಮೆಲ್ಬರ್ನ್ ನ ಹೊರಭಾಗದ ಪ್ರದೇಶದಲ್ಲಿ ಸಾಮಾನ್ಯವಾಗಿ ಮನೆಯ ವಿಭಜನೆಗಳು ಉಂಟಾಗುತ್ತದೆ ಜೊತೆಗೆ ಮನೆ ಹಾಗು ಭೂಮಿಯ ಪ್ಯಾಕೇಜಿಂಗ್ ಎಂದು ಹಲವಾರು ಅಭಿವರ್ಧಕರು ಮನೆಯನ್ನು ಪ್ರದರ್ಶನಕ್ಕಿಡುತ್ತಾರೆ. ಡೆಮೋಗ್ರಾಫಿಯಾ ಇಂಟರ್ನ್ಯಾಷನಲ್ ಇತ್ತೀಚಿಗೆ ನಡೆಸಿದ ಅಂತಾರಾಷ್ಟ್ರೀಯ ವಸತಿ ಪೂರೈಕೆ ಸಮೀಕ್ಷೆಯು ೩೨೫ ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಮೆಲ್ಬರ್ನ್ ಗೆ ೩೨೧ನೇ ಸ್ಥಾನವನ್ನು ನೀಡಿತು, ಇದರಂತೆ ಮನೆಯನ್ನು ಖರೀದಿಸಲು ವಿಶ್ವದ ಅತ್ಯಂತ ದುಬಾರಿ ಸ್ಥಳವು ಇದಾಯಿತು.
ಹಲವು ನಗರ ಪರಿಸರಗಳ ಮಾದರಿ, ಮೆಲ್ಬರ್ನ್ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವವಾದ ಸಮಸ್ಯೆಗಳನ್ನು ಎದುರಿಸುತ್ತದೆ, ಇದರಲ್ಲಿ ಹಲವು ನಗರದ ದೊಡ್ಡ ಹೆಜ್ಜೆಗುರುತಿಗೆ ಹಾಗು ನಗರದ ಅವ್ಯವಸ್ಥಿತ ಬೆಳವಣಿಗೆ ಹಾಗು ಮೂಲಭೂತ ಸೌಕರ್ಯ ಹಾಗು ಸೇವೆಗಳ ಬೇಡಿಕೆಗೆ ಸಂಬಂಧಿಸಿದೆ.
ಇಂತಹ ಒಂದು ಸಮಸ್ಯೆಯೆಂದರೆ ನೀರಿನ ಬಳಕೆ, ಅನಾವೃಷ್ಟಿ ಹಾಗು ಮಳೆಯ ಕೊರತೆ. ವಿಕ್ಟೋರಿಯಾನಲ್ಲಿ ಅನಾವೃಷ್ಟಿ, ಕಡಿಮೆ ಮಳೆ ಹಾಗು ಅತ್ಯಧಿಕ ತಾಪಮಾನಗಳು ಮೆಲ್ಬರ್ನ್ ನ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಹಾಗು ಹವಾಮಾನದಲ್ಲಿನ ಬದಲಾವಣೆಯು ಮೆಲ್ಬರ್ನ್ ನೀರಿನ ಸರಬರಾಜಿನ ಮೇಲೆ ದೀರ್ಘಕಾಲಿಕ ಪರಿಣಾಮವನ್ನು ಉಂಟುಮಾಡಬಹುದು.[೯೬] ಮೆಲ್ಬರ್ನ್ ೧೯೯೭ರಿಂದಲೂ ಅನಾವೃಷ್ಟಿಯ ಸಮಸ್ಯೆಯನ್ನು ಎದುರಿಸುತ್ತಿದೆ.[೯೭] ನೀರಿನ ಬಳಕೆಯ ಮೇಲೆ ಪ್ರತಿಬಂಧವನ್ನು ಹಾಗು ಇತರ ಯೋಜನೆಗಳನ್ನು ಜಾರಿಗೆ ತಂದಿತು, ಇದರಲ್ಲಿ: ನಗರದಲ್ಲಿ ನೀರಿನ ಮರುಬಳಕೆಯ ಯೋಜನೆಗಳು, ಮನೆಯಲ್ಲೇ ಇರುವ ನೀರಿನ ತೊಟ್ಟಿಗಳಿಗಾಗಿ ಉತ್ತೇಜಕ ಸವಲತ್ತು, ಗ್ರೇವಾಟರ್ ವ್ಯವಸ್ಥೆ(ಮನೆಯಲ್ಲಿ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಹಾಗು ಸ್ನಾನ ಮಾಡಿದ ನೀರನ್ನು ಮತ್ತೆ ಮರುಬಳಕೆ ಮಾಡುವ ವ್ಯವಸ್ಥೆ), ನೀರಿನ ಬಳಕೆಯ ಬಗ್ಗೆ ಜನಜಾಗೃತಿ, ಹಾಗು ನೀರಿನ ಸಂರಕ್ಷಣೆ ಹಾಗು ಮರುಬಳಕೆ ಪ್ರವರ್ತನಗಳು ಸೇರಿದೆ; ಅಲ್ಲದೆ, ಜೂನ್ ೨೦೦೭ರಲ್ಲಿ, ಬ್ರಾಕ್ಸ್ ಸರ್ಕಾರವು, ವಿಕ್ಟೋರಿಯಾದ ಆಗ್ನೇಯ ಕರಾವಳಿ ತೀರದಲ್ಲಿ $೩.೧ ಶತಕೋಟಿ ಮೌಲ್ಯದ ವೊಂಥಗ್ಗಿ ಡಿಸಲನೈಸೆಶನ್(ನೀರಿನಲ್ಲಿರುವ ಲವಣಾಂಶವನ್ನು ತೆಗೆಯುವ ವಿಧಾನ) ಸ್ಥಾವರವನ್ನು ನಿರ್ಮಿಸುವುದಾಗಿ ಘೋಷಿಸಿತು, ಇದು ಪ್ರತಿ ವರ್ಷ ೧೫೦ ಶತಕೋಟಿ ಲೀಟರ್ ನೀರನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿತ್ತು,[೯೮] ಅಲ್ಲದೆ 70 km (43 mi) ವಿಕ್ಟೋರಿಯಾದ ಉತ್ತರ ದಿಕ್ಕಿನಲ್ಲಿರುವ ಗೌಲ್ಬರ್ನ್ ಪ್ರದೇಶದಿಂದ ಮೆಲ್ಬರ್ನ್ ಗೆ ಹಾಗು ಮೆಲ್ಬರ್ನ್ ಹಾಗು ಗೀಲಂಗ್ ಗೆ ಸಂಪರ್ಕ ಕಲ್ಪಿಸುವ ಒಂದು ಹೊಸ ನೀರಿನ ಪೈಪಿನ ವ್ಯವಸ್ಥೆ ಮಾಡಲಾಯಿತು. ಎರಡೂ ಯೋಜನೆಗಳನ್ನು ವಿವಾದಾಸ್ಪದ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿಯಲ್ಲಿ ನಡೆಸಲಾಗುತ್ತಿದೆ ಹಾಗು ಹಲವಾರು ಸ್ವತಂತ್ರ ವರದಿಗಳು, ಎರಡರಲ್ಲಿ ಯಾವುದೇ ಯೋಜನೆಯಿಂದ ನಗರಕ್ಕೆ ನೀರಿನ ಸರಬರಾಜಾಗಿರುವ ಬಗ್ಗೆ ಪತ್ತೆಯಾಗಿಲ್ಲ ಹಾಗು ಸಮರ್ಥನೀಯ ರೀತಿಯಲ್ಲಿ ನೀರಿನ ನಿರ್ವಹಣೆಯೊಂದೇ ಇದಕ್ಕಿರುವ ಉತ್ತಮ ಪರಿಹಾರವಾಗಿದೆ ಹಾಗು ಈ ಮಧ್ಯದಲ್ಲಿ, ಅನಾವೃಷ್ಟಿಯ ತೊಂದರೆಯನ್ನೂ ಸಹ ಎದುರಿಸಬೇಕು.[೯೯]
ಇತ್ತೀಚಿಗೆ ಹವಾಮಾನದ ಬದಲಾವಣೆಯ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಮೆಲ್ಬರ್ನ್ ನಗರವು, ೨೦೦೨ರಲ್ಲಿ, ಕಾರ್ಬನ್ ಉತ್ಸರ್ಜನವನ್ನು ೨೦೨೦ರ [೧೦೦] ಹೊತ್ತಿಗೆ ನಿವ್ವಳವಾಗಿ ಶೂನ್ಯಕ್ಕೆ ತಗ್ಗಿಸುವ ಗುರಿಯನ್ನು ಹೊಂದಿದೆ ಹಾಗು ಮೋರ್ಲ್ಯಾಂಡ್ ಸಿಟಿ ಕೌನ್ಸಿಲ್ ಜೀರೋ ಮೋರ್ಲ್ಯಾಂಡ್ ಪ್ರೋಗ್ರಾಮ್ ನ್ನು ಆರಂಭಿಸಿದೆ, ಆದಾಗ್ಯೂ ಎಲ್ಲ ಮೆಟ್ರೋಪಾಲಿಟನ್ ಪುರಸಭೆಗಳು ಇದನ್ನು ಅನುಸರಿಸುತ್ತಿಲ್ಲ, ಜೊತೆಗೆ ಗ್ಲೆನ್ ಈರಾ ನಗರವು ಗಮನಾರ್ಹವಾಗಿ ೨೦೦೯ರಲ್ಲಿ ಕಾರ್ಬನ್ ತಟಸ್ಥತೆಯನ್ನು ಹೊಂದಬಾರದೆಂದು ನಿರ್ಧರಿಸಿತು.[೧೦೧]
ಮೆಲ್ಬರ್ನ್, ತನ್ನ ಕಡಿಮೆ ಸಾಂದ್ರತೆಯುಳ್ಳ ವಸತಿಯ ಕಾರಣದಿಂದಾಗಿ ವಿಶ್ವದಲ್ಲೇ ಅತ್ಯಂತ ದೊಡ್ಡ ನಗರದ ಹೆಜ್ಜೆಗುರುತುಗಳನ್ನು ಹೊಂದಿದೆ, ಇದರ ಪರಿಣಾಮವಾಗಿ ವ್ಯಾಪಕವಾಗಿ ಉಪನಗರಗಳ ಅವ್ಯವಸ್ಥಿತ ಬೆಳವಣಿಗೆ, ಜೊತೆಗೆ ಕಾರಿನ ಮೇಲೆ ಅತಿಯಾದ ಅವಲಂಬನೆ ಹಾಗು ನಗರದ ಹೊರಭಾಗದಿಂದ ಒಳಭಾಗಕ್ಕೆ ಹೋಗಲು ಕಡಿಮೆ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯು ಉಂಟಾಗಿದೆ.[೧೦೨] ನಗರದೊಳಗಿರುವ ಹೆಚ್ಚಿನ ಸಸ್ಯವರ್ಗವು, ಸ್ಥಳೀಯವಲ್ಲದ ಜಾತಿಗಳಾಗಿವೆ, ಇವುಗಳಲ್ಲಿ ಹೆಚ್ಚಿನವು ಯುರೋಪಿಯನ್ ಮೂಲದವಾಗಿದ್ದು, ಹಾಗು ಹಲವು ಪರಿಸ್ಥಿತಿಗಳಲ್ಲಿ ಆಕ್ರಮಣಕಾರಿ ಜಾತಿಗಳಿಗೆ ಹಾಗು ಹಾನಿಕರ ಕಳೆಗಳಿಗೆ ಪರಪೋಷಿಯಾಗುತ್ತದೆ.[೧೦೩] ಮಹತ್ವವಾಗಿ ಪರಿಚಯವಾದ ನಗರದ ವಿನಾಶಕಾರಿ ಜೀವಿಗಳಲ್ಲಿ ಸಾಧಾರಣ ಮೈನಾ,[೧೦೪] ಕಾಡಿನ ಪಾರಿವಾಳ[೧೦೫], ಕಂದು ಬಣ್ಣದ ಇಲಿ,[೧೦೬][೧೦೭] ಯುರೋಪಿಯನ್ ಕಣಜ,[೧೦೮] ಸಾಧಾರಣವಾದ ಸ್ಟಾರ್ಲಿಂಗ್(ಸಣ್ಣ ಮೈನಾ ಜಾತಿಯ ಹಕ್ಕಿ) ಹಾಗು ಕೆಂಪು ಬಣ್ಣದ ನರಿ ಸೇರಿದೆ.[೧೦೯] ಹೊರವಲಯದಲ್ಲಿರುವ ಹಲವು ಉಪನಗರಗಳು, ಅದರಲ್ಲೂ ವಿಶೇಷವಾಗಿ ಯಾರ್ರ ಕಣಿವೆ ಹಾಗು ಈಶಾನ್ಯ ಹಾಗು ಪೂರ್ವಕ್ಕಿರುವ ಬೆಟ್ಟಗಳು, ದೀರ್ಘಾವಧಿಯಲ್ಲಿ ಪುನರುತ್ಪಾದಕ ಬೆಂಕಿಗೆ ಗುರಿಯಾಗಿಲ್ಲ, ಇದು ಸಸಿಗಳ ಕೊರತೆಯನ್ನು ಉಂಟುಮಾಡುವುದರ ಜೊತೆಗೆ ನಗರೀಕೃತ ಸ್ಥಳೀಯ ಕುರುಚಲು ಪ್ರದೇಶದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಸಸ್ಟೈನಬಿಲಿಟಿ ಹಾಗಿ ಎನ್ವಿರಾನ್ಮೆಂಟ್ ವಿಭಾಗವು, ಒಮ್ಮೊಮ್ಮೆ ಹೊತ್ತಿಕೊಳ್ಳುವ ಬೆಂಕಿಯನ್ನು ನಂದಿಸಿ ಭಾಗಶಃ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ.[೧೧೦][೧೧೧] ಹಲವಾರು ರಾಷ್ಟ್ರೀಯ ಉದ್ಯಾನವನಗಳು, ಮೆಲ್ಬರ್ನ್ ನ ಸುತ್ತಮುತ್ತಲ ನಗರ ಪ್ರದೇಶಗಳಿಂದ ತಮ್ಮ ಹೆಸರನ್ನು ಪಡೆದುಕೊಂಡಿವೆ, ಇದರಲ್ಲಿ ಆಗ್ನೆಯದಲ್ಲಿರುವ ಮಾರ್ನಿಂಗ್ಟನ್ ಪೆನಿನ್ಸುಲ ನ್ಯಾಷನಲ್ ಪಾರ್ಕ್, ಪೋರ್ಟ್ ಫಿಲಿಪ್ ಹೆಡ್ಸ್ ಮರೈನ್ ನ್ಯಾಷನಲ್ ಪಾರ್ಕ್ ಹಾಗು ಪಾಯಿಂಟ್ ನೇಪಿಯನ್ ನ್ಯಾಷನಲ್ ಪಾರ್ಕ್ ಗಳು ಸೇರಿವೆ, ಉತ್ತರದಲ್ಲಿ ಆರ್ಗನ್ ಪೈಪ್ಸ್ ನ್ಯಾಷನಲ್ ಪಾರ್ಕ್ ಹಾಗು ಪೂರ್ವದಲ್ಲಿ ಡನ್ಡೆನಾಂಗ್ ರೆಂಜಸ್ ನ್ಯಾಷನಲ್ ಪಾರ್ಕ್ ಸ್ಥಿತವಾಗಿದೆ. ಮೆಲ್ಬರ್ನ್ ನಗರದಾಚೆಗೆ ಮಹತ್ವವಾದ ಅಸಂಖ್ಯಾತ ರಾಜ್ಯ ಮಟ್ಟದ ಉದ್ಯಾನವನಗಳು ನೆಲೆಗೊಂಡಿವೆ.[೧೧೨][೧೧೩]
ಮಾಲಿನ್ಯ ನಿಯಂತ್ರಣದ ಜವಾಬ್ದಾರಿಯು EPA ವಿಕ್ಟೋರಿಯಾ ಹಾಗು ಹಲವಾರು ಸ್ಥಳೀಯ ಮಂಡಳಿಗಳ ಅಧಿಕಾರ ವ್ಯಾಪ್ತಿಯೊಳಗೆ ಬರುತ್ತದೆ. ಜಾಗತಿಕ ಮಟ್ಟದಲ್ಲಿ ಹೋಲಿಕೆ ಮಾಡಿದಾಗ, ವಾಯು ಮಾಲಿನ್ಯವು ನಿಯಂತ್ರಣದಲ್ಲಿದ್ದು ಉತ್ತಮ ಪಟ್ಟಿಗೆ ಸೇರ್ಪಡುತ್ತದೆ. ನಗರ ಪ್ರದೇಶಗಳಲ್ಲಿ ವರ್ಷದ ಬೇಸಿಗೆ ಹಾಗು ಶರತ್ಕಾಲದಲ್ಲಿ ವಾತಾವರಣವು ಅಸ್ಪಷ್ಟತೆಯಿಂದ ಕೂಡಿದ್ದು, ಈ ಅವಧಿಯು ಬಹಳ ಕೆಟ್ಟದ್ದಾಗಿರುತ್ತದೆ.[೯೦][೧೧೪]
ಮೆಲ್ಬರ್ನ್ ನ ಇತ್ತೀಚಿನ ಮತ್ತೊಂದು ಪರಿಸರಕ್ಕೆ ಸಂಬಂಧಿಸಿದ ವಿಷಯವೆಂದರೆ, ಪೋರ್ಟ್ ಫಿಲಿಪ್ ಕೊಲ್ಲಿಯನ್ನು ಹೂಳೆತ್ತುವ ಮೂಲಕ ಮೆಲ್ಬರ್ನ್ ಬಂದರುಗಳ ನಾಲೆಯ ಆಳವನ್ನು ಹೆಚ್ಚಿಸುವ ವಿಕ್ಟೋರಿಯನ್ ಸರ್ಕಾರದ ಯೋಜನೆ - ಪೋರ್ಟ್ ಫಿಲಿಪ್ ಚ್ಯಾನಲ್ ಡೀಪನಿಂಗ್ ಪ್ರಾಜೆಕ್ಟ್. ಇದು ವಿವಾದಕ್ಕೆ ಗ್ರಾಸವಾಗುವುದರ ಜೊತೆಗೆ ಕಳವಳದ ನಡುವೆ ಕಟ್ಟೆಚರದ ನಿಯಂತ್ರಣವನ್ನು ಉಂಟುಮಾಡಿತು, ಏಕೆಂದರೆ ಭಾರಿ ಸಾಧನಗಳಿಂದ ಹಾಗು ಇತರ ಕೈಗಾರಿಕಾ ಸಂಚಯದಿಂದ ಕಡಲತೀರಗಳು ಹಾಗು ಜಲಚರ ಜೀವಿಗಳಿಗೆ ಹಾನಿ ಉಂಟಾಗಬಹುದು.[೭೪][೧೧೫] ಮೆಲ್ಬರ್ನ್ ನಲ್ಲಿರುವ ಇತರ ಪ್ರಮುಖ ಮಾಲಿನ್ಯ ಸಮಸ್ಯೆಗಲ್ಲಿ ಬ್ಯಾಕ್ಟೀರಿಯಾದ ಪ್ರಮಾಣಗಳು ಸೇರಿದೆ, ಇದರಲ್ಲಿ ಯಾರ್ರ ನದಿ ಹಾಗು ಇತರ ಉಪನದಿಗಳಲ್ಲಿರುವ E. ಕಾಲಿ ಬ್ಯಾಕ್ಟೀರಿಯ ಕಲುಷಿತ ವಾತಾವರಣ,[೧೧೬] ಹಾಗು ಕಸದಿಂದ ಉಂಟಾಗುತ್ತದೆ. ಪ್ರತಿನಿತ್ಯ ೩೫೦,೦೦೦ದಷ್ಟು ಸಿಗರೇಟ್ ತುಂಡುಗಳು ಮಳೆಯ ನೀರಿನ ಮೂಲಕ ನದಿಗಳನ್ನು ಸೇರುತ್ತಿವೆ.[೧೧೭] ಕಡಲದಂಡೆ ಹಾಗು ಜಲಮಾಲಿನ್ಯವನ್ನು ತಗ್ಗಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.[೭೪][೧೧೮]
ಫೆಬ್ರವರಿ ೨೦೧೦ರಲ್ಲಿ, ಮಾನವ ಸಮಾಜ, ಆರ್ಥಿಕತೆ ಹಾಗು ಪರಿಸರವನ್ನು ಊರ್ಜಿತಗೊಳಿಸುವ ಒಂದು ಪ್ರವರ್ತನ ಯೋಜನೆ ದಿ ಟ್ರ್ಯಾನ್ಸಿಶನ್ ಡೆಕೇಡ್ ನ್ನು ಮೆಲ್ಬರ್ನ್ ನಲ್ಲಿ ಆರಂಭಿಸಲಾಯಿತು.[೧೧೯]
ಮೆಲ್ಬರ್ನ್ ಒಂದು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರವಾಗಿದ್ದು, ಜೊತೆಗೆ ಸಾಂಸ್ಕೃತಿಕ ಪ್ರಯತ್ನವು ಪ್ರಮುಖ ಘಟನಾವಳಿಗಳು ಹಾಗು ಉತ್ಸವಗಳು, ನಾಟಕ, ಸಂಗೀತಕ, ಹಾಸ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಚಲನಚಿತ್ರ ಹಾಗು ದೂರದರ್ಶನದಿಂದ ವ್ಯಾಪಿಸಿದೆ. ಎಡಿನ್ಬರ್ಗ್ ನ ನಂತರ ಇದು UNESCO ಸಾಹಿತ್ಯ ನಗರಿ ಎಂದು ಖ್ಯಾತಿ ಪಡೆದ ಎರಡನೇ ನಗರವಾಗಿದೆ[೧೨೦] ಹಾಗು ದಿ ಇಕನಾಮಿಸ್ಟ್ ನಿಯತಕಾಲಿಕವು ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂದು ಮೂರು ಬಾರಿ ಸ್ಥಾನವನ್ನು ಹಂಚಿಕೊಂಡಿದೆ. ಈ ಸಮೀಕ್ಷೆಯ ಹಲವಾರು ಲಕ್ಷಣಗಳನ್ನು ಆಧರಿಸಿದೆ, ಇದರಲ್ಲಿ ವಿಶಾಲವಾದ ಸಾಂಸ್ಕೃತಿಕ ಕೊಡುಗೆಗಳೂ ಸಹ ಸೇರಿದೆ.[೧೨೧]
ನಗರವು ಹಲವಾರು ಬಗೆಯ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗು ಎಲ್ಲ ಬಗೆಯ ಉತ್ಸವಗಳನ್ನು ಆಚರಿಸುತ್ತದೆ, ಇದರಲ್ಲಿ ಮೆಲ್ಬರ್ನ್ ಇಂಟರ್ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್, ಮೆಲ್ಬರ್ನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಮೆಲ್ಬರ್ನ್ ಇಂಟರ್ನ್ಯಾಷನಲ್ ಕಾಮೆಡಿ ಫೆಸ್ಟಿವಲ್ ಹಾಗು ಮೆಲ್ಬರ್ನ್ ಫ್ರಿಂಜ್ ಫೆಸ್ಟಿವಲ್. ಆಸ್ಟ್ರೇಲಿಯನ್ ಬ್ಯಾಲೆ ಮೆಲ್ಬರ್ನ್ ನಲ್ಲಿ ಸ್ಥಿತವಾಗಿದೆ, ಇದೆ ರೀತಿ ಮೆಲ್ಬರ್ನ್ ಸಿಮ್ಫನಿ ಆರ್ಕೆಸ್ಟ್ರಾ ಕೂಡ. ಮೆಲ್ಬರ್ನ್, ೧೯೯೬ರಲ್ಲಿ 'ವಿಕ್ಟೋರಿಯಾ ಸ್ಟೇಟ್ ಅಪೆರಾ'ದೊಂದಿಗೆ ವಿಲೀನವಾದ ನಂತರ ಅಪೆರಾ ಆಸ್ಟ್ರೇಲಿಯಾಕ್ಕೆ ಎರಡನೇ ನೆಲೆಯಾಗಿದೆ. ವಿಕ್ಟೋರಿಯನ್ ಅಪೆರಾ ೨೦೦೬ರಲ್ಲಿ ತನ್ನ ಆರಂಭಿಕ ಪ್ರದರ್ಶನವನ್ನು ನೀಡುವುದರ ಜೊತೆಗೆ ಮೆಲ್ಬರ್ನ್ ನಲ್ಲಿರುವ ಹಲವಾರು ಸ್ಥಳಗಳಲ್ಲಿ ಪ್ರದರ್ಶನವನ್ನು ನೀಡುತ್ತದೆ.
ರಂಗಭೂಮಿ ಹಾಗು ಕಲಾ ಪ್ರದರ್ಶನಕ್ಕಿರುವ ಗಮನಾರ್ಹ ಸ್ಥಳಗಳಲ್ಲಿ: ದಿ ವಿಕ್ಟೋರಿಯನ್ ಆರ್ಟ್ಸ್ ಸೆಂಟರ್(ಇದರಲ್ಲಿ ಸ್ಟೇಟ್ ಥಿಯೇಟರ್, ಹಮೆರ್ ಹಾಲ್, ಪ್ಲೇಹೌಸ್ ಹಾಗು ಫೇರ್ ಫ್ಯಾಕ್ಸ್ ಸ್ಟುಡಿಯೋ ಸಹ ಸೇರಿದೆ), ಮೆಲ್ಬರ್ನ್ ರೆಸಿಟಲ್ ಸೆಂಟರ್, ಸಿಡ್ನಿ ಮ್ಯೇರ್ ಮ್ಯೂಸಿಕ್ ಬೌಲ್, ಪ್ರಿನ್ಸೆಸ್ ಥಿಯೇಟರ್, ರೀಜೆಂಟ್ ಥಿಯೇಟರ್, ಫೋರಮ್ ಥಿಯೇಟರ್, ಪ್ಯಾಲೇಸ್ ಥಿಯೇಟರ್, ಕಾಮೆಡಿ ಥಿಯೇಟರ್, ಅಥೆನಯೇಯುಂ ಥಿಯೇಟರ್, ಹರ್ ಮೆಜಸ್ಟಿ'ಸ್ ಥಿಯೇಟರ್, ಕ್ಯಾಪಿಟಲ್ ಥಿಯೇಟರ್, ಪಲಯಿಸ್ ಥಿಯೇಟರ್ ಹಾಗು ಆಸ್ಟ್ರೇಲಿಯನ್ ಸೆಂಟರ್ ಫಾರ್ ಕಾಂಟೆಂಪರರಿ ಆರ್ಟ್. ಮೆಲ್ಬರ್ನ್ ನಲ್ಲಿ ೧೦೦ಕ್ಕೂ ಅಧಿಕ ಗ್ಯಾಲರಿಗಳಿವೆ.[೧೨೨] ಇದರಲ್ಲಿ ಗಮನಾರ್ಹವಾದುದೆಂದರೆ ಆಸ್ಟ್ರೇಲಿಯಾದ ಅತ್ಯಂತ ಹಳೆಯ ಹಾಗು ಅತ್ಯಂತ ದೊಡ್ಡ ಕಲಾ ಗ್ಯಾಲರಿಯಾದ ನ್ಯಾಷನಲ್ ಗ್ಯಾಲರಿ ಆಫ್ ವಿಕ್ಟೋರಿಯಾಕ್ಕೆ ಮೆಲ್ಬರ್ನ್ ತವರಾಗಿದೆ.[೧೨೩]
ಮೆಲ್ಬರ್ನ್, ಆಸ್ಟ್ರೇಲಿಯಾದ ದೂರದರ್ಶನ,[೧೫] ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್,[೧೬] ಆಸ್ಟ್ರೇಲಿಯನ್ ಚಿತ್ತಪ್ರಭಾವ ನಿರೂಪಣಾವಾದಿ ಕಲಾ ಚಳವಳಿಯಾದ ಹೆಯಿಡೆಲ್ಬರ್ಗ್ ಶಾಲೆ,[೧೨೪] ಹಾಗು ಆಸ್ಟ್ರೇಲಿಯನ್ ಸಮಕಾಲೀನ ನೃತ್ಯದ ಉಗಮ ಸ್ಥಾನವಾಗಿದೆ(ಇದರಲ್ಲಿ ಮೆಲ್ಬರ್ನ್ ಶಫಲ್ ಹಾಗು ನ್ಯೂ ವೋಗ್ ಶೈಲಿಗಳು ಸೇರಿವೆ).[೧೨೫] ನಗರವು ವಿಶಾಲವಾದ ಸಿನಿಮಾದ ಇತಿಹಾಸವನ್ನು ಹೊಂದಿದೆ. ವಾಸ್ತವವಾಗಿ, ವಿಶ್ವದ ಮೊದಲ ಚಲನಚಿತ್ರವು ಮೆಲ್ಬರ್ನ್ ಹಾಗು ಇತರ ಹೊರವಲಯದ ಉಪನಗರಗಳಲ್ಲಿ ತಯಾರಾಯಿತು. ಲೈಮ್ ಲೈಟ್ ಡಿಪಾರ್ಟ್ಮೆಂಟ್ ನ ೧೯೦೦ರ ಸೋಲ್ಜರ್ಸ್ ಆಫ್ ದಿ ಕ್ರಾಸ್ , ವಿಶ್ವದ ಮೊದಲ ಧಾರ್ಮಿಕ ಪುರಾಣವು,[೧೨೬] ಮೆಲ್ಬರ್ನ್ ನ ಚಲಚಿತ್ರ ನಿರ್ಮಾಣದ ೧೯೦೦ರ ಆರಂಭಿಕ ಅವಧಿಯನ್ನು ಸುವರ್ಣ ಯುಗವೆಂದು ಮುನ್ನೆಣಿಸಿತು—ಈ ಶಕೆಯು ಸ್ಥಳೀಯ ಇತಿಹಾಸದ ಪರಿಶೋಧನೆ ಹಾಗು ಬೆಳಕಿಗೆ ಬರುತ್ತಿದ್ದ ಆಸ್ಟ್ರೇಲಿಯಾದ ಸ್ವರೂಪದ ಕುರುಹಾಗಿದೆ. ಬಾಲ್ಲರತ್ ನ ೧೮೫೪ರ ನಾಗರೀಕ ದಂಗೆಯು ಬೆಳ್ಳಿ ಪರದೆಯ ಮೇಲೆ ಯುರೇಕ ಸ್ಟಾಕೇಡ್ ಆಗಿ ಪ್ರದರ್ಶನಗೊಂಡಿತು, ಹಾಗು ದಿ ಸ್ಟೋರಿ ಆಫ್ ಕೆಲ್ಲಿ ಗ್ಯಾಂಗ್ (ವಿಶ್ವದ ಮೊದಲ ನಿರೂಪಣಾ ಶೈಲಿಯ ದೀರ್ಘಾವಧಿ ಚಲನಚಿತ್ರ ಹಾಗು "ಬುಶ್ ರೇಂಜಿಂಗ್ ನಾಟಕ"ದ ಪೂರ್ವೊದಾಹರಣವು[೧೨೭], ನೆಡ್ ಕೆಲ್ಲಿ ಹಾಗು ಅವನ ದೇಶಭ್ರಷ್ಟ ಸಹಚರರು ಅಂಕೆಯಿಂದ ತಪ್ಪಿಸಿಕೊಳ್ಳುವ ಕಥಾವಸ್ತುವನ್ನು ಹೊಂದಿದೆ. ಮೆಲ್ಬರ್ನ್ ನ ಚಲನಚಿತ್ರ ತಯಾರಕರು ಪೊದೆಗಾಡು ಡಕಾಯಿತ ಹಾಗು ಅಪರಾಧಗಳನ್ನು ಆಧರಿಸಿದ ಚಲನಚಿತ್ರಗಳ ತಯಾರಿಕೆಯನ್ನು ಮುಂದುವರೆಸಿದರು, ಉದಾಹರಣೆಗೆ ೧೯೦೭ರ ರಾಬರಿ ಅಂಡರ್ ಆರ್ಮ್ಸ್ ಹಾಗು ೧೯೦೮ರ ಫಾರ್ ದಿ ಟರ್ಮ್ ಆಫ್ ಹಿಸ್ ನ್ಯಾಚುರಲ್ ಲೈಫ್ , ಇಂತಹ ಚಿತ್ರಗಳು ಅಪರಾಧಗಳಿಗೆ ಉತ್ತೇಜನವನ್ನು ನೀಡುತ್ತದೆಂದು ರಾಜಕಾರಣಿಗಳು ಪೊದೆಗಾಡು ಡಕಾಯಿತರನು ಆಧರಿಸಿದ ಚಲನಚಿತ್ರಗಳ ಪ್ರದರ್ಶನವನ್ನು ನಿಷೇಧಿಸುವವರೆಗೆ ೧೯೧೨ರವರೆಗೂ ಇಂತಹ ಚಿತ್ರಗಳು ತಯಾರಾಗುತ್ತಿದ್ದವು.[೧೨೭] ಮೆಲ್ಬರ್ನ್ ಹಾಗು ಆಸ್ಟ್ರೇಲಿಯಾದ ಚಿತ್ರೋದ್ಯಮಗಳು ಶೀಘ್ರದಲ್ಲೇ ಬಿದ್ದು ಹೋದವು ಹಾಗು ೧೯೬೦ರ ಹೊತ್ತಿಗೆ ವಾಸ್ತವವಾಗಿ ನಿಲುಗಡೆಯಾದವು. ಈ ವಿರಾಮದ ಅವಧಿಯಲ್ಲಿ ಮೆಲ್ಬರ್ನ್ ನಲ್ಲಿ ಚಿತ್ರೀಕರಣಗೊಂಡು, ನಿರ್ಮಾಣವಾದ ಗಮನಾರ್ಹ ಚಿತ್ರವೆಂದರೆ ೧೯೫೯ರಲ್ಲಿ ಬಂದ ಆನ್ ದಿ ಬೀಚ್ . ೧೯೭೦ರ ದಶಕವು ಆಸ್ಟ್ರೇಲಿಯನ್ ಚಿತ್ರೋದ್ಯಮದಲ್ಲಿ ಒಂದು ಪ್ರಮುಖ ನವಜಾಗೃತಿಯನ್ನು ಕಂಡಿತು, ಇದು ಆಸ್ಟ್ರೇಲಿಯನ್ ನ್ಯೂ ವೇವ್, ಹಾಗು ಒಕ್ಕರ್ ಹಾಗು ಒಜ್ಪ್ಲಾಯಿಟೆಶನ್ ಪ್ರಕಾರಕ್ಕೆ ನಾಂದಿಯನ್ನು ಹಾದಿ, ಇದು ಕ್ರಮವಾಗಿ ಮೆಲ್ಬರ್ನ್ ಮೂಲದ ನಿರ್ಮಾಣ ಸಂಸ್ಥೆಗಳಾದ ಸ್ಟಾರ್ಕ್ ಹಾಗು ಆಲ್ವಿನ್ ಪರ್ಪಲ್ ಗೆ ಉತ್ತೇಜನವನ್ನು ನೀಡಿತು. ೭೦ರ ದಶಕದಲ್ಲಿ ಮೆಲ್ಬರ್ನ್ ನಲ್ಲಿ ತಯಾರಾದ ಇತರ ಚಲನಚಿತ್ರಗಳೆಂದರೆ ಪಿಕ್ನಿಕ್ ಅಟ್ ಹ್ಯಾಂಗಿಂಗ್ ರಾಕ್ ಹಾಗು ಮ್ಯಾಡ್ ಮ್ಯಾಕ್ಸ್ , ಇದು ವಿಶ್ವವ್ಯಾಪಿಯಾಗಿ ಪ್ರಸಿದ್ಧಿಯನ್ನು ಗಳಿಸಿತು. ೨೦೦೪ರಲ್ಲಿ ಮೆಲ್ಬರ್ನ್ ನಲ್ಲಿ ಅತ್ಯಂತ ದೊಡ್ಡದಾದ ಚಲನಚಿತ್ರ ಹಾಗು ದೂರದರ್ಶನ ಸ್ಟುಡಿಯೋ ಸಂಕೀರ್ಣವಾದ ಡಾಕ್ಲ್ಯಾಂಡ್ಸ್ ಸ್ಟುಡಿಯೊಸ್ ಮೆಲ್ಬರ್ನ್ ನಿರ್ಮಾಣವಾಯಿತು, ಇದು ಹಲವಾರು ದೇಶಿಯ ಚಲನಚಿತ್ರಗಳು ಹಾಗು ದೂರದರ್ಶನ ಕಾರ್ಯಕ್ರಮಗಳನ್ನು ಹಾಗು ಅಂತಾರಾಷ್ಟ್ರೀಯ ಚಿತ್ರಗಳಾದ ಘೋಸ್ಟ್ ರೈಡರ್ , ನೋಯಿಂಗ್ , ಚಾರ್ಲೆಟ್'ಸ್ ವೆಬ್ , ನೈಟ್ಮೇರ್ಸ್ ಅಂಡ್ ಡ್ರೀಮ್ಸ್ಕೇಪ್ಸ್ ಹಾಗು ವೇರ್ ದಿ ವೈಲ್ಡ್ ಥಿಂಗ್ಸ್ ಆರ್ ಪ್ರದರ್ಶನಗೊಂಡವು.[೧೨೮] ಮೆಲ್ಬರ್ನ್, ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಚಲನಚಿತ್ರದ ತಯಾರಿಕ ಸಂಸ್ಥೆಯಾದ ವಿಲೇಜ್ ರೋಡ್ ಷೋ ಪಿಚರ್ಸ್ ನ ಪ್ರಧಾನ ಕಚೇರಿಗೆ ತವರಾಗಿದೆ. ಮೆಲ್ಬರ್ನ್ ಮೂಲದ ಇತ್ತೀಚಿನ ಪ್ರಸಿದ್ಧ ನಟರುಗಳಲ್ಲಿ ಕೇಟ್ ಬ್ಲ್ಯಾನ್ಚೆಟ್, ಜಿಯೋಫರಿ ರಶ್, ರೇಚಲ್ ಗ್ರಿಫ್ಫಿತ್ಸ್, ಗೈ ಪಿಯರ್ಸ್ ಹಾಗು ಎರಿಕ್ ಬಾನ ಸಹ ಸೇರಿದ್ದಾರೆ.
UK ಕಲಾವಿದ ಬಂಕ್ಸಿ, ಮೆಲ್ಬರ್ನ್ ನ ರಸ್ತೆ ಬದಿಯ ಕಲೆಯನ್ನು "ಸ್ಥಳೀಕರ ಸೀಸದ ಕಡ್ಡಿಗಳು ಕಳೆದು ಹೋದಂದೀಚೆಗೆ ಕಲೆಗೆ ಆಸ್ಟ್ರೇಲಿಯಾದ ಅತ್ಯಂತ ಮಹತ್ವಪೂರ್ಣ ಕೊಡುಗೆ" ಎಂದು ಅಭಿವಂದಿಸಿದ್ದಾರೆ.[೧೨೯] ನಗರವನ್ನು ಸಾಮಾನ್ಯವಾಗಿ ನ್ಯೂಯಾರ್ಕ್ ಹಾಗು ಬರ್ಲಿನ್ ಗೆ ಸಮನಾದ ವಿಶ್ವದ ಅತ್ಯಂತ ದೊಡ್ಡದಾದ ರಸ್ತೆ ಬದಿಯ ಕಲೆಯ ಉಗಮಸ್ಥಾನವೆಂದು ಹೇಳಲಾಗುತ್ತದೆ,[೧೩೦][೧೩೧] ಹಾಗು ಇದರ ವ್ಯಾಪಕವಾದ ರಸ್ತೆ ಬದಿಯ ಕಲೆಯನ್ನು-ಹೊತ್ತ ಓಣಿ ಮಾರ್ಗಗಳು, ಕಾಲುದಾರಿಗಳು ಹಾಗು ಕಮಾನುದಾರಿಗಳನ್ನೂ ಆಸ್ಟ್ರೇಲಿಯಾದ ಪ್ರಸಿದ್ಧ ಸಾಂಸ್ಕೃತಿಕ ಆಕರ್ಷಣೆಗಳೆಂದು ಲೋನ್ಲಿ ಪ್ಲ್ಯಾನೆಟ್ ನ ಓದುಗರು ಅಭಿಪ್ರಾಯಪಡುತ್ತಾರೆ.[೧೨೯] ನಗರವು, ಉತ್ಸಾಹಭರಿತ ಆಧುನಿಕ ವಾಸ್ತುಶಿಲ್ಪದ ರೋಮಾಂಚಕಾರಿ ಮಿಶ್ರಣಕ್ಕೂ ಸಹ ಮೆಚ್ಚುಗೆ ವ್ಯಕ್ತಪಡಿಸಲಾಗುತ್ತದೆ, ಇದು ಹತ್ತೊಂಭತ್ತನೆ ಹಾಗು ಇಪ್ಪತ್ತನೆ ಶತಮಾನದ ಆರಂಭದ ಕಟ್ಟಡಗಳ ಪ್ರಭಾವಶಾಲಿ ಸರಣಿಯನ್ನು ವಿಭಾಗಿಸುತ್ತದೆ.[೧೩೨]
ಮೆಲ್ಬರ್ನ್ ಒಂದು ಗಮನಾರ್ಹ ಕ್ರೀಡಾಸಕ್ತ ಸ್ಥಳವಾಗಿದ್ದು, ೧೯೫೬ರ ಬೇಸಿಗೆ ಒಲಂಪಿಕ್ಸ್ ಪಂದ್ಯಾವಳಿಗಳಿಗೆ ಆತಿಥೇಯ ನೀಡಿತ್ತು(ದಕ್ಷಿಣ ಖಗೋಳಾರ್ಧದಲ್ಲಿ ಮೊದಲ ಬಾರಿಗೆ ಹಮ್ಮಿಕೊಳ್ಳಲಾದ ಒಲಂಪಿಕ್ ಪಂದ್ಯಾವಳಿಗಳು), ಇದರ ಜೊತೆಯಲ್ಲಿ ೨೦೦೬ರ ಕಾಮನ್ವೆಲ್ತ್ ಪಂದ್ಯಾವಳಿಗಳಿಗೂ ಸಹ ಆತಿಥೇಯ ನೀಡಿತ್ತು.
ಮೆಲ್ಬರ್ನ್ ಮೂರು ಪ್ರಮುಖ ವಾರ್ಷಿಕ ಅಂತಾರಾಷ್ಟೀಯ ಕ್ರೀಡಾ ಪಂದ್ಯಗಳಿಗೆ ತವರಾಗಿದೆ: ಆಸ್ಟ್ರೇಲಿಯನ್ ಓಪನ್(ನಾಲ್ಕು ಗ್ರಾಂಡ್ ಸ್ಲ್ಯಾಮ್ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಒಂದು), ಮೆಲ್ಬರ್ನ್ ಕಪ್(ಕುದುರೆ ಸವಾರಿ), ಹಾಗು ಆಸ್ಟ್ರೇಲಿಯನ್ ಗ್ರಾಂಡ್ ಪ್ರಿಕ್ಸ್(ಫಾರ್ಮುಲ ಒನ್). ಇತ್ತೀಚಿನ ವರ್ಷಗಳಲ್ಲಿ, ನಗರವು, "ವರ್ಲ್ಡ್'ಸ್ ಅಲ್ಟಿಮೇಟ್ ಸ್ಪೋರ್ಟ್ಸ್ ಸಿಟಿ" ಎಂಬ ಸ್ಪೋರ್ಟ್ಸ್ ಬಿಸ್ನೆಸ್ ಬಿರುದನ್ನು ಗಳಿಸಿದೆ.[೧೩೩] ನಗರವು, ನ್ಯಾಷನಲ್ ಸ್ಪೋರ್ಟ್ಸ್ ಮ್ಯೂಸಿಯಂಗೆ ತವರಾಗಿದೆ, ಇದು ೨೦೦೩ರವರೆಗೂ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಸದಸ್ಯರ ಪೆವಿಲಿಯನ್ ಆಚೆಗೆ ನೆಲೆಯಾಗಿತ್ತು ಹಾಗು ೨೦೦೮ರಲ್ಲಿ ಒಲಂಪಿಕ್ ಸ್ಟ್ಯಾಂಡ್ ನಲ್ಲಿ ಮತ್ತೆ ಆರಂಭಗೊಂಡಿತು.[೧೩೪]
ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಹಾಗು ಕ್ರಿಕೆಟ್ ಮೆಲ್ಬರ್ನ್ ನ ಅತ್ಯಂತ ಜನಪ್ರಿಯ ಕ್ರೀಡೆಗಳಾಗಿವೆ ಹಾಗು ಆಸ್ಟ್ರೇಲಿಯಾದಲ್ಲಿ ಈ ಎರಡೂ ಕ್ರೀಡೆಗಳ ಧಾರ್ಮಿಕ ತವರೆನಿಸಿದೆ ಹಾಗು ಎರಡೂ ಕ್ರೀಡೆಗಳನ್ನು ಬಹುತೇಕವಾಗಿ ನಗರ ಹಾಗು ಅದರ ಉಪನಗರಗಳಲ್ಲಿ ಒಂದೇ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಮೊದಲ ಅಧಿಕೃತ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಮಾರ್ಚ್ ೧೮೭೭ರಲ್ಲಿ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಲಾಗಿತ್ತು ಹಾಗು ಮೆಲ್ಬರ್ನ್ ಕ್ರಿಕೆಟ್ ಮೈದಾನವು ಕ್ರಿಕೆಟ್ ನ ವಿಶ್ವದ ಅತ್ಯಂತ ದೊಡ್ಡ ಮೈದಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು] ೧೮೫೯ರಲ್ಲಿ ಮೊದಲ ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಪಂದ್ಯಾವಳಿಗಳನ್ನು ಮೆಲ್ಬರ್ನ್ ನಲ್ಲಿ ೧೮೫೯ರಲ್ಲಿ ಆಡಲಾಗಿತ್ತು ಹಾಗು ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ಡಾಕ್ಲ್ಯಾಂಡ್ಸ್ ಸ್ಟೇಡಿಯಂನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಇದರ ಒಂಬತ್ತು ತಂಡಗಳು ಮೆಲ್ಬರ್ನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ನೆಲೆಗೊಂಡಿದೆ ಹಾಗು ಪ್ರತಿ ವಾರದಲ್ಲಿ ನಡೆಯುವ ಐದು ಮೆಲ್ಬರ್ನ್ AFL ಪಂದ್ಯಾವಳಿಗಳು ಪ್ರತಿ ಪಂದ್ಯದಂತೆ ಸುಮಾರು ೪೦,೦೦೦ ಜನರನ್ನು ಆಕರ್ಷಿಸುತ್ತದೆ.[೧೩೫] ಇದರ ಜೊತೆಯಲ್ಲಿ, ನಗರವು ವರ್ಷಕ್ಕೊಮ್ಮೆ AFL ಗ್ರಾಂಡ್ ಫೈನಲ್ ಗೆ ಆತಿಥೇಯ ನೀಡುತ್ತದೆ.
ನಗರವು, ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಹಲವಾರು ವೃತ್ತಿಪರ ಫ್ರಾಂಚೈಸಿಗಳಿಗೆ ತವರೆನಿಸಿದೆ, ಇದರಲ್ಲಿ ಫುಟ್ಬಾಲ್(ಸಾಕರ್) ಕ್ಲಬ್ ಗಳಾದ ಮೆಲ್ಬರ್ನ್ ವಿಕ್ಟರಿ ಹಾಗು ಮೆಲ್ಬರ್ನ್ ಹಾರ್ಟ್ ಗಳು ಸೇರಿವೆ, ಇವುಗಳು A-ಲೀಗ್ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತವೆ, ರಗ್ಬಿ ಪಂದ್ಯದ ಲೀಗ್ ಕ್ಲಬ್ ಮೆಲ್ಬರ್ನ್ ಸ್ಟಾರ್ಮ್[೧೩೬], NRL ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ, ರಗ್ಬಿ ಯೂನಿಯನ್ ಕ್ಲಬ್ ಮೆಲ್ಬರ್ನ್ ರೆಬೆಲ್ಸ್, ಸೂಪರ್ ರಗ್ಬಿ ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ, ನೆಟ್ಬಾಲ್ ಕ್ಲಬ್ ಮೆಲ್ಬರ್ನ್ ವಿಕ್ಸೆನ್ಸ್ ಟ್ರಾನ್ಸ್-ತಾಸ್ಮನ್ ಟ್ರೋಫಿ ANZ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತದೆ, ಹಾಗು ಬ್ಯಾಸ್ಕೆಟ್ ಬಾಲ್ ಕ್ಲಬ್ ಮೆಲ್ಬರ್ನ್ ಟೈಗರ್ಸ್ NBL ಸ್ಪರ್ಧೆಯಲ್ಲಿ ಹಾಗು ಬುಲ್ಲೀನ್ ಬೂಮರ್ಸ್ ಹಾಗು ಡನ್ಡೆನಾಂಗ್ ರೇಂಜರ್ಸ್, WNBLನಲ್ಲಿ ಭಾಗವಹಿಸುತ್ತದೆ. ಮೆಲ್ಬರ್ನ್-ಮೂಲದ ಎರಡನೇ NBL ತಂಡವನ್ನು ೨೦೧೧-೨೦೧೨ರ ಕ್ರೀಡಾಋತುವಿಗಾಗಿ ರಚನೆಯಾಗುವ ನಿರೀಕ್ಷೆಯಿದೆ.[೧೩೭] ನವೆಂಬರ್ ೨೦೦೮ರಲ್ಲಿ, ವಿಕ್ಟೋರಿಯನ್ ಮೇಜರ್ ಈವೆಂಟ್ಸ್ ಕಂಪನಿಯು, ಆಸ್ಟ್ರೇಲಿಯನ್ ಒಲಂಪಿಕ್ಸ್ ಕಮಿಟಿಗೆ, ಮೆಲ್ಬರ್ನ್ ನಗರವನ್ನು ೨೦೨೪ ಅಥವಾ ೨೦೨೮ ಬೇಸಿಗೆ ಒಲಂಪಿಕ್ಸ್ ಗೆ ಆತಿಥೇಯ ನೀಡಲು ಬಿಡ್ ಕರೆಯಲು ಅವಕಾಶ ಮಾಡಿಕೊಟ್ಟಿದೆಯೆಂದು ಪ್ರಕಟಿಸಿತು.[೧೩೮]
ಮೆಲ್ಬರ್ನ್, ವಿಶೇಷವಾಗಿ ಹಣಕಾಸು, ತಯಾರಿಕೆ, ಸಂಶೋಧನೆ, IT, ಶಿಕ್ಷಣ, ಸೈನ್ಯ ವ್ಯವಸ್ಥಾಪನೆ ಹಾಗು ಸಾರಿಗೆ, ಸಭೆಗೂಡಿಸಿಕೆ ಹಾಗು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದು ಬಹುರೂಪದ ಆರ್ಥಿಕತೆಯನ್ನು ಹೊಂದಿದೆ. ಆಸ್ಟ್ರೇಲಿಯಾದ ಹಲವು ದೊಡ್ಡ ಸಂಸ್ಥೆಗಳು ಮೆಲ್ಬರ್ನ್ ನಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ, ಇದರಲ್ಲಿ ದೇಶದಲ್ಲೇ ಅತ್ಯಂತ ದೊಡ್ಡ ಹತ್ತು ಸಂಸ್ಥೆಗಳಲ್ಲಿ ಐದು ಇಲ್ಲೇ ನೆಲೆಯಾಗಿವೆ(ವಾರ್ಷಿಕ ವರಮಾನವನ್ನು ಆಧರಿಸಿ), ಹಾಗು ದೇಶದ ಆರು ದೊಡ್ಡ ಸಂಸ್ಥೆಗಳಲ್ಲಿ ಐದು ಇಲ್ಲೇ ನೆಲೆಗೊಂಡಿವೆ(ಮಾರುಕಟ್ಟೆ ಬಂಡವಾಳೀಕರಣ ಆಧರಿಸಿ)[೧೪೦] (ANZ) ಆಧರಿಸಿ, BHP ಬಿಲ್ಲಿಟನ್(ವಿಶ್ವದ ಅತಿ ದೊಡ್ಡ ಗಣಿಗಾರಿಕೆ ಸಂಸ್ಥೆ), ನ್ಯಾಷನಲ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ, ರಿಯೋ ಟಿನ್ಟೋ ಹಾಗು ಟೆಲ್ಸ್ಟ್ರಾ; ಜೊತೆಗೆ ಬಿಸ್ನೆಸ್ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ಹಾಗು ಆಸ್ಟ್ರೇಲಿಯನ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಗಳ ಪ್ರಾತಿನಿಧಿಕ ಅಂಗಗಳು ಹಾಗು ಚಿಂತಕರ ಚಾವಡಿಯು ನಗರದಲ್ಲಿ ನೆಲೆಗೊಂಡಿವೆ.
ನಗರವು, ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಹಾಗು ಜನನಿಬಿಡ ಬಂದರಿಗೆ ತವರಾಗಿದೆ, ಇದು ವಾರ್ಷಿಕವಾಗಿ $೭೫ ಶತಕೋಟಿಯಷ್ಟು ವ್ಯವಹಾರವನ್ನು ನಡೆಸುತ್ತದೆ ಹಾಗು ರಾಷ್ಟ್ರದ ೩೯%ನಷ್ಟು ಧಾರಕ ವಹಿವಾಟನ್ನು ಹೊಂದಿದೆ.[೯೨][೧೪೧][೧೪೨] ಮೆಲ್ಬರ್ನ್ ವಿಮಾನ ನಿಲ್ದಾಣವು, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರವೇಶಾತಿಯನ್ನು ಒದಗಿಸುವುದರ ಜೊತೆಗೆ ಇದು ಆಸ್ಟ್ರೇಲಿಯಾದ ಎರಡನೇ ಅತ್ಯಂತ ಜನನಿಬಿಡ ವಿಮಾನನಿಲ್ದಾಣಗಳಲ್ಲಿ ಒಂದೆನಿಸಿದೆ.
ಮೆಲ್ಬರ್ನ್ ಒಂದು ಪ್ರಮುಖ ಹಣಕಾಸಿನ ವಹಿವಾಟು ಕೇಂದ್ರವಾಗಿದೆ. ನಾಲ್ಕು ದೊಡ್ಡ ಬ್ಯಾಂಕುಗಳಲ್ಲಿ ಎರಡು, NAB ಹಾಗು ANZ ಮೆಲ್ಬರ್ನ್ ನಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ. ಆಸ್ಟ್ರೇಲಿಯಾದ ಪಿಂಚಣಿ(ನಿವೃತ್ತಿ ವೇತನ) ನಿಧಿಯನ್ನು ಹಂಚಿಕೆ ಮಾಡುವ ಮುಖ್ಯ ಕೇಂದ್ರವಾಗಿ ನಗರವು ಪ್ರಮುಖ ಸ್ಥಾನವನ್ನು ಪಡೆದಿದೆ, ಜೊತೆಗೆ ಒಟ್ಟಾರೆಯಾಗಿ ೪೦%ರಷ್ಟು, ಹಾಗು ಸಂಯುಕ್ತ ಸರ್ಕಾರದ ಭವಿಷ್ಯ ನಿಧಿಯ $೪೦ ಶತಕೋಟಿ ಡಾಲರ್ ನಷ್ಟು ಹಣವನ್ನು ಒಳಗೊಂಡಂತೆ ಕೈಗಾರಿಕಾ ಸೂಪರ್ ಫಂಡ್ ನಲ್ಲಿ ೬೫%ರಷ್ಟನ್ನು ಒಟ್ಟಾರೆ ನಿಧಿಯನ್ನು ಹೊಂದಿದೆ. ಮಾಸ್ಟರ್ ಕಾರ್ಡ್ ವರ್ಲ್ಡ್ ವೈಡ್ ಸೆಂಟರ್ಸ್ ಆಫ್ ಕಾಮರ್ಸ್ ಇಂಡೆಕ್ಸ್(೨೦೦೭) ನಡೆಸಿದ ಸಮೀಕ್ಷೆಯ ಪ್ರಕಾರ ನಗರವನ್ನು ಅಗ್ರ ೫೦ ಹಣಕಾಸು ನಗರಗಳಲ್ಲಿ ೩೪ನೇ ಸ್ಥಾನವನ್ನು ಗಳಿಸಿತು,[೧೪೩] ಬಾರ್ಸಿಲೋನ ಹಾಗು ಜಿನೀವ ನಗರಗಳ ಮಧ್ಯದ ಸ್ಥಾನವನ್ನು ಪಡೆದ ನಗರವು, ಆಸ್ಟ್ರೇಲಿಯಾದಲ್ಲಿ ಸಿಡ್ನಿ ನಂತರದ(೧೪ನೇ) ಸ್ಥಾನವನ್ನು ಪಡೆಯಿತು. ಮೆಲ್ಬರ್ನ್ ಆಸ್ಟ್ರೇಲಿಯಾದ ಕೈಗಾರಿಕಾ ಕೇಂದ್ರಸ್ಥಾನವಾಗಿದೆ. ಇದು ಆಸ್ಟ್ರೇಲಿಯಾದ ಮೋಟಾರು ವಾಹನ ತಯಾರಿಕಾ ಕ್ಷೇತ್ರದ ಕೇಂದ್ರಸ್ಥಾನವಾಗಿದ್ದು, ಫೋರ್ಡ್ ಹಾಗು ಟೊಯೋಟ ತಯಾರಿಕ ಸೌಲಭ್ಯಗಳು, ಹಾಗು ಹೋಲ್ಡೆನ್ ಹಾಗು ಬಿಡಿ ಭಾಗಗಳ ವಿತರಕರಿಗೆ ಇಂಜಿನ್ ತಯಾರಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಆಸ್ಟ್ರೇಲಿಯಾದ ಮೋಟಾರು ವಾಹನ ತಾಯಾರಿಕಾ ಸಂಸ್ಥೆಯ ಮುಖ್ಯ ಕಚೆರಿಯನು ಹಾಗು ವಿನ್ಯಾಸ ಕೇಂದ್ರಗಳನ್ನು ಹೊಂದಿದೆ. ಇತರ ಬಹುವಿಧದ ಕೈಗಾರಿಕೆಗಳಿಗೂ ಸಹ ನಗರವು ತವರೆನಿಸಿದೆ, ಇದರಲ್ಲಿ ಪೆಟ್ರೋರಾಸಾಯನಿಕಗಳು, ವಿಮಾನದ ಬಿಡಿಭಾಗಗಳು ಹಾಗು ಔಷಧ ತಯಾರಿಕೆಗಳಿಂದ ಹಿಡಿದು ಫ್ಯಾಶನ್ ವಸ್ತ್ರಗಳು, ಕಾಗದ ತಯಾರಿಕೆ ಹಾಗು ಆಹಾರ ಸಂಸ್ಕರಣೆಗಳೂ ಸಹ ಸೇರಿವೆ.[೧೪೪]
ಇದು ಬಯೋತಂತ್ರಜ್ಞಾನಕ್ಕೆ ಒಂದು ಪ್ರಮುಖ ಅಂತಾರಾಷ್ಟ್ರೀಯ ಕೇಂದ್ರವೆನಿಸಿದೆ, ಹಾಗು CSL ಹಾಗು ಬಯೋಟದಂತಹ ಸಂಸ್ಥೆಗಳ ಪ್ರಮುಖ ಸ್ಥಳವಾಗಿದೆ. ಮೆಲ್ಬರ್ನ್ ಒಂದು ಪ್ರಮುಖ ICT ಸಂಸ್ಥೆಯನ್ನು ಹೊಂದಿದೆ, ಇದು ಸುಮಾರು ೬೦,೦೦೦ಕ್ಕೂ ಅಧಿಕ ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ (ಆಸ್ಟ್ರೇಲಿಯಾದ ICT ಸಿಬ್ಬಂದಿ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು), ಜೊತೆಗೆ $೧೯.೮ ಶತಕೋಟಿ ವಹಿವಾಟಿನ ಮೊತ್ತವನ್ನು ಹಾಗು $೬೧೫ ದಶಲಕ್ಷ ರಫ್ತು ಆದಾಯವನ್ನು ಪಡೆಯುತ್ತಿದೆ. ಇದರ ಜೊತೆಯಲ್ಲಿ, ಪ್ರವಾಸೋದ್ಯಮವೂ ಸಹ ಮೆಲ್ಬರ್ನ್ ನ ಆರ್ಥಿಕತೆಯ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಜೊತೆಗೆ ಸರಿಸುಮಾರು ೭.೬ ದಶಲಕ್ಷ ದೇಶೀಯ ಪ್ರವಾಸಿಗರು ಹಾಗು ೧.೮೮ ದಶಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ೨೦೦೪ರಲ್ಲಿ ನಗರಕ್ಕೆ ಭೇಟಿ ನೀಡಿದ್ದರು[೧೪೫], ೨೦೦೮ರಲ್ಲಿ, ನಗರದಲ್ಲಿ ದೇಶೀಯ ಪ್ರವಾಸಿಗರು ವ್ಯಯಿಸಿದ ಹಣವನ್ನು ಆಧರಿಸಿ ಸಿಡ್ನಿ ನಗರವು ಇದರ ಹಿಂದಿನ ಸ್ಥಾನವನ್ನು ಪಡೆಯಿತು.[೧೪೬] ಇದು ವಾರ್ಷಿಕವಾಗಿ ಸುಮಾರು $೧೫.೮ ಶತಕೋಟಿಯಷ್ಟಿತ್ತು[೧೪೭] ಮೆಲ್ಬರ್ನ್ ದೇಶೀಯ ಹಾಗು ಅಂತಾರಾಷ್ಟ್ರೀಯ ಸಮಾಲೋಚನಾ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪಾಲನ್ನು ಆಕರ್ಷಿಸುತ್ತಿದೆ. ಫೆಬ್ರವರಿ ೨೦೦೬ರಲ್ಲಿ, $೧ ಶತಕೋಟಿ ವೆಚ್ಚದಲ್ಲಿ ೫೦೦೦-ಆಸನಗಳುಳ್ಳ ಅಂತಾರಾಷ್ಟ್ರೀಯ ಧಾರ್ಮಿಕ ಕೇಂದ್ರದ ನಿರ್ಮಾಣ ಕಾರ್ಯವು ಆರಂಭಗೊಂಡಿತು, ಮೆಲ್ಬರ್ನ್ ಎಕ್ಸಿಬಿಶನ್ ಅಂಡ್ ಕನ್ವೆನ್ಶನ್ ಸೆಂಟರ್ ಗೆ ಪಾರ್ಶ್ವದಲ್ಲಿರುವ ಹಿಲ್ಟನ್ ಹೋಟೆಲ್ ಹಾಗು ವಾಣಿಜ್ಯ ಪ್ರದೇಶಕ್ಕೆ, ಸೌತ್ ಬ್ಯಾಂಕ್ ಪ್ರದೇಶದೊಂದಿಗೆ ಯಾರ್ರ ನದಿಯುದ್ದಕ್ಕೂ ಸಂಪರ್ಕವನ್ನು ಕಲ್ಪಿಸಲಾಯಿತು ಹಾಗು ಬಹುಕೋಟಿ ಡಾಲರ್ ವೆಚ್ಚದ ಡಾಕ್ ಲ್ಯಾಂಡ್ಸ್ ನ ಮರು ಅಭಿವೃದ್ದಿ ಕಾರ್ಯವನ್ನು ಕೈಗೊಳ್ಳಲಾಯಿತು.[೧೪೮]
Country of birth[೧೪೯][೧೫೦] | Population (2006) |
---|---|
Australia | 2,306,101 |
United Kingdom | 156,458 |
Italy | 73,800 |
Vietnam | 57,926 |
China | 54,725 |
New Zealand | 52,450 |
Greece | 52,276 |
India | 50,687 |
Sri Lanka | 30,596 |
Malaysia | 29,175 |
Philippines | 24,570 |
Germany | 21,187 |
Malta | 18,951 |
South Africa | 17,318 |
Macedonia | 17,287 |
Hong Kong | 16,916 |
Poland | 16,440 |
Croatia | 15,366 |
Lebanon | 14,647 |
Netherlands | 14,579 |
Turkey | 14,124 |
ಮೆಲ್ಬರ್ನ್ ಒಂದು ಬಹುಮುಖ ಹಾಗು ಬಹುಸಂಸ್ಕೃತಿಯುಳ್ಳ ನಗರ.
೨೦೦೬ರಲ್ಲಿ, ಮೆಲ್ಬರ್ನ್ ನ ೩೫.೮%ರಷ್ಟು ಜನಸಂಖ್ಯೆಯು ವಿದೇಶದಲ್ಲಿ ಜನಿಸಿದವರಾಗಿದ್ದರು, ಇದು ರಾಷ್ಟ್ರದ ಸರಾಸರಿ ಜನಸಂಖ್ಯೆಯನ್ನು ೨೩.೧%ಕ್ಕೆ ಹೆಚ್ಚಿಸಿತು. ರಾಷ್ಟ್ರೀಯ ದತ್ತಾಂಶ ಸಂಗ್ರಹಕ್ಕೆ ಅನುಕ್ರಮಣಿಕೆಯಾಗಿ, ಬ್ರಿಟನ್ ನನ್ನು ಸಾಮಾನ್ಯವಾದ ಸಾಗರದಾಚೆಯ ಜನ್ಮಸ್ಥಳವಾಗಿ ವರದಿ ಮಾಡಲಾಗಿದೆ, ಜೊತೆಗೆ ೪.೭%ರಷ್ಟು ನಂತರದ ಸ್ಥಾನವನ್ನು ಇಟಲಿ (೨.೧%), ವಿಯೆಟ್ನಾಂ (೧.೬%), ಚೀನಾ (೧.೫%), ಹಾಗು ನ್ಯೂಜಿಲೆಂಡ್(೧.೫%) ದೇಶಗಳು ಪಡೆದಿವೆ.[೧೫೧] ಮೆಲ್ಬರ್ನ್, ಅಥೆನ್ಸ್ ಹಾಗು ಥೆಸ್ಸಲೋನಿಕಿ(ಮೆಲ್ಬರ್ನ್ ನ ಗ್ರೀಕ್ ಸಹೋದರಿ ನಗರ) ನಂತರ ವಿಶ್ವದ ಮೂರನೇ ಅತ್ಯಂತ ದೊಡ್ಡ ಗ್ರೀಕ್-ಮಾತನಾಡುವ ಜನಸಂಖ್ಯೆಯನ್ನು ಹೊಂದಿದೆ, ಹಾಗು ವಿಯೆಟ್ನಾಮೀಸ್ ಉಪನಾಮ ನ್ಗುಯೇನ್ ಮೆಲ್ಬರ್ನ್ ನ ದೂರವಾಣಿ ನಿರ್ದೇಶಿಕೆಯಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಹೆಸರಾಗಿದೆ.[೧೫೨] ನಗರವು ಗಣನೀಯ ಪ್ರಮಾಣದ ಭಾರತೀಯ, ಶ್ರೀಲಂಕಾ, ಹಾಗು ಮಲೇಷಿಯನ್-ಮೂಲದ ಸಮುದಾಯಗಳನ್ನೂ ಸಹ ಹೊಂದಿದೆ, ಇದರ ಜೊತೆಯಲ್ಲಿ ಇತ್ತೀಚಿನ ದಕ್ಷಿಣ ಆಫ್ರಿಕ ಹಾಗು ಸುಡಾನ್ ಮಹಾಪೂರವೂ ಸಹ ಸೇರಿದೆ. ಹಲವಾರು ಅಂತಾರಾಷ್ಟ್ರೀಯ ತಿನಿಸುಗಳನ್ನು ಉಣಬಡಿಸುವ ನಗರದ ಹೋಟೆಲುಗಳು ಸಾಂಸ್ಕೃತಿಕ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆ.
ಮೂರನೇ ಎರಡು ಭಾಗದಷ್ಟು ಮೆಲ್ಬರ್ನ್ ನ ನಿವಾಸಿಗಳು ಕೇವಲ ಇಂಗ್ಲಿಷ್ ಭಾಷೆಯನ್ನೇ ತಮ್ಮ ಮನೆಯಲ್ಲಿ ಮಾತನಾಡುತ್ತಾರೆ (೬೮.೧%). ನಂತರದ ಸ್ಥಾನದಲ್ಲಿ ಚೈನೀಸ್ ಭಾಷೆಯನ್ನು(೩.೬%)(ಮುಖ್ಯವಾಗಿ ಕ್ಯಾನ್ಟೋನೀಸ್ ಹಾಗು ಮ್ಯಾಂಡರಿನ್ ಭಾಷೆಗಳು) ಸಾಮಾನ್ಯವಾಗಿ ಮನೆಯಲ್ಲಿ ಮಾತನಾಡಲಾಗುತ್ತದೆ, ಮೂರನೇ ಸ್ಥಾನದಲ್ಲಿ ಗ್ರೀಕ್ ಭಾಷೆ, ನಾಲ್ಕನೇ ಸ್ಥಾನದಲ್ಲಿ ಇಟಾಲಿಯನ್ ಹಾಗು ಐದನೇ ಸ್ಥಾನದಲ್ಲಿ ವಿಯೆಟ್ನಾಮೀಸ್ ಭಾಷೆಯನ್ನು ಕ್ರಮವಾಗಿ೧೦೦,೦೦೦ಕ್ಕೂ ಅಧಿಕ ಭಾಷಿಕರು ಮಾತನಾಡುತ್ತಾರೆ.[೧೫೧]
ಆದಾಗ್ಯೂ ವಿಕ್ಟೋರಿಯಾದ ನಿವ್ವಳ ಅಂತರರಾಜ್ಯ ವಲಸೆಗಾರಿಕೆಯು ಹೆಚ್ಚು ಕಡಿಮೆಯಾಗುತ್ತಿರುತ್ತದೆ, ಮೆಲ್ಬರ್ನ್ ಸಂಖ್ಯಾಶಾಸ್ತ್ರೀಯ ವಿಭಾಗವು ಸರಿಸುಮಾರು ೫೦,೦೦೦ ಜನರಂತೆ ೨೦೦೩ರಿಂದ ಹೆಚ್ಚಳವಾಗುತ್ತಿದೆ. ಮೆಲ್ಬರ್ನ್, ಅಂತಾರಾಷ್ಟ್ರೀಯ ಸಾಗರದಾಚೆ ವಲಸಿಗರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸುತ್ತಿದೆ (೪೮,೦೦೦), ಇದು ಸಿಡ್ನಿಯ ಅಂತಾರಾಷ್ಟ್ರೀಯ ವಲಸಿಗರ ಅಂತರ್ಗ್ರಹಣವನ್ನು ಮೀರಿಸುತ್ತಿರುವಂತೆ ಕಂಡುಬರುತ್ತಿದೆ, ಸಿಡ್ನಿ ಹಾಗು ಇತರ ರಾಜಧಾನಿ ನಗರಗಳಲ್ಲಿ ಕೈಗೆಟುಕದ ವಸತಿ ಹಾಗು ಜೀವನ ವೆಚ್ಚಗಳಿಗೆ ಹೋಲಿಸಿದರೆ ಇಲ್ಲಿ ಬಲವಾದ ಅಂತರರಾಜ್ಯ ವಲಸೆಗಾರಿಕೆ ಅಧಿಕ ಪ್ರಮಾಣದಲ್ಲಿದೆ, ಇದು ಮೆಲ್ಬರ್ನ್ ಅಭಿವೃದ್ಧಿಗೆ ಪೂರಕವಾದ ಎರಡು ಇತ್ತೀಚಿನ ಪ್ರಮುಖ ಅಂಶಗಳಾಗಿವೆ.[೧೫೩]
ಇತ್ತೀಚಿನ ವರ್ಷಗಳಲ್ಲಿ, ಮೆಲ್ಟನ್, ವೈಂಧಂ ಹಾಗು ಕಾಸೆಯ್ ಕೂಡ ಮೆಲ್ಬರ್ನ್ ಸಂಖ್ಯಾಶಾಸ್ತ್ರೀಯ ವಿಭಾಗದ ಒಂದು ಭಾಗವಾಗಿದೆ, ಇದು ಆಸ್ಟ್ರೇಲಿಯಾದ ಎಲ್ಲ ಸ್ಥಳೀಯ ಸರ್ಕಾರಿ ಪ್ರದೇಶಗಳಿಗಿಂತ ಜನಸಂಖ್ಯಾ ಪ್ರಮಾಣದಲ್ಲಿ ಅಧಿಕತೆಯನ್ನು ದಾಖಲಿಸಿದೆ. ಮೆಲ್ಬರ್ನ್ ೨೦೨೮ರ ಹೊತ್ತಿಗೆ ಸಿಡ್ನಿ ಜನಸಂಖ್ಯೆಯನ್ನೂ ಸಹ ಮೀರಿಸಬಹುದೆಂಬ ಜನಸಂಖ್ಯಾಶಾಸ್ತ್ರೀಯ ಅಧ್ಯಯನವು ಹೇಳುತ್ತಾದರೂ,[೧೫೪] ABS ಎರಡು ಸ್ಥೂಲ ವಿವರಣೆಯನ್ನು ನೀಡಿದೆ, ಇದರಂತೆ ೨೦೫೬ರ ಹೊತ್ತಿಗೆ ಪ್ರದೇಶಾನುಸಾರವಾಗಿ ಸಿಡ್ನಿ ಮೆಲ್ಬರ್ನ್ ಗಿಂತ ದೊಡ್ಡದಾಗಿ ಹಾಗೆ ಉಳಿಯಬಹುದು, ಆದಾಗ್ಯೂ, ಇಂದಿನ ೧೨% ಅಂತರಕ್ಕೆ ಹೋಲಿಸಿದರೆ ಇದು ೩%ಗಿಂತ ಕಡಿಮೆಯಾಗಬಹುದು. ಆದಾಗ್ಯೂ, ಮೊದಲ ವಿವರಣೆಯು, ಮೆಲ್ಬರ್ನ್ ನ ಜನಸಂಖ್ಯೆಯು ಸಿಡ್ನಿ ಜನಸಂಖ್ಯೆಯನ್ನು ೨೦೩೯ರ ಹೊತ್ತಿಗೆ ಮೀರಿಸಬಹುದೆಂದು ಊಹಿಸುತ್ತದೆ, ಇದಕ್ಕೆ ಮುಖ್ಯ ಕಾರಣವೆಂದರೆ ಸಿಡ್ನಿಯು ಕಳೆದುಕೊಳ್ಳುತ್ತಿರುವ ದೊಡ್ಡ ಮಟ್ಟಗಳ ಆಂತರಿಕ ವಲಸೆಗಾರಿಕೆ.[೧೫೫]
IIನೇ ವಿಶ್ವ ಸಮರದಿಂದೀಚೆಗೆ ಜನಸಂಖ್ಯೆಯ ಸಾಂದ್ರತೆಯು ಕ್ಷೀಣಿಸುತ್ತಿದೆ, ನಗರವು ವಿಕ್ಟೋರಿಯನ್ ಸರ್ಕಾರದ ಯೋಜನಾ ರೂಪರೇಖೆಯ ಒಂದು ಭಾಗವಾಗಿ ನಗರದ ಆಂತರಿಕ ಹಾಗು ಪಾಶ್ಚಿಮಾತ್ಯ ಉಪನಗರಗಳಲ್ಲಿ ಜನಸಂಖ್ಯಾ ಸಾಂದ್ರತೆಯು ಹೆಚ್ಚುತ್ತಿದೆ, ಉದಾಹರಣೆಗೆ ಪೋಸ್ಟ್ಕೋಡ್ ೩೦೦೦ ಹಾಗು ಮೆಲ್ಬರ್ನ್ ೨೦೩೦, ಇದು ನಗರದಲ್ಲಿ ಉಂಟಾಗುತ್ತಿರುವ ಅವ್ಯವಸ್ಥಿತ ಬೆಳವಣಿಗೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.[೧೫೬] [೧೫೭]
ಮೆಲ್ಬರ್ನ್ ವ್ಯಾಪಕ ಶ್ರೇಣಿಯ ಧಾರ್ಮಿಕ ನಂಬಿಕೆಗಳಿಗೆ ತವರೆನಿಸಿದೆ, ಇದರಲ್ಲಿ ಬಹುಮುಖ್ಯವಾದ ಧರ್ಮವೆಂದರೆ ಕ್ರೈಸ್ತಧರ್ಮ(೫೮.೯%) ಜೊತೆಗೆ ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಯಾಥೊಲಿಕ್ ಜನಸಂಖ್ಯೆಯಿದೆ (೨೮.೩%).[೧೫೧] ದೊಡ್ಡ ಪ್ರಮಾಣದಲ್ಲಿರುವ ಕ್ರೈಸ್ತ ಜನಸಂಖ್ಯೆಯು ನಗರದ ಎರಡು ದೊಡ್ಡ ಕತಿಡ್ರಲ್ ಗಳಿಂದ ಪ್ರಸಿದ್ಧವಾಗಿದೆ – ಸೇಂಟ್ ಪ್ಯಾಟ್ರಿಕ್ಸ್ (ರೋಮನ್ ಕ್ಯಾಥೊಲಿಕ್), ಹಾಗು ಸೇಂಟ್ ಪಾಲ್ಸ್(ಆಂಗ್ಲಿಕನ್). ಎರಡೂ ಸಹ ವಿಕ್ಟೋರಿಯನ್ ಶಕೆಯಲ್ಲಿ ನಿರ್ಮಾಣಗೊಂಡಿದೆ ಹಾಗು ನಗರದ ಪ್ರಮುಖ ಹೆಗ್ಗುರುತುಗಳಾಗಿ ಗಮನಾರ್ಹ ಪಾರಂಪರಿಕ ಮಹತ್ವವನ್ನು ಪಡೆದಿದೆ.[೧೫೮]
ಇತರ ಪ್ರತಿಕ್ರಿಯೆಗಳಲ್ಲಿ ಯಾವುದೇ ಧರ್ಮವನ್ನು ಅನುಸರಿಸದಿರುವವರು (೨೦.೦%), ಆಂಗ್ಲಿಕನ್ (೧೨.೧%), ಈಸ್ಟರ್ನ್ ಆರ್ತೋಡಾಕ್ಸ್(೫.೯%) ಹಾಗು ಯುನೈಟಿಂಗ್ ಚರ್ಚ್(೪.೦%) ನ್ನು ಅನುಸರಿಸುವ ಮಂದಿ ಸೇರಿದ್ದಾರೆ.[೧೫೧] ಬೌದ್ಧಧರ್ಮೀಯರು, ಮುಸ್ಲಿಮರು, ಯೆಹೂದಿಗಳು, ಹಿಂದೂಗಳು ಹಾಗು ಸಿಕ್ಖರು ಒಟ್ಟಾರೆ ಜನಸಂಖ್ಯೆಯಲ್ಲಿ ೯.೨%ರಷ್ಟಿದ್ದಾರೆ.[೧೫೯]
ಮೆಲ್ಬರ್ನ್, ಆಸ್ಟ್ರೇಲಿಯಾದ ಅತ್ಯಧಿಕ ಯೆಹೂದಿ ಜನಸಂಖ್ಯೆಯನ್ನು ಹೊಂದಿದೆ, ಈ ಸಮುದಾಯದಲ್ಲಿ ಪ್ರಸಕ್ತದಲ್ಲಿ ಸರಿಸುಮಾರು ೬೦,೦೦೦ ಮಂದಿ ಜನರಿದ್ದಾರೆ. ನಗರವು, ಯಾವುದೇ ಆಸ್ಟ್ರೇಲಿಯನ್ ನಗರಕ್ಕಿಂತ ಹತ್ಯಾಕಾಂಡದಲ್ಲಿ ಬದುಕುಳಿದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ,[೧೬೦] ವಾಸ್ತವವಾಗಿ ಸ್ವತಃ ಇಸ್ರೇಲ್ ನ ಆಚೆಗೆ ಅತ್ಯಧಿಕ ಪ್ರತಿವ್ಯಕ್ತಿಯ ಆದಾಯದ ಕೇಂದ್ರೀಕರಣವನ್ನು ಹೊಂದಿದೆ.[೧೬೧] ಈ ರೋಮಾಂಚಕ ಹಾಗು ಬೆಳವಣಿಗೆಯಾಗುತ್ತಿರುವ ಸಮುದಾಯವನ್ನು ಪ್ರತಿಬಿಂಬಿಸುವಂತೆ, ಮೆಲ್ಬರ್ನ್ ಯೆಹೂದಿ ಸಾಂಸ್ಕೃತಿಕ, ಧಾರ್ಮಿಕ ಹಾಗು ಶೈಕ್ಷಣಿಕ ಸಂಸ್ಥೆಗಳ ಹೆಚ್ಚಳವಾಗುತ್ತಿದೆ, ಇದರಲ್ಲಿ ೪೦ಕ್ಕೂ ಅಧಿಕ ಯೆಹೂದ್ಯರ ಆರಾಧನ ಮಂದಿರಗಳು ಹಾಗು ಏಳು ಪೂರ್ಣ ಕಾಲಿಕ ಪ್ಯಾರಿಷ್ ಬೆಳಗಿನ ಶಾಲೆಗಳು ಸೇರಿವೆ,[೧೬೨] ಜೊತೆಗೆ ಸ್ಥಳೀಯ ಯೆಹೂದಿ ದಿನಪತ್ರಿಕೆಯೂ ಸಹ ಪ್ರಕಟಗೊಳ್ಳುತ್ತದೆ.[೧೬೩]
ಮೆಲ್ಬರ್ನ್, ಲಂಡನ್, ಬಾಸ್ಟನ್ ಹಾಗು ಟೋಕಿಯೋನ ನಂತರ ವಿಶ್ವದ ನಾಲ್ಕನೇ ಅಗ್ರ ವಿಶ್ವವಿದ್ಯಾಲಯಗಳ ನಗರವೆಂದು ೨೦೦೮ರಲ್ಲಿ ಪಟ್ಟಿಯಾಗಿದೆ.[೧೬೪]
ಮೆಲ್ಬರ್ನ್, ಮೆಲ್ಬರ್ನ್ ವಿಶ್ವವಿದ್ಯಾಲಯಕ್ಕೆ ತವರೆನಿಸಿದೆ, ಜೊತೆಗೆ ಆಸ್ಟ್ರೇಲಿಯಾದ ಅತಿ ದೊಡ್ಡ ವಿಶ್ವವಿದ್ಯಾಲಯ ಮೊನಾಶ್ ವಿಶ್ವವಿದ್ಯಾಲಯವೂ ಸಹ ನಗರದಲ್ಲಿದೆ. ಮೆಲ್ಬರ್ನ್ ವಿಶ್ವವಿದ್ಯಾಲಯವು ಆಸ್ಟ್ರೇಲಿಯಾದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದ್ದು, ವಿಕ್ಟೋರಿಯಾದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. ೨೦೧೦ರಲ್ಲಿ ಇದನ್ನು ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳಲ್ಲೇ ಅಗ್ರ ವಿಶ್ವವಿದ್ಯಾಲಯವೆಂದು THES ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಟ್ಟಿಮಾಡಿದೆ.[೧೬೫] ದಿ ಟೈಮ್ಸ್ ಹೈಯರ್ ಎಜುಕೇಶನ್ ಸಪ್ಲಿಮೆಂಟ್ , ಮೆಲ್ಬರ್ನ್ ವಿಶ್ವವಿದ್ಯಾಲಯವನ್ನು ವಿಶ್ವದ ೩೬ನೇ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಪಟ್ಟಿ ಮಾಡಿದೆ—೪೩ನೇ ಸ್ಥಾನದಲ್ಲಿರುವ ANU ಹಾಗು ೭೧ನೇ ಸ್ಥಾನದಲ್ಲಿರುವ ಸಿಡ್ನಿ ವಿಶ್ವವಿದ್ಯಾಲಯಕ್ಕಿಂತ ಮುಂದಿದೆ. ಮೊನಶ್ ವಿಶ್ವವಿದ್ಯಾಲಯವನ್ನು ವಿಶ್ವದ ೧೭೮ನೇ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಪಟ್ಟಿ ಮಾಡಲಾಗಿದೆ. ಎರಡೂ ಯೂನಿವರ್ಸಿಟಿಗಳು ಗ್ರೂಪ್ ಆಫ್ ಏಯ್ಟ್ ನ ಸದಸ್ಯರುಗಳಾಗಿವೆ. ಮೆಲ್ಬರ್ನ್ ನಲ್ಲಿ ನೆಲೆಗೊಂಡಿರುವ ಇತರ ವಿಶ್ವವಿದ್ಯಾಲಯಗಳಲ್ಲಿ ಲಾ ಟ್ರೋಬೆ ವಿಶ್ವವಿದ್ಯಾಲಯ, RMIT ವಿಶ್ವವಿದ್ಯಾಲಯ, ಸ್ವಿನ್ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಇದು ಮೆಲ್ಬರ್ನ್ ನ ಒಳಾಂಗಣದಲ್ಲಿರುವ ಹಥಾರ್ನ್ ಉಪನಗರದಲ್ಲಿ ಸ್ಥಿತವಾಗಿದೆ, ವಿಕ್ಟೋರಿಯಾ ವಿಶ್ವವಿದ್ಯಾಲಯ, ಇದು ಮೆಲ್ಬರ್ನ್ ನ ಪಶ್ಚಿಮ ಪ್ರದೇಶದಲ್ಲಿ ಒಂಭತ್ತು ಕಾಲೇಜು ಆವರಣಗಳನ್ನು ಹೊಂದಿದೆ, ಇದರಲ್ಲಿ ಮೂರು ಮೆಲ್ಬರ್ನ್ ಸಿಟಿ ಬಿಸ್ನೆಸ್ ಡಿಸ್ಟ್ರಿಕ್ಟ್(CBD) ಹೃದಯಭಾಗದಲ್ಲಿದೆ ಹಾಗು ಮತ್ತೆ ನಾಲ್ಕು CBDಯ ಹತ್ತು ಕಿಲೋಮೀಟರ್ ನೋಳಗಿವೆ, ಹಾಗು ಆಸ್ಟ್ರೇಲಿಯನ್ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ಸೇಂಟ್ ಪ್ಯಾಟ್ರಿಕ್'ಸ್ ಕಾಲೇಜು ಆವರಣ. ಡೆಯಕಿನ್ ವಿಶ್ವವಿದ್ಯಾಲಯವು ಮೆಲ್ಬರ್ನ್ ಹಾಗು ಗೀಲಂಗ್ ನಲ್ಲಿ ಎರಡು ಪ್ರಮುಖ ಕಾಲೇಜು ಆವರಣಗಳನ್ನು ನಿರ್ವಹಿಸುತ್ತದೆ, ಹಾಗು ಇದು ವಿಕ್ಟೋರಿಯಾದ ಮೂರನೇ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಮೆಲ್ಬರ್ನ್ ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯು ಶೀಘ್ರವಾಗಿ ಏರಿಕೆಯಾಗಿದೆ, ಇದು ಸಂಪೂರ್ಣವಾಗಿ ಶುಲ್ಕವನ್ನು ಭರಿಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಗಳೂ ಅಧಿಕಗೊಂಡಿದ್ದರ ಪರಿಣಾಮವಾಗಿದೆ.[೧೬೬]
ಮೆಲ್ಬರ್ನ್ ನಲ್ಲಿ ಸರ್ಕಾರಿ ಹಾಗು ಖಾಸಗಿ ಶಾಲೆಗಳೂ ಸಹ ಇವೆ.
ಮೆಲ್ಬರ್ನ್ ನಲ್ಲಿ ಮೂರು ದಿನಪತ್ರಿಕೆಗಳು ಪ್ರಕಟವಾಗುತ್ತವೆ: ಹೆರಾಲ್ಡ್ ಸನ್ (ಟ್ಯಾಬ್ಲಾಯ್ಡ್), ದಿ ಏಜ್ (ದೊಡ್ಡ ಕಾಗದದ ಪತ್ರಿಕೆ) ಹಾಗು ದಿ ಆಸ್ಟ್ರೇಲಿಯನ್ (ರಾಷ್ಟ್ರೀಯ ದೊಡ್ಡಕಾಗದದ ಪತ್ರಿಕೆ). ಉಚಿತವಾದ mX ನ್ನೂ ಸಹ ರೈಲ್ವೆ ನಿಲ್ದಾಣಗಳಲ್ಲಿ ಹಾಗು ಮಧ್ಯ ಮೆಲ್ಬರ್ನ್ ನ ಬೀದಿಗಳಲ್ಲಿ ಪ್ರತಿನಿತ್ಯ ಮಧ್ಯಾಹ್ನದಂದು ವಿತರಿಸಲಾಗುತ್ತದೆ.[೧೬೭]
ಐದು ದೂರದರ್ಶನ ಜಾಲಗಳು ಹಾಗು ಒಂದು ಸಾಮುದಾಯಿಕ ದೂರದರ್ಶನ ಕೇಂದ್ರವು ಮೆಲ್ಬರ್ನ್ ನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ: HSV-೭, ಇದು ಮೆಲ್ಬರ್ನ್ ಡಾಕ್ಲ್ಯಾಂಡ್ಸ್ ಪ್ರದೇಶದಿಂದ ಪ್ರಸಾರವಾಗುತ್ತದೆ, GTV-೯, ತಮ್ಮ ಹೊಸತಾದ ಡಾಕ್ಲ್ಯಾಂಡ್ಸ್ ಸ್ಟುಡಿಯೋಗಳಿಂದ ತನ್ನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತದೆ; ಹಾಗು ATV-೧೦, ದಕ್ಷಿಣ ಯಾರ್ರದ ಕಾಮೋ ಕಾಂಪ್ಲೆಕ್ಸ್ ನಿಂದ ಪ್ರಸಾರವಾಗುತ್ತದೆ. ಮೆಲ್ಬರ್ನ್ ನಲ್ಲಿ ಪ್ರಸಾರವಾಗುವ ರಾಷ್ಟ್ರೀಯ ಪ್ರಸರಣ ಕೇಂದ್ರಗಳಲ್ಲಿ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್(ABC)ನ ಭಾಗವಾದ ABV-೨ ಸೇರಿದೆ (ABC೧ ಎಂಬ ಹೆಸರನ್ನು ಪಡೆದಿದೆ). ABC ಎರಡು ಸ್ಟುಡಿಯೋಗಳನ್ನು ಹೊಂದಿದೆ, ಒಂದು ರಿಪ್ಪೋನ್ಲೆಯ ಹಾಗು ಮತ್ತೊಂದು ಸೌತ್ ಬ್ಯಾಂಕ್ ನಲ್ಲಿ ಇದೆ. ಸ್ಪೆಷಲ್ ಬ್ರಾಡ್ಕಾಸ್ಟಿಂಗ್ ಸರ್ವೀಸ್(SBS)ನಿಂದ SBS ಒನ್ ಪ್ರಸಾರವಾಗುತ್ತದೆ, ಇದು ಮಧ್ಯ ಮೆಲ್ಬರ್ನ್ ನ ಫೆಡರೇಶನ್ ಸ್ಕ್ವೇರ್ ನಲ್ಲಿರುವ ತಮ್ಮ ಸ್ಟುಡಿಯೋಗಳಿಂದ ತಮ್ಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.
ABC೧, HSV-೭ (ಏಳು), GTV-೯ (ನೈನ್), ATV-೧೦ (ಟೆನ್) ಹಾಗು SBS ಒನ್ ಗಳ ಜೊತೆಯಲ್ಲಿ ಹೊಸತಾದ ಕೇವಲ ಡಿಜಿಟಲ್ ವಾಹಿನಿಗಳು ತಮ್ಮ ಸೇವೆಯನ್ನು ಒದಗಿಸುತ್ತವೆ, ಇದರಲ್ಲಿ One HD, ಎಲೆವೆನ್, ABC ೨, ABC ೩, ABC ನ್ಯೂಸ್ ೨೪, SBS ಟು, ೭ಟು, ೭ಮೇಟ್, GEM HD ಹಾಗು ಗೋ! C೩೧ ಮೆಲ್ಬರ್ನ್, ಮೆಲ್ಬರ್ನ್ ನಲ್ಲಿರುವ ಸ್ಥಳೀಯ ಸಾಮುದಾಯಿಕ ದೂರದರ್ಶನ ಕೇಂದ್ರವಾಗಿದೆ, ಹಾಗು ಇದರ ಪ್ರಸರಣವು, ಪ್ರಾದೇಶಿಕ ಕೇಂದ್ರ ಗೀಲೊಂಗ್ ಗೂ ಕೂಡ ಹಬ್ಬಿದೆ. ಮೆಲ್ಬರ್ನ್ ಗೆ, ಕೇಬಲ್ ಹಾಗು ಉಪಗ್ರಹ ಸೇವೆಗಳ ಮೂಲಕ ಪೇ TVಯ ಸೇವೆಯೂ ಸಹ ದೊರೆಯುತ್ತದೆ. ಫಾಕ್ಸ್ಟೆಲ್ ಹಾಗು ಆಪ್ಟಸ್ ಪ್ರಮುಖ ಪೇ TVಯ ಸೇವೆಯನ್ನು ಒದಗಿಸುವ ಸಂಸ್ಥೆಗಳಾಗಿವೆ. ಹಲವಾರು ದೂರದರ್ಶನ ಕಾರ್ಯಕ್ರಮಗಳು ಮೆಲ್ಬರ್ನ್ ನಲ್ಲಿ ತಯಾರಾಗುತ್ತದೆ, ಇದರಲ್ಲಿ ಗಮನಾರ್ಹವಾದುದೆಂದರೆ ನೈಬರ್ಸ್ , ಕಾಥ್ & ಕಾಮ್ , ಹೇಯ್ ಹೇಯ್ ಇಟ್ಜ್ ಸ್ಯಾಟರ್ಡೆ , ಬ್ಲ್ಯೂ ಹೀಲರ್ಸ್ , ರಶ್ ಹಾಗು ಅಂಡರ್ಬೆಲ್ಲಿ .
AM ಹಾಗು FM ರೇಡಿಯೋ ಕೇಂದ್ರಗಳ ದೊಡ್ಡ ಪಟ್ಟಿಯು ಮೇಲಿನ ಮೆಲ್ಬರ್ನ್ ಗೆ ತನ್ನ ಸೇವೆಯನ್ನು ಒದಗಿಸುತ್ತದೆ. ಇವುಗಳಲ್ಲಿ 'ಸಾರ್ವಜನಿಕ' (ಅದೆಂದರೆ ಸರ್ಕಾರದ ಒಡೆತನದಲ್ಲಿರುವ ABC & SBS) ಹಾಗು ಸಾಮುದಾಯಿಕ ಕೇಂದ್ರಗಳು. ಹಲವು ವಾಣಿಜ್ಯಕ ಕೇಂದ್ರಗಳು ಜಾಲದ-ಒಡೆತನದಲ್ಲಿದೆ : DMG ನೋವಾ ೧೦೦ ಹಾಗು ಕ್ಲ್ಯಾಸಿಕ್ ರಾಕ್ ನ್ನು ಹೊಂದಿದೆ; ಗೋಲ್ಡ್ ಹಾಗು ಮಿಕ್ಸ್ ARNನ ಒಡೆತನದಲ್ಲಿದೆ; ಹಾಗು ಆಸ್ಟೆರೆಯೋ ಫಾಕ್ಸ್ ಹಾಗು ಟ್ರಿಪಲ್ M ಎರಡನ್ನೂ ನಿರ್ವಹಿಸುತ್ತದೆ. ಪ್ರಾದೇಶಿಕ ವಿಕ್ಟೋರಿಯಾದ ಪಟ್ಟಣಗಳಲ್ಲಿರುವ ಕೇಂದ್ರಗಳ ಕಾರ್ಯಕ್ರಮಗಳನ್ನೂ ಸಹ ಆಲಿಸಬಹುದು(ಉದಾಹರಣೆಗೆ ೯೩.೯ ಬೇ FM, ಗೀಲೋಂಗ್). ಯುವಜನತೆಯ ಪರ್ಯಾಯಗಳಲ್ಲಿ ABC ಟ್ರಿಪಲ್ J ಹಾಗು ಯುವಕರೇ ನಡೆಸುವ SYN. ಟ್ರಿಪಲ್ J, ಹಾಗು ಅದೇ ರೀತಿಯಾಗಿ PBS ಹಾಗು ಟ್ರಿಪಲ್ R, ಪ್ರಾತಿನಿಧಿಕ ಸಂಗೀತದ ಅಡಿಯಲ್ಲಿ ಪ್ರದರ್ಶಿಸಲು ಪ್ರಯತ್ನಿಸುತ್ತವೆ. JOY ತಂಡವು ಸಲಿಂಗಕಾಮಿ ಪ್ರೇಕ್ಷಕರಿಗೆ ಸಂಗೀತದ ಉಣ ಬಡಿಸುತ್ತದೆ. ಶಾಸ್ತ್ರೀಯ ಸಂಗೀತದ ಅಭಿಮಾನಿಗಳಿಗಾಗಿ ೩MBS ಹಾಗು ABC ಕ್ಲಾಸಿಕ್ FM ಇದೆ. AM ಪ್ರಸಾರ ಕೇಂದ್ರಗಳಲ್ಲಿ ABC:೭೭೪, ರೇಡಿಯೋ ನ್ಯಾಷನಲ್, ಹಾಗು ನ್ಯೂಸ್ ರೇಡಿಯೋ; ಹಾಗು ಫೇರ್ ಫ್ಯಾಕ್ಸ್ ೩AWಗೆ ಸಂಯೋಜನೆಯನ್ನು ಹೊಂದಿದೆ(ಹರಟೆ) ಹಾಗು ಮ್ಯಾಜಿಕ್(ಸುಲಭವಾಗಿ ಆಲಿಸುವುದು). ಕ್ರೀಡಾಸಕ್ತರು ಹಾಗು ಉತ್ಸಾಹಿಗಳಿಗೆ SEN ೧೧೧೬ ವಾಹಿನಿಯಿದೆ. ಮೆಲ್ಬರ್ನ್ ನಲ್ಲಿ ಹಲವು ಸಮುದಾಯ ಆಧಾರಿತ ಕೇಂದ್ರಗಳಿವೆ, ಅವುಗಳು ಪರ್ಯಾಯ ಆಸಕ್ತಿಗಳಾದ ೩CR ಹಾಗು ೩KND (ಸ್ಥಳೀಯವಾಗಿ)ಗೆ ತಮ್ಮ ಸೇವೆಯನ್ನು ಒದಗಿಸುತ್ತದೆ. ಹಲವು ಉಪನಗರಗಳು, ಸ್ಥಳೀಯ ವೀಕ್ಷಕರಿಗೆ ಸೇವೆ ಒದಗಿಸಲೆಂದೇ ಕಡಿಮೆ ಸಾಮರ್ಥ್ಯದ ಸಾಮುದಾಯಿಕ ಕೇಂದ್ರಗಳಿವೆ.[೧೬೮]
ಮೆಲ್ಬರ್ನ್ ನ ಆಡಳಿತವು, ವಿಕ್ಟೋರಿಯಾ ಸರ್ಕಾರ ಹಾಗು ಮೆಟ್ರೋಪಾಲಿಟನ್ ಪ್ರದೇಶವನ್ನು ಒಳಗೊಳ್ಳುವ ೨೬ ನಗರಗಳು ಹಾಗು ಐದು ಗ್ರಾಮಾಂತರ ಪ್ರದೇಶಗಳ ನಡುವೆ ವಿಭಾಗವಾಗಿದೆ. ಮೆಲ್ಬರ್ನ್ ಗೆ ಯಾವುದೇ ವಿಧ್ಯುಕ್ತವಾದ ಅಥವಾ ರಾಜಕೀಯ ನಾಯಕತ್ವವಿಲ್ಲ; ಆದಾಗ್ಯೂ ಲಾರ್ಡ್ ಮೇಯರ್ ಆಫ್ ದಿ ಸಿಟಿ ಆಫ್ ಮೆಲ್ಬರ್ನ್ ಸಾಮಾನ್ಯವಾಗಿ ಸಮಕಾಲೀನರ ನಡುವೆ ಮೊದಲ ಸ್ಥಾನವನ್ನು ಪಡೆಯುವುದರ ಮೂಲಕ ಇಂತಹ ನಾಯಕತ್ವವನ್ನು ವಹಿಸುತ್ತಾರೆ,[೧೬೯] ಅದರಲ್ಲೂ ವಿಶೇಷವಾಗಿ ಅಂತರರಾಜ್ಯ ಅಥವಾ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇವರು ಮುಖ್ಯ ಪಾತ್ರ ವಹಿಸುತ್ತಾರೆ.
ಸ್ಥಳೀಯ ಆಡಳಿತ ಮಂಡಳಿಗಳು೧೯೮೯ರ ಲೋಕಲ್ ಗವರ್ನಮೆಂಟ್ ಆಕ್ಟ್ [೧೭೦] ನ ಅಡಿಯಲ್ಲಿ ತನ್ನ ಚಟುವಟಿಕೆಗಳನ್ನು ನಿರ್ವಹಿಸುತ್ತದೆ ಉದಾಹರಣೆಗೆ ನಗರಕ್ಕೆ ಸಂಬಂಧಿಸಿದ ಯೋಜನೆ ಹಾಗು ತ್ಯಾಜ್ಯ ನಿರ್ವಹಣೆ.
ಇತರ ಹಲವು ಸರ್ಕಾರಿ ಸೇವೆಗಳನ್ನು ವಿಕ್ಟೋರಿಯನ್ ರಾಜ್ಯ ಸರ್ಕಾರವು ಒದಗಿಸುತ್ತದೆ ಅಥವಾ ನಿಯಂತ್ರಿಸುತ್ತದೆ, ಇದು ಸ್ಪ್ರಿಂಗ್ ಸ್ಟ್ರೀಟ್ ನಲ್ಲಿರುವ ಸಂಸತ್ತು ಭವನದಲ್ಲಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಇತರ ರಾಷ್ಟ್ರಗಳಲ್ಲಿನ ಸ್ಥಳೀಯ ಸರ್ಕಾರಕ್ಕೆ ಸಂಬಂಧಿಸಿದ ಸೇವೆಗಳು ಇದರಲ್ಲಿ ಸೇರಿದೆ ಜೊತೆಗೆ ಸಾರ್ವಜನಿಕ ಸಾರಿಗೆ, ಹೆದ್ದಾರಿಗಳು, ಟ್ರ್ಯಾಫಿಕ್ ನಿಯಂತ್ರಣ, ಯೋಜನೆಗಳು, ಶಾಲಾಪೂರ್ವ ಶಿಕ್ಷಣ ಮಟ್ಟಕ್ಕಿಂತ ಹೆಚ್ಚಿನ ಶಿಕ್ಷಣ ಹಾಗು ಪ್ರಮುಖ ಮೂಲಭೂತ ಸೌಕರ್ಯಗಳ ಯೋಜನೆಗಳ ಕಾರ್ಯನೀತಿ ರಚನೆ. ರಾಜ್ಯ ಸರ್ಕಾರವು, ಕೆಲವು ಸ್ಥಳೀಯ ಸರ್ಕಾರದ ನಿರ್ಧಾರಗಳನ್ನು ರದ್ದುಪಡಿಸುವ ಅಧಿಕಾರವನ್ನು ಹಾಗೆ ಉಳಿಸಿಕೊಂಡಿದೆ, ಇದರಲ್ಲಿ ನಗರಕ್ಕೆ ಸಂಬಂಧಿಸಿದ ಯೋಜನೆಗಳು, ಹಾಗು ರಾಜ್ಯದ ಚುನಾವಣೆಯಲ್ಲಿ ಸಾಮಾನ್ಯವಾಗಿ ಪ್ರಮುಖ ವೈಶಿಷ್ಟ್ಯತೆಯನ್ನು ಹೊಂದಿರುವ ಮೇಲ್ಬರ್ನಿಯನ್ ವಿಷಯಗಳು.
ವಿಕ್ಟೋರಿಯಾ ಸರ್ಕಾರದ ಮಾನವ ಸೇವಾ ವಿಭಾಗವು ಸರಿಸುಮಾರು ೩೦ ಮೆಲ್ಬರ್ನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು, ಹಾಗು ೧೩ ಆರೋಗ್ಯ ಸೇವಾ ಸಂಸ್ಥೆಗಳ ಉಸ್ತುವಾರಿಯನ್ನು ವಹಿಸುತ್ತದೆ.[೧೭೧]
ಮೆಲ್ಬರ್ನ್ ನಲ್ಲಿ ಹಲವಾರು ಪ್ರಮುಖ ವೈದ್ಯಕೀಯ, ನರವಿಜ್ಞಾನ ಹಾಗು ಬಯೋತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳು ಸ್ಥಿತವಾಗಿದೆ: ಸೇಂಟ್ ವಿನ್ಸೆಂಟ್'ಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್, ಆಸ್ಟ್ರೇಲಿಯನ್ ಸ್ಟೆಮ್ ಸೆಲ್ ಸೆಂಟರ್, ಬುರ್ನೆಟ್ ಇನ್ಸ್ಟಿಟ್ಯೂಟ್, ಆಸ್ಟ್ರೇಲಿಯನ್ ರಿಜೆನೆರೆಟಿವ್ ಮೆಡಿಸಿನ್ ಇನ್ಸ್ಟಿಟ್ಯೂಟ್, ವಿಕ್ಟೋರಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಸೈನ್ಸಸ್, ಬ್ರೈನ್ ರಿಸರ್ಚ್ ಇನ್ಸ್ಟಿಟ್ಯೂಟ್, ಪೀಟರ್ ಮ್ಯಾಕ್ಕಲ್ಲಂ ಕ್ಯಾನ್ಸರ್ ಸೆಂಟರ್, ವಾಲ್ಟರ್ ಅಂಡ್ ಎಲಿಜಾ ಹಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್, ಹಾಗು ಮೆಲ್ಬರ್ನ್ ನ್ಯೂರೋಸೈಕಿಯಾಟ್ರಿ ಸೆಂಟರ್.
ಇತರ ಸಂಸ್ಥೆಗಳಲ್ಲಿ ಹೊವರ್ಡ್ ಫ್ಲೋರೆ ಇನ್ಸ್ಟಿಟ್ಯೂಟ್, ಮುರ್ಡೋಚ್ ಚಿಲ್ಡ್ರನ್'ಸ್ ರಿಸರ್ಚ್ ಇನ್ಸ್ಟಿಟ್ಯೂಟ್, ಬೇಕರ್ IDI ಹಾರ್ಟ್ ಅಂಡ್ ಡಯಾಬಿಟಿಸ್ ಇನ್ಸ್ಟಿಟ್ಯೂಟ್ ಹಾಗು ಆಸ್ಟ್ರೇಲಿಯನ್ ಸಿಂಕ್ರೋಟ್ರೋನ್.[೧೭೨] ಈ ಸಂಸ್ಥೆಗಳಲ್ಲಿ ಹಲವು ಸಮೀಪದ ವಿಶ್ವವಿದ್ಯಾಲಯಗಳೊಂದಿಗೆ ಹಾಗು ಅದರಲ್ಲಿ ಸ್ಥಿತವಾಗಿದೆ.
ಇತರ ಆಸ್ಟ್ರೇಲಿಯನ್ ರಾಜಧಾನಿ ನಗರಗಳ ನಡುವೆ, ಮೆಲ್ಬರ್ನ್ ನಲ್ಲಿ ಪುರುಷರ ಜೀವಿತಾವಧಿಯು ಕ್ಯಾನ್ಬೆರ ನಗರದಷ್ಟೇ ಇದೆ (೮೦.೦ ವರ್ಷಗಳು), ಈ ನಿಟ್ಟಿನಲ್ಲಿ ಇದು ಕ್ಯಾನ್ಬೆರ ನಗರದೊಂದಿಗೆ ಸಮನಾಗಿದೆ ಹಾಗು ಮಹಿಳೆಯರ ಜೀವಿತಾವಧಿಯ ವಿಷಯಕ್ಕೆ ಬಂದಾಗ ಪರ್ತ್ ನಗರದ ನಂತರದ ಸ್ಥಾನವನ್ನು ಪಡೆದಿದೆ (೮೪.೧ ವರ್ಷಗಳು).[೧೭೩]
ಮೆಲ್ಬರ್ನ್, ಪ್ರಯಾಣಕ್ಕಾಗಿ ಆಟೋಮೊಬೈಲ್ ನ ಮೇಲೆ ಬಹಳವಾಗಿ ಅವಲಂಬಿತವಾಗಿದೆ[೧೭೪], ಅದರಲ್ಲೂ ವಿಶೇಷವಾಗಿ ಹೊರವಲಯದಲ್ಲಿರುವ ಉಪನಗರ ಪ್ರದೇಶಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ ಗಳನ್ನು ಖರೀದಿಸಲಾಗುತ್ತದೆ[೧೭೫] ಜೊತೆಗೆ ರಸ್ತೆಯಲ್ಲಿ ಒಟ್ಟಾರೆಯಾಗಿ ೩.೬ ದಶಲಕ್ಷ ಖಾಸಗಿ ವಾಹನಗಳು ಸಂಚರಿಸುತ್ತವೆ22,320 km (13,870 mi), ಹಾಗು ಪ್ರತಿ ವ್ಯಕ್ತಿಯಂತೆ ವಿಶ್ವದಲ್ಲಿ ಅಧಿಕ ಉದ್ದವಿರುವ ರಸ್ತೆಗಳಲ್ಲಿ ಒಂದಾಗಿವೆ.[೧೭೪] ೨೦ನೇ ಶತಮಾನದ ಆರಂಭಿಕ ಅವಧಿಯು ಆಟೋಮೊಬೈಲ್ ಗಳ ಹೆಚ್ಚಿದ ಜನಪ್ರಿಯತೆಯನ್ನು ಕಂಡಿತು, ಇದು ದೊಡ್ಡ ಪ್ರಮಣದಲ್ಲಾದ ಉಪನಗರದ ವಿಸ್ತರಣೆಯ ಪರಿಣಾಮವಾಗಿದೆ[೧೭೬] ಹಾಗು ಇಂದು ಖಾಸಗಿ ವಾಹನಗಳು ಉಪಯೋಗಿಸುವ ಪ್ರಧಾನ ರಸ್ತೆಮಾರ್ಗಗಳು ಹಾಗು ಮುಕ್ತಮಾರ್ಗಗಳ ವ್ಯಾಪಕ ವ್ಯವಸ್ಥೆಯಿದೆ, ಇದರಲ್ಲಿ ಬಸ್ ಗಳು ಹಾಗು ಟ್ಯಾಕ್ಸಿಗಳನ್ನು ಒಳಗೊಂಡಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಒಳಗೊಂಡಂತೆ ಸರಕುಸಾಗಣೆಗಳು ಸೇರಿವೆ. ನಗರಕ್ಕೆ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ಹೆದ್ದಾರಿಗಳೆಂದರೆ ಈಸ್ಟರ್ನ್ ಫ್ರೀವೇ, ಮೊನಾಶ್ ಫ್ರೀವೇ ಹಾಗು ವೆಸ್ಟ್ ಗೇಟ್ ಫ್ರೀವೇ(ಇದು ದೊಡ್ಡದಾದ ವೆಸ್ಟ್ ಗೇಟ್ ಸೇತುವೆಯ ಸುತ್ತ ವ್ಯಾಪಿಸಿದೆ), ಆದರೆ ಇತರ ಮುಕ್ತಮಾರ್ಗಗಳು ನಗರದ ಸುತ್ತ ಪ್ರದಕ್ಷಿಣೆ ಮಾಡುತ್ತವೆ ಅಥವಾ ಇತರ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ, ಇದರಲ್ಲಿ ಸಿಟಿಲಿಂಕ್(ಇದು ದೊಡ್ಡದಾದ ಬೋಲ್ಟೆ ಸೇತುವೆಯ ಸುತ್ತ ವ್ಯಾಪಿಸಿದೆ), ಈಸ್ಟ್ ಲಿಂಕ್, ವೆಸ್ಟರ್ನ್ ರಿಂಗ್ ರೋಡ್, ಕಾಲ್ಡರ್ ಮುಕ್ತಮಾರ್ಗ, ಟುಲ್ಲಮರೀನ್ ಮುಕ್ತಮಾರ್ಗ(ವಿಮಾನನಿಲ್ದಾಣದ ಮುಖ್ಯ ಸಂಪರ್ಕ) ಹಾಗು ಹುಮೆ ಮುಕ್ತಮಾರ್ಗ, ಇದು ಮೆಲ್ಬರ್ನ್ ಹಾಗು ಸಿಡ್ನಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.[೧೭೭]
ಮೆಲ್ಬರ್ನ್, ವ್ಯಾಪಕವಾದ ರೈಲು, ಟ್ರ್ಯಾಮ್, ಬಸ್ ಹಾಗು ಟ್ಯಾಕ್ಸಿ ವ್ಯವಸ್ಥೆಗಳು ಸುತ್ತ ಅವಲಂಬಿತವಾದ ಸಮಗ್ರ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ೧೯೪೦ರ ದಶಕದಲ್ಲಿ ೨೫%ನಷ್ಟು ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಬಳಸಿದರು ಆದರೆ ೨೦೦೩ರ ಹೊತ್ತಿಗೆ ಅದು ಕೇವಲ ೭.೬%ರಕ್ಕೆ ಇಳಿಯಿತು.[೧೭೮] ೧೯೯೯ರಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲಾಯಿತು, ಇದು ಕ್ಷೀಣತೆಯ ಪರಮಾವಧಿಯನ್ನು ಸಂಕೇತಿಸುತ್ತದೆ.[೧೭೯] ೨೧ನೇ ಶತಮಾನದಲ್ಲಿ ಆಟೋ-ಸೆಂಟ್ರಿಕ್ ನಗರಾಭಿವೃದ್ಧಿಯು ಮುಂದುವರಿಕೆಯೊಂದಿಗೆ ಖಾಸಗೀಕರಣ ಹಾಗು ಯಶಸ್ವಿ ಆಡಳಿತದ ಹೊರತಾಗಿಯೂ,[೧೮೦] ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತದೆ ಜೊತೆಗೆ ಪ್ರತಿ ಪ್ರಯಾಣದಲ್ಲೂ ೧೪.೮% ಹಾಗು ೮.೪%ರಷ್ಟು ಹಂಚಿಕೆ ವಿಧಾನದಲ್ಲಿ ಪ್ರಯಾಣಿಕರು ಹೆಚ್ಚಾಗುತ್ತಿದ್ದಾರೆ.[೧೮೧] ಮೆಲ್ಬರ್ನ್ ಗೆ ಸಾರ್ವಜನಿಕ ಸಾರಿಗೆ ಹಂಚಿಕೆ ವಿಧಾನದಲ್ಲಿ ೨೦%ನಷ್ಟು ಗುರಿಯನ್ನು ೨೦೦೬ರಲ್ಲಿ ರಾಜ್ಯ ಸರ್ಕಾರವು ತನ್ನ ಯೋಜನೆಯನ್ನು ರೂಪಿಸಿತು.[೧೮೨] ೨೦೦೬ರಿಂದೀಚೆಗೆ, ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹವು ೨೦%ಗೂ ಅಧಿಕವಾಗಿ ಹೆಚ್ಚಾಗಿದೆ.[೧೮೨]
ಮೆಲ್ಬರ್ನ್ ರೈಲು ವ್ಯವಸ್ಥೆಯು, ೧೮೫೦ರ ಗೋಲ್ಡ್ ರಷ್ ಶಕೆಯಿಂದ ಖಾಸಗಿಯಾಗಿ ನಿರ್ಮಾಣವಾದ ಮಾರ್ಗಗಳಿಂದ ತನ್ನ ಹುಟ್ಟನ್ನು ಪಡೆದುಕೊಂಡಿದೆ ಹಾಗು ಇಂದು ಉಪನಗರದ ರೈಲು ವ್ಯವಸ್ಥೆಯು, ೧೬ ಮಾರ್ಗಗಳ ಮೇಲೆ ೨೦೦ ಉಪನಗರ ನಿಲ್ದಾಣಗಳನ್ನು ಹೊಂದಿದೆ, ಇದು ಸಿಟಿ ಲೂಪ್ ನಿಂದ ಹರಡುತ್ತದೆ, ಇದು ಭಾಗಶಃ, ಸೆಂಟ್ರಲ್ ಬಿಸ್ನೆಸ್ ಡಿಸ್ಟ್ರಿಕ್ಟ್(ಹಾಡಲ್ ಗ್ರಿಡ್) ನ ವ್ಯವಸ್ಥೆಯ ಮೆಟ್ರೋ ವಿಭಾಗದ ಕೆಳಗಿನಿಂದ ಹಾದು ಹೋಗುತ್ತದೆ. ಫ್ಲಿನ್ಡರ್ಸ್ ಸ್ಟ್ರೀಟ್ ಸ್ಟೇಶನ್, ಮೆಲ್ಬರ್ನ್ ನ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣವಾಗಿದೆ, ಹಾಗು ಇದು ೧೯೨೬ರಲ್ಲಿ ವಿಶ್ವದ ಅತ್ಯಂತ ಜನನಿಬಿಡ ಪ್ರಯಾಣಿಕ ನಿಲ್ದಾಣವಾಗಿತ್ತು. ಇದು ಮೆಲ್ಬರ್ನ್ ನ ಒಂದು ಪ್ರಮುಖ ಹೆಗ್ಗುರುತಾಗಿ ಹಾಗು ಸಭೆ ಸೇರುವ ಸ್ಥಳವಾಗಿ ಹಾಗೆ ಉಳಿದಿದೆ.[೧೮೩] ಪ್ರಾದೇಶಿಕ ವಿಕ್ಟೋರಿಯನ್ ನಗರಗಳೊಂದಿಗೆ ನಗರವು ರೈಲು ಸಂಪರ್ಕಗಳನ್ನು ಹೊಂದಿದೆ, ಜೊತೆಗೆ ಸಿಡ್ನಿ ಹಾಗು ಅಡಿಲೈಡ್ ಗೆ ಹಾಗು ಅದರಾಚೆಗೂ ನೇರವಾದ ಅಂತರರಾಜ್ಯ ರೈಲು ಸೇವೆಗಳನ್ನು ಹೊಂದಿದೆ, ಇದು ಮೆಲ್ಬರ್ನ್ ನ ಇತರ ಪ್ರಮುಖ ರೈಲು ಅಂತಿಮ ನಿಲ್ದಾಣದಲ್ಲಿ ಪ್ರತ್ಯೇಕಗೊಳ್ಳುತ್ತವೆ, ಸ್ಪೆನ್ಸರ್ ರಸ್ತೆಯಲ್ಲಿರುವ ಸದರನ್ ಕ್ರಾಸ್ ಸ್ಟೇಶನ್. ೨೦೦೮-೨೦೦೯ರ ವಿತ್ತ ವರ್ಷದಲ್ಲಿ, ಮೆಲ್ಬರ್ನ್ ರೈಲ್ವೆ ವ್ಯವಸ್ಥೆಯು ೨೧೩.೯ ದಶಲಕ್ಷ ಪ್ರಯಾಣಿಕರಿಗೆ ತನ್ನ ಸೇವೆಯನ್ನು ಒದಗಿಸಿ ದಾಖಲೆಯನ್ನು ಮಾಡಿದೆ, ಇದು ರೈಲ್ವೆ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯಾಗಿದೆ.[೧೮೪] ಹಲವು ರೈಲು ಮಾರ್ಗಗಳು, ಸಮರ್ಪಿತ ಮಾರ್ಗಗಳು ಹಾಗು ರೈಲು ಚದರಗಜಗಳ ಜೊತೆಯಲ್ಲಿ ಸರಕುಸಾಗಣೆಗೂ ಸಹ ಬಳಸಲಾಗುತ್ತದೆ.
ಮೆಲ್ಬರ್ನ್, ವಿಶ್ವದಲ್ಲೇ ಅತ್ಯಂತ ದೊಡ್ಡ ಟ್ರ್ಯಾಮ್ ವ್ಯವಸ್ಥೆಯನ್ನು ಹೊಂದಿದೆ[೩೨][೧೮೫] ಇದು ನಗರದಲ್ಲಿ ೧೮೮೦ರ ದಶಕದಲ್ಲಿ ಉಂಟಾದ ಭೂಮಿ ಬೆಲೆಯ ಏರಿಕೆಯ ಸಂದರ್ಭದಲ್ಲಿ ತನ್ನ ಹುಟ್ಟನ್ನು ಪಡೆಯಿತು. ಸರಿಸುಮಾರು ೧೭೮ ದಶಲಕ್ಷ ಪ್ರಯಾಣಿಕರು ೨೦೦೯ರಲ್ಲಿ ಇದರಲ್ಲಿ ಪ್ರಯಾಣಿಸಿದ್ದಾರೆ.[೧೮೬] ಮೆಲ್ಬರ್ನ್, ಏಕೈಕ ಮಾರ್ಗಕ್ಕಿಂತ ಹೆಚ್ಚಿನ ಮಾರ್ಗವನ್ನು ಹೊಂದಿರುವ ಆಸ್ಟ್ರೇಲಿಯಾದ ಏಕೈಕ ಟ್ರ್ಯಾಮ್ ವ್ಯವಸ್ಥೆಯಾಗಿದೆ ಹಾಗು ಇದು ೨೯ ಮಾರ್ಗಗಳಲ್ಲಿ ಚಲಿಸುವ ೧೫ ಲೈನುಗಳನ್ನು ಒಳಗೊಂಡಿದೆ. ಟ್ರ್ಯಾಮ್ ವ್ಯವಸ್ಥೆಗಳ ವಿಭಾಗಗಳು ರಸ್ತೆಗಳ ಮೇಲೂ ಸಹ ಇವೆ, ಆದರೆ ಇತರ ಕೆಲವು ಪ್ರತ್ಯೇಕಗೊಂಡಿವೆ ಅಥವಾ ಹಗುರ ರೈಲು ಮಾರ್ಗಗಳಾಗಿವೆ. ಮೆಲ್ಬರ್ನ್ ನ ಟ್ರ್ಯಾಮ್ ಗಳನ್ನು ಸಾಂಪ್ರದಾಯಿಕ ಸಾಂಸ್ಕೃತಿಕ ಸಂಪತ್ತು ಹಾಗು ಪ್ರವಾಸಿ ಆಕರ್ಷಣೆಯೆಂದು ಗುರುತಿಸಲಾಗುತ್ತದೆ. ಪಾರಂಪರಿಕ ಟ್ರ್ಯಾಮ್ ಗಳು ಉಚಿತವಾಗಿ ನಗರ ವಲಯದೊಳಗೆ ತಮ್ಮ ಸೇವೆಯನ್ನು ಒದಗಿಸುತ್ತದೆ, ಇದು ಮೆಲ್ಬರ್ನ್ ಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಉದ್ದೇಶಿಸಲಾಗಿದೆ, ಹಾಗು ಪಾರಂಪರಿಕ ಹೋಟೆಲು ಟ್ರ್ಯಾಮ್ ಗಳು ಸಂಜೆ ಸಮಯದಲ್ಲಿ ನಗರದ ಸುತ್ತ ಪ್ರಯಾಣವನ್ನು ಮಾಡುತ್ತವೆ.[೧೮೭]
ಮೆಲ್ಬರ್ನ್ ನ ಬಸ್ ವ್ಯವಸ್ಥೆಯು ಬಹುತೇಕ ೩೦೦ ಮಾರ್ಗಗಳನ್ನು ಒಳಗೊಂಡಿದೆ, ಇದು ಮುಖ್ಯವಾಗಿ, ರೈಲ್ವೆ ಹಾಗು ಹಗುರ ರೈಲು ಸೇವೆಗಳ ನಡುವೆ ಉಂಟಾಗುವ ಅಂತರವನ್ನು ಭರಿಸಲು ಹೊರವಲಯದ ಉಪನಗರಗಳಿಗೆ ತನ್ನ ಸೇವೆಯನ್ನು ಒದಗಿಸುತ್ತದೆ.[೧೮೭][೧೮೮] ೨೦೦೭ರಲ್ಲಿ ೮೬.೭ ದಶಲಕ್ಷ ಪ್ರಯಾಣಿಕರು ಮೆಲ್ಬರ್ನ್ ಬಸ್ ಗಳಲ್ಲಿ ಪ್ರಯಾಣಿಸಿದ್ದು ದಾಖಲೆಯಾಗಿದೆ.[೧೮೯]
ಮೆಲ್ಬರ್ನ್ ನ ಸಾಗಣೆ ವ್ಯವಸ್ಥೆಯಲ್ಲಿ ಹಡಗು ಸಾಗಣೆಯು ಒಂದು ಪ್ರಮುಖ ಅಂಶವಾಗಿದೆ. ಪೋರ್ಟ್ ಆಫ್ ಮೆಲ್ಬರ್ನ್, ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಧಾರಕ ಹಾಗು ಸಾರ್ವಜನಿಕವಾದ ಕಾರ್ಗೋ ಬಂದರಾಗಿರುವುದರ ಜೊತೆಗೆ ಅತ್ಯಂತ ನಿಬಿಡವಾದುದು ಸಹ ಆಗಿದೆ. ಬಂದರು ೨೦೦೭ರಲ್ಲಿ ೧೨ ತಿಂಗಳ ಅವಧಿಗೆ ಎರಡು ದಶಲಕ್ಷ ಹಡಗು ಧಾರಕಗಳ ನಿರ್ವಹಣೆ ಮಾಡಿತ್ತು, ಇದು ದಕ್ಷಿಣ ಖಗೋಳಾರ್ಧದಲ್ಲಿ ಐದು ಪ್ರಮುಖ ಬಂದರುಗಳಲ್ಲಿ ಒಂದೆನಿಸಿದೆ.[೧೪೧] ಪೋರ್ಟ್ ಫಿಲಿಪ್ ಕೊಲ್ಲಿಯಲ್ಲಿರುವ ಸ್ಟೇಶನ್ ಪಿಯೆರ್ ನೌಕಾಯಾನ ಹಡಗುಗಳೊಂದಿಗೆ ಮುಖ್ಯವಾದ ಪ್ರಯಾಣಿಕ ಹಡಗು ನಿಲ್ದಾಣವಾಗಿದೆ ಜೊತೆಗೆ ಸ್ಪಿರಿಟ್ ಆಫ್ ತಾಸ್ಮೇನಿಯಾ ದೋಣಿಗಳು ಬಾಸ್ಸ್ ಸ್ಟ್ರೈಟ್ ನ್ನು ದಾಟಿ ತಾಸ್ಮೇನಿಯಾದಲ್ಲಿರುವ ಹಡಗುಕಟ್ಟೆಯನ್ನು ಮುಟ್ಟುತ್ತವೆ.[೧೯೦] ದೋಣಿಗಳು ಹಾಗು ನೀರಿನ ಮೇಲೆ ಚಲಿಸುವ ವಾಹನಗಳು ಯಾರ್ರ ನದಿಯುದ್ದಕ್ಕೂ ಲಂಗರುದಾಣದಿಂದ ದಕ್ಷಿಣ ಯಾರ್ರ ಹಾಗು ಪೋರ್ಟ್ ಫಿಲಿಪ್ ಕೊಲ್ಲಿಯ ವಿರುದ್ಧ ದಿಕ್ಕಿನವರೆಗೂ ಚಲಿಸುತ್ತದೆ.
ಮೆಲ್ಬರ್ನ್ ನಾಲ್ಕು ವಿಮಾನನಿಲ್ದಾಣಗಳನ್ನು ಹೊಂದಿದೆ. ಟುಲ್ಲಮರೀನ್ ನಲ್ಲಿರುವ ಮೆಲ್ಬರ್ನ್ ವಿಮಾನನಿಲ್ದಾಣವು, ನಗರದ ಮುಖ್ಯ ಅಂತಾರಾಷ್ಟ್ರೀಯ ಹಾಗು ದೇಶೀಯ ಮಾರ್ಗವಾಗಿದೆ ಹಾಗು ಆಸ್ಟ್ರೇಲಿಯಾದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ವಿಮಾನನಿಲ್ದಾಣವು, ಪ್ರಯಾಣಿಕ ವಿಮಾನಗಳಾದ ಜೆಟ್ ಸ್ಟಾರ್ ಹಾಗು ಟೈಗರ್ ಏರ್ ವೇಸ್ ಆಸ್ಟ್ರೇಲಿಯಾಗೆ ತವರಾಗಿದೆ ಹಾಗು ಸರಕುಸಾಗಣೆ ವಿಮಾನಗಳಾದ ಆಸ್ಟ್ರೇಲಿಯನ್ ಏರ್ ಎಕ್ಸ್ ಪ್ರೆಸ್ ಹಾಗು ಟಾಲ್ ಪ್ರಿಯಾರಿಟಿಗೂ ಸಹ ನೆಲೆಯಾಗಿದೆ ಹಾಗು ಕಾಂಟಾಸ್ ಹಾಗು ವರ್ಜಿನ್ ಬ್ಲ್ಯೂಗೆ ಪ್ರಮುಖ ಕೇಂದ್ರವಾಗಿದೆ. ಮೆಲ್ಬರ್ನ್ ಹಾಗು ಗೀಲಾಂಗ್ ನಡುವೆ ಸ್ಥಿತವಾಗಿರುವ ಅವಲೋನ್ ವಿಮಾನ ನಿಲ್ದಾಣವು, ಜೆಟ್ ಸ್ಟಾರ್ ನ ನಂತರದ ಎರಡನೇ ಅತ್ಯಂತ ನಿಬಿಡ ಕೇಂದ್ರವಾಗಿದೆ. ಇದನ್ನು ಸರಕು ಸಾಗಣೆ ಹಾಗು ನಿರ್ವಹಣಾ ಸೌಲಭ್ಯಕ್ಕಾಗಿಯೂ ಸಹ ಬಳಸಲಾಗುತ್ತದೆ. ನಗರದ ಮುಖ್ಯ ವಿಮಾನನಿಲ್ದಾಣಗಳಿಂದ ಪ್ರಸಕ್ತದಲ್ಲಿ ಸಾರ್ವಜನಿಕ ಸಾರಿಗೆಯಾಗಿ ಕೇವಲ ಬಸ್ ಗಳು ಹಾಗು ಟ್ಯಾಕ್ಸಿಗಳು ಮಾತ್ರ ಲಭ್ಯವಿದೆ. ರೋಗಿಗಳಿಗಾಗಿ ಸ್ಥಳೀಯ ಹಾಗು ಅಂತಾರಾಷ್ಟ್ರೀಯ ಸಾಗಣೆಗಾಗಿ ವಿಮಾನದಲ್ಲಿ ಅಂಬ್ಯುಲೆನ್ಸ್ ಸೌಲಭ್ಯಗಳೂ ಸಹ ದೊರಕುತ್ತವೆ.[೧೯೧] ಮೆಲ್ಬರ್ನ್ ಒಂದು ಮಹತ್ವವಾದ ಸಾರ್ವಜನಿಕ ವಾಯುಯಾನ ವಿಮಾನನಿಲ್ದಾಣವನ್ನೂ ಸಹ ಹೊಂದಿದೆ, ಮೂರಬ್ಬಿನ್ ವಿಮಾನನಿಲ್ದಾಣ, ಇದು ನಗರದ ಆಗ್ನೇಯ ದಿಕ್ಕಿನಲ್ಲಿದೆ ಹಾಗು ಇದು ಅತ್ಯಂತ ಸೀಮಿತವದ ಪ್ರಯಾಣಿಕ ವಿಮಾನಗಳ ಸೇವೆಯನ್ನು ಒದಗಿಸುತ್ತದೆ. ಎಸ್ಸೆನ್ಡನ್ ವಿಮಾನನಿಲ್ದಾಣ, ಇದು ಒಂದೊಮ್ಮೆ ನಗರದ ಪ್ರಮುಖ ವಿಮಾನನಿಲ್ದಾಣವಾಗಿತ್ತು, ಇದು ಪ್ರಯಾಣಿಕ ವಿಮಾನಗಳನ್ನು, ಸಾರ್ವಜನಿಕ ವಾಯುಯಾನ ಹಾಗು ಕೆಲವು ಕಾರ್ಗೋ ವಿಮಾನಗಳ ನಿರ್ವಹಣ ಮಾಡುತ್ತದೆ.[೧೯೨]
ಮೆಲ್ಬರ್ನ್ ಸೈಕಲ್ ಹಂಚಿಕೆ ವ್ಯವಸ್ಥೆಯನ್ನು ೨೦೧೦ರಲ್ಲಿ ಸ್ಥಾಪನೆ ಮಾಡಿತು[೧೯೩], ಇದು ಗುರುತಿಸಲಾದ ರಸ್ತೆ ಮಾರ್ಗಗಳು ಹಾಗು ಪ್ರತ್ಯೇಕಗೊಂಡ ಸೈಕಲ್ ಸೌಲಭ್ಯಗಳ ವ್ಯಾಪಕ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತವೆ.
ನೀರಿನ ಸಂಗ್ರಹ ಹಾಗು ಮೆಲ್ಬರ್ನ್ ಗೆ ನೀರಿನ ಹಂಚಿಕೆಯನ್ನು ಮೆಲ್ಬರ್ನ್ ವಾಟರ್ ನಿರ್ವಹಣೆ ಮಾಡುತ್ತದೆ, ಇದು ವಿಕ್ಟೋರಿಯನ್ ಸರ್ಕಾರದ ಅಧೀನದಲ್ಲಿದೆ. ಸಂಸ್ಥೆಯು, ಚರಂಡಿ ವ್ಯವಸ್ಥೆಯ ನಿರ್ವಹಣೆ ಹಾಗು ಪ್ರದೇಶದ ಪ್ರಮುಖ ನೀರಿನ ಶೇಖರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಹಾಗು ಇದು ವೊಂಥಗ್ಗಿ ಡಿಸಲನೈಸೆಶನ್ ಸ್ಥಾವರ ಹಾಗು ನಾರ್ತ್-ಸೌತ್ ಪೈಪ್ ಲೈನ್ ನ ನಿರ್ವಹಣೆಯನ್ನೂ ಸಹ ಮಾಡುತ್ತದೆ. ನೀರನ್ನು, ಗ್ರೇಟರ್ ಮೆಲ್ಬರ್ನ್ ಪ್ರದೇಶದ ಒಳಗೆ ಹಾಗು ಅದರಾಚೆಗೆ ಸ್ಥಿತವಾಗಿರುವ ಜಲಾಶಯಗಳ ಸರಣಿಯಲ್ಲಿ ಸಂಗ್ರಹಿಸಲಾಗುತ್ತದೆ. ಅತ್ಯಂತ ದೊಡ್ಡ ಜಲಾಶಯ, ಥಾಮ್ಸನ್ ರಿವರ್ ಜಲಾಶಯವು, ವಿಕ್ಟೋರಿಯನ್ ಆಲ್ಪ್ಸ್ ನಲ್ಲಿ ಸ್ಥಿತವಾಗಿದೆ, ಇದು ಮೆಲ್ಬರ್ನ್ ನ ೬೦%ರಷ್ಟು ನೀರಿನ ಸಾಮರ್ಥ್ಯವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ,[೧೯೪], ಅಪ್ಪರ್ ಯಾರ್ರ ಜಲಾಶಯ ಹಾಗು ಕಾರ್ಡೀನಿಯಾ ಜಲಾಶಯದಂತಹ ಸಣ್ಣ ಜಲಾಶಯಗಳು ದ್ವಿತೀಯಕ ನೀರಿನ ಪೂರೈಕೆಯನ್ನು ಮಾಡುತ್ತದೆ.
ರಾಜ್ಯದುದ್ದಕ್ಕೂ ಅನಿಲವನ್ನು SP ಆಸ್ನೆಟ್ ಸರಬರಾಜು ಮಾಡುತ್ತದೆ. ವಿದ್ಯುತ್ತನ್ನು ಐದು ವಿತರಣಾ ಸಂಸ್ಥೆಗಳು ಸರಬರಾಜು ಮಾಡುತ್ತವೆ:
ವಿಕ್ಟೋರಿಯಾ, ಆಸ್ಟ್ರೇಲಿಯಾದಲ್ಲೇ ಅತ್ಯಂತ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಮಾಡುತ್ತದೆಂದು ಹೇಳಲಾಗುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಹಲವಾರು ದೂರಸಂಪರ್ಕ ಸಂಸ್ಥೆಗಳು ಮೆಲ್ಬರ್ನ್ ಗೆ ಭೂಸದೃಶ ಹಾಗು ಮೊಬೈಲ್ ದೂರಸಂಪರ್ಕ ಸೇವೆಗಳನ್ನು ಹಾಗು ವೈರ್ ರಹಿತ ಅಂತರಜಾಲ ಸಂಪರ್ಕವನ್ನು ಒದಗಿಸುತ್ತವೆ.
ಪಟ್ಟಿಗಳು:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.