From Wikipedia, the free encyclopedia
ಮೃಣಾಲ್ ಸೇನ್ ರವರು (೧೯೨೩, ಮೇ, ೧೪-೨೦೧೮, ಡಿಸೆಂಬರ್, ೩೦) (ಬಂಗಾಳಿ:মৃনাল সেন, ಇವರ ಹೆಸರನ್ನು ಮೃಣಾಲ್ ಶೇನ್ ಎಂಬುದಾಗಿಯೂ ಬರೆಯಲಾಗುತ್ತದೆ) ಬಂಗಾಳದ ಓರ್ವ ಭಾರತೀಯ ಚಲನಚಿತ್ರ ನಿರ್ದೇಶಕರಾಗಿದ್ದಾರೆ.[2] ಈಗ ಬಾಂಗ್ಲಾದೇಶದಲ್ಲಿರುವ ಫರೀದ್ಪುರ ಪಟ್ಟಣದಲ್ಲಿ 1923ರ ಮೇ ತಿಂಗಳ 14ರಂದು ಹಿಂದೂ ಕುಟುಂಬವೊಂದರಲ್ಲಿ ಅವರು ಜನಿಸಿದರು. ಅಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಕಲ್ಕತ್ತಾಗೆ ತೆರಳಿದ ಅವರು, ಹೆಸರಾಂತ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಓರ್ವ ವಿದ್ಯಾರ್ಥಿಯಾಗಿ ಅವರು ಕಮ್ಯುನಿಸ್ಟ್ ಪಕ್ಷದ ಸಾಂಸ್ಕೃತಿಕ ವಿಭಾಗದೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಎಂದಿಗೂ ಪಕ್ಷದ ಓರ್ವ ಸದಸ್ಯರಾಗಲಿಲ್ಲವಾದರೂ, ಸಮಾಜವಾದಿ ಧೋರಣೆಯನ್ನು ಹೊಂದಿದ್ದ ಇಂಡಿಯನ್ ಪೀಪಲ್'ಸ್ ಥಿಯೇಟರ್ ಅಸೋಸಿಯೇಷನ್ (IPTA) ಜೊತೆಗಿನ ಅವರ ಸಹಯೋಗವು, ಸಾಂಸ್ಕೃತಿಕವಾಗಿ ಸಹಯೋಗವನ್ನು ಹೊಂದಿದ್ದ ಹಲವಾರು ಸಮಾನ-ಮನಸ್ಕ ಜನರ ನಿಕಟ ಸಂಪರ್ಕವನ್ನು ಅವರಿಗೆ ದೊರಕಿಸಿಕೊಟ್ಟಿತು.
Mrinal Sen মৃনাল সেন | |||||||||||||||
---|---|---|---|---|---|---|---|---|---|---|---|---|---|---|---|
Mrinal Sen | |||||||||||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಫರೀದ್ ಪುರ್, ಪೂರ್ವ ಬಂಗಾಳ, ಬ್ರಿಟಿಷ್ ಭಾರತ | ೧೪ ಮೇ ೧೯೨೩||||||||||||||
ನಿಧನ | December 30, 2018 95) [1] ಕೊಲ್ಕತ್ತಾದ ತಮ್ಮ ಸ್ವಗೃಹದಲ್ಲಿ ನಿಧನರಾದರು. | (aged||||||||||||||
|
ಚಲನಚಿತ್ರ ಕಲಾಮೀಮಾಂಸೆಯ ಕುರಿತಾದ ಪುಸ್ತಕವೊಂದನ್ನು ಅವರು ಅಕಸ್ಮಾತ್ತಾಗಿ ಓದಿದ ನಂತರ ಅವರಿಗೆ ಚಲನಚಿತ್ರಗಳಲ್ಲಿ ಆಸಕ್ತಿಯು ಶುರುವಾಯಿತು. ಆದಾಗ್ಯೂ ಅವರ ಆಸಕ್ತಿಯು ಬಹುತೇಕವಾಗಿ ಬೌದ್ಧಿಕ ಮಟ್ಟದಲ್ಲಿಯೇ ಉಳಿದುಕೊಂಡಿತು, ಮತ್ತು ಅವರು ಔಷಧೀಯ ಉತ್ಪನ್ನಗಳ ಪ್ರತಿನಿಧಿಯ ಉದ್ಯೋಗಕ್ಕೆ ಬಲವಂತವಾಗಿ ಸೇರಬೇಕಾಗಿಬಂತು. ಇದರಿಂದಾಗಿ ಅವರು ಕಲ್ಕತ್ತಾದಿಂದ ಆಚೆಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿಕೊಳ್ಳಬೇಕಾಯಿತು. ಈ ಉದ್ಯೋಗದಲ್ಲಿ ಅವರು ಬಹಳ ಕಾಲ ಮುಂದುವರಿಯಲಿಲ್ಲ. ಹೀಗಾಗಿ ನಗರಕ್ಕೆ ಮರಳಿದ ಅವರು ಕೊನೆಗೆ ಕಲ್ಕತ್ತಾದ ಚಲನಚಿತ್ರ ಸ್ಟುಡಿಯೋ ಒಂದರಲ್ಲಿ ಶ್ರವ್ಯಮಾಧ್ಯಮ ತಂತ್ರಜ್ಞನ ಉದ್ಯೋಗವೊಂದಕ್ಕೆ ಸೇರಿಕೊಂಡರು. ಈ ಸ್ಟುಡಿಯೋ ಅಂತಿಮವಾಗಿ ಅವರ ಚಲನಚಿತ್ರ ವೃತ್ತಿಜೀವನಕ್ಕೆ ಓಂಕಾರವನ್ನು ಹಾಡಿತು.
1955ರಲ್ಲಿ, ರಾತ್ಭೋರ್ ಎಂಬ ತಮ್ಮ ಮೊದಲ ಸುದೀರ್ಘ ಚಿತ್ರವನ್ನು ಮೃಣಾಲ್ ಸೇನ್ ರೂಪಿಸಿದರು. ಜನರಿಂದ ಆರಾಧಿಸಲ್ಪಡುತ್ತಿದ್ದ ಉತ್ತಮ್ ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದರಾದರೂ, ಆಗಿನ್ನೂ ಅವರೊಬ್ಬ ತಾರೆಯಾಗಿರಲಿಲ್ಲ.ಸದರಿ ಚಲನಚಿತ್ರದ ಫಲಿತಾಂಶವು ನಿರಾಶಾದಾಯಕವಾಗಿತ್ತು. ಅವರ ಮುಂದಿನ ಚಲನಚಿತ್ರವಾದ ನೀಲ್ ಆಕಾಶೆರ್ ನೀಚೆ (ಅಂಡರ್ ದಿ ಬ್ಲೂ ಸ್ಕೈ) ಅವರಿಗೆ ಸ್ಥಳೀಯ ಮಾನ್ಯತೆಯನ್ನು ಗಳಿಸಿಕೊಟ್ಟರೆ, ಅವರ ಮೂರನೇ ಚಲನಚಿತ್ರವಾದ ಬೈಶೇ ಶ್ರಾವಣ್ (ರವೀಂದ್ರನಾಥ ಟ್ಯಾಗೋರ್ ಮರಣಿಸಿದಾಗಿನ ದಿನ) ಅವರಿಗೆ ಅಂತರರಾಷ್ಟ್ರೀಯ ಪ್ರಸಿದ್ಧಿಯನ್ನು ತಂದುಕೊಟ್ಟ ಅವರ ಮೊದಲ ಚಲನಚಿತ್ರವಾಯಿತು.
ಮತ್ತೆ ಐದು ಚಲನಚಿತ್ರಗಳನ್ನು ನಿರ್ದೇಶಿಸಿದ ನಂತರ, ಭಾರತ ಸರ್ಕಾರದಿಂದ ಒದಗಿಸಲ್ಪಟ್ಟ ಒಂದು ಅತ್ಯಲ್ಪ-ಪ್ರಮಾಣದ ಬಂಡವಾಳದೊಂದಿಗೆ ಅವರು ಚಲನಚಿತ್ರವೊಂದನ್ನು ಮಾಡಿದರು. ಭುವನ್ ಶೋಮ್ (ಮಿ. ಶೋಮ್) ಎಂಬ ಈ ಚಲನಚಿತ್ರವು ಅವರನ್ನು ಅಂತಿಮವಾಗಿ ಓರ್ವ ಪ್ರಮುಖ ಚಲನಚಿತ್ರ ನಿರ್ದೇಶಕನನ್ನಾಗಿ ಪರಿಚಯಿಸಿತು. ಈ ಚಿತ್ರದಿಂದಾಗಿ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳೆರಡರಲ್ಲೂ ಪ್ರಸಿದ್ಧಿ ಪಡೆದರು. ಭುವನ್ ಶೋಮ್ ಚಿತ್ರವು ಭಾರತದಲ್ಲಿ "ಹೊಸ ಅಲೆಯ ಸಿನೆಮಾ" ಎಂಬ ಚಲನಚಿತ್ರ ಆಂದೋಲನಕ್ಕೂ ಚಾಲನೆಯನ್ನು ನೀಡಿತು.[3]
ಅವರು ಮುಂದೆ ನಿರ್ದೇಶಿಸಿದ ಚಲನಚಿತ್ರಗಳು ಕಣ್ಣಿಗೆ ಕಾಣುವ ರೀತಿಯಲ್ಲಿ ರಾಜಕೀಯ ಛಾಯೆಯನ್ನು ಹೊಂದಿದ್ದವು, ಮತ್ತು ಓರ್ವ ಮಾರ್ಕ್ಸ್ವಾದಿ ಕಲಾವಿದನಾಗಿ ಅವರಿಗೆ ಪ್ರಸಿದ್ಧಿಯನ್ನು ಗಳಿಸಿಕೊಟ್ಟವು.[4] ಅದು ಭಾರತದ ಉದ್ದಗಲಕ್ಕೂ ರಾಜಕೀಯ ಅಶಾಂತಿಯು ದೊಡ್ಡ-ಪ್ರಮಾಣದಲ್ಲಿ ಹಬ್ಬಿದ್ದ ಕಾಲವಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಕಲ್ಕತ್ತಾ ಮತ್ತು ಅದರ ಸುತ್ತಮುತ್ತಲಲ್ಲಿ, ಈಗ ನಕ್ಸಲರ ಆಂದೋಲನ ಎಂದು ಹೆಸರಾಗಿರುವ ಆಂದೋಲನಕ್ಕೆ ಈ ಅವಧಿಯು ಒಳಗಾಯಿತು. ಈ ಹಂತವನ್ನು ತತ್ಕ್ಷಣದಲ್ಲಿ ಅನುಸರಿಸಿಕೊಂಡು ಬಂದ ಚಲನಚಿತ್ರಗಳ ಒಂದು ಸರಣಿಯೆಡೆಗೆ ಅವರು ತಮ್ಮ ಗಮನವನ್ನು ವರ್ಗಾಯಿಸಿದರು; ಅಷ್ಟೇ ಅಲ್ಲ, ಹೊರಗಡೆಯ ಶತ್ರುಗಳಿಗಾಗಿ ನೋಡುವ ಬದಲಾಗಿ, ತಮ್ಮದೇ ಮಧ್ಯಮ ವರ್ಗ ಸಮಾಜದೊಳಗೆ ವ್ಯಾಪಿಸಿರುವ ಶತ್ರುಗಳ ಕಡೆಗೆ ಅವರು ಗಮನಹರಿಸಿದರು. ಇದು ಚರ್ಚಾಯೋಗ್ಯವಾದ ರೀತಿಯಲ್ಲಿ ಅವರ ಅತ್ಯಂತ ಸೃಜನಶೀಲ ಹಂತವಾಗಿತ್ತು.
ಪುನಸ್ಚದಿಂದ ಮೊದಲ್ಗೊಂಡು ಮಹಾಪೃಥಿಬಿಯವರೆಗಿನ ಮೃಣಾಲ್ ಸೇನ್ರವರ ಅನೇಕ ಚಲನಚಿತ್ರಗಳಲ್ಲಿ ಕೋಲ್ಕತಾ ನಗರವು ಎದ್ದುಕಾಣುವಂತೆ ಕಾಣಿಸಿಕೊಂಡಿದೆ. ಕೋಲ್ಕತಾ ನಗರವನ್ನು ಅವರು ಒಂದು ಪಾತ್ರವಾಗಿ, ಮತ್ತು ಒಂದು ಪ್ರೇರಣೆಯಾಗಿ ತೋರಿಸಿದ್ದಾರೆ. ಈ ನಗರದ ಜನರು, ಮೌಲ್ಯ ಪದ್ಧತಿ, ವರ್ಗ ಭಿನ್ನತೆ ಮತ್ತು ರಸ್ತೆಗಳನ್ನು ತಮ್ಮ ಚಲನಚಿತ್ರಗಳೊಳಗೆ ಅವರು ಸುಂದರವಾಗಿ ಹೆಣೆದಿದ್ದಾರೆ ಮತ್ತು ಅವರ ಎಲ್-ಡೊರಾಡೊ ಆಗಿರುವ ಕೋಲ್ಕತಾಗೆ ಸಂಬಂಧಿಸಿದಂತೆ ಪ್ರಬುದ್ಧತೆಯ ಕನಸು ಕಂಡಿದ್ದಾರೆ.[5]
ಈ ಅವಧಿಯ ಸಂದರ್ಭದಲ್ಲಿ, ಅವರು ದೊಡ್ಡ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಸ್ತಿತ್ವ ಸಿದ್ಧಾಂತ, ಅತಿ ವಾಸ್ತವಿಕತಾ ವಾದ, ಮಾರ್ಕ್ಸ್ವಾದ, ಜರ್ಮನ್ ಅಭಿವ್ಯಕ್ತಿವಾದ , ಫ್ರೆಂಚ್ ಹೊಸ ಅಲೆ ಮತ್ತು ಇಟಲಿಯ ನವ-ವಾಸ್ತವತಾವಾದ ಇವುಗಳಿಂದ ಪಡೆದ ಪರಿಕಲ್ಪನೆಗಳ ಬೆಳವಣಿಗೆಯನ್ನು ಅವರ ಚಲನಚಿತ್ರಗಳು ಶೈಲಿಗೆ ಸಂಬಂಧಿಸಿದ ಅವುಗಳ ಸೂಕ್ಷ್ಮ ವ್ಯತ್ಯಾಸಗಳಲ್ಲಿ ತೋರಿಸುತ್ತವೆ ಎಂಬುದಾಗಿ ವಾದಿಸಬಹುದಾದರೂ, ಈ ಚಲನಚಿತ್ರಗಳು ಅನೇಕವೇಳೆ ವುಡಿ ಅಲೆನ್ ಸೃಷ್ಟಿಸಿದ ಚಲನಚಿತ್ರಕ್ಕೆ ಸಮಾನಾಂತರವಾಗಿವೆ ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು] ಅಲೆನ್ನ ಚಲನಚಿತ್ರಗಳ ರೀತಿಯಲ್ಲಿಯೇ, ಸೇನ್ರ ಚಲನಚಿತ್ರಗಳು ಬಹುಮಟ್ಟಿಗೆ ಒಂದು ಸುಖಾಂತ್ಯ ಅಥವಾ ಒಂದು ನಿರ್ಣಾಯಕ ತೀರ್ಮಾನವನ್ನು ಒದಗಿಸುವುದಿಲ್ಲ (ಸೇನ್ರ ಸಮಕಾಲೀನ ಎಂದು ಪ್ರಸಿದ್ಧರಾಗಿರುವ ಸತ್ಯಜಿತ್ ರೇಯವರ ಬಹುತೇಕ ಚಲನಚಿತ್ರಗಳಿಗಿಂತ ಅವು ಭಿನ್ನವಾಗಿವೆ). ನಂತರದಲ್ಲಿ ಬಂದ ಸೇನ್ರವರ ಅನೇಕ ಚಲನಚಿತ್ರಗಳಲ್ಲಿ, ಕಥಾವಸ್ತುವಿನ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಪ್ರೇಕ್ಷಕನು ಓರ್ವ ಸಹಭಾಗಿಯಾಗುತ್ತಾನೆ. ಅದೇ ಸಮಯಕ್ಕೆ, ಅನನ್ಯ ಮತ್ತು ವಿಭಿನ್ನವಾಗಿರುವ ಅನೇಕ ತೀರ್ಮಾನಗಳನ್ನು ರೂಪಿಸುವುದರ ಒಂದು ಹಂಚಿಕೊಂಡ ಪ್ರಕ್ರಿಯೆಯೊಳಗೆ ಪ್ರೇಕ್ಷಕರನ್ನು ನಿರ್ದೇಶಕನು ಆಹ್ವಾನಿಸುತ್ತಾನೆ ಮತ್ತು ಪ್ರಚೋದಿಸುತ್ತಾನೆ. ನಿರ್ದೇಶಕನು ಇಲ್ಲಿ ದೇವರ ಪಾತ್ರವನ್ನು ನಿರ್ವಹಿಸುವುದಿಲ್ಲ, ಅವನ ಪ್ರೇಕ್ಷಕ ನಿರ್ವಹಿಸುತ್ತಾನೆ. ಪಾಶ್ಚಾತ್ಯ ವಿದ್ವಜ್ಜನರು ಮತ್ತು ಅಭಿಮಾನಿಗಳಲ್ಲಿ ಒಂದು ಏಕಪ್ರಕಾರವಾಗಿರುವ ಅಥವಾ ವಿಶ್ವಾಸಾರ್ಹ ನೆಲೆಯ ಪ್ರೇಕ್ಷಕರನ್ನು ಹೊಂದಿರುವ ಅಲೆನ್ಗಿಂತ ಭಿನ್ನವಾಗಿರುವ, ಸಮಾನಾಂತರ ಚಲನಚಿತ್ರದೊಂದಿಗಿನ ಸೇನ್ರವರ ಪ್ರಯೋಗಶೀಲತೆಯು, ಕಲ್ಕತ್ತಾ ಮೂಲದ ಪಾಶ್ಚಾತ್ಯೀಕರಿಸಲ್ಪಟ್ಟ ಬುದ್ಧಿಜೀವಿಗಳ ವರ್ಗದ ಬಹುಪಾಲನ್ನು ಒಳಗೊಂಡಿರುವ ಒಂದು ಸಮರ್ಪಿಸಿಕೊಂಡ ಪ್ರೇಕ್ಷಕವರ್ಗದ ಬಹುಭಾಗಕ್ಕೆ ಗಮನಾರ್ಹವಾಗಿ ಮೀಸಲಾಗಿರಿಸಿಕೊಂಡಿದ್ದು ವಾಸ್ತವವಾಗಿ ಆಶ್ಚರ್ಯಕರವಾಗಿ ಕಾಣುವುದಿಲ್ಲ.
1982ರಲ್ಲಿ ನಡೆದ 32ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ಜ್ಯೂರಿಯ ಓರ್ವ ಸದಸ್ಯರಾಗಿದ್ದರು.[6]
ತಮ್ಮ ಮಾಧ್ಯಮದೊಂದಿಗೆ ಪ್ರಯೋಗ ನಡೆಸುವುದನ್ನು ಮೃಣಾಲ್ ಸೇನ್ ಎಂದಿಗೂ ನಿಲ್ಲಿಸಲಿಲ್ಲ. ತಮ್ಮ ನಂತರದ ಚಲನಚಿತ್ರಗಳಲ್ಲಿ ನಿರೂಪಣಾತ್ಮಕ ಸ್ವರೂಪದಿಂದ ಆಚೆಗೆ ಸರಿಯಲು ಅವರು ಪ್ರಯತ್ನಿಸಿದರು ಮತ್ತು ಅತ್ಯಂತ ತೆಳುವಾದ ಕಥೆಯ ಎಳೆಗಳೊಂದಿಗೆ ಕೆಲಸ ಮಾಡಿದರು. ಎಂಟು ವರ್ಷಗಳ ಒಂದು ಸುದೀರ್ಘ ಅಂತರದ ನಂತರ, ತಮ್ಮ ಎಂಬತ್ತನೇ ವಯಸ್ಸಿನಲ್ಲಿ ಅವರು ಆಮಾರ್ ಭುವನ್ ಎಂಬ ತಮ್ಮ ಹೊಚ್ಚ ಹೊಸ ಚಲನಚಿತ್ರವನ್ನು 2002ರಲ್ಲಿ ಬೆಳ್ಳಿತೆರೆಗೆ ಅರ್ಪಿಸಿದರು.
ಅವರ ವೃತ್ತಿಜೀವನದ ಅವಧಿಯಲ್ಲಿ ಮೃಣಾಲ್ ಸೇನ್ರವರ ಚಲನಚಿತ್ರಗಳು ಹೆಚ್ಚೂಕಮ್ಮಿ ಎಲ್ಲಾ ಪ್ರಮುಖ ಚಲನಚಿತ್ರೋತ್ಸವಗಳಿಂದಲೂ ಪ್ರಶಸ್ತಿಗಳನ್ನು ಸ್ವೀಕರಿಸಿವೆ. ಅಂಥ ಚಿತ್ರೋತ್ಸವಗಳೆಂದರೆ: ಕ್ಯಾನೆಸ್, ಬರ್ಲಿನ್, ವೆನಿಸ್, ಮಾಸ್ಕೋ, ಕಾರ್ಲೋವಿ ವಾರಿ, ಮಾಂಟ್ರಿಯಲ್, ಚಿಕಾಗೊ, ಮತ್ತು ಕೈರೋ. ಅವರ ಚಲನಚಿತ್ರಗಳ ಸಿಂಹಾವಲೋಕನದ ಪ್ರದರ್ಶನಗಳು, ಪ್ರಪಂಚದ ಎಲ್ಲಾ ಪ್ರಮುಖ ನಗರಗಳಲ್ಲಿ ತೋರಿಸಲ್ಪಟ್ಟಿವೆ. ಹಲವಾರು ವಿಶ್ವವಿದ್ಯಾಲಯಗಳಿಂದ ಅವರು ಅನೇಕ ಗೌರವಾರ್ಥ ಡಾಕ್ಟರೇಟ್ ಪದವಿಗಳನ್ನೂ (ಡಿ.ಲಿಟ್ ಆನರಿಸ್ ಕೌಸಾ) ಸಹ ಸ್ವೀಕರಿಸಿದ್ದಾರೆ. ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ದಿ ಫಿಲ್ಮ್ ಸೊಸೈಟೀಸ್ನ ಅಧ್ಯಕ್ಷರಾಗಿಯೂ ಮೃಣಾಲ್ ಸೇನ್ ಚುನಾಯಿಸಲ್ಪಟ್ಟಿದ್ದರು. ಚಲನಚಿತ್ರ ಪ್ರಪಂಚಕ್ಕೆ ಅವರು ನೀಡಿದ ಒಂದು ಜೀವಿತಾವಧಿ ಕೊಡುಗೆಯನ್ನು ಪರಿಗಣಿಸಿ ನೀಡಲ್ಪಟ್ಟ ತಾಜ್ ಎನ್ಲೈಟನ್ ತಾರೀಫ್ ಪ್ರಶಸ್ತಿಯನ್ನು ಅವರು 2008ರಲ್ಲಿ ಸ್ವೀಕರಿಸಿದರು. 2008ರಲ್ಲಿ ನಡೆದ ಓಷಿಯನ್ನ ಸಿನಿಫೆಸ್ಟ್ ಚಲನಚಿತ್ರೋತ್ಸವದ 10ನೇ ಆವೃತ್ತಿಯಲ್ಲಿ ಅವರು ಜೀವಿತಾವಧಿ ಸಾಧನೆಗಾಗಿ ನೀಡಿದ ಪ್ರಶಸ್ತಿಯನ್ನೂ ಸ್ವೀಕರಿಸಿದರು.
೯೫ ವರ್ಷ ವಯಸ್ಸಿನ ಮೃಣಾಲ್ ಸೇನ್ ಕೊಲ್ಕತ್ತಾದ ಭೌನಿಫೋರ್ನಲ್ಲಿರುವ ತಮ್ಮ ನಿವಾಸದಲ್ಲಿ ೩೦, ಡಿಸೆಂಬರ್, ೨೦೧೮ ರಂದು, ನಿಧನರಾದರು.[7] ಅವರ ಮಗ ಕುನಾಲ್ ಸೇನ್ ಅಮೆರಿಕದಲ್ಲಿದ್ದಾರೆ.
Best Director
1969 Bhuvan Shome
1979 Ek Din Pratidin
1980 Akaler Sandhane
1984 Khandhar
Best Screenplay
1974 Padatik
1983 Akaler Sandhane
1984 Kharij
Critics Award for Best Film
1976 Mrigayaa
Best Screenplay
1984 Khandhar
Moscow International Film Festival - Silver Prize
1975 Chorus
1979 Parashuram
Karlovy Vary International Film Festival - Special Jury Prize
1977 Oka Oori Katha
ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Interfilm Award
1979 Parashuram
1981 Akaler Sandhane
Grand Jury Prize[8]
1981 Akaler Sandhane
Cannes Film Festival - Jury Prize
1983 Kharij
Valladolid International Film Festival - Golden Spike
1983 Kharij
Chicago International Film Festival - Gold Hugo
1984 Khandhar
Montreal World Film Festival - Special Prize of the Jury
1984 Khandhar
Venice Film Festival - Honorable Mention
1989 Ek Din Achanak
Cairo International Film Festival - Silver Pyramid for Best Director
2002 Aamaar Bhuvan
ಸರ್ಕಾರದಿಂದ-ನೀಡಲ್ಪಟ್ಟ ಅನೇಕ ಗೌರವಗಳಿಂದಲೂ ಅವರು ಪುರಸ್ಕೃತರಾಗಿದ್ದಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.