ಮುಟ್ಟಿನ ಬಟ್ಟೆ
From Wikipedia, the free encyclopedia
From Wikipedia, the free encyclopedia
ನೈರ್ಮಲ್ಯದ ಕರವಸ್ತ್ರ, ನೈರ್ಮಲ್ಯ ಟವಲ್, ಸ್ಯಾನಿಟರಿ ಪ್ಯಾಡ್, ಮುಟ್ಟಿನ ಪ್ಯಾಡ್, ಅಥವಾ ಪ್ಯಾಡ್ ಎನ್ನುವುದು ರಕ್ತ ಹೀರಿಕೊಳ್ಳಲು ಮಹಿಳೆಯರು ಧರಿಸಿರುವ ವಸ್ತುವಾಗಿದೆ. ಯೋನಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ಲೊಚಿಯ (ಜನನ ನಂತರದ ರಕ್ತಸ್ರಾವ), ಗರ್ಭಪಾತದ ನಂತರ ಅಥವಾ ಯಾವುದೇ ಇತರ ಪರಿಸ್ಥಿತಿಯಲ್ಲಿ ಯೋನಿಯಿಂದ ರಕ್ತದ ಹರಿವನ್ನು ಹೀರಿಕೊಳ್ಳುವ ಅವಶ್ಯಕತೆಯಿದೆ.[1]
ಬೇರೆ ಬೇರೆ ಕಾಲಘಟ್ಟಗಳಲ್ಲಿ ಮಹಿಳೆಯರು ವಿವಿಧ ರೂಪಗಳಲ್ಲಿ ಮುಟ್ಟಿನ ರಕ್ಷಣೆ ಮಾಡುತ್ತಿದ್ದರು. ೪ನೆಯ ಶತಮಾನದಲ್ಲಿ ಜೀವಿಸಿದ್ದ ಗ್ರೀಕ್ ಖಗೋಳ ಶಾಸ್ತ್ರಜ್ಞೆ ಹೈಪತಿಯ ಎಂಬಾಕೆ ತನ್ನನ್ನು ಪೀಡಿಸುತ್ತಿದ್ದ ವ್ಯಕ್ತಿ ಒಬ್ಬನ ಮೇಲೆ ತಾನು ಬಳಸಿದ್ದ ಮುಟ್ಟು ಬಟ್ಟೆಯನ್ನು ಎಸೆದಿದ್ದ ದಾಖಲೆ ಇದೆ. ೧೦ನೆಯ ಶತಮಾನದಲ್ಲಿ, ಸೂಡಾದಲ್ಲಿ ಮುಟ್ಟು ಬಟ್ಟೆಯನ್ನು ಬಳಸಿದ್ದ ಉಲ್ಲೇಖವಿದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಮುಟ್ಟಿನ ಹರಿವನ್ನು ಹಿಡಿಯಲು ಮಡಚಿದ ಹಳೆಯ ಬಟ್ಟೆಗಳನ್ನು ಬಳಸಲಾಗುತ್ತದೆ.[2]
ಋತುಚಕ್ರದ ಹರಿವನ್ನು ಹೀರಿಕೊಳ್ಳುವ ಸಮಯದಲ್ಲಿ ಮುಟ್ಟಿನ ಬಟ್ಟೆಯನ್ನು ಸಹಾಯವಾಗಿ ಧರಿಸಲಾಗುತ್ತದೆ.
ಋತುಚಕ್ರದ ಪ್ಯಾಡ್ಗಳನ್ನು ವಿವಿಧ ರೀತಿಯ ವಸ್ತುಗಳಿಂದ ತಯಾರಿಸಲಾಗುತ್ತದೆ, ಶೈಲಿ, ಮೂಲದ ದೇಶ, ಮತ್ತು ಬ್ರಾಂಡ್ನ ಮೇಲೆ ಅವಲಂಬಿಸಿರುತ್ತದೆ.
ಇದನ್ನು ೨ ಬಗೆಯಲ್ಲಿ ಉಪಯೋಗಿಸುತ್ತಾರೆ. ಒಂದು, ಯೋನಿ ಮತ್ತು ಮಹಿಳೆಯ ಒಳಭಾಗದ ನಡುವೆ ಬಾಹ್ಯವಾಗಿ ಧರಿಸಲಾಗುತ್ತದೆ. ಮತ್ತೊಂದು, ಯೋನಿಯ ಒಳಗೆ ಧರಿಸಲಾಗುತ್ತದೆ- ಉದಾಹರಣೆಗೆ, ಟ್ಯಾಂಪೂನ್ಗಳು, ಮುಟ್ಟಿನ ಕಪ್ಗಳು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.