From Wikipedia, the free encyclopedia
ಮಳವಳ್ಳಿ ಮಳವಳ್ಳಿ- 571430 ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಆಗ್ನೇಯ್ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ,ಪೂರ್ವದಲ್ಲಿ ಕನಕಪುರ,ಆಗ್ನೇಯದಲ್ಲಿ ಕೊಳ್ಳೇಗಾಲ,ವಾಯುವ್ಯದಲ್ಲಿ ಮಂಡ್ಯ,ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ- ಈ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ ೮೦೪ ಚ.ಕಿಮೀ.
ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. ೧೯೩೯ ಜುಲೈ ೧ ರಂದು ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು ೭೬೨ ಮೀಟರ್ ನಿಂದ ೯೧೪ ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು ೩೦ ಕಿಮೀ ದೂರದಲ್ಲಿದೆ,ಮೈಸೂರಿನಿಂದ ೪೨ ಕಿಮೀ ಮತ್ತು ಬೆಂಗಳೂರಿನಿಂದ ೧00 ಕಿಮೀ ದೂರದಲ್ಲಿದೆ. ಮದ್ದೂರಿನಿಂದ ೨೫ ಕಿಲೋ ಮೀಟರ್ ದೂರದಲ್ಲಿದೆ.
ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.
ವ.ಕು.ಹು.ಚ.
ಬೊಪ್ಪೆಗೌಡನಪುರ : ಐತಿಹಾಸಿಕ ಮತ್ತು ಜನಪದ ಪ್ರಮುಖ ಸ್ಥಳ. ಇದು ಹೋಬಳಿ ಕೇಂದ್ರವಾಗಿದ್ದು, ಪ್ರವಾಸಿ ಸ್ಥಳವಾದ ತಲಕಾಡಿ ಮತ್ತು ಮುಡುಕುತೊರೆಗೆ ಸಮೀಪದಲ್ಲಿದೆ.
[[Category :ಮಂಡ್ಯ ಜಿಲ್ಲೆಯ ತಾಲೂಕು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.