ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE )(ಹಿಂದಿ:राष्ट्रीय शेअर बाज़ार Rashtriya Śhare Bāzaār)(ರಾಷ್ಟ್ರೀಯ ಷೇರು ವಿನಿಮಯ), ಭಾರತದ ಮುಂಬಯಿನಲ್ಲಿ ಸ್ಥಾಪಿತವಾಗಿರುವ ಒಂದು ಷೇರು ವಿನಿಮಯ ಕೇಂದ್ರ. ಮಾರುಕಟ್ಟೆ ಬಂಡವಾಳೀಕರಣದಲ್ಲಿ ಇದು ವಿಶ್ವದಲ್ಲೇ ೧೦ನೇ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವಾಗಿದೆ ಹಾಗು ಸಾಮಾನ್ಯ ಷೇರುಗಳು ಹಾಗು ಮೂಲ ವ್ಯಾಪಾರ ಎರಡಕ್ಕೂ ಪ್ರತಿನಿತ್ಯದ ವಹಿವಾಟಿನ ಮೊತ್ತ ಹಾಗು ವ್ಯವಹಾರಗಳ ಸಂಖ್ಯೆಯಿಂದ ಭಾರತದ ಅತ್ಯಂತ ದೊಡ್ಡ ಕೇಂದ್ರವೆನಿಸಿದೆ.[2] NSE ಸುಮಾರುUS$ ೧.೫೯ ಲಕ್ಷ ಕೋಟಿಯಷ್ಟು ಮಾರುಕಟ್ಟೆ ಬಂಡವಾಳೀಕರಣವನ್ನು ಹೊಂದಿರುವುದರ ಜೊತೆಗೆ ಡಿಸೆಂಬರ್ ೨೦೧೦ರ ಹೊತ್ತಿಗೆ NSEಯಲ್ಲಿ ೧,೫೫೨ಕ್ಕೂ ಅಧಿಕ ಸಂಸ್ಥೆಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.[3] ಇತರ ಹಲವಾರು ವಿನಿಮಯ ಕೇಂದ್ರಗಳು ಅಸ್ತಿತ್ವದಲ್ಲಿದ್ದರೂ, NSE ಹಾಗು ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಭಾರತದ ಅತ್ಯಂತ ಪ್ರಮುಖ ಷೇರು ವಿನಿಮಯ ಕೇಂದ್ರಗಳಾಗಿವೆ, ಜೊತೆಗೆ ಇವುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಷೇರು ವಹಿವಾಟು ನಡೆಯುತ್ತದೆ. NSEಯ ಪ್ರಮುಖ ಬೆಲೆ ಸೂಚ್ಯಂಕವೆಂದರೆ S&P CNX ನಿಫ್ಟಿ, ಇದು NSE NIFTY (ನಿಫ್ಟಿ) ಎಂದು ಪರಿಚಿತವಾಗಿದೆ(ರಾಷ್ಟ್ರೀಯ ಷೇರು ವಿನಿಮಯ ಫಿಫ್ಟಿ), ಇದು ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಒತ್ತು ನೀಡಲಾಗಿರುವ ಐವತ್ತು ಪ್ರಮುಖ ಷೇರುಗಳ ಬೆಲೆ ಸೂಚ್ಯಂಕವಾಗಿದೆ.
NSE ಪ್ರಮುಖ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ವಿಮೆ ಸಂಸ್ಥೆಗಳು ಹಾಗು ಭಾರತದ ಇತರ ಮಧ್ಯವರ್ತಿ ಹಣಕಾಸು ಸಂಸ್ಥೆಗಳ ಪರಸ್ಪರ ಒಡೆತನವನ್ನು ಹೊಂದಿದೆ ಆದರೆ ಇದರ ಸ್ವಾಮ್ಯ ಹಾಗು ನಿರ್ವಹಣೆಯು ಪ್ರತ್ಯೇಕ ಅಸ್ತಿತ್ವಗಳಾಗಿ ಕಾರ್ಯನಿರ್ವಹಿಸುತ್ತವೆ.[4] ಇಲ್ಲಿ ಕಡೇಪಕ್ಷ ಇಬ್ಬರು ವಿದೇಶಿ ಬಂಡವಾಳ ಹೂಡಿಕೆದಾರರಿದ್ದಾರೆ, NYSE ಯುರೋನೆಕ್ಸ್ಟ್ ಹಾಗು ಗೋಲ್ಡ್ಮನ್ ಸಚ್ಸ್, ಇವರು NSEಯಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.[5]As of 2006[update], ಒಟ್ಟಾರೆ ೨೭೯೯ NSE VSAT ಟರ್ಮಿನಲ್ ಗಳು, ಭಾರತದಾದ್ಯಂತ ೧೫೦೦ ನಗರಗಳ ವ್ಯಾಪ್ತಿಯನ್ನು ಹೊಂದಿವೆ.[6] ಸಾಮಾನ್ಯ ಷೇರುಗಳ ವಹಿವಾಟಿನ ಸಂಖ್ಯಾದೃಷ್ಟಿಯಿಂದ NSE ವಿಶ್ವದ ಮೂರನೇ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವೆನಿಸಿದೆ.[7] ೧೬.೬%ರಷ್ಟು ದಾಖಲೆ ಬೆಳವಣಿಗೆಯೊಂದಿಗೆ ಇದು ವಿಶ್ವದ ಎರಡನೇ ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಷೇರು ವಿನಿಮಯ ಕೇಂದ್ರವಾಗಿದೆ.[8]
ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು, ಭಾರತ ಸರ್ಕಾರದ ಆಜ್ಞೆಯ ಮೇರೆಗೆ ಪ್ರಮುಖ ಹಣಕಾಸು ಸಂಸ್ಥೆಗಳು ಸ್ಥಾಪನೆ ಮಾಡಿದವು, ಜೊತೆಗೆ ಇದನ್ನು ನವೆಂಬರ್ ೧೯೯೨ರಲ್ಲಿ ತೆರಿಗೆ ಪಾವತಿ ಸಂಸ್ಥೆಯಾಗಿ ಸಂಘಟಿಸಲಾಯಿತು. ಏಪ್ರಿಲ್ ೧೯೯೩ರಲ್ಲಿ, ಸೆಕ್ಯೂರಿಟಿಸ್ ಕಾಂಟ್ರಾಕ್ಟ್ಸ್(ರೆಗ್ಯುಲೇಶನ್)ಆಕ್ಟ್, ೧೯೫೬ರ ಅಡಿಯಲ್ಲಿ ಷೇರು ವಿನಿಮಯ ಕೇಂದ್ರವೆಂದು ಮನ್ನಣೆ ನೀಡಲಾಯಿತು. NSE, ಜೂನ್ ೧೯೯೪ರಿಂದ ಹೋಲ್ ಸೇಲ್ ಡೆಟ್ ಮಾರ್ಕೆಟ್(WDM)(ಸಗಟು ಸಾಲ ಮಾರುಕಟ್ಟೆ) ವಲಯದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. NSEಯ ಬಂಡವಾಳ ಮಾರುಕಟ್ಟೆ(ಸಾಮಾನ್ಯ ಷೇರುಗಳು)ವಲಯವು ನವೆಂಬರ್ ೧೯೯೪ರಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದರೆ, ಮೂಲ ವ್ಯಾಪಾರ ವಲಯದಲ್ಲಿ ಜೂನ್ ೨೦೦೦ದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.
ಭಾರತದ ಬಂಡವಾಳ ಹಾಗು ಹಣಕಾಸು ಮಾರುಕಟ್ಟೆಗಳ ಆಧುನಿಕೀಕರಣದಲ್ಲಿ NSE ಮುಂಚೂಣಿಯಲ್ಲಿದೆ, ಹಾಗು ಇದು ಪ್ರವರ್ತನಗೊಳಿಸಿದ ಪ್ರಯತ್ನಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
ಭಾರತದಲ್ಲಿ ವ್ಯಾಪಾರ ಭದ್ರತೆಗಳಿಗಾಗಿ ಪರಿಚಯಿಸಲಾದ ಮೊದಲ ರಾಷ್ಟ್ರೀಯ, ಅನಾಮಕ, ವಿದ್ಯುತ್ಚ್ಚಾಲಿತ ಲಿಮಿಟ್ ಆರ್ಡರ್ ಬುಕ್(LOB)ನ್ನು ಹೊಂದಿದ ಕೇಂದ್ರವಾಗಿದೆ. NSEಯ ಯಶಸ್ಸಿನ ನಂತರ, ಅಸ್ತಿತ್ವದಲ್ಲಿದ್ದ ಮಾರುಕಟ್ಟೆ ಹಾಗು ಹೊಸ ಮಾರುಕಟ್ಟೆ ವ್ಯವಸ್ಥೆಗಳು "NSE" ಮಾದರಿಯನ್ನು ಅನುಸರಿಸುತ್ತಿವೆ.
ಭಾರತದಲ್ಲಿ ಮೊದಲ ಹಣತೀರುವೆ ಸಂಸ್ಥೆ "ನ್ಯಾಷನಲ್ ಸೆಕ್ಯೂರಿಟೀಸ್ ಕ್ಲಿಯರಿಂಗ್ ಕಾರ್ಪೋರೇಶನ್ ಲಿಮಿಟೆಡ್" ನ ಸ್ಥಾಪನೆ. ಭಾರತದಲ್ಲಿ NSCCL, ಆ ಸ್ಥಳದಲ್ಲೇ ಮಾಡಲಾಗುವ ಸಾಮಾನ್ಯ ಷೇರು ಮಾರುಕಟ್ಟೆ ವ್ಯವಹಾರಗಳಲ್ಲಿ ಹೊಸ ಬದಲಾವಣೆಯನ್ನು ತಂದು ಹೆಗ್ಗುರುತನ್ನು ಸ್ಥಾಪಿಸಿದೆ(ಹಾಗು ನಂತರ, ಮೂಲ ಮಾರುಕಟ್ಟೆಯಲ್ಲಿ ಬದಲಾವಣೆಯನ್ನು ತಂದಿದೆ)
ಭಾರತದ ಮೊದಲ ಭಂಡಾರ, ನ್ಯಾಷನಲ್ ಸೆಕ್ಯೂರಿಟಿಸ್ ಡೆಪಾಸಿಟರಿ ಲಿಮಿಟೆಡ್ ನ್ನು ಸ್ಥಾಪಿಸುವುದರ ಜೊತೆಗೆ ಅದಕ್ಕೆ ಸಹ-ಉತ್ತೇಜನ ನೀಡಿಕೆ[9]
S&P CNX ನಿಫ್ಟಿಯ ಸ್ಥಾಪನೆ.
NSE, ಫೆಬ್ರವರಿ ೨೦೦೦ದಲ್ಲಿ ಅಂತರಜಾಲ ವ್ಯವಹಾರವನ್ನು ಆರಂಭಿಸಿದ ಮೊದಲ ಕೇಂದ್ರವೆನಿಸಿತು, ಇದು NSEಯ ದಳ್ಳಾಳಿ ಸಮುದಾಯದಲ್ಲಿ ವ್ಯಾಪಕ ಜನಪ್ರಿಯತೆಗೆ ದಾರಿ ಮಾಡಿಕೊಟ್ಟಿತು.
೧೯೯೬ರಲ್ಲಿ ಭಾರತದಲ್ಲಿ ಸಾಮಾನ್ಯ ಷೇರು ಸೂಚ್ಯಂಕದ ಮೇಲೆ ಮೂಲ ವಹಿವಾಟಿನ ವಿನಿಮಯಕ್ಕೆ ಪ್ರಸ್ತಾಪಿಸಿದ ಮೊದಲ ವಿನಿಮಯ ಕೇಂದ್ರವೆನಿಸಿತು. ನಾಲ್ಕು ವರ್ಷಗಳ ಸತತ ಯೋಜನೆ ಹಾಗು ನಿಯಂತ್ರಕ ಚರ್ಚೆ ಹಾಗು ಸೂತ್ರನಿರೂಪಣಗಳ ನಂತರ, NSEಗೆ ಸಾಮಾನ್ಯ ಷೇರುಗಳ ಮೂಲ ವಹಿವಾಟನ್ನು ಆರಂಭಿಸಲು ಅನುಮತಿ ನೀಡಲಾಯಿತು
ಭಾರತದ ಮೊದಲ ಹಾಗು ಏಕೈಕ GOLD ETFಗಳ ವ್ಯಾಪಾರ ವಿನಿಮಯ ಕೇಂದ್ರ(ವಹಿವಾಟಿನ ಹಣದ ವಿನಿಮಯ).
NSE, CNBC-TV೧೮ನ ಸಹಯೋಗದೊಂದಿಗೆ NSE-CNBC-TV೧೮ ಮಾಧ್ಯಮ ಕೇಂದ್ರವನ್ನೂ ಸಹ ಸ್ಥಾಪನೆ ಮಾಡಿದೆ.
೧೯೯೯ರಲ್ಲಿ ಸ್ಥಾಪನೆಯಾದ NSE.IT ಲಿಮಿಟೆಡ್, ೧೦೦% ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಉಪಾಂಗವಾಗಿದೆ. ಒಂದು ವರ್ಟಿಕಲ್ ಸ್ಪೆಷಲಿಸ್ಟ್ ಎಂಟರ್ಪ್ರೈಸ್, NSE.IT ಪ್ರತಿಯೊಂದು ಭಾಗದಲ್ಲೂ ಮಾಹಿತಿ ತಂತ್ರಜ್ಞಾನ(IT) ಉತ್ಪನ್ನಗಳು, ಸಲ್ಯೂಷನ್ಸ್ ಹಾಗು ಸೇವೆಗಳನ್ನು ಒದಗಿಸುತ್ತದೆ.
ಪ್ರಸಕ್ತದಲ್ಲಿ, NSE ಬಂಡವಾಳ ಮಾರುಕಟ್ಟೆಯ ಈ ಕೆಳಕಂಡ ಪ್ರಮುಖ ವಲಯಗಳನ್ನು ಒಳಗೊಂಡಿದೆ:
ಸಾಮಾನ್ಯ ಷೇರು
ಮುಮ್ಮಾರಿಕೆ ಒಪ್ಪಂದಗಳು ಹಾಗು ಹಣಕೊಟ್ಟು ಪಡೆದ ಹಕ್ಕುಗಳು
ಬಿಡಿ ಸಾಲ ಮಾರುಕಟ್ಟೆ
ಸಗಟು ಸಾಲ ವ್ಯವಸ್ಥೆ
ಚಲಾವಣಾ ಹಣದ ಮುಮ್ಮಾರಿಕೆ
ಮ್ಯೂಚುಯಲ್ ನಿಧಿ
ಷೇರುಗಳನ್ನು ಸಾಲ ನೀಡುವುದು & ಸಾಲ ಪಡೆಯುವುದು
ಆಗಸ್ಟ್ ೨೦೦೮ರಲ್ಲಿ, NSE USD INRನಲ್ಲಿ ಜಾರಿಗೆ ತಂದ ಚಲಾವಣಾ ಹಣದ ಮುಮ್ಮಾರಿಕೆಯೊಂದಿಗೆ, ಚಲಾವಣಾ ಹಣದ ಮೂಲ ವಹಿವಾಟನ್ನು ಭಾರತದಲ್ಲಿ ಪರಿಚಯಿಸಲಾಯಿತು. ಪ್ರಸಕ್ತದಲ್ಲಿ ಇದು ಯುರೋ, ಪೌಂಡ್ & ಯೆನ್ ಗೂ ಸಹ ಚಲಾವಣಾ ಹಣದ ಮುಮ್ಮಾರಿಕೆಯನ್ನು ಜಾರಿಗೆ ತಂದಿದೆ. ಆಗಸ್ಟ್ ೩೧ ೨೦೦೯ರಲ್ಲಿ NSE ಭಾರತದಲ್ಲಿ ಮೊದಲ ಬಾರಿಗೆ ಚಲಾವಣಾ ಹಣದ ಮುಮ್ಮಾರಿಕೆಗಳು ಜಾರಿಗೆ ಬಂದ ಒಂದು ವರ್ಷದ ನಂತರ ಬಡ್ಡಿ ದರದ ಮುಮ್ಮಾರಿಕೆಗಳನ್ನು ಪರಿಚಯಿಸಿತು.
NSE, ೩೧ ಆಗಸ್ಟ್ ೨೦೦೯ರಲ್ಲಿ SEBI-RBI ಸಮಿತಿಯು ಶಿಫಾರಸು ಮಾಡಿದ ಬಡ್ಡಿ ದರದ ಮುಮ್ಮಾರಿಕೆಗಳಿಗೆ ಅಂಗೀಕಾರ ಪಡೆದ ಮೊದಲ ಷೇರು ವಿನಿಮಯ ಕೇಂದ್ರವಾಗಿದೆ, ಮುಮ್ಮಾರಿಕೆಗಳ ಒಪ್ಪಂದವು ೭%ನಂತೆ ೧೦ ವರ್ಷದ GOI ಬಾಂಡ್(NOTIONAL)ನ್ನು ಆಧರಿಸಿದೆ, ಇದರ ವಾಯಿದೆಯು ಮೂರು ತಿಂಗಳಿಗೊಮ್ಮೆ ಮುಗಿಯುವಂತೆ ಜಾರಿಗೆ ತರಲಾಯಿತು.
[10]
ಸಾಧಾರಣವಾಗಿ NSEಯ ವಹಿವಾಟಿನ ಅವಧಿಯು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ೯:೧೫ ರಿಂದ ಮಧ್ಯಾಹ್ನ ೩:೩೦ರವರೆಗೆ ಶನಿವಾರಗಳು, ಭಾನುವಾರಗಳು ಹಾಗು ವಿನಿಮಯ ಕೇಂದ್ರವು ಪೂರ್ವಭಾವಿಯಾಗಿ ಘೋಷಿಸಿದ ಅಧಿಕೃತ ರಜಾದಿನಗಳನ್ನು(ಅಥವಾ ಭಾರತ ಸರ್ಕಾರವು ಘೋಷಿಸಿದ ರಜಾದಿನಗಳು) ಹೊರತುಪಡಿಸಿ ವಾರದ ಎಲ್ಲ ದಿವಸಗಳು ನಡೆಯುತ್ತದೆ.[11] BSEಯ(ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್) ಸಹಯೋಗದೊಂದಿಗೆ ವಿನಿಮಯ ಕೇಂದ್ರವು, ವಹಿವಾಟಿನ ಅವಧಿಯನ್ನು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ೯.೦೦ ಸಂಜೆ ೫.೦೦ವರೆಗೆ ಪರಿಷ್ಕರಿಸಲು ಚಿಂತಿಸುತ್ತಿದೆ.
ವ್ಯವಸ್ಥೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪರೀಕ್ಷೆಯನ್ನು ನಡೆಸಲಾಯಿತು ಜೊತೆಗೆ ಪ್ರಸ್ತಾಪಿಸಲಾದ ಹೊಸ ಅವಧಿಯ ಬಗ್ಗೆ ಭಾರತದ ಎಲ್ಲ ದಳ್ಳಾಳಿಗಳಿಂದ ಸಲಹೆಗಳು, ಸೂಚನೆ ಹಾಗು ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಯಿತು. ಹಾಗು ಅಂತಿಮವಾಗಿ ೧೮ ನವೆಂಬರ್ ೨೦೦೯ರಲ್ಲಿ ನಿಯಂತ್ರಕರು, ಏಷಿಯಾದ ಸುದೀರ್ಘ ವಹಿವಾಟಿನ ಅವಧಿಯನ್ನು ವಿಸ್ತರಿಸುವ ತಮ್ಮ ಮಹತ್ವಾಕಾಂಕ್ಷಿ ಉದ್ದೇಶವನ್ನು ತಮ್ಮ ಸದಸ್ಯರ ಬಲವಾದ ವಿರೋಧದ ಕಾರಣಕ್ಕೆ ಕೈಬಿಟ್ಟರು.
೧೬ ಡಿಸೆಂಬರ್ ೨೦೦೯ರಲ್ಲಿ, NSE, ೧೮ ಡಿಸೆಂಬರ್ ೨೦೦೯ರಿಂದ ಮಾರುಕಟ್ಟೆ ವ್ಯವಹಾರವು ಪೂರ್ವಭಾವಿಯಾಗಿ ಅಂದರೆ ೯:೦೦ರಿಂದ ಆರಂಭಗೊಳ್ಳಲಿದೆಯೆಂದು ಪ್ರಕಟಿಸಿತು. ಈ ರೀತಿಯಾಗಿ NSEಯ ವಹಿವಾಟಿನ ಅವಧಿಯು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ೯:೦೦ರಿಂದ ಮಧ್ಯಾಹ್ನ ೩:೩೦.
ಆದಾಗ್ಯೂ, ೧೭ ಡಿಸೆಂಬರ್ ೨೦೦೯ರಲ್ಲಿ, ದಳ್ಳಾಳಿಗಳ ಬಲವಾದ ವಿರೋಧದ ನಂತರ, ವಿನಿಮಯ ಕೇಂದ್ರವು ವಹಿವಾಟಿನ ಅವಧಿಯ ಬದಲಾವಣೆಯನ್ನು ೪ ಜನವರಿ ೨೦೧೦ರವರೆಗೂ ಮುಂದೂಡಲು ನಿರ್ಧರಿಸಿತು.
೪ ಜನವರಿ ೨೦೧೦ರಿಂದ NSEಯ ಹೊಸ ಮಾರುಕಟ್ಟೆ ಅವಧಿಯು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ ೯:೦೦ರಿಂದ ಮಧ್ಯಾಹ್ನ ೩:೩೦ರವರೆಗೆ.
೧೭ ಅಕ್ಟೋಬರ್ ೨೦೧೦ರಿಂದ nseಯ ಹೊಸ ಮಾರುಕಟ್ಟೆ ವ್ಯವಹಾರವು ಬೆಳಿಗ್ಗೆ ೯ರಿಂದ ೯:೧೫ ಆರಂಭಕ್ಕೆ ಮುಂಚಿನ ಅವಧಿ
ಸಾಮಾನ್ಯ ವಹಿವಾಟಿನ ಅವಧಿ ಬೆಳಿಗ್ಗೆ ೯:೧೫ರಿಂದ ಮಧ್ಯಾಹ್ನ ೩:೩೦ರವರೆಗೆ
NSE, ಇಂಡಿಯಾ ಇಂಡೆಕ್ಸ್ ಸರ್ವೀಸಸ್ & ಪ್ರಾಡಕ್ಟ್ಸ್ ಲಿಮಿಟೆಡ್(IISL) ಎಂಬ ಸೂಚ್ಯಂಕ ಸೇವಾ ಸಂಸ್ಥೆಯನ್ನೂ ಸಹ ಸ್ಥಾಪಿಸಿದೆ ಜೊತೆಗೆ ಹಲವಾರು ಷೇರು ಸೂಚ್ಯಂಕಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಈ ಕೆಳಕಂಡವುಗಳು ಸೇರಿವೆ:[12]
GoldBees - ಬಂಗಾರದ ಬೆಲೆಯನ್ನು ಆಧರಿಸಿದ ETF. ಬಂಗಾರದ ಬೆಲೆಯನ್ನು ಗುರುತಿಸುತ್ತದೆ. ಪ್ರತಿ ಏಕಮಾನವು ಒಂದು ಗ್ರಾಂ ಚಿನ್ನಕ್ಕೆ ಸಮನಾಗಿರುತ್ತದೆ ಹಾಗು ಒಂದು ಗ್ರಾಂ ಬಂಗಾರದ ಬೆಲೆಯನ್ನು ಬೇರ್(ಪತ್ರಗಳ ಬೆಲೆ ಮುಂದೆ ತಗ್ಗಬಹುದೆಂದೂ, ಅವನ್ನು ಆ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಕೊಳ್ಳಬಹುದೆಂದೂ ಊಹಿಸಿ, ಅವನ್ನು ಮುಂದೆ ವಶ ಮಾಡುವ ಕರಾರಿನ ಮೇಲೆ ಮತ್ತೊಬ್ಬನಿಗೆ ಈಗಾಗಲೇ ಮಾರಿ, ಈ ಉಪಾಯದಿಂದ ಬೆಲೆ ತಗ್ಗಿಸಲು ಪ್ರಯತ್ನಿಸುವುದು) ಮಾಡುವುದು.
BankBees - CNX ಬ್ಯಾಂಕ್ ನ ಸೂಚ್ಯಂಕವನ್ನು ಗುರುತಿಸುವ ETF
NSE, ತನ್ನ NSE ಸರ್ಟಿಫಿಕೇಶನ್ ಇನ್ ಫೈನಾಂಷಿಯಲ್ ಮಾರ್ಕೆಟ್ಸ್(NCFM) ನ ಅಡಿಯಲ್ಲಿ ಆನ್ಲೈನ್ ಪರೀಕ್ಷೆ ಹಾಗು ಪ್ರಮಾಣೀಕರಣ ಪತ್ರಗಳನ್ನೂ ಸಹ ನೀಡುತ್ತದೆ . ಪ್ರಸಕ್ತದಲ್ಲಿ, ೧೯ ತರಬೇತಿಗಳಿಗೆ ಪ್ರಮಾಣೀಕರಣಗಳನ್ನು ನೀಡಲಾಗುತ್ತದೆ, ಇದು ಹಣಕಾಸು ಹಾಗು ಬಂಡವಾಳ ಮಾರುಕಟ್ಟೆಗಳ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ. NSEಯ ಶಾಖೆಗಳು ಭಾರತದಾದ್ಯಂತ ಎಲ್ಲ ಭಾಗಗಳಲ್ಲೂ ಸ್ಥಿತವಾಗಿದೆ.
ನವೆಂಬರ್ ೧೯೯೨ರಲ್ಲಿ ಸಂಘಟನೆ
ಏಪ್ರಿಲ್ ೧೯೯೩ರಲ್ಲಿ ಷೇರು ವಿನಿಮಯ ಕೇಂದ್ರವಾಗಿ ಮನ್ನಣೆ
ಮೇ ೧೯೯೩ರಲ್ಲಿ ವ್ಯಾಪಾರ ಯೋಜನೆಗೆ ಕ್ರಮಬದ್ಧ ಪ್ರತಿಪಾದನೆ
ಜೂನ್ ೧೯೯೪ರಲ್ಲಿ ಹೋಲ್ ಸೇಲ್ ಡೆಟ್ ಮಾರುಕಟ್ಟೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು
ನವೆಂಬರ್ ೧೯೯೪ರಲ್ಲಿ ಬಂಡವಾಳ ಮಾರುಕಟ್ಟೆ (ಸಾಮಾನ್ಯ ಷೇರುಗಳು) ವಲಯವು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು
ಮಾರ್ಚ್ ೧೯೯೫ರಲ್ಲಿ ಇನ್ವೆಸ್ಟರ್ ಗ್ರೀವಿಯನ್ಸ್ ಸೆಲ್ ನ ಸ್ಥಾಪನೆ
ಏಪ್ರಿಲ್ ೧೯೯೫ರಲ್ಲಿ NSCCLನ ಸ್ಥಾಪನೆ, ಇದು ಮೊದಲ ಹಣತೀರುವೆ ಸಂಸ್ಥೆ
ಜೂನ್ ೧೯೯೫ರಲ್ಲಿ ಎಲ್ಲ ವ್ಯಾಪಾರಿ ಸದಸ್ಯರಿಗೆ ಕೇಂದ್ರಿಕೃತ ವಿಮಾರಕ್ಷಣೆಯ ಪರಿಚಯ
ಜುಲೈ ೧೯೯೫ ಹೂಡಿಕೆದಾರ ರಕ್ಷಣಾ ನಿಧಿಯ ಸ್ಥಾಪನೆ
ಅಕ್ಟೋಬರ್ ೧೯೯೫ರಲ್ಲಿ ರಾಷ್ಟ್ರದ ಅತ್ಯಂತ ದೊಡ್ಡ ಷೇರು ವಿನಿಮಯ ಕೇಂದ್ರವೆಂಬ ಹೆಗ್ಗಳಿಕೆ
ಏಪ್ರಿಲ್ ೧೯೯೬ರಲ್ಲಿ NSCCLನಿಂದ ಹಣತೀರುವಿಕೆ ಹಾಗು ಸಾಲದ ಮೊಬಲಗನ್ನು ನಿರ್ಧರಿಸಿ ಹಂಚಿಕೆಯ ಆರಂಭ
ಏಪ್ರಿಲ್ ೧೯೯೬ರಲ್ಲಿ S&P CNX ನಿಫ್ಟಿಯನ್ನು ಜಾರಿಗೆ ತರಲಾಯಿತು
ಜೂನ್ ೧೯೯೬ರಲ್ಲಿ ಸೆಟಲ್ಮೆಂಟ್ ಗ್ಯಾರಂಟಿ ಫಂಡ್ ನ ಸ್ಥಾಪನೆ
ನವೆಂಬರ್ ೧೯೯೬ರಲ್ಲಿ ನ್ಯಾಷನಲ್ ಸೆಕ್ಯೂರಿಟಿಸ್ ಡಿಪಾಸಿಟರಿ ಲಿಮಿಟೆಡ್ ನ ಸ್ಥಾಪನೆ, ಇದು ಭಾರತದ ಮೊದಲ ಭಂಡಾರವಾಗಿದ್ದು, NSE ಇದಕ್ಕೆ ಸಹ-ಉತ್ತೇಜನ ನೀಡಿತು
ನವೆಂಬರ್ ೧೯೯೬ರಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದಿಂದ ಅತ್ಯುತ್ತಮ IT ಯೂಸೇಜ್(ಬಳಕೆ) ಪ್ರಶಸ್ತಿ
ಡಿಸೆಂಬರ್ ೧೯೯೬ರಲ್ಲಿ ಡಿಮೆಟಿರಿಯಲೈಸ್ ಸೆಕ್ಯೂರಿಟಿ (ಭದ್ರತೆಗೆ ಒಡೆತನವನ್ನು ಪ್ರತಿನಿಧಿಸುವ ಒಂದು ಭೌತ ಪ್ರಮಾಣೀಕರಣ) ವ್ಯಾಪಾರ/ಸಾಲದ ಮೊಬಲಗಿನ ಹಂಚಿಕೆಯ ಆರಂಭ
ಡಿಸೆಂಬರ್ ೧೯೯೬ರಲ್ಲಿ ITಯ ಅಗ್ರ ಬಳಕೆಗಾಗಿ ಡಾಟಾಕ್ವೆಸ್ಟ್ ಪ್ರಶಸ್ತಿ
ಡಿಸೆಂಬರ್ ೧೯೯೬ರಲ್ಲಿ CNX ನಿಫ್ಟಿ ಜೂನಿಯರ್ ನ ಪರಿಚಯ
ಫೆಬ್ರವರಿ ೧೯೯೭ರಲ್ಲಿ ಪ್ರಾದೇಶಿಕ ಹಣತೀರುವಿಕೆ ಸೌಲಭ್ಯವು ಕಾರ್ಯಾಚರಣೆಯನ್ನು ಆರಂಭಿಸಿತು
ನವೆಂಬರ್ ೧೯೯೭ರಲ್ಲಿ ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾದಿಂದ ಅತ್ಯುತ್ತಮ IT ಯೂಸೇಜ್ ಪ್ರಶಸ್ತಿ
ಮೇ ೧೯೯೮ರಲ್ಲಿ ಇಂಡಿಯಾ ಇಂಡೆಕ್ಸ್ ಸರ್ವೀಸಸ್ & ಪ್ರಾಡಕ್ಟ್ಸ್ ಲಿಮಿಟೆಡ್(IISL)ನ ಜೊತೆಗೆ ಜಂಟಿಯಾಗಿ ಕಾರ್ಯಾಚರಣೆ ಆರಂಭ
ಮೇ ೧೯೯೮ರಲ್ಲಿ NSEಯ ಜಾಲತಾಣ: www.nse.co.inನ ಆರಂಭ
ಜುಲೈ ೧೯೯೮ರಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ NSEಯ ಪ್ರಮಾಣೀಕರಣ ಯೋಜನೆಯ ಆರಂಭ
ಆಗಸ್ಟ್ ೧೯೯೮ರಲ್ಲಿ, ೧೯೯೮ರ ಸೈಬರ್ ಕಾರ್ಪೋರೆಟ್ ಆಫ್ ದಿ ಇಯರ್ ಪ್ರಶಸ್ತಿ
ಫೆಬ್ರವರಿ ೧೯೯೯ರಲ್ಲಿ ಸ್ವಯಂಚಾಲಿತ ಸಾಲ ಪಡೆಯುವಿಕೆ ಹಾಗು ಸಾಲ ನೀಡುವಿಕೆ ವಿಧಾನದ ಪರಿಚಯ
ಏಪ್ರಿಲ್ ೧೯೯೯ರಲ್ಲಿ ಚಿಪ್ ನಿಯತಕಾಲಿಕದಿಂದ ಚಿಪ್ ವೆಬ್ ಪ್ರಶಸ್ತಿ
ಅಕ್ಟೋಬರ್ ೧೯೯೯ರಲ್ಲಿ NSE.ITಯ ಸ್ಥಾಪನೆ
ಜನವರಿ ೨೦೦೦ದಲ್ಲಿ NSE ರಿಸರ್ಚ್ ಇನಿಶಿಯೇಟಿವ್ ನ ಪ್ರಾರಂಭ
ಫೆಬ್ರವರಿ ೨೦೦೦ದಲ್ಲಿ ಅಂತರಜಾಲ ವಹಿವಾಟಿನ ಆರಂಭ
ಜೂನ್ ೨೦೦೦ದಲ್ಲಿ ಮೂಲ ವಹಿವಾಟಿನ(ಸೂಚ್ಯಂಕದ ಮುಮ್ಮಾರಿಕೆ) ಆರಂಭ
ಸೆಪ್ಟೆಂಬರ್ ೨೦೦೦ದಲ್ಲಿ 'ಝೀರೋ ಕೂಪನ್ ಈಲ್ಡ್ ಕರ್ವ್' ನ ಆರಂಭ
ನವೆಂಬರ್ ೨೦೦೦ದಲ್ಲಿ ಡೋಟೆಕ್ಸ್ ಇಂಟರ್ನ್ಯಾಷನಲ್ ನಿಂದ ಬ್ರೋಕರ್ ಪ್ಲಾಜದ ಆರಂಭ, ಇದು NSE.IT Ltd. ಹಾಗು ಐ-ಫ್ಲೆಕ್ಸ್ ಸಲ್ಯೂಷನ್ಸ್ ಲಿಮಿಟೆಡ್ ನ ಜಂಟಿ ಉದ್ಯಮ.
ಡಿಸೆಂಬರ್ ೨೦೦೦ದಲ್ಲಿ WAP ವಹಿವಾಟಿನ ಆರಂಭ
ಜೂನ್ ೨೦೦೧ರಲ್ಲಿ ಸೂಚ್ಯಂಕ ಹಣಕೊಟ್ಟು ಪಡೆದುಕೊಂಡ ಹಕ್ಕುಗಳ ವಹಿವಾಟಿನ ಆರಂಭ
ಜುಲೈ ೨೦೦೧ರಲ್ಲಿ ವೈಯಕ್ತಿಕ ಭದ್ರತೆಗಳ ಮೇಲೆ ಹಣಕೊಟ್ಟು ಪಡೆದ ಹಕ್ಕುಗಳ ವಹಿವಾಟಿನ ಆರಂಭ
ನವೆಂಬರ್ ೨೦೦೧ರಲ್ಲಿ ವೈಯಕ್ತಿಕ ಭದ್ರತೆಗಳ ಮೇಲೆ ಮುಮ್ಮಾರಿಕೆಗಳ ವಹಿವಾಟಿನ ಆರಂಭ
ಡಿಸೆಂಬರ್ ೨೦೦೧ರಲ್ಲಿ ಸರ್ಕಾರಿ ಭದ್ರತೆಗಾಗಿ NSE VaRನ ಆರಂಭ
ಜನವರಿ ೨೦೦೨ದಲ್ಲಿ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಗಳ ಆರಂಭ (ETFs)
ಮೇ ೨೦೦೨ರಲ್ಲಿ NSE ಸಂಸ್ಥೆ-ವ್ಯಾಪಕ ವರ್ಗಾವಣೆ ವಿಭಾಗದಲ್ಲಿ ವಾರ್ಟನ್-ಇನ್ಫೋಸಿಸ್ ಬಿಸ್ನೇಸ್ಸ್ ಟ್ರ್ಯಾನ್ಸ್ಫರ್ಮೆಶನ್ ಪ್ರಶಸ್ತಿ
ಅಕ್ಟೋಬರ್ ೨೦೦೨ದಲ್ಲಿ NSE ಸರ್ಕಾರಿ ಭದ್ರತಾ ಸೂಚ್ಯಂಕಗಳ ಆರಂಭ
ಜನವರಿ ೨೦೦೩ರಲ್ಲಿ ಬಿಡಿ ಸಾಲ ಮಾರುಕಟ್ಟೆಯಲ್ಲಿ ವಹಿವಾಟಿನ ಆರಂಭ
ಜೂನ್ ೨೦೦೩ರಲ್ಲಿ ಬಡ್ಡಿ ದರದ ಮುಮ್ಮಾರಿಕೆಗಳ ಆರಂಭ
ಆಗಸ್ಟ್ ೨೦೦೩ರಲ್ಲಿ CNXIT ಸೂಚ್ಯಂಕದಲ್ಲಿ ಮುಮ್ಮಾರಿಕೆ ಒಪ್ಪಂದಗಳು & ಹಣಕೊಟ್ಟು ಪಡೆದ ಹಕ್ಕುಗಳ ಮಾರಾಟ ಆರಂಭ
ಜೂನ್ ೨೦೦೪ರಲ್ಲಿ STP ಇಂಟರೋಪೇರಬಿಲಿಟಿಯ ಆರಂಭ
ಆಗಸ್ಟ್ ೨೦೦೪ರಲ್ಲಿ, ಪಟ್ಟಿ ಮಾಡಲಾದ ಕಂಪನಿಗಳಿಗೆ NSEಯ ವಿದ್ಯುತ್ಚಾಲಿತ ಇಂಟರ್ಫೇಸ್ ಗಳ ಆರಂಭ
ಮಾರ್ಚ್ ೨೦೦೫ರಲ್ಲಿ EMPI ಬಿಸ್ನೆಸ್ ಸ್ಕೂಲ್, ನವದೆಹಲಿಯಿಂದ 'ಇಂಡಿಯಾ ಇನೋವೇಷನ್ ಪ್ರಶಸ್ತಿ'
ಜೂನ್ ೨೦೦೫ರಲ್ಲಿ ಬ್ಯಾಂಕ್ ನಿಫ್ಟಿ ಸೂಚ್ಯಂಕದಲ್ಲಿ ಮುಮ್ಮಾರಿಕೆಗಳು & ಹಣಕೊಟ್ಟು ಪಡೆದ ಹಕ್ಕುಗಳ ವಹಿವಾಟಿನ ಆರಂಭ
ಡಿಸೆಂಬರ್ ೨೦೦೬ರಲ್ಲಿ, ಏಷಿಯಾ ರಿಸ್ಕ್ ನಿಯತಕಾಲಿಕದಿಂದ 'ವರ್ಷದ ಡಿರವೇಟಿವ್ ಎಕ್ಸ್ಚೇಂಜ್' ಪ್ರಶಸ್ತಿ
ಜನವರಿ ೨೦೦೭ರಲ್ಲಿ NSE – CNBC TV ೧೮ ಮಾಧ್ಯಮ ಕೇಂದ್ರದ ಆರಂಭ
ಮಾರ್ಚ್ ೨೦೦೭ರಲ್ಲಿ NSE, CRISILನಿಂದ IndiaBondWatch.comನ ಪ್ರಾರಂಭದ ಬಗ್ಗೆ ಘೋಷಣೆ
ಜೂನ್ ೨೦೦೭ರಲ್ಲಿ NSE ನಿಫ್ಟಿ ಜೂನಿಯರ್ & CNX ೧೦೦ನ ಮೇಲೆ ಮೂಲ ವ್ಯವಹಾರ ಆರಂಭ
ಅಕ್ಟೋಬರ್ ೨೦೦೭ರಲ್ಲಿ NSE ನಿಫ್ಟಿ ಮಿಡ್ ಕ್ಯಾಪ್ ೫೦ರ ಮೇಲೆ ಮೂಲ ವ್ಯವಹಾರದ ಆರಂಭ
ಜನವರಿ ೨೦೦೮ರಲ್ಲಿ, ೧ ಜನವರಿ ೨೦೦೮ರಲ್ಲಿ ಮಿನಿ ನಿಫ್ಟಿ ಮೂಲ ವ್ಯವಹಾರ ಒಪ್ಪಂದಗಳ ಪರಿಚಯ
ಮಾರ್ಚ್ ೨೦೦೮ರಲ್ಲಿ S&P CNX ನಿಫ್ಟಿ ಸೂಚ್ಯಂಕದ ಮೇಲೆ ದೀರ್ಘಾವಧಿಯ ಒಪ್ಪಂದಗಳ ಪರಿಚಯ
ಏಪ್ರಿಲ್ ೨೦೦೮ರಲ್ಲಿ ಇಂಡಿಯಾ VIX ನ ಆರಂಭ
ಏಪ್ರಿಲ್ ೨೦೦೮ರಲ್ಲಿ ಭದ್ರತಾ ಸಾಲ ನೀಡುವಿಕೆ & ಸಾಲ ಪಡೆಯುವಿಕೆ ಯೋಜನೆಯ ಆರಂಭ
ಆಗಸ್ಟ್ ೨೦೦೮ರಲ್ಲಿ ಚಲಾವಣಾ ಹಣದ ಮೂಲ ವ್ಯವಹಾರದ ಆರಂಭ
ಆಗಸ್ಟ್ ೨೦೦೯ರಲ್ಲಿ ಬಡ್ಡಿ ದರದ ಮುಮ್ಮಾರಿಕೆಗಳ ಆರಂಭ
ನವೆಂಬರ್ ೨೦೦೯ರಲ್ಲಿ ಮ್ಯುಚ್ಯುವಲ್ ಫಂಡ್ ಸರ್ವೀಸ್ ಸಿಸ್ಟಂನ ಆರಂಭ
ಡಿಸೆಂಬರ್ ೨೦೦೯ರಲ್ಲಿ ಕಾರ್ಪೋರೆಟ್ ಬಾಂಡ್ ಗಳ ಸಾಲದ ಮೊಬಲಗನ್ನು ನಿರ್ಧರಿಸಿ ಹಂಚಿಕೆ ಆರಂಭ
ಫೆಬ್ರವರಿ ೨೦೧೦ರಲ್ಲಿ ಹೆಚ್ಚುವರಿ ಚಲಾವಣಾ ಹಣದ ಜೋಡಿಗಳ ಮೇಲೆ ಚಲಾವಣಾ ಹಣದ ಮುಮ್ಮಾರಿಕೆಗಳ ಆರಂಭ
ಅಕ್ಟೋಬರ್ ೨೦೧೦ರಲ್ಲಿ ೧೫ ನಿಮಿಷ ಆರಂಭಕ್ಕೆ ಮುಂಚಿನ ವಿಶೇಷ ವಹಿವಾಟು ಅವಧಿ, ಈ ಪ್ರಕ್ರಿಯಾ ವಿಧಾನದ ಮೂಲಕ ಹೂಡಿಕೆದಾರರು ಮಾರುಕಟ್ಟೆ ಆರಂಭವಾಗುವ ಮೊದಲು ಷೇರುಗಳಿಗಾಗಿ ಬೆಲೆ ಕೂಗುವ ಅವಕಾಶಕ್ಕೆ ಚಾಲನೆ.[13]
ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಸಂಸ್ಥೆಗಳು