ಭಾರತದ ರಾಜಸ್ಥಾನದಲ್ಲಿರುವ ನಗರ From Wikipedia, the free encyclopedia
ಪೋಖ್ರಾನ್ (ಪೋಕರಾನ್ ಎಂದೂ ಕರೆಯಲಾಗುತ್ತದೆ) ಭಾರತದ ರಾಜ್ಯವಾದ ರಾಜಾಸ್ಥಾನದಲ್ಲಿರುವ ಜೈಸಾಲ್ಮರ್ ಜಿಲ್ಲೆಯಲ್ಲಿರುವ ಒಂದು ಮುನಿಸಿಪಾಲಿಟಿ ಹಾಗೂ ನಗರವಾಗಿದೆ. ಇದು ಥಾರ್ ಮರುಭೂಮಿಯ ಒಂದು ಮೂಲೆಯಲ್ಲಿದೆ ಹಾಗೂ ಭಾರತದ ಮೊದಲ ಭೂಗತ ಅಣ್ವಸ್ತ್ರ ಸ್ಫೋಟನ ಪರೀಕ್ಷೆ ನಡೆಸಿದಂತಹ ಸ್ಥಳವಾಗಿದೆ.
ಪೋಖ್ರಾನ್
Pokhran | |
---|---|
city | |
Population (2001) | |
• Total | ೧೯,೧೮೬ |
ಟೆಂಪ್ಲೇಟು:Infobox Military Test Site
ಸೆಪ್ಟೆಂಬರ್ ೭, ೧೯೭೪ರಂದು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಟ್ರಾಂಬೆಯ ಭಾಭಾ ಅಣು ಸಂಶೋಧನಾ ಕೇಂದ್ರ(ಬಿಎಆರ್ ಸಿ)ದ ವಿಜ್ಞಾನಿಗಳಿಗೆ ಸ್ಥಳೀಯವಾಗಿಯೇ ರಚಿಸಿದ ಅಣು ಸಾಧನವನ್ನು ವಿಸ್ಫೋಟಿಸಲು ಅನುಮತಿಯಿತ್ತಾಗ, ಅದನ್ನು ಸ್ಫೋಟಿಸಿದ ಸ್ಥಳವಾದ ಪೋಖ್ರಾನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದಿತು. ಅದು ಅಭಿವೃದ್ಧಿಗೊಳ್ಳುವಷ್ಟು ಕಾಲವೂ, ಆ ಸಾಧನವನ್ನು ಔಪಚಾರಿಕವಾಗಿ "ಶಾಂತಿಯುತ ಅಣು ಸ್ಫೋಟಕ"ವೆಂದು ಕರೆಯಲಾಗುತ್ತಿತ್ತು. ಆದರೆ ಅದನ್ನು ಸಾಮಾನ್ಯವಾಗಿ ನಗುತ್ತಿರುವ ಬುದ್ಧ ಎಂದು ಕರೆಯಲಾಗುತ್ತಿತ್ತು.
ರಾಜಗೋಪಾಲ ಚಿದಂಬರಂ ಈ ತಂಡದ ಮುಖಂಡರಾಗಿದ್ದರು. ಈ ತಂಡದಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್ (ತಮಿಳ್ ನಾಡು), ಪಿ.ಕೆ. ಐಯ್ಯಂಗಾರ್ (ಕೇರಳ), ರಾಜಗೋಪಾಲ ಚಿದಂಬರಂ (ತಮಿಳ್ ನಾಡು), ನಾಗಪಟ್ಟಣಂ ಸಾಂಬಶಿವ ವೆಂಕಟೇಶನ್ (ಆಂಧ್ರಪ್ರದೇಶ) ಮತ್ತು ಡಾ. ವಾಮನ್ ದತ್ತಾತ್ರೇಯ ಪಟವರ್ಧನ್ (ಮಹಾರಾಷ್ಟ್ರ) ಇದ್ದರು. ಈ ಯೋಜನೆಗೆ ೧೯೬೭-೧೯೭೪ರ ಅವಧಿಯಲ್ಲಿ ೭೫ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳಿಗಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಗುಂಪು ಚಿಕ್ಕದಾದುದರಿಂದ ಗೌಪ್ಯತೆ ಕಾಪಾಡಿಕೊಳ್ಳುವುದು ಸಾಧ್ಯವಾಯಿತು ಎನ್ನುತ್ತಾರೆ ಸಂಶೋಧಕರಾದ ಜೆಫ್ರೀ ರಿಷೆಲ್ಸನ್.
ಈ ಸಾಧನವು ಶ್ರೇಷ್ಠಮಟ್ಟದ ಒಳಸ್ಫೋಟಗೊಳ್ಳುವ ಸ್ಫೋಟನಾ ಕ್ರಮವನ್ನು ಬಳಸಿತು; ಇದನ್ನು ಚಂದೀಘಡದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL)ಯವರು, ಮಹಾಯುದ್ಧ IIದಲ್ಲಿ ಅಮೆರಿಕದವರು ನಿರ್ಮಿಸಿದ್ದ ಸಾಧನವನ್ನು ಮೂಲವಾಗಿರಿಸಿಕೊಂಡು ರಚಿಸಿದರು. ಆದರೆ ಭಾರತೀಯ ವಿನ್ಯಾಸವು ಅಮೆರಿಕದ ಕ್ರಮಕ್ಕಿಂತಲೂ ಹೆಚ್ಚು ಸರಳ ಹಾಗೂ ಉತ್ತಮವಾಗಿತ್ತು. ಒಳಸ್ಫೋಟಗೊಳ್ಳಲು ಬೇಕಾದಂತಹ ಸ್ಫೋಟಕ ವಿಧಾನವನ್ನು/ಸಾಧನವನ್ನು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, (HEMRL) of ದ್ರ್ದೋ, ಪುಣೆಯಲ್ಲಿ ಅಭಿವೃದ್ಧಿಗೊಳಿಸಲಾಯಿತು. ೬ ಕಿಲೋ ತೂಕದ ಪ್ಲುಟೋನಿಯಂ ಮುಂಬಯಿ (ಆಗಿನ ಬಾಂಬೆ)ನ ಟ್ರಾಂಬೆಯಲ್ಲಿರುವ BARCಯ CIRUS ರಿಯಾಕ್ಟರ್ ನಿಂದ ಬಂದಿತು. ನ್ಯೂಟ್ರಾನ್ ಇನಿಷಿಯೇಟರ್ ಗಳು ಪೋಲೋನಿಯಂ-ಬೆರಿಲಿಯಂ ಮಾದರಿಯವಾಗಿದ್ದು (ಮತ್ತೆ ಮೊದಮೊದಲ ಯು.ಎಸ್. ಬಾಂಭ್ ಗಳಲ್ಲಿ ಬಳಸಿದ ಫ್ಯಾಟ್ ಮ್ಯಾನ್ ಮಾದರಿಯವು)ಯವಾಗಿದ್ದು ಅವುಗಳ ಸಾಂಕೇತಿಕ ನಾಮ "ಫ್ಲವರ್" ಆಗಿತ್ತು. ಈ ಇಡೀ ಮೂಲಾಂಶಗಳನ್ನು ಟ್ರಾಂಬೆಯಲ್ಲೇ ಜೋಡಣೆ ಮಾಡಿ ನಂತರ ಪರೀಕ್ಷಾ ಸ್ಥಳಕ್ಕೆ ರವಾನೆ ಮಾಡಲಾಯಿತು.
ಸಂಪೂರ್ಣವಾಗಿ ಜೋಡಣೆಗೊಂಡ ಸಾಧನವು ಷಟ್ಕೋನದ ಆಕಾರದಲ್ಲಿದ್ದು ೧.೨೫ ಮೀಟರ್ ವ್ಯಾಸವಿದ್ದು, ಸುಮಾರು ೧೪೦೦ ಕಿಲೋಗಳಷ್ಟು ಭಾರವಿರುತ್ತದೆ. ಈ ಸಾಧನವನ್ನು ಬೆಳಗ್ಗೆ ೮ ಘಂಟೆ, ೦೫ ನಿಮಿಷಕ್ಕೆ ಸ್ಫೋಟಿಸಲಾಯಿತು; ಸ್ಫೋಟಗೊಂಡದ್ದು ಕೊಳವೆ ಸೇನಾ ಪೋಖ್ರಾನ್ ಪರೀಕ್ಷಾ ಪ್ರದೇಶದಲ್ಲಿ ಭೂಮಿಯಿಂದ ೧೦೭ ಮೀಟರ್ ಆಳದಲ್ಲಿ. ಸ್ಫೋಟನೆಯ ಸ್ಥಳ ರಾಜಾಸ್ಥಾನದ ಥಾರ್ ಮರುಭೂಮಿ (ಅಥವಾ ಗ್ರೇಟ್ ಇಂಡಿಯನ್ ಡೆಸರ್ಟ್). ಸ್ಫೋಟದಿಂದಾದ ಹಳ್ಳದ ಅಕ್ಷಾಂಶ-ರೇಖಾಂಶಗಳೆಂದರೆ (ಮಾನದಂಡಗಳೆಂದರೆ) [ಪರಸ್ಪರ ಪ್ರಕ್ರಿಯೆಯುಳ್ಳ ಭೂಪಟ ದಲ್ಲಿ ಸ್ಥಳವನ್ನು ಸೂಚಿಸಿರಿ] 27.095°N 71.753°E. ಅಧಿಕೃತ ವರದಿಯ ಪ್ರಕಾರ ಈ ಸ್ಫೋಟದ ಇಳುವರಿ (ಸ್ಫೋಟದಿಂದ ಮೂಡಿದ ಶಕ್ತಿ) ೧೨ kt, ಆದರೆ ಬಾಹ್ಯ ಅಂದಾಜುಗಳ/ವರದಿಗಳ ಪ್ರಕಾರ ಇದು ೨ kt ಇಂದ ೨೦ ktುವರೆಗೆ ಎಂದು ಅಂದಾಜಿಸಲಾಗಿದೆ.
ಪೋಖ್ರಾನ್ ಭಾರತದ ಅಣು ಯೋಜನೆಗಳಿಗೆ ಪರೀಕ್ಷಾ ಕೇಂದ್ರವಾಗಿದೆ. ಭಾರತದ ಅಣುಶಕ್ತಿ ಆಯೋಗವು ತನ್ನ ಮೊದಲ ಭೂಗತ ಅಣ್ವಸ್ತ್ರವನ್ನು ಪೋಖ್ರಾನ್ ನಲ್ಲಿ ೧೮ ಮೇ ೧೯೭೪ರಂದು ಸ್ಫೋಟಿಸಿತು. ಭಾರತ ಸರ್ಕಾರವು, ತಾನು ಅಣ್ವಸ್ತ್ರವನ್ನು ತಯಾರಿಸುವ ಸಾಮರ್ಥ್ಯವನ್ನು ಪಡೆದಿದ್ದರೂ ಸಹ ಅಣ್ವಸ್ತ್ರಗಳನ್ನು ತಯಾರಿಸುವುದಿಲ್ಲವೆಂದು ಘೋಷಿಸಿತು. ಪೋಖ್ರಾನ್ ಅಣು ಸ್ಫೋಟವು ಭಾರತವು ಅಣುಶಕ್ತಿಯನ್ನು ಶಾಂತಿಯುತ ಕಾರಣಗಳಿಗಾಗಿ ಬಳಸಿಕೊಳ್ಳಲು ರಕ್ಷಾಕವಚವಾಗಿ ಅಣುಶಕ್ತಿ ಪಡೆಯಲೋಸುಗ ಮಾಡಿದ ಸ್ಫೋಟವೆಂದೂ, ಭಾರತವು ಅಣುಶಕ್ತಿ ತಂತ್ರಜ್ಞಾನ ದಲ್ಲಿ ಸ್ವಾವಲಂಬನೆಯನ್ನು ಹೊಂದಲು ಈ ಸ್ಫೋಟವನ್ನು ಕೈಗೊಳ್ಳಲಾಯಿತೆಂದೂ ಹೇಳಿಕೆ ನೀಡಿತು; ಆದರೆ ನಂತರದ ದಿನಗಳಲ್ಲಿ ಭಾರತವು ಐದು ಅಣು ಪರೀಕ್ಷೆಗಳನ್ನು ೧೯೯೮ರ ಮೇ ೧೧ ಮತ್ತು ೧೩ರಂದು ಕೈಗೊಂಡಿತು. ಅಂದಿನಿಂದ ಭಾರತವು ಅಣುಪರೀಕ್ಷೆಗಳ ಮೇಲೆ ಅನಿರ್ದಿಷ್ಟ ಅವಧಿಯವರೆಗೆ ನಿಷೇಧ ಹೂಡಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.