ಪುಷ್ಪದಂತ
From Wikipedia, the free encyclopedia
ಪುಷ್ಪದಂತ ಎಂದೂ ಕರೆಯಲ್ಪಡುವ ಜೈನ ತೀರ್ಥಂಕರ ಸುವಿಧಿನಾಥ , ಪ್ರಸ್ತುತ ಅವಸಾರ್ಪಿನಿ ಕಾಲದ ೯ ನೇ ತೀರ್ಥಂಕರ. ಅವರ ಚಿಹ್ನೆ 'ಮೊಸಳೆ'. ಭಗವಾನ್ ಪುಷ್ಪದಂತರು ಕಾಕಂಡಿ ನಗರದಲ್ಲಿ ಕೃಷ್ಣ ಪಕ್ಷದ ಐದನೇ ದಿನದಂದು ಮೂಲ ನಕ್ಷತ್ರಪುಂಜದಲ್ಲಿ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನವನ್ನು ಪಡೆದಿದ್ದರು.
ಮೋಕ್ಷ
ಜೈನ ಧರ್ಮೀಯರ ಪುಣ್ಯಕ್ಷೇತ್ರವಾದ ಝಾರ್ಖಂಡ್ ರಾಜ್ಯದ ಶಿಖರ್ಜಿಯಲ್ಲಿ ಭಗವಾನ್ ಪುಷ್ಪದಂತರ ಟೋಂಕ್ (ಬೆಟ್ಟದ ತುದಿಯಲ್ಲಿರುವ ದೇವಾಲಯ) ಅನ್ನು ಸುಪ್ರಭು ಕೂಟ ಎಂದೂ ಕರೆಯುತ್ತಾರೆ. ಮೈದಾನದಲ್ಲಿ ನೆಲೆಸಿದ ಭಗವಾನ್ ಪುಷ್ಪದಂತರ ಟೋಂಕ್ ಭಗವಾನ್ ಪಾರ್ಶ್ವನಾಥ ಟೋಂಕಿಗಿಂತ 1.8 ಕಿ.ಮೀ ದೂರದಲ್ಲಿದೆ. ಇಲ್ಲಿಂದ, ಭಗವಾನ್ ಪುಷ್ಪದಂತ ಒಂದು ಸಾವಿರ ಸಾಧುಗಳೊಂದಿಗೆ ಮೋಕ್ಷವನ್ನು ಪಡೆದರು ಎಂಬುದು ಜೈನರ ನಂಬಿಕೆ.
Wikiwand - on
Seamless Wikipedia browsing. On steroids.