ಪಾಶ
From Wikipedia, the free encyclopedia
ಪಾಶ ಒಂದು ಸಂಸ್ಕೃತ ಶಬ್ದವಾಗಿದೆ. ಇದನ್ನು ಹಲವುವೇಳೆ "ಕುಣಿಕೆ" ಅಥವಾ "ಕೊರಳ ಹಗ್ಗ" ಎಂದು ಭಾಷಾಂತರಿಸಲಾಗುತ್ತದೆ. ಹಿಂದೂ ಪ್ರತಿಮಾಶಾಸ್ತ್ರದಲ್ಲಿ ಇದನ್ನು ಅಲೌಕಿಕ ಅಸ್ತ್ರವಾಗಿ ಚಿತ್ರಿಸಲಾಗಿದೆ. ತಮ್ಮ ಕೈಗಳಲ್ಲಿ ಪಾಶವನ್ನು ಹಿಡಿದಿರುವಂತೆ ಗಣೇಶ, ಯಮ ಹಾಗೂ ವರುಣರಂತಹ ಹಿಂದೂ ದೇವತೆಗಳನ್ನು ಚಿತ್ರಿಸಲಾಗುತ್ತದೆ.

ಪಾಶವು ವಿಘ್ನೇಶ್ವರನಾದ ಗಣೇಶನ[೧] ಸಾಮಾನ್ಯ ಲಕ್ಷಣವಾಗಿದೆ; ಪಾಶವು ವಿಘ್ನಗಳನ್ನು ಬಂಧನ ಮಾಡಿ ಮುಕ್ತಮಾಡುವ ಅವನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಮೃತ್ಯು ದೇವತೆಯಾದ ಯಮನು ಮರಣದ ಸಮಯದಲ್ಲಿ ಒಂದು ಜೀವಿಯ ಶರೀರದಿಂದ ಆತ್ಮವನ್ನು ಹೊರಸೆಳೆಯಲು ಪಾಶವನ್ನು ಬಳಸುತ್ತಾನೆ.[೨] ಶಿಲ್ಪಕಲೆಯಲ್ಲಿ, ಇದನ್ನು ಒಂದು ಅಥವಾ ಎರಡು ಗೊಣಸುಗಳೊಳಗೆ ಎರಡು ಅಥವಾ ಮೂರು ಕಟ್ಟುಗಳಾಗಿ ಚಿತ್ರಿಸಲಾಗುತ್ತದೆ.
ಉಲ್ಲೇಖಗಳು
Wikiwand - on
Seamless Wikipedia browsing. On steroids.