ಹಿಂದೂ ಧರ್ಮದ ದೇವಾಲಯ, ಕೇರಳ From Wikipedia, the free encyclopedia
ಪದ್ಮನಾಭಸ್ವಾಮಿ ದೇವಾಲಯವು ಒಂದು ಪ್ರಸಿದ್ಧ ಪುರಾತನ ಹಿಂದೂ ದೇವಾಲಯ. ಅದು ಭಾರತದ ಕೇರಳದ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿದೆ. ಮಲಯಾಳಂನ 'ತಿರುವನಂತಪುರಂ' ನಗರದ ಹೆಸರಿನ ಅನುವಾದದ ಅರ್ಥ "ಭಗವಾನ್ ಅನಂತ ನಗರ" ಎಂದು. ಇದು ಪದ್ಮನಾಭಸ್ವಾಮಿ ದೇವಾಲಯದ ದೇವತೆಯನ್ನು ಅನುಸರಿಸಿದ ಹೆಸರು. ಈ ದೇವಾಲಯವನ್ನು 'ಚೇರಾಶೈಲಿ'ಯ ಮತ್ತು ದ್ರಾವಿಡ ಶೈಲಿಯ ಎತ್ತರದ ಗೋಡೆಗಳು ಮತ್ತು 16 ನೇ ಶತಮಾನದ ಗೋಪುರದ ವಾಸ್ತುಶಿಲ್ಪದಲ್ಲಿ ಸಂಕೀರ್ಣ ಮಿಶ್ರಣದಲ್ಲಿ ನಿರ್ಮಿಸಲಾಗಿದೆ. ಕುಂಬಳದಲ್ಲಿರುವ ಅನಂತಪುರ ದೇವಾಲಯವನ್ನು ದೇವತೆಯ ಮೂಲಸ್ಥಾನವೆಂದು ಪರಿಗಣಿಸಲಾಗಿದೆ. ವಾಸ್ತುಶಿಲ್ಪದ ಮಟ್ಟಿಗೆ ಸ್ವಲ್ಪ ಮಟ್ಟಿಗೆ, ಈ ದೇವಾಲಯವು ತಿರುವತ್ತರದಲ್ಲಿರುವ ಆದಿಕೇಶವ ಪೆರುಮಾಳ್ ದೇವಾಲಯದ ಪ್ರತಿರೂಪವಾಗಿದೆ. ಈ ದೇವಾಲಯದಲ್ಲಿ ಕಂಡು ಬಂದಿರುವ ಸಂಪತ್ತು ಜಗತ್ತಿನ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಸಂಗ್ರಹವೆಂದು ಪರಿಗಣಿಸಲಾಗಿದೆ.[೧][೨]
Seamless Wikipedia browsing. On steroids.