From Wikipedia, the free encyclopedia
ಹಿಂದೂ ಧರ್ಮದಲ್ಲಿ, ಪಂಡಿತನು[1] ಜ್ಞಾನದ ಯಾವುದೇ ಕ್ಷೇತ್ರದ ಒಬ್ಬ ವಿದ್ವಾಂಸ[2] ಅಥವಾ ಶಿಕ್ಷಕ, ವಿಶೇಷವಾಗಿ ವೈದಿಕ ಗ್ರಂಥಗಳು, ಧರ್ಮ, ಹಿಂದೂ ತತ್ವಶಾಸ್ತ್ರ, ಅಥವಾ ಸಂಗೀತದಂತಹ ಜಾತ್ಯತೀತ ವಿಷಯಗಳಲ್ಲಿ.[3] ಅವನು ಗುರುಕುಲದಲ್ಲಿರುವ ಒಬ್ಬ ಗುರುವಾಗಿರಬಹುದು.
ಸಂಸ್ಕೃತದಲ್ಲಿ, ಪಂಡಿತ ಪದವು ಸಾಮಾನ್ಯವಾಗಿ ಯಾವನಾದರೂ "ಬುದ್ಧಿವಂತ, ವಿದ್ಯಾವಂತ ಅಥವಾ ಕಲಿತ ವ್ಯಕ್ತಿ"ಯನ್ನು ಸೂಚಿಸುತ್ತದೆಂದು ಮೊನಿಯರ್ ವಿಲಿಯಮ್ಸ್ ಹೇಳುತ್ತಾರೆ.[4] ಈ ಪದವನ್ನು ಪಂಡ್ ಶಬ್ದದಿಂದ ಪಡೆಯಲಾಗಿದೆ. ಇದರರ್ಥ "ಸಂಗ್ರಹಿಸು, ಪೇರಿಸು, ರಾಶಿಹಾಕು" ಎಂದು, ಮತ್ತು ಈ ಮೂಲವನ್ನು ಜ್ಞಾನದ ಅರ್ಥದಲ್ಲಿ ಬಳಸಲಾಗುತ್ತದೆ.[5] ಈ ಪದವು ವೈದಿಕ ಮತ್ತು ವೈದಿಕೋತ್ತರ ಪಠ್ಯಗಳಲ್ಲಿ ಕಂಡುಬರುತ್ತದೆ, ಆದರೆ ಯಾವುದೇ ಪೂರ್ವಾಪರ ಸಾಮಾಜಿಕ ಸಂದರ್ಭವಿಲ್ಲದೆ. ವಸಾಹತು ಯುಗದ ಸಾಹಿತ್ಯದಲ್ಲಿ, ಈ ಪದವು ಸಾಮಾನ್ಯವಾಗಿ ಹಿಂದೂ ಕಾನೂನಿನಲ್ಲಿ ಪರಿಣತಿ ಹೊಂದಿದ ಬ್ರಾಹ್ಮಣರನ್ನು ಸೂಚಿಸುತ್ತದೆ.[6]
ಸಂಬಂಧಿತ ಪದವಾದ ಪುರೋಹಿತ ಮನೆ ಅರ್ಚಕನನ್ನು ಸೂಚಿಸುತ್ತದೆ.[3]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.