From Wikipedia, the free encyclopedia
ನಿರ್ಬಂಧ (ಸಾಮಾನ್ಯ ಅರ್ಥದಲ್ಲಿ, ವ್ಯಾಪಾರ ಪರಿಭಾಷೆಯಲ್ಲಿ ವ್ಯಾಪಾರ ನಿಷೇಧ ಮತ್ತು ನ್ಯಾಯಿಕ ಮಾತಿನಲ್ಲಿ ಅಕ್ಷರಶಃ ಜಫ್ತಿ) ಒಂದು ನಿರ್ದಿಷ್ಟ ದೇಶ ಅಥವಾ ದೇಶಗಳ ಗುಂಪಿನೊಂದಿಗೆ ವಾಣಿಜ್ಯ ಮತ್ತು ವ್ಯಾಪಾರದ ಭಾಗಶಃ ಅಥವಾ ಸಂಪೂರ್ಣ ನಿಷೇಧ.[1] ನಿರ್ಬಂಧಗಳನ್ನು ಹೇರಲ್ಪಟ್ಟ ದೇಶದಿಂದ ನಿರ್ದಿಷ್ಟ ರಾಷ್ಟ್ರೀಯ ಹಿತಾಸಕ್ತಿ ಪರಿಣಾಮವನ್ನು ಹೊರಹೊಮ್ಮಿಸುವ ಪ್ರಯತ್ನವಾಗಿ ಹೇರಲಾದ ದೃಢವಾದ ರಾಯಭಾರ ಕ್ರಮಗಳೆಂದು ಪರಿಗಣಿಸಲಾಗುತ್ತದೆ. ನಿರ್ಬಂಧಗಳು ಆರ್ಥಿಕ ದಿಗ್ಬಂಧನಗಳನ್ನು ಹೋಲುತ್ತವೆ ಮತ್ತು ಅವನ್ನು ಸಾಮಾನ್ಯವಾಗಿ ವ್ಯಾಪಾರಕ್ಕೆ ಕಾನೂನಾತ್ಮಕ ಅಡೆತಡೆಗಳೆಂದು ಪರಿಗಣಿಸಲಾಗುತ್ತದೆ. ಆದರೆ ಇವು ದಿಗ್ಬಂಧನಗಳಲ್ಲ, ಏಕೆಂದರೆ ದಿಗ್ಬಂಧನಗಳನ್ನು ಹಲವುವೇಳೆ ಯುದ್ಧ ಕ್ರಿಯೆಗಳೆಂದು ಪರಿಗಣಿಸಲಾಗುತ್ತದೆ.
ನಿರ್ಬಂಧಗಳ ಅರ್ಥ ರಫ್ತು ಅಥವಾ ಆಮದನ್ನು ಸೀಮಿತಿಗೊಳಿಸುವುದು ಅಥವಾ ನಿಷೇಧಿಸುವುದು, ಪ್ರಮಾಣಕ್ಕೆ ಪಾಲುಗಳನ್ನು ಸೃಷ್ಟಿಸುವುದು, ವಿಶೇಷ ಸುಂಕಗಳು, ತೆರಿಗೆಗಳನ್ನು ವಿಧಿಸುವುದು, ಸರಕು ಅಥವಾ ಸಾರಿಗೆ ವಾಹನಗಳನ್ನು ನಿಷೇಧಿಸುವುದು, ಸರಕುಗಳು, ಆಸ್ತಿಗಳು, ಬ್ಯಾಂಕ್ ಖಾತೆಗಳನ್ನು ತಡೆಹಿಡಿಯುವುದು ಅಥವಾ ವಶಪಡಿಸಿಕೊಳ್ಳುವುದು, ನಿರ್ದಿಷ್ಟ ತಂತ್ರಜ್ಞಾನಗಳು ಅಥವಾ ಉತ್ಪನ್ನಗಳ ಸಾಗಣೆಯನ್ನು ಸೀಮಿತಗೊಳಿಸುವುದು, ಉದಾಹರಣೆಗೆ ಶೀತಲ ಸಮರದ ಅವಧಿಯಲ್ಲಿ ಕೋಕಾಮ್.
ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ, ಒಂದು ಸ್ವತಂತ್ರ ಅರ್ಥವ್ಯವಸ್ಥೆ ಅಥವಾ ಆರ್ಥಿಕವಾಗಿ ಸ್ವಯಂಪೂರ್ಣ ವ್ಯವಸ್ಥೆಯು ಹಲವುವೇಳೆ ಭಾರೀ ನಿರ್ಬಂಧಕ್ಕೆ ಒಳಗಾದ ಭಾಗದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಹಾಗಾಗಿ ನಿರ್ಬಂಧಗಳ ಪರಿಣಾಮಕಾರಿತ್ವ ಅಂತರರಾಷ್ಟ್ರೀಯ ಭಾಗವಹಿಸುವಿಕೆಯ ವ್ಯಾಪ್ತಿ ಮತ್ತು ಪ್ರಮಾಣದ ಅನುಪಾತದಲ್ಲಿರುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.