From Wikipedia, the free encyclopedia
ನಾರುಬಟ್ಟೆಯು (ನಾರುಮಡಿ, ಕ್ಷೌಮ) ಅಗಸೆನಾರು ಸಸ್ಯದ ನಾರುಗಳಿಂದ ತಯಾರಿಸಲಾದ ಬಟ್ಟೆ. ನಾರುಬಟ್ಟೆಯನ್ನು ತಯಾರಿಸುವುದು ಶ್ರಮದಾಯಕವಾದರೂ, ಎಳೆಯು ಬಹಳ ಗಟ್ಟಿಯಾಗಿದ್ದು, ಹೀರಿಕೊಳ್ಳುವ ಗುಣ ಹೊಂದಿದೆ ಮತ್ತು ಹತ್ತಿಗಿಂತ ಬೇಗನೇ ಒಣಗುತ್ತದೆ. ನಾರುಬಟ್ಟೆಯಿಂದ ತಯಾರಿಸಿದ ಉಡುಪುಗಳು ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಅವುಗಳ ಅಸಾಧಾರಣ ತಂಪುಗುಣ ಮತ್ತು ತಾಜಾತನಕ್ಕೆ ಮನ್ನಣೆ ಪಡೆದಿವೆ.
ನಾರುಬಟ್ಟೆಯ ಜವಳಿಗಳು ವಿಶ್ವದಲ್ಲಿನ ಅತ್ಯಂತ ಹಳೆಯ ಜವಳಿಗಳಲ್ಲಿ ಕೆಲವು ಎಂದು ಕಾಣಿಸುತ್ತದೆ: ಅವುಗಳ ಇತಿಹಾಸ ಅನೇಕ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಸುಮಾರು ಕ್ರಿ.ಪೂ. ೮೦೦೦ ದ ಕಾಲಮಾನದ್ದೆಂದು ನಿರ್ಧರಿತವಾದ ಹುಲ್ಲಿನ ತುಂಡುಗಳು, ಬೀಜಗಳು, ನಾರುಗಳು, ನೂಲುಗಳು ಮತ್ತು ವಿವಿಧ ಬಗೆಯ ಬಟ್ಟೆಗಳನ್ನು ಸ್ವಿಸ್ ಕೆರೆ ನಿವಾಸಗಳಲ್ಲಿ ಪತ್ತೆಹಚ್ಚಲಾಗಿದೆ. ಜಾರ್ಜದಲ್ಲಿನ ಒಂದು ಪ್ರಾಗೈತಿಹಾಸಿಕ ಗುಹೆಯಲ್ಲಿ ಕಂಡುಬಂದ ಬಣ್ಣಹಾಕಿದ ಅಗಸೆನಾರು ಸಸ್ಯದ ನಾರುಗಳು, ಕಾಡು ಅಗಸೆನಾರಿನಿಂದ ನೇಯ್ದ ನಾರುಬಟ್ಟೆಯ ವಸ್ತ್ರಗಳ ಬಳಕೆಯು ಇನ್ನೂ ಹಿಂದಿನ ಕಾಲಮಾನದ್ದು (೩೬,೦೦ ಬಿಪಿ) ಇರಬಹುದೆಂದು ಸೂಚಿಸುತ್ತವೆ.[೧]
Seamless Wikipedia browsing. On steroids.