ಥೆರೆಸಾ ಮೇರಿ ಮೇ (ಜನನ 1 ಅಕ್ಟೋಬರ್ 1956) 1997 ರಿಂದ ಮೈಡೆನ್ಹೆಡ್ನಲ್ಲಿ (Maidenhead) ಸಂಸತ್ ಸದಸ್ಯರಾಗಿ ಆಗಿ, 11 ಜುಲೈ 2016 ರಿಂದ ಮೇ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಎರಡು ದಿನಗಳ ನಂತರ, ಯುನೈಟೆಡ್ ಕಿಂಗ್ಡಮ್ನ ಪ್ರಧಾನ ಮಂತ್ರಿಯಾದರು.
ಥೆರೆಸಾ ಮೇ ಅವರನ್ನು ಬ್ರಿಟಿಷ್ ರಾಣಿ ಎಲಿಜಬೆತ್ ΙΙ ಅವರು ಬುಧವಾರ 13-7-2016 ರಂದು, ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರ ರಾಜೀನಾಮೆ ಸ್ವೀಕರಿಸಿದ ಕೆಲವೇ ಕ್ಷಣಗಳ ನಂತರ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದರು. ಬ್ರಿಟನ್ನ ಅಲಿಖಿತ ಸಂವಿಧಾನದ ಅಡಿಯಲ್ಲಿ, ಹೌಸ್ ಆಫ್ ಕಾಮನ್ಸ್ ಸದನದಲ್ಲಿ ಬಹುಮತದ ಆದೇಶ ಪಡೆದ ಪಕ್ಷದ ನಾಯಕರನ್ನು ಸರ್ಕಾರ ರಚಿಸಲು ಕೇಳುವುದು ರಾಜತ್ವಕ್ಕೆ ನಿಯಮವಾಗಿದೆ. ಮೇ ಅವರು, ಮಾರ್ಗರೆಟ್ ಥ್ಯಾಚರ್ ನಂತರ ಬ್ರಿಟನ್’ನ ಪ್ರಧಾನಿಯಾಗುತ್ತಿರಯವ ಎರಡನೇ ಮಹಿಳೆ. ಗಟ್ಟಿ ಮಾತನಾಡುವ ನಾಯಕಿ. ಈಗಾಗಲೇ ಬ್ರೆಕ್ಸಿಟ್ ಮತ ನಂತರ ಭಾರೀ ಕೆಲಸದ ಹೊಣೆ ಭಾರವನ್ನು ತನ್ನಮೇಲೆ ವಹಿಸಿಕೊಂಡವರು.
59 ವರ್ಷದ ಕನ್ಸರ್ವೇಟಿವ್ ಪಕ್ಷದ ನಾಯಕಿಯ ಮೊದಲ ಕೆಲಸ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ನಿನ ನಿರ್ಗಮನದ (Brexit) ಮಾತುಕತೆಯ ಸವಾಲುಗಳನ್ನು ಎದುರಿಸುವ ತನ್ನ ಕರ್ತವ್ಯಸಾಧಿಸಲು ಮುಂಚೂಣಿ ತಂಡವನ್ನು ಹಾಕುವ ಕಾರ್ಯ ಮಾಡಬಹುದು ಎಂದು ಭಾವಿಸಲಾಗಿದೆ., ಅವರು "Brexit” ಅರ್ಥ "Brexit” ಎಂದು ಹೇಳುವ ಮೂಲಕ ಸಮರ್ಥನೆ ನೀಡಿದ್ದರು.[೩]
ಬ್ರೆಕ್ಸಿಟ್ ತೀರ್ಪು ಮತ್ತು ಪ್ರಧಾನಿ ಡೇವಿಡ್ ಕ್ಯಾಮರೂನ್ ರಾಜೀನಾಮೆ
25/06/2016 ಐರೋಪ್ಯ ಒಕ್ಕೂಟದಿಂದ (ಇ.ಯು) ಬ್ರಿಟನ್ ಹೊರಗೆ ಬರಬೇಕು (ಬ್ರೆಕ್ಸಿಟ್) ಎಂದು ಅಲ್ಲಿನ ಜನರು ತೀರ್ಪು ನೀಡಿದ್ದಾರೆ (24-6-2016). ಈ ಬಗ್ಗೆ ಗುರುವಾರ ನಡೆದ ಜನಮತಗಣನೆಯ ಫಲಿತಾಂಶ ಪ್ರಕಟವಾಗಿದ್ದು ಶೇ 51.9ರಷ್ಟು ಜನರು ಇ.ಯು ಕೂಟದಿಂದ ಪ್ರತ್ಯೇಕವಾಗಬೇಕು ಎಂದು ಹೇಳಿದ್ದಾರೆ.ಇದು ಬ್ರೆಕ್ಸಿಟ್ ವಿರುದ್ಧ ನಿಂತಿದ್ದ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ರಾಜೀನಾಮೆಗೆ ಕಾರಣವಾಗಿದೆ. ಯುರೋಪ್ನ ಒಗ್ಗಟ್ಟಿಗಾಗಿ ರಚನೆಯಾದ 28 ದೇಶಗಳ ಸದಸ್ಯತ್ವವಿರುವ ಐರೋಪ್ಯ ಒಕ್ಕೂಟದ ಏಕತೆಗೆ ದೊಡ್ಡ ಹೊಡೆತ ನೀಡಿದೆ.
ಐರೋಪ್ಯ ಒಕ್ಕೂಟದಿಂದ ‘ವಿಚ್ಛೇದನ’ಕ್ಕೆ ಮುಂದಾಗಿರುವ ಬ್ರಿಟನ್, ಜಗತ್ತಿನ ಐದನೇ ಅತಿ ದೊಡ್ಡ ಅರ್ಥ ವ್ಯವಸ್ಥೆ. ಅದು ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿ ವ್ಯವಹಾರ ಮಾಡಬೇಕಾಗುತ್ತದೆ. ಈಗ ಜಗತ್ತಿನ ಇತರ ದೇಶಗಳ ಜತೆಗೆ ಇ.ಯು ಪರವಾಗಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಪ್ರತ್ಯೇಕಗೊಂಡ ನಂತರ ಪ್ರತಿಯೊಂದು ದೇಶದ ಜತೆಗೂ ಬ್ರಿಟನ್ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಎಲ್ಲ ಒಪ್ಪಂದಗಳು ಪೂರ್ಣಗೊಳ್ಳಲು ಒಂದು ದಶಕ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇ.ಯುನಿಂದ ಹೊರಗೆ ಬರುವ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು. ಇದರಲ್ಲಿ ಯಶಸ್ಸನ್ನು ಸಾಧಿಸುವ ಹೊಣೆ ಈಗ ಥೆರೆಸಾ ಮೇ ಅವರ ಮೇಲೆ ಬಿದ್ದಿದೆ.
ಹಾಲಿ ಪ್ರಧಾನಿ ಡೇವಿಡ್ ಕ್ಯಾಮರೂನ್ 13-7-2016 ಬುಧವಾರ ರಾಜಿನಾಮೆ ನೀಡಿದರು. ಜತೆಗೆ ಥೆರೆಸಾ ಪ್ರಧಾನಿಯಾಗುವುದಕ್ಕೆ ತಮ್ಮ ಸಹಮತ ಸೂಚಿಸಿದರು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ ಜನಮತ ಸಂಗ್ರಹಣೆಯಲ್ಲಿ ತೀರ್ಮಾನವಾಗಿದ್ದ ಹಿನ್ನೆಲೆಯಲ್ಲಿ ಕ್ಯಾಮರೂನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸಿದ್ದರು. ಥೆರೇಸಾ ಮೇ ಅವರಿಗೆ ಕನ್ಸರ್ವೇಟಿವ್ ಪಕ್ಷದ ನಾಯಕಿ, ಇಂಧನ ಸಚಿವೆ ಆ್ಯಂಡ್ರಿಯಾ ಲೀಡ್ಸಮ್ ಪ್ರತಿಸ್ಪರ್ಧಿಯಾಗಿದ್ದರು. ಅಂತಿಮವಾಗಿ ಆ್ಯಂಡ್ರಿಯಾ ಅವರು ಪ್ರಧಾನಿಯಾಗುವ ರೇಸ್ನಿಂದ ಹಿಂದೆ ಸರಿದರು. ಹೀಗಾಗಿ ಥೆರೇಸಾ ಮೇ ಅವರು ಬ್ರಿಟನ್ನ ಪ್ರಧಾನಿಯಾಗುವುದು ಖಚಿತವಾಗಿತ್ತು. 1979ರಲ್ಲಿ ಮಾರ್ಗರೆಟ್ ಥ್ಯಾಚರ್ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಪ್ರಧಾನಿ ಸ್ಥಾನ ದೊರೆತಿದೆ.
ಥೆರೇಸಾ ಮೇ , ‘’ಬ್ರೆಕ್ಸಿಟ್ ಅಂದರೆ ಬ್ರೆಕ್ಸಿಟ್ ಅಷ್ಟೇ. ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂದು ನಿರ್ಧಾರ ಕೈಗೊಂಡಾಗಿದೆ. ಮುಂದಿನ ದಿನಗಳಲ್ಲಿ ಅದರಿಂದ ಯಶಸ್ಸು ಕಂಡುಕೊಂಡಿರುವುದನ್ನು ಎಂದು ತೋರಿಸಬೇಕಾಗಿದೆ. ಇನ್ನು ಎರಡನೇಯದಾಗಿ ನಮ್ಮ ದೇಶವನ್ನು ಮತ್ತು ಪಕ್ಷವನ್ನು ಒಗ್ಗಟ್ಟಾಗಿ ಇರಿಸಬೇಕು. ಮೂರನೇಯದಾಗಿ ದೇಶಕ್ಕಾಗಿ ಧೈರ್ಯದ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ. ಅದು ಆಯ್ದ ವ್ಯಕ್ತಿಗಳಿಗಾಗಿ ಇರಬಾರದು. ಒಟ್ಟಾರೆ ದೇಶಕ್ಕೇ ಅನುಕೂಲವಾಗಿರಬೇಕು’’, ಎಂದಿದ್ದಾರೆ. ಗಮನಾರ್ಹ ಅಂಶವೆಂದರೆ ಜನಮತ ಸಂಗ್ರಹಣೆಗೆ ಮೊದಲು ಬ್ರಿಟನ್ ಐರೋಪ್ಯ ಒಕ್ಕೂಟದಲ್ಲೇ ಇರಲಿ, ಎಂದು ಅವರು ಒಮ್ಮೆ ಪ್ರತಿಪಾದಿಸಿದ್ದರು.
ಜೀವನ
1956ರ ಅಕ್ಟೋಬರ್ 1ರಂದು ಜನಿಸಿರುವ ಅವರು, ವೀಟ್ಲೀ ಪಾರ್ಕ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಸೇಂಟ್ ಹ್ಯೂಗ್ ಕಾಲೇಜಿನಲ್ಲಿ ಬಳಿಕ ಆಕ್ಸ್ಫರ್ಡ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದಾರೆ. 1997ರಿಂದ ಸಂಸದರಾಗಿ ಆಯ್ಕೆಯಾಗುತ್ತಿರುವ ಇವರು 2010ರಿಂದ ಗೃಹ ಸಚಿವರಾಗಿದ್ದಾರೆ. ದೀರ್ಘಕಾಲದ ವರೆಗೆ ಇದೇ ಹುದ್ದೆಯಲ್ಲಿ ಮುಂದುವರಿದವರು ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ. ಕನ್ಸರ್ವೇಟಿವ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಥೆರೆಸಾ ಲಂಡನ್ ಕೌನ್ಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜತೆ ಪಕ್ಷದ ಮುಂದಿನ ನಾಯಕರು ಎಂದು ಬಿಂಬಿತರಾಗಿದ್ದವರು. ತಾವು ದೇಶದ ಪ್ರಧಾನಮಂತ್ರಿಯಾದರೆ ಐರೋಪ್ಯ ಒಕ್ಕೂಟದ ಮಾನವ ಹಕ್ಕುಗಳ ಒಕ್ಕೂಟದಿಂದ ಹೊರಬರುವ ಸವಾಲನ್ನೂ ಅವರು ಒಡ್ಡಿದ್ದರು. 2014ರಲ್ಲಿ ಪೊಲೀಸ್ ಇಲಾಖೆ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಭ್ರಷ್ಟಾಚಾರ ಎನ್ನುವುದು ಕೆಲವರನ್ನು ಮಾತ್ರ ಆವರಿಸಿದ್ದಲ್ಲ ಎಂದು ಹೇಳಿ ಎಲ್ಲರನ್ನೂ ದಂಗುಬಡಿಸಿದ್ದರು. ಅದೇ ವರ್ಷ ಇಸ್ಲಾಮಿಕ್ ತೀವ್ರವಾದಕ್ಕೆ ಸಂಬಂಧಿಸಿದಂತೆ ಸಂಪುಟ ಸಹೋದ್ಯೋಗಿ ಮೈಕೆಲ್ ಗೋವ್ ಜತೆ ವಿವಾದಕ್ಕೆ ಒಳಗಾಗಿದ್ದರು. ಅಂತಿಮವಾಗಿ ಗೋವ್ ಅವರು ಕ್ಷಮೆಯಾಚಿಸಿದ್ದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪರಿಚಯವಾದ ಫಿಲಿಪ್ ಮೇ ಅವರನ್ನು ವಿವಾಹವಾಗಿ ‘ತೆರೆಸಾ ಬ್ರೇಜರ್’ ಅವರು ‘ತೆರೆಸಾ ಮೇ’ ಆದರು.
ಬ್ರಿಟನ್ನಿನ ಹಳ್ಳಿಯೊಂದರಲ್ಲಿ ಜನಿಸಿದ ತೆರೆಸಾ ಬ್ರೇಜರ್ ಎಂಬ ಹೆಣ್ಣು ಮಗಳಿಗೆ, ಆ ದೇಶದ ಮೊದಲ ಮಹಿಳಾ ಪ್ರಧಾನಿಯಾಗಬೇಕು ಎಂಬ ಆಸೆ ಇತ್ತು. ಆಕೆ ಉನ್ನತ ವ್ಯಾಸಂಗ ನಡೆಸಿದ್ದು ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ. ಆದರೆ ಅದಕ್ಕೂ ಮೊದಲು ಆಕೆ ಹಣ ಸಂಪಾದಿಸಲು ವಾರಾಂತ್ಯದ ಬಿಡುವಿನಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ‘ಎತ್ತರದ ನಿಲುವಿನ, ಫ್ಯಾಷನ್ ಬಗ್ಗೆ ತುಸು ಒಲವಿನ ಈ ಹೆಣ್ಣು ಮಗಳು ದೇಶದ ಮೊದಲ ಮಹಿಳಾ ಪ್ರಧಾನಿಯಾಗಬೇಕು ಎಂಬ ಆಸೆ ಹೊತ್ತಿದ್ದು ನೆನಪಿದೆ’ ಎನ್ನುತ್ತಾರೆ ಆಕೆಯ ಸ್ನೇಹಿತರು.
ತೆರೆಸಾ ಅವರ ತಂದೆ ಹ್ಯೂಬರ್ಟ್ ಬ್ರೇಜರ್ ಅವರು ಚರ್ಚ್ ಆಫ್ ಇಂಗ್ಲೆಂಡಿನ ಪ್ರಮುಖ ಹುದ್ದೆಯಲ್ಲಿದ್ದವರು. ತೆರೆಸಾ ಅವರು ಸಾರ್ವಜನಿಕ ಜೀವನದಲ್ಲಿ ಒಂದೊಂದೇ ಹಂತ ದಾಟಿ ಮೇಲೆ ಬಂದವರು. ಕೌನ್ಸಿಲರ್ ಆಗಿದ್ದವರು, ವಿರೋಧ ಪಕ್ಷದಲ್ಲಿ ವಿವಿಧ ಸ್ಥಾನಗಳನ್ನು ನಿಭಾಯಿಸಿದವರು. ಕ್ಯಾಮರೂನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿ, ಮಹಿಳೆ ಮತ್ತು ಸಮಾನತೆ ಇಲಾಖೆಯ ಸಚಿವೆ ಆಗಿದ್ದವರು.
ಪ್ರಧಾನಿ ಎದುರಿಗಿರುವ ಸವಾಲುಗಳು
ಬ್ರಿಟನ್ ತನ್ನ ಈಚಿನ ಇತಿಹಾಸದಲ್ಲೇ ಅತ್ಯಂತ ನಾಜೂಕಿನ ಹಾದಿಯನ್ನು ಕ್ರಮಿಸುತ್ತಿದೆ. ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಹೊರಬಂದ ನಂತರವೂ ಒಕ್ಕೂಟದ ಸದಸ್ಯ ಹಾಗೂ ಯುರೋಪಿನ ಇತರ ರಾಷ್ಟ್ರಗಳ ಜೊತೆ ಒಳ್ಳೆಯ ಸಂಬಂಧ ಕಾಯ್ದುಕೊಳ್ಳಬೇಕಿದೆ. ಜೊತೆಯಲ್ಲೇ ತನ್ನ ದೇಶದ ಅರ್ಥವ್ಯವಸ್ಥೆ ಕುಸಿಯದಂತೆ ಕಾಪಾಡಿಕೊಳ್ಳಬೇಕಿದೆ.
ವಲಸಿಗರ ವಿರುದ್ಧ ದೇಶವಾಸಿಗಳಲ್ಲಿ ವ್ಯಕ್ತವಾಗಿರುವ ಆಕ್ರೋಶವನ್ನು ನಿಭಾಯಿಸಬೇಕಿದೆ. ಬ್ರಿಟನ್ನಿನ ಪಾಲಿಗೆ ಐತಿಹಾಸಿಕ ಕಾಲಘಟ್ಟವಿದು. ಈ ಸಂದರ್ಭದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ವ್ಯಕ್ತಿ ಇತಿಹಾಸದಲ್ಲಿ ಚಿರಸ್ಥಾಯಿ ಆಗುತ್ತಾರೆ. ಅಂಥದ್ದೊಂದು ಅವಕಾಶ, ಸವಾಲು 59 ವರ್ಷ ವಯಸ್ಸಿನ ತೆರೆಸಾ ಅವರ ಎದುರು ನಿಂತಿದೆ.
ಒಕ್ಕೂಟದಿಂದ ಹೊರನಡೆಯಲು ಬ್ರಿಟನ್ನಿನ ಜನ ತೀರ್ಮಾನಿಸಿದರೂ, ಅದರದ್ದೇ ಭಾಗವಾಗಿರುವ ಸ್ಕಾಟ್ಲೆಂಡಿನ ಜನ ಒಕ್ಕೂಟದ ಜೊತೆ ಇರುವ ಇರಾದೆ ವ್ಯಕ್ತಪಡಿಸಿದ್ದರು. ‘ಸ್ಕಾಟ್ಲೆಂಡಿನ ಜನರ ಆಶಯದ ಜೊತೆ ಸಂಘರ್ಷಕ್ಕೆ ಮುಂದಾಗದೆ, ಅವರ ಮಾತನ್ನು ಆಲಿಸುತ್ತೇನೆ’ ಎನ್ನುವ ಮೂಲಕ ತೆರೆಸಾ ಅವರು ಸಮತೂಕದ ನಿಲುವು ಪ್ರದರ್ಶಿಸಿದ್ದಾರೆ ಎನ್ನುವ ಮಾತುಗಳು ಯುರೋಪಿನ ಮಾಧ್ಯಮಗಳಲ್ಲಿ ಕೇಳಿ ಬಂದಿವೆ. ಸ್ಕಾಟ್ಲೆಂಡ್ ಭೂಭಾಗ, ಯುನೈಟೆಡ್ ಕಿಂಗ್ಡಮ್ನ ಭಾಗವಾಗಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಮತ್ತೊಮ್ಮೆ ಜನಮತಗಣನೆ ಇಲ್ಲ ಎನ್ನುವ ಮೂಲಕ ಈ ನಿಲುವನ್ನು ಅವರು ಬಹಿರಂಗಪಡಿಸಿದ್ದಾರೆ.
ಇನ್ನು ಮುಂದೆ ಒಕ್ಕೂಟದ ಜೊತೆ ಬ್ರಿಟನ್ ಯಾವ ರೀತಿಯ ಆರ್ಥಿಕ ಸಂಬಂಧ ಹೊಂದಿರುತ್ತದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ, ಬ್ರಿಟಿಷ್ ಕಂಪೆನಿಗಳನ್ನು ಬೇರೆ ರಾಷ್ಟ್ರಗಳ ಕಂಪೆನಿಗಳು ಖರೀದಿಸುವ ಪ್ರಕ್ರಿಯೆ ಬಗ್ಗೆ ನಿಗಾ ಇಡಲಾಗುತ್ತದೆ ಎನ್ನುವ ಮೂಲಕ, ತೆರೆಸಾ ಮೇ ನೇತೃತ್ವದ ಸರ್ಕಾರ, ಆರ್ಥಿಕ ಹಾಗೂ ಔದ್ಯಮಿಕ ವಿಚಾರಗಳಲ್ಲಿ ‘ಬ್ರ್ಯಾಂಡ್ ನ್ಯಾಷನಲಿಸಂ’ ಪಾಲಿಸುವ ಸೂಚನೆಯೂ ಕಾಣುತ್ತಿದೆ.
‘ಬ್ರೆಕ್ಸಿಟ್’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂದು ಜನ ನೀಡಿರುವ ತೀರ್ಪು) ಮುನ್ನ ಹಾಗೂ ಅದರ ನಂತರದಲ್ಲಿ ಬ್ರಿಟನ್ನಿನ ಅರ್ಥ ವ್ಯವಸ್ಥೆಯ ಬಗ್ಗೆ ಗೊಂದಲಗಳಿವೆ. ಅಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ಕಡಿಮೆ ಆಗುತ್ತಿರುವುದರ ಬಗ್ಗೆ ಕೆಳ ಮಧ್ಯಮ ವರ್ಗದ ಜನರಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ. ಇದಕ್ಕೆಲ್ಲಾ ಪರಿಹಾರ ಹುಡುಕಬೇಕಿದೆ.[೪]
ರಾಜನೀತಿ
ಉದಾರವಾದಿ ಸಂಪ್ರದಾಯಸ್ಥೆಯಾಗಿರುವ ಅವರು ಸಲಿಂಗ ವಿವಾಹಕ್ಕೆ ಪರವಾದ ನಿಲುವನ್ನು ತಳೆದಿದಿದ್ದಾರೆ. ಪತಿ ಬ್ಯಾಂಕರ್ ಆಗಿರುವ ಹಿನ್ನೆಲೆಯಲ್ಲಿ ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಕಠಿಣ ನಿಲುವನ್ನು ಹೊಂದಿದ್ದಾರೆ. ಐರೋಪ್ಯ ಒಕ್ಕೂಟದಿಂದ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬರುವುದರ ಬಗ್ಗೆ ಕಠಿಣ ನಿಲುವುಗಳನ್ನು ಹೊಂದಿದ್ದಾರೆ. ಥೆರೆಸಾ ಮೇ ತಕ್ಷಣದಿಂದ ಜಾರಿಗೆ ಬರುವಂತೆ ಕನ್ಸರ್ವೇಟಿವ್ ಪಕ್ಷದ ನಾಯಕಿಯೂ ಆಗಿದ್ದಾರೆ.[೫]
ಥೆರೆಸಾ ಬೆಂಬಲದ ಬ್ರಿಟನ್ನಿನ ಸಂಸತ್ ಸ್ಥಿತಿ
ಹೌಸ್ ಆಫ್ ಕಾಮನ್ಸ್ (ಜನಪ್ರತಿನಿಧಿಗಳ ಸಭೆ-ಲೋಕಸಭೆ ಇದ್ದಂತೆ)=ಬಲ 650 ಸದಸ್ಯರು
ಕನ್ಸರ್ವೇಟಿವ್ ಪಕ್ಷದ ಬಲ:ನಾಯಕ:(ಹಿಂದೆ:ಡೇವಿಡ್ ಕ್ಯಾಮರೂನ್,)ಹಾಲಿ: ಥೆರೆಸಾ ಮೇ :330;(330/650)ಸಂಸತ್ ಸದಸ್ಯರು:
ಲೇಬರ್ ಪಕ್ಷದ ಬಲ: ನಾಯಕ: ಎಡ್ ಮಿಲಿಬ್ಯಾಂಡ್: 232;(232/650)ಸಂಸತ್ ಸದಸ್ಯರು:
ಸ್ಕಾಟಿಷ್ ನ್ಯಾಷನಲ್ ಪಾರ್ಟಿ: ನಿಕೊಲಾ ಸ್ಟರ್ಜಿಯನ್: 56;(56/650)ಸಂಸತ್ ಸದಸ್ಯರು:
ಇತರೆ ಪಕ್ಷಗಳು :32 (32/650)ಸಂಸತ್ ಸದಸ್ಯರು:
ಹೌಸ್ ಆಫ್ ಲಾರ್ಡ್ಸ್ -ಮೇಲ್ಮನೆ ;ಲಾರ್ಡ್ಸ್ ಟೆಂಪೋರಲ್ ಮತ್ತು ಆಧ್ಯಾತ್ಮಿಕ =ಬಲ 798 ಸದಸ್ಯರು
ಕನ್ಸರ್ವೇಟಿವ್ (244);
ವಿರೋಧಪಕ್ಷ
ಲೇಬರ್ ಪಕ್ಷ:(209)
ಇತರೆ
ಪಕ್ಷೇತರ (172)
ಲಿಬರಲ್ ಡೆಮೊಕ್ರಾಟ್ಸ್ (107)
ಡೆಮಾಕ್ರಟಿಕ್ ಯೂನಿಯನಿಸ್ಟ್ (3)
ಯುಕೆ ಸ್ವಾತಂತ್ರ್ಯ (3)
ಪ್ಲಾಯಿಡ್ ಸಿಮ್ರು (2)
ಅಲ್ಸ್ಟರ್ ಯೂನಿಯನಿಸ್ಟ್ (2)
ಹಸಿರು (1)
ಸ್ವತಂತ್ರ ನಿಲುವಿನ ಪಕ್ಷದವರು (29)
ಲಾರ್ಡ್ಸ್ ಸ್ಪಿರಿಚ್ಯುವಲ್' ಬಿಷಪ್ಗಳು (26)
ಕರ್ನಾಟಕದ ಶಾಲಾ ಮಕ್ಕಳೊಂದಿಗೆ ನಲಿದ ತೆರೆಸಾ ಮೇ
9 Nov, 2016
ಬೆಂಗಳೂರು ಹತ್ತಿರ ಶಾಲಾ ಅಂಗಳದಲ್ಲಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರೊಂದಿಗೆ ಚರ್ಚೆ ಮಾಡುವ ಅದೃಷ್ಟ, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ನೋಡುವ ಅವಕಾಶ! – ಹೀಗೆ ಏಕಕಾಲಕ್ಕೆ ಎರಡೆರಡು ಖುಷಿ ಅನುಭವಿಸಿದ್ದು ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಬಳಿಯ ತರಹುಣಸೆ ಗ್ರಾಮದ ಸ್ಟೋನ್ಹಿಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು. ‘ನಮ್ಮ ಶಾಲೆಗೆ ಬ್ರಿಟನ್ ಪ್ರಧಾನಿ ಭೇಟಿ ನೀಡಿರುವುದು ಬಹಳ ಖುಷಿಯಾಗಿದೆ. ಸಾಮಾನ್ಯವಾಗಿ ಅವರನ್ನು ಇಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗುವುದಿಲ್ಲ’ ಎಂದು 8ನೇ ತರಗತಿ ವಿದ್ಯಾರ್ಥಿನಿ ಅನುಷಾ ಸಂತಸದಿಂದ ಹೇಳಿದಳು. ‘ನಾನು ಅವರೊಂದಿಗೆ ಮಾತನಾಡಿದೆ. ನಮ್ಮ ಶಾಲೆಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ತಿಳಿಸಿದೆ. ಅದಕ್ಕೆ ಪ್ರತಿಯಾಗಿ ಅವರೂ ವಂದನೆ ಹೇಳಿದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ’ ಎಂದು ಅದೇ ತರಗತಿಯ ಮುಕೇಶ್ ಸಂತೋಷ ಹಂಚಿಕೊಂಡ.
1942ರಲ್ಲಿ ಪ್ರಾರಂಭಗೊಂಡ ಈ ಸರ್ಕಾರಿ ಶಾಲೆ, ಖಾಸಗಿ ಶಾಲೆಯನ್ನು ಮೀರಿಸುವಂತೆ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಈ ಶಾಲೆಯನ್ನು ದತ್ತು ಪಡೆದ ಎಂಬೆಸಿ ಕಾರ್ಪೊರೇಟ್ ಸಂಸ್ಥೆ ಹಾಗೂ ಬ್ರಿಟನ್ ರಾಯಭಾರಿ ಕಚೇರಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿಗೊಳಿಸಿವೆ. ಹೀಗಾಗಿ ಈ ಶಾಲೆಗೆ ತೆರೇಸಾ ಮೇ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.[[೬]
ಬ್ರಿಟನ್ ಪ್ರಧಾನಿ ತೆರೆಸಾ ಮೇ ಬೆಂಗಳೂರಲ್ಲಿ
9 Nov, 2016
ಬೆಂಗಳೂರಿಗೆ ಭೇಟಿ ಕೊಟ್ಟಿದ್ದ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀಸಾ ನಿಯಮವನ್ನು ಹಿಂದಿನಂತೆಯೇ ಮುಂದುವರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದರು. ‘ಟೆಕ್ಕಿಗಳು ನಮ್ಮ ದೇಶಕ್ಕೆ ಬರುವುದಕ್ಕೆ ವಿರೋಧವಿಲ್ಲ. ಪ್ರತಿಭಾವಂತರು ಬರಬಹುದು’ ಎಂದು ಅವರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
‘ಕರ್ನಾಟಕದ ಜೊತೆ ಬ್ರಿಟನ್ ದೀರ್ಘ ಕಾಲದ ವ್ಯಾಪಾರ– ವಾಣಿಜ್ಯ ಸಂಬಂಧಕ್ಕೆ ಸಿದ್ಧವಾಗಿದೆ. ಕಳೆದ ಒಂದು ವರ್ಷದಲ್ಲಿ 4.5 ಲಕ್ಷ ಭಾರತೀಯರಿಗೆ ವೀಸಾ ನೀಡಲಾಗಿತ್ತು. ಭಾರತದ ಪ್ರತಿಭಾವಂತರು ನಮ್ಮ ದೇಶ ಪ್ರವೇಶಿಸಲು ಅಡ್ಡಿಯಿಲ್ಲ ಎಂಬುದೇ ಇದರ ಅರ್ಥ’ ಎಂದು ತೆರೆಸಾ ಹೇಳಿದರು.
ಬೆಂಗಳೂರಿನ ಹಲಸೂರಿನಲ್ಲಿರುವ ಸೋಮೇಶ್ವರ ದೇವಸ್ಥಾನಕ್ಕೆ ಭಾರತೀಯ ಉಡುಗೆ ಸೀರೆ ಕುಪ್ಪಸ ತೊಟ್ಟು ಭೇಟಿ ನೀಡಿದ್ದ ಬ್ರಿಟನ್ ಪ್ರಧಾನಿ ತೆರೆಸಾ ಮೇ –ಪಿಟಿಐ ಚಿತ್ರ:
ರಾಜ್ಯದಲ್ಲಿ ‘ಸ್ಮಾರ್ಟ್ಸಿಟಿ’ ಯೋಜನೆ ಅನುಷ್ಠಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಿಟಿಷ್ ಉದ್ಯಮಿಗಳಿಗೆ ಮನವಿ ಮಾಡಿದರು.[೭]
Gimson, Andrew (20 October 2012). "Theresa May: minister with a mind of her own". The Observer. London. May said: 'I am a practising member of the Church of England, a vicar's daughter.'
Howse, Christopher (29 November 2014). "Theresa May's Desert Island hymn". The Daily Telegraph. London. The Home Secretary declared that she was a 'regular communicant' in the Church of England