From Wikipedia, the free encyclopedia
ಡೈನೋಸಾರ್ಗಳು ಟ್ರಿಯಾಸಿಕ್ ಅವಧಿಯಲ್ಲಿ ಮೊದಲ ಕಾಣಿಸಿಕೊಂಡ ಏಕಮೂಲ ಡೈನೋಸಾರಿಯ (Dinosauria) ಪ್ರಾಣಿಗಳ ವೈವಿಧ್ಯಮಯ ಗುಂಪು. ಆದರೂ ನಿಖರವಾದ ಮೂಲ ಮತ್ತು ಡೈನೋಸಾರ್ಗಳ ವಿಕಸನದ ಸಮಯ ಇನ್ನೂ ಕೂಡಾ ಸಕ್ರಿಯವಾದ ಸಂಶೋಧನೆಯ ವಿಷಯವಾಗಿದೆ. ಸುಮಾರು ೧೫೦ ಮಿಲಿಯನ್ ವರ್ಷಗಳ ಕಾಲ ಅಂದರೆ ಟ್ರಿಯಾಶಿಕ್ ಯುಗದಿಂದ ಕ್ರಿಟಾಶಿಯಸ್ ಯುಗದ ವರೆಗೂ, ೬೫ ಮಿಲಿಯ ವರ್ಷಗಳ ಹಿಂದೆ ಡೈನೋಸಾರ್ ಗಳು ಭೂಮಿಯ ಮೇಲೆ ಬದುಕಿದ್ದವು.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪ್ರಸ್ತುತ ವೈಜ್ಞಾನಿಕ ಒಮ್ಮತದ ಪ್ರಕಾರ 231 ಮತ್ತು 243 ಮಿಲಿಯನ್ (೨೪ ಕೋಟಿ)ವರ್ಷಗಳ ಹಿಂದೆ ಇವುಗಳ ಮೂಲ ಅಥವಾ ಮೊದಲ ಅಸ್ತಿತ್ವ ಕಾಲವನ್ನು ಇರಿಸುತ್ತದೆ. ಅವು 201 ಮಿಲಿಯನ್ ವರ್ಷಗಳ ಹಿಂದೆ ಟ್ರಿಯಾಸಿಕ್ ಜುರಾಸಿಕ್ ಅಳಿವಿನ ಘಟನೆಯ ನಂತರ ಪ್ರಬಲ ಪ್ರಾದೇಶಿಕ ಕಶೇರುಕಗಳು ಕಾಣೀಸಿಕೊಂಡವು. ಅವುಗಳ ಪ್ರಾಬಲ್ಯ ಜುರಾಸಿಕ್ ಮತ್ತು ಕ್ರಿಟೇಷಿಯಸ್ ಅವಧಿಗಳಲ್ಲಿ ಮುಂದುವರೆದು ಕ್ರೇಟಾಶಿಯಸ್ ಪ್ಯಾಲಿಯೋಜೀನ್ ಅಳಿವಿನ 66 ಮಿಲಿಯನ್ ವರ್ಷಗಳ ಹಿಂದೆ ಹೆಚ್ಚಿನ ಡೈನೋಸಾರ್ ಗುಂಪುಗಳ ಅಳಿವಿಗೆ ಅಸಾಧಾರಣ ಕಾರಣವಾಗಿ ಕೊನೆಗೊಂಡಿತು.
ಅವುಗಳ ಪಳೆಯುಳಿಕೆಗಳು ಅಂಟಾರ್ಟಿಕಾ ಮೊದಲುಗೊಂಡು ಎಲ್ಲಾ ಖಂಡಗಳಲ್ಲಿಯೂ ದೊರಕಿವೆ. ನಂತರ ಅನೇಕ ನೆಲಜಂತುಗಳಾದ ಸರೀಸೃಪಗಳು ಇವುಗಳಿಂದ ರೂಪಾಂತರಗೊಂಡಿವೆ. ಡೈನೋಸಾರ್ ಗಳನ್ನು ಅಧ್ಯಯನ ಮಾಡುವ ಪಳೆಯುಳಿಕೆ ತಜ್ಞರು ಈ ಸರೀಸೃಪಗಳನ್ನು ಎರಡು ವಧಗಳಲ್ಲಿ ವರ್ಗೀಕರಿಸಿದ್ದಾರೆ. ಆರ್ನಿಥೇಶಿಯಸ್ ಹಾಗೂ ಸೌರೇಶಿಯಸ್. ಕೆಲವು ಮಾಂಸಾಹಾರಿಗಳು, ಕೆಲವು ಸಸ್ಯಾಹಾರಿಗಳು. ಕೆಲವು ಡೈನೋಸಾರ್ ಗಳು ದೈತ್ಯಾಕಾರವಾಗಿದ್ದವು, ಕೆಲವು ಕೇವಲ ಕೋಳಿಮರಿಗಳಷ್ಟು ಚಿಕ್ಕದಿದ್ದವು.
ಇವುಗಳನ್ನು ಪಕ್ಷಿಯಾಕಾರದ ಡೈನೋಸಾರ್ ಎನ್ನುತ್ತಾರೆ. ಇಗುವಾಂಡನ್ ಎಂಬುದು ಉದಾಹರಣೆಯಾಗಿದೆ. ಇವುಗಳೆಲ್ಲವು ಶುದ್ದ ಸಸ್ಯಾಹಾರಿಗಳು. ಇವುಗಳಿಗೆ ದೊಡ್ಡದಾದ ಹಲ್ಲುಗಳಿದ್ದವು. ಕೋರಿಥೋಸಾರಸ್ ಎಂಬ ಡೈನೋಸಾರ್ ಸುಮಾರು ೨೦೦೦ ಹಲ್ಲುಗಳನ್ನು ಹೊಂದಿತ್ತು.
ಇದು ಪ್ರಥಮ ಬಾರಿಗೆ ದೊರಕಿದ ಡೈನೋಸಾರ್ ಎನ್ನುತ್ತಾರೆ. ವಿಜ್ಞಾನಿಗಳು ನೀಡಿದ ಆಕಾರದಿಂದಾಗಿ ಇದನ್ನು ಗುರುತಿಸಬಹುದು ಆದರೆ ಇದರ ಕೆಲವು ಅಂಗಗಳ ಪಳೆಯುಳಿಕೆಗಳು ಮಾತ್ರ ದೊರೆತಿರುವುದರಿಂದ ನಿಖರವಾದ ಆಕಾರವನ್ನು ಕಂಡುಹಿಡಿಯಲಾಗಿಲ್ಲ. ಗಿಡೆಯೋನ್ ಮಾಂಟೆಲ್ ಎಂಬ ವಿಜ್ಞಾನಿ ಇಗುವಾಂಡನ್ ಎಂಬ ಹೆಸರನ್ನು ನೀಡಿದರು. ಯಾಕೆಂದರೆ ಇದರ ದೇಹವು ಉಡವನ್ನು ಹೋಲಿಕೆಯಾಗುತ್ತಿತ್ತು. ಇಗುವಾಂಡನ್ ಪಾದಗಳು ಸಣ್ಣ ಬೆರಳುಗಳಂತ ಆಕೃತಿ ಹೊಂದಿದ್ದವು. ಇವುಗಳಲ್ಲಿ ನಡೆಯುತ್ತಿದ್ದ ಈ ಪ್ರಾಣಿಯ ಸಂಪೂರ್ಣ ಭಾರವು ಆ ಗಟ್ಟಿಯಾದ ಬೆರಳುಗಳ ಮೇಲೆ ಬೀಳುತ್ತಿತ್ತು.
ಇವುಗಳು ಹಲ್ಲಿಯಾಕಾರದ ಡೈನೋಸಾರ್ ಗಳು. ಕೆಲವು ಜಾತಿಯವುಗಳು ಮಾಂಸಾಹಾರಿಗಳಾಗಿದ್ದವು. ಇವುಗಳಲ್ಲಿ ಕೆಲವು ಎರಡು ಕಾಲುಗಳಲ್ಲಿ ನಡೆಯುತ್ತಿದ್ದವು. ಉದಾಹರಣೆಗೆ, ಟೈರಾನೋಸಾರಸ್ ಹಾಗೂ ಕೆಲವು ಸಸ್ಯಾಹಾರಿ ಸಾರೋಪೋಡ್ ಗಳು ಇವುಗಳು ನಾಲ್ಕು ಕಾಲಿನಲ್ಲಿ ನಡೆಯುತ್ತಿದ್ದವು. ಸಾರೋಪೋಡ್ ಗಳು ಇಲ್ಲಿಯ ವರೆಗೂ ಭೂಮಿಯ ಮೇಲೆ ಜೀವಿಸಿದ ಅತಿ ದೊಡ್ಡ ಜೀವಿಗಳಾಗಿವೆ.
ಇವುಗಳು ಅತಿದೊಡ್ಡ ಮಾಂಸಾಹಾರಿಗಳಲ್ಲವಾದರೂ ಅತಿ ಭಯಾನಕ ಹಾಗೂ ಕ್ರೂರಿಯಾದ ಡಯನೋಸಾರ್ ಗಳೆಂದು ಕರೆಯಲ್ಪಡುತ್ತವೆ. ಇದು ತನ್ನ ತಲೆಯನ್ನು ಮೇಲಕ್ಕೆತ್ತಿ ಹಿಂಗಾಲುಗಳಲ್ಲಿ ನಡೆಯುತ್ತಿತ್ತು. ಬಹಳ ವೇಗವಾಗಿ ಓಡಬಲ್ಲ ಡೈನೋಸಾರ್ ಇದು. ದೈತ್ಯ ದೇಹದ ಭಾರವನ್ನು ತನ್ನ ದೊಡ್ಡದಾದ ಬಾಲದಿಂದ ಸರಿದೂಗಿಸುತ್ತಿತ್ತು. ಇದು ಇತರ ಡೈನೋಸಾರ್ ಗಳ ಮೇಲೆ ಹಲ್ಲೆ ನಡೆಸಿ ಅವುಗಳ ವಿನಾಶಕ್ಕೂ ಕಾರಣವಾಗಿರಬಹುದೆಂದು ಹೇಳಲಾಗಿದೆ. ಅತಿದೊಡ್ಡ ತಲೆಬುರುಡೆ ಹಾಗೂ ಬಲಶಾಲಿ ದವಡೆಗಳಿದ್ದವು.
ಇಂದಿನ ಯುಗದ ಕೆಲವು ಸರೀಸೃಪಗಳಂತೆ ಡೈನೋಸಾರ್ ಗಳು ಕೂಡ ಗಟ್ಟಿಯಾದ ಕವಚವುಳ್ಳ ಮೊಟ್ಟೆಗಳನ್ನಿಡುತ್ತಿದ್ದವು. ನೆಲದ ಮೇಲೆ ಗೂಡಿನಾಕಾರದ ಗುಂಡಿಯನ್ನು ಮಾಡಿ ಅದರಲ್ಲಿ ತನ್ನ ಮೊಟ್ಟೆಗಳನ್ನಿಡುತ್ತದ್ದವು. ಕೆಲವು ಪ್ರದೇಶದಲ್ಲಿ ಪಳೆಯುಳಿಕೆಯಂತಹ ಗೂಡುಗಳು ನೆಲದ ಮೇಲೆ ಪತ್ತೆಯಾಗಿದ್ದು, ಇವುಗಳು ಸಂಘಜೀವಿಗಳು ಎಂಬುದನ್ನು ತಿಳಿಸುತ್ತವೆ. ಮೊಟ್ಟೆಯೊಡೆದು ಬಂದ ಮರಿಗಳು ಬಲು ಬೇಗ ದೊಡ್ಡದಾಗಿ ತಮ್ಮ ಗೂಡನ್ನು ತೊರೆಯುತ್ತಿದ್ದವು. ಇಯೋರಾಪ್ಟರ್ ಎಂಬದು ಮುದಲ ಡೈನೋಸಾರ್ ಎಂದು ಹೇಳಲಾಗುತ್ತದೆ. ನಾಯಿಯಷ್ಟು ದೊಡ್ಡದಿದ್ದ ಇದು ಹಿಂಗಾಲುಗಳಲ್ಲಿ ನಡೆಯುತ್ತಿತ್ತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.