Remove ads
From Wikipedia, the free encyclopedia
ಡಿಕ್ರಿ ಪ್ರಿಲಿಮಿನರಿ ಡಿಕ್ರಿಯನ್ನು ಸಮಯೋಚಿತವಾಗಿ ಅಥವಾ ಸಂದರ್ಭೋಚಿತವಾಗಿ ಮಾತ್ರ ನೀಡಬಹುದಾಗಿದೆ. ಆದುದರಿಂದ ಪ್ರಾರಂಭಿಕ(ಪ್ರಿಲಿಮಿನರಿ) ಪದದ ಬದಲಿಗೆ "ಪ್ರಾಸ್ತವಿಕ" ಪದ ಬಹು ಸೂಕ್ತ.
ಒಂದು ದಾವೆಯಲ್ಲಿ ವಾದಗ್ರಸ್ತವಾದ ಎಲ್ಲ, ಯಾವುದೇ ಅಥವಾ ಯಾವುದೇ ವಿಚಾರ ಅಥವಾ ವಿಚಾರಗಳಿಗೆ ಸಂಬಂಧಿಸಿದಂತೆ ಕಕ್ಷಿಗಳ ಹಕ್ಕುಗಳನ್ನು ನ್ಯಾಯಾಲಯವು (ತನಗೆ ಸಂಬಂಧಿಸಿದ ಮಟ್ಟಿಗೆ) ನಿರ್ಣಾಯಕವಾಗಿ ನಿರ್ಧರಿಸಿ ನೀಡಿದ ತೀರ್ಪಿನ ವಿಧ್ಯುಕ್ತ ಅಭಿವ್ಯಕ್ತಿ. ಡಿಕ್ರಿ ಎಂಬುದು ಇಂಗ್ಲಿಷ್ ಪದ. ಕನ್ನಡದಲ್ಲಿ ಆಜ್ಞಪ್ತಿ ಎಂದು ಇದನ್ನು ಕರೆಯುವುದಿದೆ. ಒಂದು ದಾವೆಯನ್ನು ವಿಚಾರಿಸಲು ಕ್ಷೇತ್ರಾಧಿಕಾರವುಳ್ಳ ನ್ಯಾಯಾಲಯದಲ್ಲಿ ಅದನ್ನು ಹೂಡಿದ ಮೇಲೆ ನ್ಯಾಯಾಧೀಶ ಯಥಾವಿಧಿಯಾಗಿ ವಿಚಾರಣೆ ನಡೆಸಿ ಬಹಿರಂಗ ನ್ಯಾಯಾಲಯದಲ್ಲಿ ಆ ದಾವೆಗೆ ಸಂಬಂಧಿಸಿದಂತೆ ತೀರ್ಪನ್ನು ನೀಡುತ್ತಾನೆ. ಪ್ರತಿಯೊಂದು ತೀರ್ಪಿನಲ್ಲೂ ಸಾಮಾನ್ಯವಾಗಿ ದಾವೆಯ ಸಂಗ್ರಹ ನಿರೂಪಣೆಯೂ ವಿವಾದದ ಅಂಶಗಳೂ ಅವುಗಳ ಮೇಲೆ ನೀಡಲಾದ ಇತ್ಯರ್ಥವೂ ಆ ರೀತಿ ಇತ್ಯರ್ಥಿಸಲು ಕಾರಣಗಳೂ ಇರುತ್ತವೆ. ತೀರ್ಪನ್ನು ನುಡಿದ ಮೇಲೆ, ಡಿಕ್ರಿ ಅಥವಾ ಆಜ್ಞಪ್ತಿಯೊಂದನ್ನು ಲಿಖಿಸಬೇಕೆಂದು ವ್ಯವಹರಣೆಯಲ್ಲಿ ಗೆದ್ದ ಕಕ್ಷಿ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಳ್ಳುತ್ತಾನೆ. ನ್ಯಾಯಾಲಯದ ಅಧಿಕಾರಿಯೊಬ್ಬ ಈ ಆಜ್ಞಪ್ತಿಯನ್ನು ಬರೆಯುತ್ತಾನೆ. ದಾವೆಯ ನಂಬರು, ಕಕ್ಷಿಗಳ ಹೆಸರುಗಳು ಮತ್ತು ವಿವರಣೆ, ಅಧ್ಯರ್ಥನದ (ಕ್ಲೇಮ್) ವಿವರಗಳು, ನೀಡಲಾದ ಪರಿಹಾರ, ಇಲ್ಲವೇ ಬೇರೆ ಬಗೆಯಲ್ಲಿ ದಾವೆಯ ಇತ್ಯರ್ಥ (ಉದಾ: ದಾವೆಯನ್ನು ವಜಾ ಮಾಡಲಾಗಿರಬಹುದು)- ಇವನ್ನು ಡಿಕ್ರಿಯಲ್ಲಿ ನಮೂದಿಸಲಾಗಿರುತ್ತದೆ. ಡಿಕ್ರಿಯಲ್ಲಿರುವ ಅಂಶಗಳೂ ತೀರ್ಪಿನ ಅಂಶಗಳೂ ಒಂದೇ ಆಗಿರಬೇಕು. ಇವು ಭಿನ್ನವಾಗಿದ್ದರೆ ನ್ಯಾಯಾಲಯದ ಅರ್ಥವೇನೆಂಬುದನ್ನು ಸೂಚಿಸುವಂತೆ ಡಿಕ್ರಿಯನ್ನು ಮಾರ್ಪಡಿಸಬಹುದು. ಬರವಣಿಗೆಯ ಅಥವಾ ಲೆಕ್ಕಾಚಾರದ ತಪ್ಪುಗಳೇನಾದರೂ ಇದ್ದರೆ ನ್ಯಾಯಾಲಯವೇ-ಸ್ವಯಮೇವ, ಅಥವಾ ಕಕ್ಷಿಗಳಲ್ಲಿ ಯಾರದಾದರೂ ಅರ್ಜಿಯ ಮೇಲೆ-ಡಿಕ್ರಿಗೆ ತಿದ್ದುಪಡಿ ಮಾಡಬಹುದು.
ಡಿಕ್ರಿಯಲ್ಲಿ ಎರಡು ಬಗೆ: 1. ಪ್ರಾಸ್ತವಿಕ (ಪ್ರಿಲಿಮಿನರಿ). 2. ಅಂತಿಮ (ಫೈನಲ್). ದಾವೆಯನ್ನು ಆಖೈರಾಗಿ ಇತ್ಯರ್ಥ ಮಾಡುವ ಮುನ್ನ ಮುಂದಿನ ಕ್ರಮಕೈಗೊಳ್ಳಲು ನೀಡಲಾದ್ದು ಪ್ರಾರಂಭಿಕ ಡಿಕ್ರಿ. ಪಾಲುದಾರಿಕೆಯ ವಿಘಟನೆಗಾಗಿ (ಡಿಸಲ್ಯೂಷನ್) ಹೂಡಲಾದ ದಾವೆಯಲ್ಲಿ, ನ್ಯಾಯಾಲಯವು ಪ್ರಾರಂಭಿಕ ಡಿಕ್ರಿಯನ್ನು ನೀಡಬಹುದು. ಕಕ್ಷಿಗಳ ಪಾಲುಗಳು ಯಾವ ಅನುಪಾತದಲ್ಲಿರಬೇಕೆಂಬುದನ್ನು ಅದರಲ್ಲಿ ಸೂಚಿಸಲಾಗುತ್ತದೆ; ಪಾಲುದಾರಿಕೆಯ ವಿಘಟನೆಯ ದಿನಾಂಕವನ್ನು ಗೊತ್ತುಮಾಡುತ್ತದೆ: ನ್ಯಾಯಾಲಯ ತನಗೆ ಸೂಕ್ತವೆನಿಸಿದ ರೀತಿಯಲ್ಲಿ ಲೆಕ್ಕವನ್ನೆತ್ತಬೇಕೆಂದೂ ಒಪ್ಪಿಸಬೇಕೆಂದೂ ನಿರ್ದೇಶಿಸುತ್ತದೆ. ಈ ಪ್ರಾರಂಭಿಕ ಆಜ್ಞಪ್ತಿಯನ್ನು ನೀಡಿದ ಮೇಲೆ, ಅಂತಿಮ ಡಿಕ್ರಿಗಾಗಿ ನ್ಯಾಯಾಲಯ ನಿರ್ಧರಿಸಿದ ತಾರೀಖಿಗೆ ವ್ಯವಹರಣೆಯನ್ನು ಮುಂದೂಡಲಾಗುತ್ತದೆ (ಅಡ್ಜರ್ನ್). ಲೆಕ್ಕವನ್ನೆತ್ತಿಯಾದ ಮೇಲೆ, ಪ್ರತಿ ಪಾಲುದಾರನಿಗೂ ಸಲ್ಲತಕ್ಕ ಮೊಬಲಗನ್ನು ಕಂಡುಹಿಡಿದ ಮೇಲೆ ನ್ಯಾಯಾಲಯ ಅಂತಿಮ ಡಿಕ್ರಿ ನೀಡುತ್ತದೆ.
ಕೈಫಿಯತ್ತಿನಿಂದ (ಪ್ಲೇಂಟ್) ವ್ಯವಹರಣೆ ಆರಂಭವಾಗಿದ್ದರೆ ಮಾತ್ರ ವ್ಯಾಜ್ಯ ಡಿಕ್ರಿಯಲ್ಲಿ ಪರ್ಯವಸಾನ ಹೊಂದುವುದು. ನ್ಯಾಯಾಲಯ ಕೊಟ್ಟ ಆದೇಶಗಳು ಡಿಕ್ರಿಗಳಾಗಲಾರವು.
ಇದು ಪಕ್ಷಗಾರರ ಒಳಗಿನ ಹಕ್ಕುಗಳ ಸಂಬಂಧವಾದ್ದಿರಬೇಕು. ದಾವೆಯನ್ನು ದಾಖಲು ಮಾಡಲಾದ ನ್ಯಾಯಾಲಯದ ಮಟ್ಟಿಗೆ ವಾದಿ ಪ್ರತಿವಾದಿಗಳೊಳಗಿನ ವ್ಯಾಜ್ಯ. ಡಿಕ್ರಿಯಿಂದಾಗಿ ಕೊನೆಗೊಳ್ಳುತ್ತದೆ. ಇದರ ಮೇಲೆ ಅಪೀಲು ಮಾಡದಿದ್ದಲ್ಲಿ ದಾವೆಯಲ್ಲಿ ಆದ ಡಿಕ್ರಿಯಿಂದಾಗಿ ವಾದಿ ಪ್ರತಿವಾದಿಗಳ ಹಕ್ಕುಗಳು ಪರಿಪೂರ್ಣವಾಗಿ ನಿರ್ಧಾರವಾಗುತ್ತದೆ.
ದಾವೆಯಲ್ಲಿ ಜಯಶೀಲನಾದ ಪಕ್ಷಗಾರನ ಹಕ್ಕುಗಳನ್ನು ಡಿಕ್ರಿಯಲ್ಲಿ ಸೂಚಿಸಿದಂತೆ ಅವನ ಪ್ರತಿಪಕ್ಷದವನು ಪೂರೈಸದಿದ್ದರೆ ಅವನ ವಿರುದ್ಧ ಡಿಕ್ರಿಯನ್ನು ಅಮಲ್ಜಾರಿಗೆ ಕೊಡಲು ಮೊದಲನೆಯ ಪಕ್ಷಗಾರ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಳ್ಳಬಹುದು. ಪ್ರತಿಪಕ್ಷದವನು ನೀಡುವ ಸಮಜಾಯಿಷಿಯನ್ನು ನ್ಯಾಯಾಲಯ ಕೀಳಿ ಡಿಕ್ರಿಯ ಅಮಲ್ಜಾರಿಗೆ ಆದೇಶ ನೀಡಬಹುದು. ಪ್ರತಿ ಪಕ್ಷಗಾರನನ್ನು ಸಿವಿಲ್ ಬಂದೀಖಾನೆಯ ಶಿಕ್ಷೆಗೆ ಗುರಿಪಡಿಸಬಹುದು (ಇದರ ವೆಚ್ಚವನ್ನು ಡಿಕ್ರಿದಾರ ಭರಿಸಬೇಕಾಗುತ್ತದೆ). ಅಥವಾ ಡಿಕ್ರಿಯ ಮೊಬಲಗಿನ ಪಾವತಿಗಾಗಿ ಅವನ ಆಸ್ತಿಯ ಜಫ್ತಿ ಅಥವಾ ವಿಕ್ರಯಕ್ಕೆ ಆದೇಶ ನೀಡಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.